in

ಅರಶಿನದ ಮಹತ್ವ

ಅರಶಿನದ ಮಹತ್ವ
ಅರಶಿನದ ಮಹತ್ವ

ಯಾವುದೇ ರೀತಿಯ ಗಾಯ ಆಗಿ ರಕ್ತ ಬಂದರೆ,ಅಥವಾ ಯಾವುದೇ ಚರ್ಮಕ್ಕೆ ಸಂಬಂಧಿತ ಸಮಸ್ಯೆ ಇದ್ದರೂ ಮೊದಲು ಹುಡುಕುವ ಮದ್ದು ಅರಸಿನ. ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಅರಶಿನವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಅರಿಶಿನ ಬಹುಪಕಾರಿ. ಅರಿಶಿನವಿಲ್ಲದೆ ಯಾವುದೇ ಧಾರ್ಮಿಕ ಆಚರಣೆ ಪೂರ್ಣಗೊಳ್ಳುವುದಿಲ್ಲ. ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ.
ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನ ಹಾಲನ್ನು ಕಫ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ.ಅರಿಶಿನವು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ, ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ದೇಹಕ್ಕೆ ಅರಿಶಿನ ಸಂಯೋಜನೆಯೊಂದಿಗೆ ಪ್ರಯೋಜನಕಾರಿಯಾಗಿದೆ.

ಅರಿಶಿನ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಅರಿಶಿನದಲ್ಲಿನ ಕರ್ಕ್ಯುಮಿನ್ ಸೈಟೊಕಿನ್ ಗಳ ಬಿಡುಗಡೆ ತಡೆಯುತ್ತದೆ. ಈ ಸೈಟೊಕಿನ್‌ ಗಳು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿವೆ.

ಅರಶಿನದ ಮಹತ್ವ
ಅರಶಿನದ

ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಸಂಗ್ರಹವು ಕ್ರಮೇಣ ಕಡಿಮೆಯಾಗುತ್ತದೆ. ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಇತರ ಪದಾರ್ಥಗಳು ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.

ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ
ಅರಿಶಿನದ ಹಾಲು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಬ್ರಾಂಕೈಟಿಸ್‌ಗೆ ಪರಿಣಾಮಕಾರಿ ಪರಿಹಾರವಾಗಿದೆ. ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದರೂ ಪರಿಹಾರ ನೀಡುತ್ತದೆ.

ಅರಿಶಿನದ ಹಾಲು ಮೊಡವೆ, ಎಸ್ಜಿಮಾ, ಇತರ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಚರ್ಮದಲ್ಲಿ ಮೂಡಿರುವ ಸುಕ್ಕುಗಳನ್ನು ತೆಗೆದು, ನೈಸರ್ಗಿಕವಾಗಿ ಹೊಳೆಯಲು ಸಹಾಯ ಮಾಡುತ್ತದೆ.

ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ನಂತರ, ಧಮನಿಗಳಲ್ಲಿರುವ ರಕ್ತದ ಹರಿವು ಹೆಚ್ಚಾಗುತ್ತದೆ, ಇದರಿಂದಾಗಿ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.ಪಾನೀಯ ಗಾಯಗಳನ್ನು ತುಂಬುವ ಗುಣಲಕ್ಷಣಗಳನ್ನು ಅರಿಶಿನ ಹೊಂದಿದೆ. ನೀವು ಗಾಯಗೊಂಡಾಗ ನಿಮಗೆ ಅಧಿಕ ರಕ್ತದೊತ್ತಡ ಉಂಟಾದರೆ, ತಕ್ಷಣ ನೀವು ಆ ಸ್ಥಳದಲ್ಲಿ ಅರಿಶಿನವನ್ನು ಇಡಬೇಕು. ಇದು ನಿಮ್ಮ ಗಾಯದ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ಅರಿಶಿನ ಬಳಕೆಯಲ್ಲಿ, ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ನಂತರ ಆ ನೀರಿನಿಂದ ಸ್ನಾನ ಮಾಡಿದರೆ, ಅದು ಆ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ನೀಡುತ್ತದೆ.

ಅರಶಿನದ ಮಹತ್ವ
ಅರಿಶಿನದ ಹಾಲು

ಅರಿಶಿನದ ಹಾಲು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹುಣ್ಣು ಮತ್ತು ಅತಿಸಾರವನ್ನು ತಡೆಯುತ್ತದೆ. ಹೊಟ್ಟೆಯುಬ್ಬರ , ಎದೆಯುರಿ, ಇತರ ಜಠರಗರುಳಿನ ಸೋಂಕುಗಳಿದ್ದರೆ ಪ್ರತಿದಿನ ಅರಿಶಿನವನ್ನು ಒಂದು ಕಪ್ ಹಾಲಿಗೆ ಸೇರಿಸಿ ಕುಡಿಯಿರಿ.ಅರಿಶಿನದ ಹಾಲು ಕುಡಿಯುತ್ತಿದ್ದರೆ ಮುಟ್ಟಿನ ನೋವು ಶಮನಗೊಂಡು, ಋತುಚಕ್ರ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜೊತೆಗೆ, ಲ್ಯುಕೋರಿಯಾ, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್ಸ್ ಮತ್ತು ಹಾರ್ಮೋನುಗಳಲ್ಲಿ ಅಸಮತೋಲನ ಹೊಂದಿರುವ ಮಹಿಳೆಯರಿಗೂ ಅರಿಶಿನ ಹಾಲು ಪ್ರಯೋಜನಕಾರಿ.

ಮನೆಯ ಮುಖ್ಯ ದ್ವಾರದ ಬಳಿ ಅಥವಾ ಮನೆಯನ್ನು ಪ್ರವೇಶಿಸುವಲ್ಲಿ ಅಥವಾ ಮನೆಯ ಗೋಡೆಯ ಸುತ್ತ ಅರಿಶಿನ ರೇಖೆಯನ್ನು ಹಾಕುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಆ ಮನೆಯೊಳಗೆ ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆಯಿದೆ.

ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಲ್ಲಾ ಕಲ್ಮಶಗಳಿಂದ ರಕ್ತನಾಳಗಳು ಮತ್ತು ದುಗ್ಧರಸ ವ್ಯವಸ್ಥೆ(ಲಿಂಫ್ಯಾಟಿಕ್ ಸಿಸ್ಟಮ್)ಯನ್ನು ಶುದ್ಧಗೊಳಿಸುತ್ತದೆ.ಅರಿಶಿನ ಹಾಲು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ! ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅರಿಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು. ಅರಿಶಿನದಲ್ಲಿರುವ ‘ಕರ್ಕ್ಯುಮಿನ್ ‘ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಬರುವುದನ್ನು ತಪ್ಪಿಸಬಹುದು.

ಅರಶಿನದ ಮಹತ್ವ
ಅರಿಶಿನ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ. ಇದು ಮಧುಮೇಹ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಡಯಾಬಿಟಿಕ್ ನೆಫ್ರೋಪತಿ, ಡಯಾಬಿಟಿಕ್ ರೆಟಿನೋಪತಿ ಚಿಕಿತ್ಸೆಯಲ್ಲಿ ಕರ್ಕ್ಯುಮಿನ್ ಬಳಸಲಾಗುತ್ತದೆ.

ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ತಪ್ಪಿಸಲು ಅರಿಶಿನದ ಬಳಕೆ ತುಂಬಾ ಪ್ರಯೋಜನಕಾರಿಯಾಗಿದೆ.ಮೂಳೆಗಳ ದೃಢತೆಗೆ ಅರಿಶಿನ ಹಾಲು ಸಹಕಾರಿಯಾಗುತ್ತದೆ. ಇದು ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ಅರಿಶಿನವನ್ನು ತಿನ್ನಲು ಅಥವಾ ಮೊಣಕಾಲುಗಳಿಗೆ ಹಚ್ಚಲು ಸಲಹೆ ನೀಡಬಹುದು. ಅರಿಶಿನವು ನೋವು ನಿವಾರಕ ಗುಣವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದು ದೇಹದಲ್ಲಿನ ನೋವನ್ನು ನಿವಾರಿಸುವಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತದೆ.

​ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಶರೀರ ಶುದ್ಧೀಕರಣಗೊಂಡು, ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.

ಹಾಲಿನಲ್ಲಿ ಅರಿಶಿನ ಮಿಶ್ರಣ ಮಾಡಿ ಕುಡಿಯುವ ಮೂಲಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಅರಿಶಿನ ಅತೀವ ಸೇವನೆಯು ರಕ್ತದ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಗನನ್ನು ಅಪ್ಪು ಎತ್ತಿಕೊಂಡಿರುವ ಫೋಟೋ ನೋಡಿ ಕಣ್ಣೀರಿಟ್ಟ ಮೇಘನರಾಜ್ ಹೇಳಿದ್ದೇನು ಗೊತ್ತಾ.

ಮಗನನ್ನು ಅಪ್ಪು ಎತ್ತಿಕೊಂಡಿರುವ ಫೋಟೋ ನೋಡಿ ಕಣ್ಣೀರಿಟ್ಟ ಮೇಘನರಾಜ್ ಹೇಳಿದ್ದೇನು ಗೊತ್ತಾ.

ಈ 6 ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಿದೆ

ಈ 6 ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಿದೆ