ಬಾರ್ಲಿಯು ವಾರ್ಷಿಕವಾಗಿ ಬೆಳೆಯುವ ಹುಲ್ಲಿನ ಜಾತಿಯ ಸಸ್ಯ ಹಾರ್ಡಿಯಮ್ ವಲ್ಗರೆ ಯಿಂದ ಪಡೆದ ಒಂದು ಏಕದಳ ಧಾನ್ಯವಾಗಿದೆ.
ಬಾರ್ಲಿಯು ಅನೇಕ ಉಪಯೋಗಗಳನ್ನು ಹೊಂದಿದೆ. ಇದನ್ನು ಪ್ರಾಣಿಗಳ ಮುಖ್ಯ ಮೇವಾಗಿ, ಬಿಯರ್ ಮತ್ತು ಕೆಲವು ಬಟ್ಟಿ ಇಳಿಸಿದ ಪಾನೀಯಗಳಲ್ಲಿ ಪ್ರಮುಖ ಮೊಳಕೆ ಧಾನ್ಯವಾಗಿ ಹಾಗೂ ಅನೇಕ ಆರೋಗ್ಯಕರ ಆಹಾರಗಳ ಅಂಶವಾಗಿ ಬಳಸಲಾಗುತ್ತದೆ. ಇದನ್ನು ಸ್ಕಾಟ್‌ಲ್ಯಾಂಡ್‌ನಿಂದ ಹಿಡಿದು ಆಫ್ರಿಕಾದವರೆಗಿನ ವಿವಿಧ ಸಂಸ್ಕೃತಿಗಳ ಬಾರ್ಲಿ ಬ್ರೆಡ್‌ನಲ್ಲಿ ಹಾಗೂ ಸಾರು ಮತ್ತು ಭಕ್ಷ್ಯಗಳಲ್ಲಿ ಉಪಯೋಗಿಸುತ್ತಾರೆ.
ಪ್ರಪಂಚದಲ್ಲಿ 2007ರ ಏಕದಳ ಧಾನ್ಯಗಳ ಶ್ರೇಣಿಯಲ್ಲಿ, ಬಾರ್ಲಿಯು ಉತ್ಪಾದನೆಯಾಗುವ ಪ್ರಮಾಣ ಮತ್ತು ಬೆಳೆಯುವ ಪ್ರದೇಶ ಎರಡರಲ್ಲೂ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಬಾರ್ಲಿಯು ಹುಲ್ಲಿನ ವಂಶಕ್ಕೆ ಸೇರಿದೆ. ಇದೊಂದು ಸ್ವಂತವಾಗಿ ಪರಾಗಸ್ಪರ್ಶ ಮಾಡಿಕೊಳ್ಳುವ, 14 ವರ್ಣತಂತುಗಳ ಜೋಡಿ-ವರ್ಣತಂತುವಿನ ಜಾತಿಯಾಗಿದೆ. ನಿಸರ್ಗ ಸಹಜವಾಗಿ ಬೆಳೆಯುವ ಬಾರ್ಲಿಯ ಮೂಲವಾದ ಹಾರ್ಡಿಯಮ್ ವಲ್ಗರೆ ಉಪಜಾತಿ ಸ್ಪೋಂಟೇನಿಯಂ, ಫರ್ಟೈಲ್ ಕ್ರೆಸೆಂಟ್‌ನಾದ್ಯಂತದ ಹುಲ್ಲುಗಾವಲು ಮತ್ತು ಕಾಡು ಪ್ರದೇಶಗಳಲ್ಲಿ ಹೇರಳವಾಗಿರುತ್ತದೆ ಹಾಗೂ ಅಸ್ಥಿರ ಆವಾಸ ಸ್ಥಾನಗಳಲ್ಲಿ, ರಸ್ತೆಬದಿಗಳಲ್ಲಿ ಮತ್ತು ಹಣ್ಣಿನ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಸರ್ಗ ಸಹಜವಾಗಿ ಬೆಳೆಯುವ ಬಾರ್ಲಿಯು ಈ ಪ್ರದೇಶದಿಂದ ಹೊರಗೆ ತೀರ ಕಡಿಮೆಯಾಗಿರುತ್ತದೆ. ಅಲ್ಲದೇ ಸಾಮಾನ್ಯವಾಗಿ ಅಸ್ಥಿರ ಆವಾಸ ಸ್ಥಾನಗಳಲ್ಲಿ ಮಾತ್ರ ಕಂಡುಬರುತ್ತದೆ.
