ನೆನಪಿನ ಶಕ್ತಿ ಎನ್ನುವುದು ಹಿಂದೆ ವಯಸ್ಸಾದ ಮೇಲೆ ಕಾಣಿಸಿಕೊಳ್ಳುವ ಖಾಯಿಲೆಯಾಗಿತ್ತು. ಆದರೆ ಈಗ ಕೇಳಿ ಯಾರೂ ನೋಡಿದರು ಹೇಳುವ ಮಾತು ಒಂದು ಕಡೆ ಇಟ್ಟ ವಸ್ತು ಎಲ್ಲಿ ಇಟ್ಟೆ ಎನ್ನುವುದೇ ನೆನಪು ಉಳಿಯುದಿಲ್ಲ. ಇನ್ನು ಚಿಕ್ಕ ಮಕ್ಕಳು ಸಹ ಓದುವ ಸಂದರ್ಭ ಬಂದರೆ ಸಾಕು, ಒಂದು ಭಯ,ಇಲ್ಲ ಮರೆವು ಅನ್ನೋದೇ ಜಾಸ್ತಿ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಲಿಕೆಯ ವೇಗ ಹೆಚ್ಚು. ಈ ವಯಸ್ಸಿನಲ್ಲಿ ಯಾವುದೇ ರೀತಿಯ ಕಲಿಕೆಯನ್ನು ಬಹಳ ಬೇಗ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಚಿಕ್ಕಮಕ್ಕಳು ಹೊಸ ಹೊಸ ವಿಷಯಗಳ ಬಗ್ಗೆ ಬಹಳಷ್ಟು ಕುತೂಹಲವನ್ನು ಹೊಂದಿರುತ್ತವೆ ಮತ್ತು ಬೇಗನೆ ಅವುಗಳ ಸಾರವನ್ನು ಕಲಿಯಲು ಯಶಸ್ವಿಯಾಗುತ್ತವೆ. ಆದರೆ, ಕೆಲವೊಮ್ಮ ದುರ್ಬಲ ನೆನಪಿನ ಶಕ್ತಿಯ ಪರಿಣಾಮ ಮಕ್ಕಳಿಗೆ ತಾವು ಓದಿದ್ದು, ಕೇಳಿದ್ದ ಅಥವಾ ತಿಳಿದುಕೊಂಡಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಬೇಕು.
ಮರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.
ಆದರೆ ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ನಮ್ಮ ಕೈಯಲ್ಲೇ ಸಾಧ್ಯವಿದೆ. ಅದಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು, ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು.
ಬ್ರಾಹ್ಮೀ ಎಲೆ ಸೇವನೆ: ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಈ ಎಲೆ ತುಂಬಾ ಸಹಕಾರಿ. ದಿನಾ ಒಂದು ಬ್ರಾಹ್ಮೀ ಎಲೆ ಸಾಕು ಬುದ್ಧಿ ಶಕ್ತಿ ಹೆಚ್ಚುವುದು, ಮರೆವಿನ ಕಾಯಿಲೆ ಕಡಿಮೆಯಾಗುವುದು. ಬ್ರಾಹ್ಮೀ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ಕುಡಿದರೆ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇನ್ನು ಮರೆವು ತಡೆಗಟ್ಟುವಲ್ಲಿಯೂ ಸಹಕಾರಿ. ದಿನಾ ಮೂರರಿಂದ 4 ಚಮಚದಷ್ಟು ನೆಲ್ಲಿಕಾಯಿ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಊಟದ ನಂತರ ಇದನ್ನು ಸೇವಿಸುತ್ತಾ ಬನ್ನಿ, ಇದರಿಂದ ಮರೆವಿನ ಸಮಸ್ಯೆ ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚುವುದು.
ವ್ಯಾಯಾಮ: ಮಕ್ಕಳು ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ಎಷ್ಟು ಬೇಗನೆ ಬೆಳೆಸಿಕೊಳ್ಳುತ್ತಾರೋ ಅದು ಅವರಿಗೆ ಉತ್ತಮವಾಗಿರುತ್ತದೆ. ದೈಹಿಕವಾಗಿ ಸಕ್ರಿಯವಾಗಿರುವುದು ಮೆದುಳು ಚುರುಕಾಗಿರಲು ಸಹಾಯ ಮಾಡುತ್ತದೆ. ಆದಷ್ಟು ಮನೆಯ ಒಳಗಡೆ ಕುಳಿತುಕೊಳ್ಳಲು ಬಿಡದೆ ದೈಹಿಕ ಆಟಗಳನ್ನು ಆಡಲು ಬಿಡಬೇಕು.
