in

ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್

ಟೆನಿಸ್ ಆಟಗಾರ ರೋಜರ್ ಫೆಡರರ್
ಟೆನಿಸ್ ಆಟಗಾರ ರೋಜರ್ ಫೆಡರರ್

ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್(41) ಅವರು ವೃತ್ತಿಪರ ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.

ಸುದೀರ್ಘ ಬರಹವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೆಡರರ್, ‘ಲೇವರ್ ಕಪ್–2022’ರ ನಂತರ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿನ ಪ್ರತಿಸ್ಪರ್ಧಿಗಳು ಹಾಗೂ ಅಭಿಮಾನಿಗಳಿಗೆ ಫೆಡರರ್ ಧನ್ಯವಾದ ಅರ್ಪಿಸಿದ್ದಾರೆ.

ರೋಜರ್ ಫೆಡರರ್ ಇವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನ್ನಿಸ್ ಆಟಗಾರರು, ಸಧ್ಯಕ್ಕೆ ಇವರು ವಿಶ್ವದ ೨ನೇಯ ಶ್ರೇಯಾಂಕದ ಆಟಗಾರರು.

ಫೆಡರರ್ ಅವರು ೮ ಆಗಸ್ಟ್, ೧೯೮೧ ರಂದು, ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬ ಊರಿನಲ್ಲಿ ಜನಿಸಿದರು. ತಮ್ಮ ಬಾಲ್ಯದಲ್ಲಿ ಆಗಿನ ಪ್ರಖ್ಯಾತ ಟೆನ್ನಿಸಿಗ ಬೆಕರ್ ಅವರನ್ನು ತಮ್ಮ ಆದರ್ಶವೆಂದೆಣಿಸಿದರು. ತಮ್ಮ ೮ನೇ ವಯಸ್ಸಿಗೆ ಟೆನ್ನಿಸ್ ಆಡಲು ಪ್ರಾರಂಭಿಸಿದರು.

೧೯೯೮ರಲ್ಲಿ ಜಾಗತಿಕ ಟೆನ್ನಿಸ್ ಬಾಳ್ವೆಯನ್ನು ಪ್ರಾರಂಭಿಸಿದರು. ಇವರು ಆ ಸಮಯದಲ್ಲಿ ಬಾಲಕರ ವಿಶ್ವ ಟೆನ್ನಿಸ್ ರಾಂಕಿಂಗ್ ನಲ್ಲಿ ೧ನೇ ಸ್ಥಾನಿಯಾಗಿದ್ದರು. ೨೦೦೫ರಲ್ಲಿ ಪ್ರಪ್ರಥಮ ಬಾರಿಗೆ ವಿಂಬಲ್ಡನ್ ಮುಕ್ತ ಟೆನ್ನಿಸ್ ಚಾಂಪಿಯನ್ ಆಗುವುದರೊಂದಿಗೆ ತಮ್ಮ ಸಾಧನೆಯನ್ನು ಪ್ರಾರಂಭಿಸಿದರು. ೧೯೯೮ ರಲ್ಲಿ ತಮ್ಮ ೧೮ನೇ ವಯಸ್ಸಿಗೆ ವಿಶ್ವದ ಅತಿ ಕಿರಿಯ ೧೦೦ರ ಒಳಗಿನ ಆಗ್ರಮಾನ್ಯ ಆಟಗಾರರಾದರು. ಇವರು ಫೆಬ್ರವರಿ ೨, ೨೦೦೪ ರಿಂದ ಅಗಸ್ಟ್ ೧೭, ೨೦೦೮ರ ವರೆಗೆ ದಾಖಲೆಯ ೨೩೭ ವಾರಗಳ ಕಾಲ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾಗಿದ್ದರು. ಇವರ ಇಂಥ ಸಾಧನೆಯನ್ನು ಕಂಡು ಅನೇಕ ಟೆನ್ನಿಸ್ ವಿಷ್ಲೇಶಕರು ಮತ್ತು ಹಳೆಯ ಟೆನ್ನಿಸ್ ಹುರಿಯಾಳುಗಳು ಇವರನ್ನು ಇತಿಹಾಸದ ಅತ್ಯುತ್ತಮ ಟೆನ್ನಿಸ್ ಪಟುವೆಂದು ಕರೆಯುತ್ತಿದ್ದಾರೆ.

ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್
ರೋಜರ್ ಫೆಡರರ್

ಇವರ ತಂದೆ ರಾಬರ್ಟ್ ಫೆಡರರ್, ತಾಯಿ ಲಿನೆಟ್ ಫೆಡರರ್ ಹಾಗೂ ತಂಗಿ ಡಯಾನ ಫೆಡರರ್. ೨೦೧೦ರಲ್ಲಿ ಮಿರ್ಕಾ ಅವರನ್ನು ವಿವಾಹವಾದರು. ಮೈಲಾ ರೋಸ್ ಹಾಗು ಚಾರ್ಲಿನ್ ರೀವಾ ಎಂಬ ಇಬ್ಬರು ಮಕ್ಕಳು ಇದ್ದಾರೆ.

ಫೇಸ್‌ಬುಕ್‌ನಲ್ಲಿ ರೋಜರ್‌ ಫೆಡರರ್‌ ಪೋಸ್ಟ್ ಮಾಡಿರುವ ವಿದಾಯ ಪತ್ರದ ಸಾರಾಂಶ ಹೀಗಿದೆ.

ನನ್ನ ಟೆನಿಸ್ ಕುಟುಂಬವೇ…

ಹಲವು ವರ್ಷಗಳಿಂದ ಟೆನಿಸ್ ನನಗೆ ನೀಡಿರುವ ಕಾಣಿಕೆಗಳು ಶ್ರೇಷ್ಠವಾಗಿವೆ. ನಿಸ್ಸಂಶಯವಾಗಿಯೂ ಈ ಹಾದಿಯಲ್ಲಿ ನಾನು ಭೇಟಿಯಾದವರು, ನನ್ನ ಪ್ರತಿಸ್ಪರ್ಧಿಗಳು, ಗೆಳೆಯರು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಈ ಕ್ರೀಡೆಗೆ ಜೀವನಾಡಿಗಳಾಗಿರುವ ಅಭಿಮಾನಿಗಳು. ಇವತ್ತು ನಿಮ್ಮೆಲ್ಲರೊಂದಿಗೆ ಒಂದು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ.

ತಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಮೂರು ವರ್ಷಗಳಲ್ಲಿ ನಾನು ಗಾಯ ಹಾಗೂ ಶಸ್ತ್ರಚಿಕಿತ್ಸೆಗಳ ಸವಾಲುಗಳನ್ನು ಎದುರಿಸಿದ್ದೇನೆ. ಇದೆಲ್ಲದರಾಚೆಯೂ ನಾನು ಮತ್ತೆ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಲು ಎಲ್ಲ ಬಗೆಯಿಂದಲೂ ಶ್ರಮಿಸಿದ್ದೇನೆ. ಆದರೆ ನನ್ನ ದೇಹದ ಇತಿಮಿತಿಗಳನ್ನೂ ಅರಿತಿರುವೆ. ದೇಹ ನೀಡಿದ ಸಂದೇಶವೂ ಸ್ಪಷ್ಟವಾಗಿದೆ. ಈಗ ನನಗೆ 41 ವರ್ಷ. ಕಳೆದ 24 ವರ್ಷಗಳಲ್ಲಿ 1500 ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್‌ ನನ್ನ ನಿರೀಕ್ಷೆಗೂ ಮೀರಿದ ಮಮತೆಯನ್ನು ದಯಪಾಲಿಸಿದೆ. ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳುವ ಸಮಯ ಈಗ ಬಂದಿದೆ. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೆವರ್ ಕಪ್‌ ಟೂರ್ನಿಯಲ್ಲಿ ಆಡುವೆ. ಅದು ನನ್ನ ಕೊನೆಯ ಎಟಿಪಿ ಸ್ಪರ್ಧೆಯಾಗಲಿದೆ. ಭವಿಷ್ಯದಲ್ಲಿಯೂ ಮತ್ತೊಂದಿಷ್ಟು ಟೆನಿಸ್ ಆಡುವೆ. ಆದರೆ, ಗ್ರ್ಯಾನ್‌ಸ್ಲಾಮ್ ಅಥವಾ ಟೂರ್‌ಗಳಲ್ಲಿ ಅಲ್ಲ.

ಇದೊಂದು ಕಠಿಣ ಹಾಗೂ ಕಹಿಯಾದ ನಿರ್ಧಾರ. ಏಕೆಂದರೆ ನನಗೆಲ್ಲವನ್ನೂ ಕೊಟ್ಟ ಆಟದಿಂದ ದೂರವಾಗುತ್ತಿರುವೆ. ಈ ಭೂಮಿಯ ಮೇಲಿರುವ ಅತ್ಯಂತ ಅದೃಷ್ಟವಂತರಲ್ಲಿ ನಾನೂ ಒಬ್ಬ. ಟೆನಿಸ್ ಆಡುವಂತಹ ವಿಶೇಷ ಪ್ರತಿಭೆಯು ಒಲಿಯಿತು. ನಾನೂ ಊಹಿಸಲೂ ಸಾಧ್ಯವಾಗದಷ್ಟು ಔನತ್ಯವನ್ನು ಇಲ್ಲಿ ಸಾಧಿಸಿದೆ. ಅಂದುಕೊಂಡಿದ್ದಕ್ಕಿಂತಲೂ ದೀರ್ಘ ಕಾಲ ಆಡಿದೆ.

