in ,

ಬೇಸಿಗೆಗೆ ಏಷ್ಟು ತಿಂದರೂ ಬೇಕು ಅನಿಸುವ ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಮೂಲತಃ ಆಫ್ರಿಕಾದ ದಕ್ಷಿಣ ಭಾಗದ ಒಂದು ಬಳ್ಳಿಯಂಥ ಹೂ ಬಿಡುವ ಸಸ್ಯ. ಅದರ ಹಣ್ಣು ಸಸ್ಯಶಾಸ್ತ್ರಜ್ಞರಿಂದ ಪೀಪೊ ಮತ್ತು ತಿರುಳಿರುವ ಕೇಂದ್ರವನ್ನು ಎಂದು ನಿರ್ದೇಶಿಸಲಾಗುವ ಒಂದು ವಿಶೇಷ ವಿಧವಾಗಿದೆ. ಪೀಪೊಗಳು ಕೆಳಭಾಗದಲ್ಲಿರುವ ಅಂಡಾಶಯದಿಂದ ಜನ್ಯವಾಗಿವೆ ಮತ್ತು ಕುಕರ್ಬಿಟೇಸಿಯಿಯ ಲಕ್ಷಣವಾಗಿವೆ.

ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಬಳ್ಳಿ ಇದು. ಬಹುವಾಗಿ ಕವಲೊಡೆಯುತ್ತದೆ. ಕಾಂಡದ ಮೇಲೆಲ್ಲ ಸಣ್ಣ ರೋಮಗಳಿವೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ; ಇವು ಅಗಲ ಮತ್ತು ಹಸ್ತಾಕಾರವಾಗಿರುವುವಲ್ಲದೆ ಹಲವಾರು ಹಾಲೆಗಳಾಗಿ ಸೀಳುಗೊಂಡಿವೆ. ಎಲೆತೊಟ್ಟುಗಳು ಚಿಕ್ಕವು. ಎಲೆಗಳ ಕಂಕುಳಲ್ಲಿ ಹಳದಿಬಣ್ಣದ ಚಿಕ್ಕ ಹೂಗಳು ಒಂಟೊಂಟಿಯಾಗಿ ಅರಳುತ್ತವೆ.
ಹೂಗಳು ಏಕಲಿಂಗಿಗಳು. ಗಂಡು ಹೂವಿನಲ್ಲಿ ಐದು ಪುಷ್ಪಪತ್ರಗಳಿಂದ ಕೂಡಿದ ಗಂಟೆಯಾಕಾರದ ಪುಷ್ಪಪಾತ್ರೆಯೂ ಐದು ದಳಗಳಿಂದಾದ ಸಂಯುಕ್ತ ಮಾದರಿಯ ಪುಷ್ಪದಳ ಸಮೂಹವೂ ಮೂರು ಕೇಸರಗಳೂ ಇವೆ. ಹೆಣ್ಣು ಹೂವಿನಲ್ಲಿ ಗಂಡು ಹೂವಿನಲ್ಲಿರುವಷ್ಟೇ ಸಂಖ್ಯೆಯ ಪುಷ್ಪಪತ್ರ ಗಳೂ ದಳಗಳೂ ಮೂರು ಕಾರ್ಪೆಲುಗಳಿಂದಾದ ಒಂದು ನೀಚಸ್ಥಾನದ ಅಂಡಾಶಯವೂ ಇವೆ. ಅಂಡಾಶಯದಲ್ಲಿ ಹಲವಾರು ಅಂಡಕಗಳಿವೆ. ಫಲ ಒಡೆಯದ ಬೆರಿ ಮಾದರಿಯದು. ಗುಂಡಾಗಿಯೊ ಉದ್ದುದ್ದವಾಗಿಯೊ ಇದೆ.