ಟಿವಿಯಿಂದ ಮಕ್ಕಳನ್ನು ದೂರವಿಡುವುದು: ಟಿವಿಯನ್ನು ಆದಷ್ಟು ದೂರವಿಡುವುದು ಒಳ್ಳೆಯದು. ಟಿವಿಯಿಂದ ಮಕ್ಕಳ ಮೆದುಳಿಗೆ ವೈಪರೀತ್ಯದ ಪರಿಣಾಮಗಳಾಗುತ್ತಿರುವುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಮೆದುಳಿನ ವಿಕಾಸಕ್ಕೆ ತಕ್ಕ ಕಾರ್ಯಕ್ರಮಗಳು ಟಿವಿಯಲ್ಲಿ ಬರುತ್ತವಾದರೂ ಕಾರ್ಟೂನ್ ಗಳು ಎಂದಿಗೂ ಮಕ್ಕಳ ವಿಕಾಸಕ್ಕೆ ದಾರಿ ಮಾಡಿಕೊಡುವುದಿಲ್ಲ. ಮಕ್ಕಳು ಅದರಲ್ಲಿರುವ ಒಳ್ಳೆಯದನ್ನು ಬಿಟ್ಟು ಕೆಟ್ಟದ್ದನ್ನೇ ಹೆಚ್ಚಾಗಿ ಆರಿಸಿಕೊಳ್ಳುತ್ತಾರೆ.
ಮೊಟ್ಟೆ ಮತ್ತು ಬಾದಾಮಿ ನೀಡುವುದು: ಬೆಳೆಯುತ್ತಿರುವ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವುದು ಉತ್ತಮ. ಇದರಲ್ಲಿರುವ ಪ್ರೋಟೀನ್ಗಳು ನೆನಪಿನ ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬಾದಾಮಿ, ಗೋಡಂಬಿ, ಅಗಸೆ ಬೀಜ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಮಕ್ಕಳ ಆಹಾರ ಪದಾರ್ಥವಾಗಿರಬೇಕು. ಅವುಗಳಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳನ್ನು ಸಕ್ರಿಯವಾಗಿಸುತ್ತದೆ.
ಬಾದಾಮಿ, ಕಲ್ಲು ಸಕ್ಕರೆ, ಹಾಲಿನ ಮಿಶ್ರಣ :
ಒಂದು ಕಪ್ ಹಾಲು ಕುದಿಸಿ, ಅದಕ್ಕೆ ಬಾದಾಮಿ, ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.
ತುಪ್ಪ ತಿನ್ನುವುದರಿಂದ : ಕೊಬ್ಬಿನಂಶ ಇದೆಯೆಂದು ತುಪ್ಪವನ್ನು ದೂರವಿಡಬೇಡಿ, ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಚಿಂತೆ ಬಿಡಿ. ದೇಹದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎಂಬ ಎರಡು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್ ಅವಶ್ಯಕ. ತುಪ್ಪ ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಆದ್ದರಿಂದ ತುಪ್ಪ ಸೇವಿಸಿ. ತುಪ್ಪ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೋಡಬಹುದು. ಪ್ರತಿದಿನ ಶುದ್ಧ ತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬಾದಾಮಿ : ಬಾದಾಮಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಇದನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುವುದು, ಇದರಲ್ಲಿರುವ ವಿಟಮಿನ್ ಇ ತ್ವಚೆಯನ್ನು ರಕ್ಷಣೆ ಮಾಡುವುದು. ಇನ್ನು ಪ್ರತಿದಿನ ಸ್ವಲ್ಪ ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ಖಾಲಿ ಹೊಟ್ಟೆಗೆ ತಿಂದರೆ ನೆನಪಿನ ಶಕ್ತಿಗೆ ತುಂಬಾ ಒಳ್ಳೆಯದು.
ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗೂ ಸೇವಿಸಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ಸೇವಿಸಬಹುದು.
ಬೂದುಗುಂಬಳ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕಾಶಿ ಹಲ್ವಾ ಎಂದು ಕರೆಯುವ ಇದರ ಹಲ್ವಾವನ್ನು ಒಳ್ಳೆ ತುಪ್ಪದಲ್ಲಿ ತಯಾರಿಸಿ, ತಿನ್ನುತ್ತಿದ್ದರೆ, ಮಕ್ಕಳ ಬುದ್ಧಿಮತ್ತೆ ಚುರುಕಾಗುತ್ತದೆ.
ಮುಖ್ಯವಾಗಿ ಮಕ್ಕಳಲ್ಲಿ ಓದುವಾಗ ಭಯ ಅನ್ನೋದು ಇದ್ದರೆ ಏನು ಕೊಟ್ಟರೂ ಸಾಲದು, ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕು. ಆಗಷ್ಟೇ ಓದಿನಲ್ಲಿ ಒಳ್ಳೆಯ ಗಳಿಕೆ ಸಾಧ್ಯ.
ಧನ್ಯವಾದಗಳು.
GIPHY App Key not set. Please check settings