ನಿಸರ್ಗ ಸಹಜವಾದ ಬಾರ್ಲಿಯು ಸುಲಭವಾಗಿ ಒಡೆದುಹೋಗುವ ಕದಿರುಗೊಂಚಲನ್ನು ಹೊಂದಿರುತ್ತದೆ; ಗಿಡವು ಬೆಳೆದಂತೆ, ಈ ಕದಿರುಗೊಂಚಲುಗಳು ಬೀಜದ ಹರಡುವಿಕೆಯನ್ನು ಸುಗಮಗೊಳಿಸುವುದಕ್ಕಾಗಿ ಬೇರ್ಪಡುತ್ತವೆ. ಒಗ್ಗಿಸಿದ ಬಾರ್ಲಿಯು ಚೂರುಚೂರಾಗದ ಕದಿರುಗೊಂಚಲನ್ನು ಹೊಂದಿರುತ್ತದೆ. ಅದು ಬೆಳೆದ ಕದಿರನ್ನು ಕಟಾವು ಮಾಡಲು ಹೆಚ್ಚು ಸುಲಭಗೊಳಿಸುತ್ತದೆ. ಚೂರಾಗದ ಸ್ಥಿತಿಯು Bt1 ಮತ್ತು Bt2 ಎನ್ನುವ ಎರಡು ಭದ್ರವಾಗಿ ಬಂಧಿಸಿದ ಜೀನ್‌ಗಳಲ್ಲಿ ಒಂದರ ರೂಪಾಂತರದಿಂದ ಉಂಟಾಗುತ್ತದೆ; ಹೆಚ್ಚಿನ ಕೃಷಿ-ಪ್ರಭೇದಗಳು ಎರಡರ ರೂಪಾಂತರಗಳನ್ನೂ ಹೊಂದಿವೆ. ಚೂರಾಗದ ಸ್ಥಿತಿಯು ಆನುವಂಶಿಕ ಲಕ್ಷಣದ ವಿಷಯದಲ್ಲಿ ಗೌಣವಾಗಿರುತ್ತದೆ. ಆದ್ದರಿಂದ ಈ ಸ್ಥಿತಿಯನ್ನು ಹೊಂದಿರುವ ಬಾರ್ಲಿಯ ಉಪಜಾತಿಗಳು ರೂಪಾಂತರಿತ ಆಲೀಲ್‌ಗೆ ಸಮಯುಗ್ಮಜಗಳಾಗಿರುತ್ತವೆ.