ಬೇಸಿಗೆಗೆ ಏಷ್ಟು ತಿಂದರೂ ಬೇಕು ಅನಿಸುವ ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿವೆ. ಇವುಗಳ ಹಣ್ಣಿನ ಆಕಾರ, ಗಾತ್ರ, ಬಣ್ಣ, ತಿರುಳಿನ ರುಚಿ ಹಾಗೂ ಬಣ್ಣ, ಬೀಜಗಳ ಬಣ್ಣ ಹಾಗೂ ಕಾಯಿಗಳು ಪಕ್ವವಾಗುವ ಕಾಲ-ಇವುಗಳಲ್ಲೆಲ್ಲ ವೈವಿಧ್ಯ ಇದೆ. ಇವುಗಳಲ್ಲಿ ಮುಖ್ಯವಾಗಿ ಷಹಜಾನ್ ಪುರಿ, ಜಾನ್ ಪುರಿ ರೆಡ್, ಫರೂಕಬಾದಿ, ಅಲಹಾಬಾದಿ ಇತ್ಯಾದಿ.

ಕಲ್ಲಂಗಡಿ ಶುದ್ಧವಾದ ಬೇಸಗೆ ಬೆಳೆ. ಇದರ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ಹವಾಗುಣ ಅಗತ್ಯ. ತಂಪಾದ ಹವಾಗುಣದಲ್ಲಿ ಬಿತ್ತಿದ ಬೀಜಗಳ ಮೊಳೆಯುವ ಸಂಖ್ಯೆ ಕಡಿಮೆಯಾಗುತ್ತದೆಯಲ್ಲದೆ ಸಸ್ಯದಲ್ಲಿ ಎಲೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಇಳುವರಿಯೂ ಕಡಿಮೆ, ಮತ್ತು ರೋಗಗಳಿಗೆ ತುತ್ತಾಗುವ ಸಂಭವವೂ ಹೆಚ್ಚು. ರಭಸವಾದ ಗಾಳಿ ಬೀಸುವಾಗ ಪರಾಗ ವಿತರಣೆಯಾಗದೆ ಫಲ ತೀರ ಕಡಿಮೆಯಾಗುತ್ತದೆ. ಒಣ ಹವಾಗುಣದಲ್ಲಿ ಬೆಳೆದ ಹಣ್ಣು ತಂಪಾದ ಹವಾಗುಣದಲ್ಲಿ ಬೆಳೆದ ಹಣ್ಣಿಗಿಂತ ಸಿಹಿಯಾಗಿರುತ್ತದೆ.
ಕಲ್ಲಂಗಡಿಯನ್ನು ಅನೇಕ ವಿಧವಾದ ಮಣ್ಣುಗಳಲ್ಲಿ ಬೆಳೆಸ ಬಹುದಾದರೂ ಮರಳುಗೋಡು ಮತ್ತು ಜೇಡಿಗೋಡು ಮಣ್ಣು ಶ್ರೇಷ್ಠವಾದವು. ಬೇಸಗೆ ಕಾಲದಲ್ಲಿ ಕೆರೆ ಅಂಗಳ ಮತ್ತು ನದಿಯ ದಂಡೆಗಳಲ್ಲಿ ಕಲ್ಲಂಗಡಿ ಬೇಸಾಯ ಮಾಡುವುದು ಸಾಮಾನ್ಯವಾದ ರೂಢಿ. ಈ ರೀತಿ ಬೇಸಾಯ ಮಾಡುವಾಗ ಭೂಮಿಯಲ್ಲಿನ ಜಲಮಟ್ಟವನ್ನು ತಿಳಿಯಬೇಕು. ಜಲಮಟ್ಟ ಮೇಲಿರುವ ಭೂಮಿಯಲ್ಲಿ ಕಲ್ಲಂಗಡಿ ಬೇಸಾಯ ಮಾಡುವಾಗ ಮಣ್ಣನ್ನು ಬೇಕಾದ ಅಂತರದಲ್ಲಿ ಏರು ಹಾಕಿ ಅವುಗಳ ಮೇಲೆ ಕಲ್ಲಂಗಡಿ ಬೇಸಾಯ ಮಾಡಬೇಕು.