ಈ ಸಂದರ್ಭದಲ್ಲಿ ನನ್ನ ಪತ್ನಿ ಮಿರ್ಕಾಗೆ ಕೃತಜ್ಞತೆ ಹೇಳಲೇಬೇಕು. ಈ ಮಹತ್ವದ ಪಯಣದ ಪ್ರತಿಯೊಂದು ನಿಮಿಷದಲ್ಲಿಯೂ ಆಕೆ ನನ್ನೊಂದಿಗಿದ್ದಾಳೆ. ಫೈನಲ್‌ ಪಂದ್ಯಗಳಿಗಿಂತಲೂ ಮುನ್ನ ಆತ್ಮವಿಶ್ವಾಸ ಉದ್ದಿಪನಗೊಳಿಸಿದ್ದು, ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೂ ನನ್ನ ಬಹುತೇಕ ಎಲ್ಲ ಪಂದ್ಯಗಳನ್ನೂ ವೀಕ್ಷಿಸಿದ್ದು ಮರೆಯಲು ಸಾಧ್ಯವೇ. 20 ವರ್ಷಗಳಲ್ಲಿ ನನ್ನ ಎಲ್ಲ ಬಾಲಿಶತನಗಳು, ವೈರುದ್ಯಗಳನ್ನು ಸಹನೆಯಿಂದ ನಿಭಾಯಿಸಿದ್ದಾಳೆ. ನನ್ನ ಚೆಂದದ ನಾಲ್ವರು ಮಕ್ಕಳಿಗೂ ಧನ್ಯವಾದಗಳು. ಹೊಸ ತಾಣಗಳನ್ನು ನೋಡುವ ಅವರ ಉತ್ಸುಕತೆ, ನನ್ನ ಪಂದ್ಯಗಳನ್ನು ಅವರು ಆಸ್ವಾದಿಸುವ ರೀತಿ ಅವಿಸ್ಮರಣೀಯ. ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಕುಟುಂಬವು ನನ್ನ ಪಂದ್ಯಗಳನ್ನು ನೋಡುವಾಗ ಪುಳಕಿತಗೊಂಡ ಕ್ಷಣಗಳು ಎಂದೆಂದಿಗೂ ಸ್ಮರಣಾರ್ಹ.

ಪ್ರೀತಿಯ ಅಪ್ಪ, ಅಮ್ಮ ಹಾಗೂ ಸಹೋದರಿಯ ಪ್ರೋತ್ಸಾಹವಿಲ್ಲದಿದ್ದರೆ ಜೀವನದಲ್ಲಿ ಯಾವ ಸಾಧನೆಯನ್ನೂ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಮಾಜಿ ಕೋಚ್‌ಗಳು ತೋರಿದ ಮಾರ್ಗದರ್ಶನ ಮಹತ್ವದ್ದು. ಎಳವೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟ ಸ್ವಿಸ್ ಟೆನಿಸ್‌ಗೆ ಆಭಾರಿ. ತಂಡದ ಇವಾನ್, ಡ್ಯಾನಿ, ರೋಲ್ಯಾಂಡ್, ವಿಶೇಷವಾಗಿ ಸೆವಿ ಹಾಗೂ ಪಿಯರ್ ಅವರ ಸಹಾಯವೂ ದೊಡ್ಡದು. 17 ವರ್ಷಗಳಿಂದ ನನ್ನ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಟೋನಿ ಅವರೆಲ್ಲರಿಗೂ ಧನ್ಯವಾದಗಳು.

ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್
ಫೆಡರರ್ ಅವರು ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ

ನನ್ನ ಸಮಕಾಲೀನ ಆಟಗಾರರು, ಸ್ನೇಹಿತರಿಗೂ ವಂದನೆಗಳು. ಕೋರ್ಟ್‌ನಲ್ಲಿ ಅಪ್ಪಟ ಕ್ರೀಡಾಮನೋಭಾವದಿಂದ ಪೈಪೋಟಿ ಮಾಡಿದ್ದೇವೆ. ನಾವೆಲ್ಲರೂ ಸೇರಿ ಟೆನಿಸ್‌ನ ಘನತೆಯನ್ನು ಮತ್ತಷ್ಟು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ. ಅವರೆಲ್ಲರಿಗೂ ನಾನು ಆಭಾರಿ. ಬೇರೆಲ್ಲಕ್ಕಿಂತ ಮುಖ್ಯವಾಗಿ ಅಭಿಮಾನಿ ಗಳಿಗೆ ವಿಶೇಷ ವಂದನೆಗಳು. ನನ್ನ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಸದಾ ಹೆಚ್ಚಿಸಿದವರು ನೀವು.

