in

ಅಷ್ಟಾದಶ ಮಹಾ ಎಂದು ಹೆಸರಿಸಲಾದ 18 ಶಕ್ತಿಪೀಠಗಳು

18 ಶಕ್ತಿಪೀಠಗಳು
18 ಶಕ್ತಿಪೀಠಗಳು

ಶಕ್ತಿ ಪೀಠಗಳು ಹಿಂದೂ ಧರ್ಮದ ಸ್ತ್ರೀ ಪ್ರಧಾನಳಾದ ಮತ್ತು ಶಾಕ್ತ ಪಂಥದ ಮುಖ್ಯ ದೇವತೆಯಾದ ಶಕ್ತಿ ಅಥವಾ ಸತಿಗೆ ಮೀಸಲಿಡಲಾದ ಪೂಜಾ ಸ್ಥಳಗಳು. ಅವು ಭಾರತೀಯ ಉಪಖಂಡದಾದ್ಯಂತ ಹರಡಿವೆ. ಶಕ್ತಿ ದೇವತೆಯು ಆದಿ ಶಕ್ತಿಯ ಪೂರ್ಣಾವತಾರ, ಮತ್ತು ಮೂರು ಮುಖ್ಯ ಅಭಿವ್ಯಕ್ತಿಗಳನ್ನು ಹೊಂದಿದ್ದಾಳೆ, ಶೌರ್ಯ ಹಾಗು ಸಾಮರ್ಥ್ಯದ ದೇವತೆಯಾದ ದುರ್ಗೆ, ದುಷ್ಟ ನಾಶದ ದೇವತೆಯಾದ ಮಹಾಕಾಳಿ, ಮತ್ತು ಔದಾರ್ಯದ ದೇವತೆಯಾದ ಗೌರಿ.

ಶಕ್ತಿ ಪೀಠ ಎಂದರೆ ಶಕ್ತಿ ದೇವತೆಯ ದೇವಾಲಯಗಳು ಮತ್ತು ತೀರ್ಥಯಾತ್ರೆಯ ತಾಣಗಳಾಗಿವೆ. ಶಕ್ತಿ ಪೀಠಗಳ ಹಿಂದಿನ ದಂತಕಥೆಯು ಶಿವನ ಪತ್ನಿ ಸತಿ ದೇವಿಯ ಆತ್ಮಹತ್ಯೆಯ ಕಥೆಯಾಗಿದೆ. ಆಕೆಯ ದೇಹವನ್ನು ವಿಷ್ಣು 51 ದೇಹದ ಭಾಗಗಳಾಗಿ ಕತ್ತರಿಸಿ ಭೂಮಿಯ ಮೇಲೆ ಹಾಕಿದ ಬಳಿಕ ಅವು ಪವಿತ್ರ ಕ್ಷೇತ್ರಗಳಾದವು.

ಶಕ್ತಿ ಪೀಠವು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ವಿವಿಧ ದಂತಕಥೆಗಳು ವಿವರಿಸುತ್ತವೆ. ಅತ್ಯಂತ ಜನಪ್ರಿಯವಾದದ್ದು ಸತಿ ದೇವತೆಯ ಸಾವಿನ ಕಥೆಯನ್ನು ಆಧರಿಸಿದೆ. ದುಃಖ ಮತ್ತು ದುಃಖದಿಂದ, ಶಿವನು ಸತಿಯ ದೇಹವನ್ನು ಹೊತ್ತುಕೊಂಡು, ದಂಪತಿಗಳಾಗಿ ತಮ್ಮ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಅದರೊಂದಿಗೆ ಬ್ರಹ್ಮಾಂಡವನ್ನು ಸುತ್ತಿದನು. ಭಗವಾನ್ ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಬಳಸಿಕೊಂಡು ಅವಳ ದೇಹವನ್ನು 51 ದೇಹದ ಭಾಗಗಳಾಗಿ ಕತ್ತರಿಸಿ, ಭೂಮಿಯ ಮೇಲೆ ಬಿದ್ದ ಪವಿತ್ರ ಸ್ಥಳಗಳಾಗಲು ಎಲ್ಲಾ ಜನರು ದೇವಿಗೆ ನಮನ ಸಲ್ಲಿಸಬಹುದು. ಈ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಲು, ಭಗವಾನ್ ಶಿವ ಭೈರವನ ರೂಪವನ್ನು ತೆಗೆದುಕೊಂಡನು.