ಪ್ರಮುಖವಾಗಿ ಇದು ಅತ್ಯಂತ ರುಚಿಯಾದ ಬೇಸಗೆ ಹಣ್ಣೆಂದು ಪ್ರಸಿದ್ಧವಾಗಿದೆ. ಇದರ ರಸ ಬಹಳ ತಂಪುಗೊಳಿಸುವ ಹಾಗೂ ಚೇತೋಹಾರಿಯಾದ ಪಾನೀಯವೆಂದು ಹೆಸರಾಗಿದೆ. ರಾಜಸ್ತಾನದ ಕೆಲವೆಡೆಗಳಲ್ಲಿ ಇದರ ಕಾಯಿಗಳನ್ನು ತರಕಾರಿಯಾಗಿಯೂ ಉಪಯೋಗಿಸುವುದುಂಟು. ಕೆಲವು ಪ್ರದೇಶಗಳಲ್ಲಿ ಸಿಹಿತಿಂಡಿ ಮಾಡಲೂ ಉಪ್ಪಿನ ಕಾಯಿಯಾಗಿಯೂ ಇದನ್ನು ಬಳಸುವ ರೂಢಿಯಿದೆ. ಕಿರ್ಬತ್ ಎಂದು ಕರೆಯಲಾಗುವ ಒಂದು ಸ್ವಾಭಾವಿಕ ತಳಿಯ ಕಲ್ಲಂಗಡಿ ಹಣ್ಣು ಕಹಿ ರುಚಿಯುಳ್ಳದ್ದು. ಅದು ವಿರೇಚಕ ಗುಣವುಳ್ಳದ್ದು.

ಆರೋಗ್ಯಕ್ಕೆ ಪೂರಕ ಕಲ್ಲಂಗಡಿ

ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್​ ಮತ್ತು ಮೆಗ್ನೀಷಿಯಮ್​ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗಿದೆ.

ಬೇಸಿಗೆಗೆ ಏಷ್ಟು ತಿಂದರೂ ಬೇಕು ಅನಿಸುವ ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ.
ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಇದು ಸಹಕಾರಿ.
ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಸಮಸ್ಯೆ ನೀಗುತ್ತದೆ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.
ಶಕ್ತಿವರ್ಧನೆಯಾಗಿ ಕೆಲಸ ಮಾಡುತ್ತದೆ.
ಅಸ್ತಮಾ ರೋಗಗಿಳಿಗೆ ಪ್ರಯೋಜನಕಾರಿ.
ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ.
ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಸುತ್ತದೆ.
ದೇಹಕ್ಕೆ ಅವಶ್ಯ ನೀರಿನಂಶ ಸಿಗುತ್ತದೆ.
ಮೂಳೆ, ಸ್ನಾಯುಗಳು ಬಲಗೊಳ್ಳುತ್ತವೆ.
ಕಲ್ಲಂಗಡಿ ಜ್ಯೂಸ್ ಕುಡಿದರೆ ವ್ಯಾಯಾಮದ ನಂತರ ಉಂಟಾಗುವ ಮೂಳೆ ನೋವು ನಿವಾರಣೆಯಾಗುತ್ತದೆ.
ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ.

ಕಲ್ಲಂಗಡಿಯಲ್ಲಿ 92% ರಷ್ಟು ನೀರಿನಂಶ ತುಂಬಿದೆ. ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಕಲ್ಲಂಗಡಿ ಗರ್ಭಿಣಿಯರ ಆರೋಗ್ಯಕ್ಕೂ ಹಿತ.