24 ವರ್ಷಗಳ ಈ ಸಾಹಸಮಯ ಪಯಣವು ಒಮ್ಮೊಮ್ಮೆ 24 ಗಂಟೆಗಳಲ್ಲಿಯೇ ಮುಗಿದಂತೆ ಭಾಸವಾಗುತ್ತದೆ. 40 ದೇಶಗಳ ವಿವಿಧ ತಾಣಗಳಲ್ಲಿ ಅಪಾರ ಅಭಿಮಾನಿಗಳ ಮುಂದೆ ಆಡಿದ ಅದೃಷ್ಟಶಾಲಿ ನಾನು. ನಗು, ಅಳು ಹಾಗೂ ನೋವುಗಳನ್ನು ಅನುಭವಿ ಸಿರುವೆ. ಈ ದಾರಿಯಲ್ಲಿ ಅತ್ಯಂತ ಅತ್ಮೀಯ ಹಾಗೂ ಸಜ್ಜನ ಸ್ನೇಹಿತ ರನ್ನು ಗಳಿಸಿದ್ದೇನೆ. ಜೀವ
ಮಾನದ ಅಸ್ತಿ ಅವರೆ ಲ್ಲರೂ. ತಮ್ಮ ಕಾರ್ಯಬಾಹುಳ್ಯದ ನಡುವೆಯು ಪಂದ್ಯಗಳನ್ನು ನೋಡುತ್ತ ನನ್ನನ್ನು ಹುರಿದುಂಬಿಸಲು ಸಮಯ ಮೀಸಲಿ ಟ್ಟಿದ್ದಾರೆ. ಅವರಿಗೆ ಸದಾ ಕೃತಜ್ಞನಾಗಿರುವೆ.

ತವರೂರು ಬಾಸೆಲ್‌ನಲ್ಲಿ ಟೆನಿಸ್ ಪ್ರೀತಿ ಶುರುವಾದಾಗ ಇನ್ನೂ ಚಿಕ್ಕ ಬಾಲಕನಾಗಿದ್ದೆ. ಅಂಕಣಗಳಲ್ಲಿ ಬಾಲ್ ಕಿಡ್ ಆಗಿ ಹಿರಿಯರ ಆಟವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆ ದಿಗ್ಗಜರ ಆಟ, ಸಾಧನೆಗಳು ನನ್ನಲ್ಲೂ ಶ್ರಮಪಟ್ಟು ಕಲಿಯುವ ಛಲ ಹುಟ್ಟಿಸಿದವು. ಈ ಹಂತಕ್ಕೆ ಬೆಳೆಯಲು ಆ ಕ್ಷಣಗಳೇ ಮೆಟ್ಟಿಲುಗಳು. ಆ ಸ್ವಿಸ್‌ ಬಾಲ್ ಕಿಡ್ ಈ ಎತ್ತರಕ್ಕೆ ಬೆಳೆಯಲು ನೇರ ಹಾಗೂ ಪರೋಕ್ಷವಾಗಿ ಶಕ್ತಿ ತುಂಬಿದ ಎಲ್ಲರಿಗೂ ನಾನು ಚಿರಋಣಿ.

ಅಂತಿಮವಾಗಿ ಟೆನಿಸ್ ಆಟವೇ ನಿನ್ನನ್ನು ಎಂದಿಗೂ ಬಿಡುವುದಿಲ್ಲ ಐ ಲವ್‌ ಯೂ…

ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಅವರ ಪಂದ್ಯಾಟವು ಬಹಳ ಪ್ರಸಿಧ್ದವಾಗಿದೆ. ನಡಾಲ್ ಅವರು ಫೆಡರರ್ ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದು, ಇವರಿಬ್ಬರ ನಡುವಿನ ಪಂದ್ಯಾಟವು ರೋಚಕವಾಗಿರುತ್ತದೆ. ನಡಾಲ್ ಆವೆಮಣ್ಣಿನ ದೊರೆ ಎಂದು ಪ್ರಸಿಧ್ದಿ ಹೊಂದಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಾರ್ಲಿ

ಬಾರ್ಲಿಯಲ್ಲಿದೆ ಅನೇಕ ಉಪಯೋಗ

ಕರ್ನಾಟಕದ ಅಣೆಕಟ್ಟುಗಳು

ಕರ್ನಾಟಕದ ಅಣೆಕಟ್ಟುಗಳು