ಬಾರ್ಲಿಯನ್ನು ಪಾಚಿನಾಶಕವಾಗಿ ಉಪಯೋಗಿಸುತ್ತಾರೆ :
ಇಂಗ್ಲೆಂಡ್‌ನಲ್ಲಿ, ಬಾರ್ಲಿಯ ಹುಲ್ಲನ್ನು ರಂಧ್ರವಿರುವ ಚೀಲಗಳಲ್ಲಿ ಇರಿಸಿ, ಮೀನಿನ ಕೊಳಗಳಲ್ಲಿ ಅಥವಾ ನೀರಿನ ಉದ್ಯಾನಗಳಲ್ಲಿ ತೇಲಿಸಿಬಿಡಲಾಗುತ್ತದೆ. ಇದು ಕೊಳದ ಸಸ್ಯ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಮಾಡದೆ ಪಾಚಿಯ ಬೆಳೆವಣಿಗೆಯನ್ನು ಕಡಿಮೆ ಮಾಡುತ್ತದೆ. ಬಾರ್ಲಿಯ ಹುಲ್ಲನ್ನು ಕೀಟನಾಶಕವಾಗಿ ಬಳಸುವುದಕ್ಕೆ EPA ಒಪ್ಪಿಗೆಯನ್ನು ನೀಡಲಿಲ್ಲ. ಆದರೆ US ಮತ್ತು UKಯಲ್ಲಿ ವಿಶ್ವವಿದ್ಯಾನಿಲಯದ ಪರಿಶೀಲನೆಯಲ್ಲಿ ಅದರ ಕೊಳಗಳಲ್ಲಿ ಪಾಚಿನಾಶಕವಾಗಿ ಬಳಸುವ ಪರಿಣಾಮಕಾರಿತ್ವವು ಮಿಶ್ರ ಫಲಿತಾಂಶಗಳನ್ನು ನೀಡಿತು.
ಅಮೆರಿಕ ಸಂಯುಕ್ತ ಸಂಸ್ಥಾನದ ಬಾರ್ಲಿ ಉತ್ಪಾದನೆಯ ಅರ್ಧದಷ್ಟನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ. ಬಾರ್ಲಿಯು ಪ್ರಪಂಚದ ಹೆಚ್ಚಿನ ಪ್ರದೇಶಗಳಲ್ಲಿ ವಿಶೇಷವಾಗಿ ಉತ್ತರ ಭಾಗದ ವಾಯುಗುಣದಲ್ಲಿ -ಉದಾಹರಣೆಗಾಗಿ ಉತ್ತರ ಮತ್ತು ಪೂರ್ವದ ಯುರೋಪ್- ಒಂದು ಪ್ರಮುಖ ಆಹಾರ ಧಾನ್ಯವಾಗಿದೆ. ಇದು ಮೆಕ್ಕೆಜೋಳದ ಉತ್ಪಾದನೆಗೆ ಸರಿಹೊಂದುವುದಿಲ್ಲ. ಬಾರ್ಲಿಯು ಕೆನಡಾ, ಯುರೋಪ್ ಮತ್ತು ಉತ್ತರದ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಧಾನ ಆಹಾರ ಧಾನ್ಯವಾಗಿದೆ.ಬಾರ್ಲಿಯಿಂದ ತಯಾರಿಸಿದ ವಿಶಿಷ್ಟ ತಿನಿಸು ಮಾರುಕಟ್ಟೆಯಲ್ಲಿ ಬಳಸುವ ಪಶ್ಚಿಮ ಕೆನಡಾದ ಬೀಫ್‌ಅನ್ನು ನಿರೂಪಿಸುವ ಲಕ್ಷಣಗಳಲ್ಲಿ ಒಂದಾಗಿದೆ.
ಬಾರ್ಲಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಳಕೆ ಕಟ್ಟಿಸಲು ಬಳಸಲಾಗುತ್ತದೆ. ಇದು ಬಿಯರ್ ಮತ್ತು ವಿಸ್ಕಿಯ ಉತ್ಪಾದನೆಯಲ್ಲಿ ಒಂದು ಪ್ರಮುಖ ಅಂಶವಾಗಿದೆ. ಎರಡು-ಸಾಲಿನ ಬಾರ್ಲಿಯನ್ನು ಸಾಂಪ್ರದಾಯಿಕವಾಗಿ ಜರ್ಮನ್ ಮತ್ತು ಇಂಗ್ಲಿಷ್ ಬಿಯರ್‌ಗಳಲ್ಲಿ ಬಳಸಲಾಗುತ್ತದೆ. ಆರು-ಸಾಲಿನ ಬಾರ್ಲಿಯನ್ನು US ಬಿಯರ್‌ಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿತ್ತು. ಆದರೆ ಈಗ ಎರಡು ಪ್ರಭೇದಗಳನ್ನೂ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಹಸಿರು ಬಿಯರ್‌ನಿಂದ ತೊಟ್ಟಿಕ್ಕಿಸಿದ ವಿಸ್ಕಿಯನ್ನು ಐರ್ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ಬಾರ್ಲಿಯಿಂದ ತಯಾರಿಸಲಾಗುತ್ತದೆ. ಇತರ ರಾಷ್ಟ್ರಗಳು ಆಲ್ಕಹಾಲಿನ ವಿವಿಧ ಮೂಲಗಳನ್ನು ಬಳಸಿಕೊಳ್ಳುತ್ತವೆ; ಸಾಮಾನ್ಯವಾಗಿ USAನಲ್ಲಿ ಮೆಕ್ಕೆಜೋಳ, ರೈ ಮತ್ತು ಮೊಲಾಸಗಳನ್ನು ಬಳಸಲಾಗುತ್ತದೆ. ಆಲ್ಕಹಾಲಿನ ಘಟಕಾಂಶಗಳಲ್ಲಿ ಧಾನ್ಯವು 51% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದಕ್ಕೆ ಆ ಧಾನ್ಯದ ಹೆಸರನ್ನು ಅನ್ವಯಿಸಲಾಗುತ್ತದೆ.
ಬಾರ್ಲಿ ನೀರು ಮತ್ತು ಬಾರ್ಲಿ ಚಹಾದಂತಹ ಆಲ್ಕಹಾಲ್-ಇಲ್ಲದ ಪಾನೀಯಗಳನ್ನು, ಬಾರ್ಲಿಯನ್ನು ನೀರಿನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಬಾರ್ಲಿ ವೈನ್ 1700ರಲ್ಲಿದ್ದ ಒಂದು ಆಲ್ಕಹಾಲಿನ ಪಾನೀಯವಾಗಿದೆ. ಬಾರ್ಲಿಯನ್ನು ನೀರಿನಲ್ಲಿ ಬೇಯಿಸಿ, ನಂತರ ಬಾರ್ಲಿ-ನೀರನ್ನು ಬಿಳಿ ವೈನ್ ಹಾಗೂ ಬರಿಜು, ನಿಂಬೆ ಮತ್ತು ಸಕ್ಕರೆಯಂತಹ ಇತರ ಅಂಶಗಳೊಂದಿಗೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. 1800ರಲ್ಲಿ ಪುರಾತನ ಗ್ರೀಕ್ ಮೂಲದ ಪಾಕವಿಧಾನದಿಂದ ಒಂದು ಭಿನ್ನ ಬಾರ್ಲಿ ವೈನ್ಅನ್ನು ತಯಾರಿಸಲಾಗಿತ್ತು.
ಬಾರ್ಲಿಯು ಎಂಟು ಮೂಲಭೂತ ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಇಡಿ-ಧಾನ್ಯ ಬಾರ್ಲಿಯನ್ನು ತಿನ್ನುವುದರಿಂದ, ಅಂತಹುದೇ ಗ್ಲಿಸೆಮಿಕ್ ಸೂಚಿಯನ್ನು ಹೊಂದಿರುವ ಬಿಳಿ ಅಥವಾ ಇಡಿ-ಧಾನ್ಯ ಗೋಧಿಗೆ ಹೋಲಿಸಿದರೆ ಸೇವಿಸಿದ ನಂತರ 10 ಗಂಟೆಗಳವರೆಗೆ ರಕ್ತದ ಸಕ್ಕರೆಯ ಪ್ರಮಾಣವು ನಿಯಂತ್ರಿಸಲ್ಪಡುತ್ತದೆ.
ಅಂದರೆ ಆಹಾರಕ್ಕೆ ರಕ್ತದ-ಗ್ಲುಕೋಸ್‌ನ ಪ್ರತಿಕ್ರಿಯೆಯು ಕಡಿಮೆಯಾಗುತ್ತದೆ. ಈ ಪರಿಣಾಮವು ಜೀರ್ಣವಾಗದ ಕಾರ್ಬೊಹೈಡ್ರೇಟ್‌ಗಳ ದೊಡ್ಡ ಕರುಳಿನ ಹುದುಗುವಿಕೆಯಿಂದ ಉಂಟಾಗುತ್ತದೆ. ಬಾರ್ಲಿಯನ್ನು ಕಾಫಿಯ ಬದಲಿಯಾಗಿಯೂ ಬಳಸಬಹುದು.

ಹೊಟ್ಟಿರುವ ಬಾರ್ಲಿಯನ್ನು ತಿನ್ನಲನರ್ಹವಾದ, ನಾರಿನಂತಹ ಹೊರಗಿನ ಹೊಟ್ಟನ್ನು ತೆಗೆದು ತಿನ್ನಲಾಗುತ್ತದೆ. ಒಮ್ಮೆ ಹೊಟ್ಟನ್ನು ತೆಗೆದ ನಂತರ ಅದನ್ನು ಹೊಟ್ಟಿಲ್ಲದ ಬಾರ್ಲಿ ಎನ್ನುತ್ತಾರೆ. ಇಡಿ ಧಾನ್ಯದಂತೆ, ಹೊಟ್ಟಿಲ್ಲದ ಬಾರ್ಲಿಯು ಹೊಟ್ಟು ಮತ್ತು ಮೊಳಕೆಯನ್ನು ಹೊಂದಿದ್ದು, ಅದನ್ನು ಪೌಷ್ಟಿಕ ಮತ್ತು ಜನಪ್ರಿಯ ಆರೋಗ್ಯಪೂರ್ಣ ಆಹಾರವಾಗಿ ಮಾಡುತ್ತದೆ. ಮುತ್ತು ಬಾರ್ಲಿಯು (ಅಥವಾ ಪರ್ಲ್ಡ್ ಬಾರ್ಲಿ) ಹೊಟ್ಟಿಲ್ಲದ ಬಾರ್ಲಿಯಾಗಿದ್ದು, ಅದರ ಹೊಟ್ಟನ್ನು ತೆಗೆಯಲು ಅದನ್ನು ಮತ್ತಷ್ಟು ಆವಿಯಿಂದ ಸಂಸ್ಕರಿಸಲಾಗುತ್ತದೆ. ಇದನ್ನು “ಸಣ್ಣ ಮುತ್ತಿನಂಥ ಕಾಳಾಗಿ ಮಾಡುವ” ಕ್ರಿಯೆಯ ಮೂಲಕ ನಯಗೊಳಿಸಬಹುದು. ಹೊಟ್ಟಿಲ್ಲದ ಅಥವಾ ಮುತ್ತು ಬಾರ್ಲಿಯನ್ನು ಓಟ್ ಹಿಟ್ಟು ಮತ್ತು ಓಟ್ಸ್ ತರಿಗಳಂತೆ ಹಿಟ್ಟು ಮತ್ತು ತೆಳುವಾದ ಹಲ್ಲೆಗಳನ್ನೂ ಒಳಗೊಂಡಂತೆ ವಿವಿಧ ರೀತಿಯ ಬಾರ್ಲಿ ಉತ್ಪನ್ನಗಳಾಗಿ ತಯಾರಿಸಬಹುದು.