100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇದೆ. ಇದು ಬಾಯಾರಿಕೆ ಹಾಗೂ ಹಸಿವು ಕಡಿಮೆ ಮಾಡುವುದು. ಇದರಲ್ಲಿ ಉನ್ನತ ಮಟ್ಟದ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಶೇ.60ರಷ್ಟು ಕಡಿಮೆ ಮಾಡುವುದು ಹಾಗೂ ತೂಕ ಇಳಿಸಲು ಇದು ಸಹಕಾರಿ. ಶೇ.90ರಷ್ಟು ನೀರಿನಾಂಶ ಹೊಂದಿರುವ ಇದು ಹೊಟ್ಟೆಯು ತುಂಬಿರುವಂತೆ ಮಾಡುವುದು ಹಾಗೂ ಅತಿಯಾಗಿ ತಿನ್ನದಂತೆ ತಡೆಯುವುದು.

ಕಲ್ಲಂಗಡಿ ಹೆಚ್ಚು ತಿಂದರೆ ಪರಿಣಾಮ
ಲೈಸೊಪೀನ್ ಅಂಶ ಹೆಚ್ಚಿರುವ ಕಲ್ಲಂಗಡಿಯ ‌ಅತಿ ಸೇವನೆ ವಾಂತಿ, ಬೇಧಿ, ವಾಕರಿಕೆ, ಅನಿಲ ಉತ್ಪತ್ತಿ, ಅಜೀರ್ಣಕ್ಕೆ ಕಾರಣ.
ಇದರಲ್ಲಿ ಪೊಟಾಷಿಯಂ ಅಂಶ ಅಧಿಕವಾಗಿರುವ ಕಾರಣ ಹೆಚ್ಚು ಸೇವನೆ ಹೃದಯ ಬಡಿತ
ಏರಿಳಿತದಂಥ ತೊಂದರೆಗೆ ದಾರಿ.

ಕೆಲವರಿಗೆ ಇದು ಅಲರ್ಜಿಕಾರಕ. ಕ್ಯಾರೆಟ್‌, ಸೌತೆಕಾಯಿ ಅಲರ್ಜಿ ಇದ್ದವರಿಗೆ ಕಲ್ಲಂಗಡಿ ಆಗುವುದಿಲ್ಲ.
ಕಲ್ಲಂಗಡಿ ಹಣ್ಣು ಮಿತವಾಗಿ ಬಳಸಿದ್ದಲ್ಲಿ ಆರೋಗ್ಯ ಪ್ರಯೋಜನ ಪಡೆಯಬಹುದು ಆದರೆ ಅತಿಯಾಗಿ ಸೇವನೆ ತ್ವಚೆಯ ಬಣ್ಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತೋರಿಸಿದೆ, ಲೈಕೋಪೆನಿಯಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಕಲ್ಲಂಗಡಿ ಸೌಂದರ್ಯ ವರ್ಧಕ. ಇದರ ಸೇವನೆಯಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ ಸುಕ್ಕು ನಿಯಂತ್ರಣಕ್ಕೆ ಬರುತ್ತದೆ.
ಬೇಸಿಗೆಯಲ್ಲಿ ಚರ್ಮ ಒಣಗುವುದನ್ನು ತಡೆಯುತ್ತದೆ. ಇದರ ಜ್ಯೂಸ್ ಸೇವನೆಯಿಂದ ಚರ್ಮದ ಶುಷ್ಕತೆ ತಪ್ಪಿ ತಾಜಾ ಇರುವಂತೆ ನೋಡಿಕೊಳ್ಳುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಆಡು ಮುಟ್ಟದ ಸೊಪ್ಪು ಔಷಧಿ ಗುಣ

ಆಡು ಮುಟ್ಟದ ಸೊಪ್ಪು ಔಷಧಿ ಗುಣ

ಇಂದಿನ ಮಧ್ಯರಾತ್ರಿ ಯಿಂದಲೆ 900 ವರ್ಷಗಳ ನಂತರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು

ಇಂದಿನ ಮಧ್ಯರಾತ್ರಿ ಯಿಂದಲೆ 900 ವರ್ಷಗಳ ನಂತರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು