in ,

ದಿನನಿತ್ಯದ ಆಹಾರ ಚಪಾತಿ

ಚಪಾತಿ
ಚಪಾತಿ

ನಾವು ಪ್ರತಿನಿತ್ಯ ಅನ್ನ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲಾ ಉಪಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಮೈದಾ ಮಿಶ್ರಣ ಮಾಡದ ಚಪಾತಿ, ಅಂದರೆ ಗೋದಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಹೇಳುವುದು ಕೇಳುತ್ತೇವೆ.

ಚಪಾತಿಯು ಭಾರತೀಯ ಉಪಖಂಡದ ಒಂದು ಬಗೆಯ ಉಬ್ಬಿರದ ಚಪ್ಪಟೆ ರೊಟ್ಟಿ. ಇದರ ರೂಪಾಂತರಗಳು ತುರ್ಕ್‌ಮೇನಿಸ್ತಾನ್, ಯೂಗ್ಯಾಂಡಾ, ಕೀನ್ಯಾ ಮತ್ತು ಟಾಂಜಾನೀಯಾವನ್ನು ಒಳಗೊಂಡಂತೆ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಮತ್ತು ಇತರ ರಾಷ್ಟ್ರಗಳ ಪೈಕಿ ಘಾನಾವೂ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಕಾಣುತ್ತವೆ. ಮುಘಲ್ ಸಾಮ್ರಾಟ ಅಕ್ಬರ್‌ನ ವಜೀರ್ನಾಗಿದ್ದ ಅಬುಲ್-ಫಜಲ್ ಇಬ್ನ್ ಮುಬಾರಕ್ ನಿಂದ ಬರೆಯಲ್ಪಟ್ಟ ಒಂದು ೧೬ನೆಯ ಶತಮಾನದ ದಸ್ತಾವೇಜಾದ ಐನ್-ಇ-ಅಕ್ಬರಿಯಲ್ಲಿ ಚಪಾತಿಯ ಬಗ್ಗೆ ಟಿಪ್ಪಣಿ ಮಾಡಲಾಗಿದೆ. ಇದು ಭಾರತದ ಉಪಖಂಡದಿಂದ ಹುಟ್ಟಿದ ಹುಳಿಯಿಲ್ಲದ ಫ್ಲಾಟ್‌ಬ್ರೆಡ್ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ನಲ್ಲೂ ಚಪಾತಿಯು ಪ್ರಧಾನ ಖಾದ್ಯವಾಗಿದೆ. ಚಪಾತಿಗಳನ್ನು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದನ್ನು ನೀರಿನೊಂದಿಗೆ ಹಿಟ್ಟಿನಲ್ಲಿ ಬೆರೆಸಿ, ಖಾದ್ಯ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣವನ್ನು ಪಾತ್ರೆಯಲ್ಲಿ ತಯಾರಿಸಿ ತವಾ ಮೇಲೆ ಬೇಯಿಸಲಾಗುತ್ತದೆ.

ದಿನನಿತ್ಯದ ಆಹಾರ ಚಪಾತಿ
ಚಪಾತಿ

ಚಪಾತಿಯು ಭಾರತೀಯ ಉಪಖಂಡದಲ್ಲಿ ಮತ್ತು ವಿಶ್ವದಾದ್ಯಂತ ಭಾರತೀಯ ಉಪಖಂಡದ ವಲಸಿಗರಲ್ಲಿ ಸಾಮಾನ್ಯ ಆಹಾರವಾಗಿದೆ. ಭಾರತೀಯ ಉಪಖಂಡದಿಂದ ವಲಸೆ ಹೋದವರು, ವಿಶೇಷವಾಗಿ ಮಧ್ಯ ಏಷ್ಯಾ, ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ದ್ವೀಪಗಳಿಗೆ ಭಾರತೀಯ ವ್ಯಾಪಾರಿಗಳಿಂದ ಹಾಗೂ ವಿಶ್ವದ ಇತರ ಭಾಗಗಳಿಗೆ ಚಪಾತಿಯನ್ನು ಪರಿಚಯಿಸಲಾಯಿತು.

ಚಪಾತಿ ಎಂಬ ಪದದ ಅರ್ಥ “ಸ್ಲ್ಯಾಪ್” ಮತ್ತು “ಫ್ಲಾಟ್”, ಇದು ಒದ್ದೆಯಾದ ಅಂಗೈ ಕೈಗಳ ನಡುವೆ ತೆಳುವಾದ ಹಿಟ್ಟಿನ ಉಂಡೆಗಳನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ಭಾರತೀಯ ಉಪಖಂಡದಲ್ಲಿ ಪ್ರಧಾನ ಆಹಾರವಾಗಿರುವ ಗೋಧಿಯ ಸಾಮಾನ್ಯ ರೂಪಗಳಲ್ಲಿ ಚಪಾತಿಯೂ ಒಂದು. ಮೊಹೆಂಜೊ-ದಾರೊದಲ್ಲಿನ ಉತ್ಖನ್ನದಲ್ಲಿ ಪತ್ತೆಯಾದ ಕಾರ್ಬೊನೈಸ್ಡ್ ಗೋಧಿ ಧಾನ್ಯಗಳು ಇಂದು ಭಾರತದಲ್ಲಿ ಕಂಡುಬರುವ ಸ್ಥಳೀಯ ಜಾತಿಯ ಗೋಧಿಗೆ ಹೋಲುತ್ತವೆ. ಸಿಂಧೂ ಕಣಿವೆಯಲ್ಲಿನ ಪೂರ್ವಜರು ಹೆಚ್ಚಾಗಿ ಗೋಧಿ ಬೆಳೆ ಬೆಳೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ರೋಟಿ ಜೊತೆಗೆ ಚಪಾತಿಗಳನ್ನು ವಿಶ್ವದ ಇತರ ಭಾಗಗಳಿಗೆ ಭಾರತೀಯ ಉಪಖಂಡದ ವಲಸಿಗರು ಪರಿಚಯಿಸಿದರು. ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನೆಲೆಸಿದ ಭಾರತೀಯ ವ್ಯಾಪಾರಿಗಳು ಪರಿಚಯಿಸಿದರು.

ಚಪಾತಿಗೆ ಇತರ ಹೆಸರುಗಳು

ಚಪಾತಿಗೆ ರೊಟ್ಟಿ, ರೊಟ್ಲಿ, ಸಫತಿ, ಶಬಾತಿ, ಫುಲ್ಕಾ ಮತ್ತು ರೋಶಿ ಎಂದೂ ಕರೆಯುತ್ತಾರೆ.

ಬೇಕಾಗುವ ಸಾಮಾಗ್ರಿಗಳು

ಗೋಧಿ ಹಿಟ್ಟು ೫ ಕಪ್, ತೆಂಗಿನ ಎಣ್ಣೆ ೩ ಚಮಚ,ತುಪ್ಪ ೨ ಚಮಚ, ಸ್ವಲ್ಪ ಬಿಸಿಮಾಡಿದ ನೀರು ೧ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ದಿನನಿತ್ಯದ ಆಹಾರ ಚಪಾತಿ
ತಯಾರಿಸುವ ವಿಧಾನ

ಒಂದು ಅಗಲವಾದ ಪಾತ್ರೆಗೆ ನೀರು, ತುಪ್ಪ, ಹಾಕಿ ಸರಿಯಾಗಿ ಕಲಸಿಕೊಳ್ಳಬೇಕು, ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿ ಕೊನೆಗೆ ಅದಕ್ಕೆ ಎಣ್ಣೆ ಹಾಕಿ ಕಲಸಿಟ್ಟು, ಅರ್ಧ ಗಂಟೆಯ ನಂತರ ಉಂಡೆಗಳನ್ನು ಮಾಡಿಟ್ಟು ಅದನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಲಟ್ಟಿಸಬೇಕು. ನಂತರ ಒಲೆಯಲ್ಲಿ ತವ ಬಿಸಿ ಮಾಡಿ ಅದಕ್ಕೆ ಚಪಾತಿಯನ್ನು ಹಾಕಿ ಕಾಯಿಸಿ ಅದು ಸರಿಯಾಗಿ ಉಬ್ಬಿದ ನಂತರ ತುಪ್ಪ ಸವರಿ ಬಿಸಿ ಬಿಸಿ ಚಪಾತಿಯನ್ನು ಸವಿಯಬಹುದು. ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ಚಪಾತಿಗಳನ್ನು ಬಾಣಲೆಯ ಮೇಲೆ ಭಾಗಶಃ ಬೇಯಿಸಲಾಗುತ್ತದೆ, ತದನಂತರ ನೇರವಾಗಿ ಜ್ವಾಲೆಯ ಮೇಲೆ ಬೇಯಿಸಲಾಗುತ್ತದೆ, ಇದು ಚಪಾತಿ ಉಬ್ಬಲು ಕಾರಣವಾಗುತ್ತದೆ. ಇಂತಹ ಉಬ್ಬಿದ ಚಪಾತಿಯನ್ನು ಉತ್ತರ ಭಾರತ ಮತ್ತು ಪೂರ್ವ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಫುಲ್ಕಾ ಎಂದೂ ಕರೆಯಲಾಗುತ್ತದೆ.

ಸಾಮಾನ್ಯವಾಗಿ ಚಪಾತಿಯಲ್ಲಿ ನಾರಿನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್‌, ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.

ಚಪಾತಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂ ಅನ್ನು ಹೊಂದಿದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದು ಹಂತ ಹಂತವಾಗಿ ತಗ್ಗಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದ್ರನನ್ನು ಗೆದ್ದ ಇಂದ್ರಜಿತ್

ಇಂದ್ರನನ್ನು ಗೆದ್ದ ಇಂದ್ರಜಿತ್

ಆಲದ ಮರ

ನೂರಾರು ವರ್ಷಗಳ ಕಾಲ ಬದುಕುವ ಆಲದ ಮರ