ಗೋಧಿಯ ಹಿಟ್ಟಿಗಿಂತ ಕಡಿಮೆ ಭಾರವನ್ನು ಹೊಂದಿರುವ ಮತ್ತು ಬಣ್ಣದಲ್ಲಿ ಹೆಚ್ಚು ಕಡುವಾಗಿರುವ ಬಾರ್ಲಿಯ ತವುಡು ತೆಗೆಯದ ಹಿಟ್ಟನ್ನು ಸ್ಕಾಟ್‌ಲ್ಯಾಂಡ್‌ನಲ್ಲಿ ಅಂಬಲಿ ಮತ್ತು ಗಂಜಿಯಲ್ಲಿ ಬಳಸುತ್ತಾರೆ. ಬಾರ್ಲಿ-ಹಿಟ್ಟಿನ ಗಂಜಿಯನ್ನು ಅರಬ್ ರಾಷ್ಟ್ರಗಳಲ್ಲಿ ಸ್ಯಾವಿಗ್ ಎಂದು ಕರೆಯುತ್ತಾರೆ. ಮಧ್ಯಪೂರ್ವದಲ್ಲಿ ಕೃಷಿಯ ದೀರ್ಘಕಾಲದ ಇತಿಹಾಸವನ್ನು ಹೊಂದಿರುವುದರೊಂದಿಗೆ ಬಾರ್ಲಿಯನ್ನು, ಕ್ಯಾಶ್ಕಾಕ್, ಕ್ಯಾಶ್ಕ್ ಮತ್ತು ಮುರ್ರಿಯನ್ನೂ ಒಳಗೊಂಡಂತೆ ಸಾಂಪ್ರದಾಯಿಕ ಅರೇಬಿಕ್, ಕುರ್ದಿಶ್, ಪರ್ಷಿಯನ್ ಮತ್ತು ಟರ್ಕಿಶ್ ಆಹಾರ ಪದಾರ್ಥಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಾರ್ಲಿಯ ಸಾರನ್ನು ಸೌದಿ ಅರೇಬಿಯಾದಲ್ಲಿ ರಮದಾನ್ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ತಿನ್ನುತ್ತಾರೆ. ಇದನ್ನು ಪೂರ್ವ ಯುರೋಪಿನಲ್ಲಿ ಸಾರು ಮತ್ತು ಭಕ್ಷ್ಯಗಳಲ್ಲಿಯೂ ಬಳಸುತ್ತಾರೆ. ಸಾಂಪ್ರದಾಯಿಕ ಆಹಾರ ಸಸ್ಯವಾಗಿರುವ ಆಫ್ರಿಕಾದಲ್ಲಿ, ಇದು ಪೌಷ್ಟಿಕಾಂಶವನ್ನು ವರ್ಧಿಸಲು, ಆಹಾರ ಸುರಕ್ಷತೆಯನ್ನು ಹೆಚ್ಚಿಸಲು, ಗ್ರಾಮೀಣ ಪ್ರದೇಶದಲ್ಲಿ ಬೆಳೆಸಲು ಮತ್ತು ಸಮರ್ಥನೀಯ ಭೂಮಿಯನ್ನು ಬೆಂಬಲಿಸಲು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ.
ಆರು-ಸಾಲಿನ ಪ್ರಭೇದ ಬೆರೆ ಯನ್ನು ಆರ್ಕ್ನೆ, ಶೆಟ್‌ಲ್ಯಾಂಡ್, ಕೈತ್ನೆಸ್ ಹಾಗೂ ಸ್ಕಾಟಿಷ್ ಬೆಟ್ಟದ ಸೀಮೆ ಮತ್ತು ದ್ವೀಪಗಳ ಪಶ್ಚಿಮ ಐಲ್‌ಗಳಲ್ಲಿ ಬೆಳೆಸಲಾಗುತ್ತದೆ. ಈ ಧಾನ್ಯವನ್ನು ಬೆರೆ-ಹಿಟ್ಟನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಸ್ಥಳೀಯವಾಗಿ ಬ್ರೆಡ್, ಬಿಸ್ಕೆಟ್ ಮತ್ತು ಸಾಂಪ್ರದಾಯಿಕ ಬೆರೆಹಿಟ್ಟಿನ ತೆಳು ರೊಟ್ಟಿಯಲ್ಲಿ ಉಪಯೋಗಿಸುತ್ತಾರೆ.
ಧನ್ಯವಾದಗಳು.
GIPHY App Key not set. Please check settings