ಅಷ್ಟಾದಶ ಮಹಾ ಎಂದು ಹೆಸರಿಸಲಾದ 18 ಶಕ್ತಿಪೀಠಗಳು
ಶಿವನು ಸತಿಯ ದೇಹವನ್ನು ಹಿಡಿದು ನಿಂತಿರುವ ಚಿತ್ರ ಕಲ್ಪನೆ

ತಂದೆ ದಕ್ಷನ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ವರಿಸಿದ್ದಕ್ಕಾಗಿ ಸತಿಯನ್ನು ತಂದೆ ಅವಮಾನಿಸುತ್ತಾನೆ. ಅವಮಾನ ತಾಳಲಾರದೆ ಸತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತಿ ಮರಣದ ನಂತರ ಕೋಪೋದ್ರಿಕ್ತನಾಗುವ ಶಿವ ಆಕೆಯ ದೇಹವನ್ನು ಹೊತ್ತುಕೊಂಡು ವಿಶ್ವ ಪರ್ಯಟನೆಗೆ ಹೊರಡುತ್ತಾನೆ. ಶಿವನ ಕೋಪಕ್ಕೆ ಇಡೀ ವಿಶ್ವ ಭಸ್ಮವಾಗುವ ಆತಂಕ ಎದುರಾದಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳನ್ನಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಭಾಗಗಳು ಭೂಮಿ ಮೇಲೆ ಬಿದ್ದವು. ಈ ಸ್ಥಳಗಳೇ ಶಕ್ತಿಪೀಠಗಳಾದುವು. ಈ ಶಕ್ತಿಪೀಠಗಳನ್ನು ಕಾಯಲು ಶಿವ ತನ್ನ ಅಂಶದಲ್ಲೇ ಭೈರವಂದಿರನ್ನು ಸೃಷ್ಟಿಸಿ ಆಯಾ ಸ್ಥಳಗಳಲ್ಲಿ ನೇಮಿಸಿದನು. ಈ ಶಕ್ತಿಪೀಠಗಳು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ(7), ಪಾಕಿಸ್ತಾನ(3), ನೇಪಾಳ(3), ಟಿಬೆಟ್(1) ಮತ್ತು ಶ್ರೀಲಂಕಾ(1) ದೇಶಗಳಲ್ಲಿ ಹಂಚಿ ಹೋಗಿವೆ. ಉಳಿದವು ಭಾರತದಲ್ಲಿ ಇವೆ.

ಶ್ರೀಮದ್ ದೇವಿ ಭಾಗವತದಂತಹ ವಿವಿಧ ಪುರಾಣಗಳು ವಿಭಿನ್ನ ಸಂಖ್ಯೆಯ 51, 52, 64 ಮತ್ತು 108 ಶಕ್ತಿ ಪೀಠಗಳ ಅಸ್ತಿತ್ವವನ್ನು ಹೇಳುತ್ತವೆ. ಅವುಗಳಲ್ಲಿ 18 ಅನ್ನು ಅಷ್ಟಾದಶ ಮಹಾ ಎಂದು ಹೆಸರಿಸಲಾಗಿದೆ.

1. ಶ್ರೀಲಂಕಾದ ತ್ರಿನ್‍ಕೋಮಲೆಯಲ್ಲಿರುವ ಶಂಕರಿ ದೇವಾಲಯದಲ್ಲಿ ಸತಿಯ ಹೃದಯ ಭಾಗವು ಬಿದ್ದಿತು ಎಂದು ಪರಿಗಣಿಸಲಾಗಿದೆ. 

ಅಷ್ಟಾದಶ ಮಹಾ ಎಂದು ಹೆಸರಿಸಲಾದ 18 ಶಕ್ತಿಪೀಠಗಳು
ಶ್ರೀಲಂಕಾದ ಶಂಕರಿ ದೇವಾಲಯ

2. ತಮಿಳುನಾಡಿನ ಕಾಂಚೀಪುರದ ಕಾಮ ಕೋಟಿ ಪೀಠದಲ್ಲಿರುವ ನಡು(ಸೊಂಟ) ಬಿದ್ದಿತ್ತು. ಇಲ್ಲಿ ಸತಿಯನ್ನು ಕಾಮಾಕ್ಷಿ ಅಮ್ಮ ಎಂದು ಕರೆಯಲಾಗುತ್ತದೆ. 

3. ಬಂಗಾಳದ ಪಂಡುವಾದಲ್ಲಿರುವ ಭವತಾರಿಣಿ ಪೀಠದಲ್ಲಿ ಹೊಟ್ಟೆಯ ಭಾಗ ಬಿತ್ತು ಎನ್ನಲಾಗಿದೆ. ಇಲ್ಲಿ ದೇವತೆಯನ್ನು ಶ್ರಿನ್ಕಲಾ ದೇವಿ ಎಂದು ಕರೆಯಲಾಗುತ್ತದೆ. 

4. ಕರ್ನಾಟದ ಮೈಸೂರಿನಲ್ಲಿರುವ ಕ್ರೌಂಚ ಪೀಠದಲ್ಲಿ ದೇವಿಯ ತಲೆಗೂದಲು ಬಿತ್ತು ಎನ್ನಲಾಗಿದೆ. ಇಲ್ಲಿ ದೇವತೆಯನ್ನು ಚಾಮುಂಡೇಶ್ವರಿ ಎಂದು ಆರಾಧಿಸಲಾಗುತ್ತದೆ. 

5. ತೆಲಂಗಾಣದ ಆಲಂಪುರದಲ್ಲಿರುವ ಯೋಗಿಣಿ ಪೀಠದಲ್ಲಿ ದೇವಿಯ ಹಲ್ಲು ಬಿತ್ತು ಎನ್ನಲಾಗಿದೆ. ಇಲ್ಲಿ ದೇವಿಯನ್ನು ಜೋಗುಳಾಂಬ ಎಂದು ಕರೆಯಲಾಗುತ್ತದೆ. 

6. ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲ ಪೀಠದಲ್ಲಿ ದೇವಿಯ ಕತ್ತು ಬಿತ್ತು. ಇಲ್ಲಿ ದೇವಿಯನ್ನು ಬ್ರಹ್ಮರಾಂಬಿಕಾ ತಾಯಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. 

 7. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಶ್ರೀ ಪೀಠದಲ್ಲಿ ದೇವಿಯ ಕಣ್ಣುಗಳು ಬಿದ್ದಿದ್ದವು. ಈ ಕ್ಷೇತ್ರದಲ್ಲಿರುವ ಮಹಾಲಕ್ಷ್ಮೀ ದೇಗುಲದಲ್ಲಿ ದೇವಿಯನ್ನು ಆಯ್ ಅಂಬಾಬಾಯಿ ಎನ್ನಲಾಗುತ್ತದೆ. 

8. ಮಹಾರಾಷ್ಟ್ರದ ಮಹುರ್‍ನಲ್ಲಿರುವ ಮೂಲ ಪೀಠದಲ್ಲಿ ದೇವಿಯ ಎಡಗೈ ಬಿದ್ದಿತ್ತು. ಇಲ್ಲಿ ದೇವಿಯನ್ನು ಏಕ ವೀರಿಕಾ ಎನ್ನುವ ಹೆಸರಿನಿಂದ ಭಕ್ತರು ಪೂಜಿಸುತ್ತಾರೆ. 

9. ಉತ್ತರ ಪ್ರದೇಶದ ಸಹರನ್ಪುರದಲ್ಲಿರುವ ಶಾಕಾಂಬರಿ ಪೀಠದಲ್ಲಿ ದೇವಿಯ ತಲೆ ಬಿದ್ದಿತ್ತು. ಇಲ್ಲಿ ಶಾಕಾಂಬರಿ ಎನ್ನುವ ಹೆಸರಿನಲ್ಲಿ ದೇವಿಯು ಭಕ್ತರನ್ನು ಸಲಹುತ್ತಿದ್ದಾಳೆ. 

10. ಆಂಧ್ರ ಪ್ರದೇಶದ ಪೀಥಪುರಂನಲ್ಲಿರುವ ಪುಷ್ಕರಿಣಿ ಪೀಠದಲ್ಲಿರುವ ಕುಕ್ಕುಟೇಶ್ವರ ಸ್ವಾಮಿ ದೇಗುಲದಲ್ಲಿ ದೇವಿಯ ಬೆನ್ನು ಬಿದ್ದಿತ್ತು. ಇಲ್ಲಿ ದೇವಿಯನ್ನು ಪುರುಹುತಿಕ ಎನ್ನಲಾಗುತ್ತದೆ. 

11. ಒಡಿಶಾದ ಜಜ್ಪುರದಲ್ಲಿರುವ ಒಡ್ಯಾನ ಪೀಠಂನಲ್ಲಿರುವ ಬೀರಾಜ ದೇಗುಲದಲ್ಲಿ ದೇವಿಯ ಸೊಂಟದ ಮತ್ತೊಂದು ಭಾಗ ಬಿದ್ದತ್ತು. ಇಲ್ಲಿ ದೇವಿಯನ್ನು ಬೀರಾಜ ತಾಯಿ ಎಂದು ಕರೆಯಲಾಗುತ್ತದೆ. 

ಅಷ್ಟಾದಶ ಮಹಾ ಎಂದು ಹೆಸರಿಸಲಾದ 18 ಶಕ್ತಿಪೀಠಗಳು
ಬೀರಾಜ ದೇಗುಲದಲ್ಲಿ ಬೀರಾಜ ತಾಯಿ

12. ಆಂಧ್ರ ಪ್ರದೇಶದ ದ್ರಾಕ್ಷರಾಮಂನಲ್ಲಿರುವ ದ್ರಾಕ್ಷರಾಮ ಪೀಠದ ಭೀಮೇಶ್ವರ ದೇಗುಲದಲ್ಲಿ ದೇವಿಯ ಎಡ ಕೆನ್ನೆ ಬಿದ್ದಿತ್ತು. ಇಲ್ಲಿ ದೇವಿಯನ್ನು ಮಾಣಿಕ್ಯಾಂಬ ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ. 

13. ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇಗುಲದಲ್ಲಿರುವ ಕಾಮರೂಪ ಪೀಠದಲ್ಲಿ ದೇವಿಯ ಯೋನಿ ಬಿದ್ದಿತ್ತು. ಇಲ್ಲಿ ದೇವಿಯನ್ನು ಕಾಮಾಕ್ಯ ದೇವಿ ಎಂದು ಕರೆಯಲಾಗುತ್ತದೆ. 

14. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿರುವ ಪ್ರಯಾಗ ಪೀಠದಲ್ಲಿರುವ ಅಲೂಪಿ ದೇವಿ ಮಂದಿರದಲ್ಲಿ ದೇವಿಯ ಬೆರಳುಗಳು ಬಿದ್ದಿದ್ದವು. ಇಲ್ಲಿ ದೇವಿಯನ್ನು ಮಾಧವೇಶ್ವರಿ ಎಂದು ಕರೆಯಲಾಗುತ್ತದೆ. 

15. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಜ್ವಾಲಾಮುಖಿ ಪೀಠದಲ್ಲಿರುವ ಜ್ವಾಲಾಮುಖಿ ದೇಗುಲದಲ್ಲಿ ದೇವಿಯ ತಲೆ ಭಾಗ ಬಿದ್ದಿತ್ತು. ಇಲ್ಲಿ ದೇವಿಯನ್ನು ಜ್ವಾಲಾಮುಖಿ ಎನ್ನಲಾಗುತ್ತದೆ. 

16. ಬಿಹಾರದ ಗಯಾದಲ್ಲಿರುವ ಗಯಾ ಪೀಠದಲ್ಲಿ ಮಂಗಳ ಗೌರಿ ದೇಗುಲವಿದೆ. ಇಲ್ಲಿ ದೇವಿಯ ಸ್ತನಗಳು ಬಿದ್ದಿದ್ದವು. ಇಲ್ಲಿ ದೇವಿಯನ್ನು ಸರ್ವಮಂಗಳ ತಾಯಿ ಎಂದು ಪೂಜಿಸಲಾಗುತ್ತದೆ. 

17. ಉತ್ತರ ಪ್ರದೇಶದಲ್ಲಿರುವ ವಾರಣಸಿ ಪೀಠದಲ್ಲಿ ವಿಶಾಲಾಕ್ಷಿ ದೇಗುಲವಿದೆ. ಇಲ್ಲಿ ದೇವಿಯ ಮೂಗು ಬಿದ್ದಿತ್ತು. ದೇವಿಯನ್ನು ಇಲ್ಲಿ ವಿಶಾಲಾಕ್ಷಿ ಎಂದು ಆರಾಧಿಸಲಾಗುತ್ತದೆ.

18. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಲ್ಲಿ ದೇವಿಯ ಬಲಗೈ ಬಿದ್ದಿತ್ತು. ಇಲ್ಲಿ ದೇವಿಯನ್ನು ಶಾರದಾ ದೇವಿ ಎಂದು ಕರೆಯಲಾಗುತ್ತದೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಿರಿಯಾನಿ ಭಾರತಕ್ಕೆ ಹೇಗೆ ಬಂತು ಗೊತ್ತಾ?

ಬಿರಿಯಾನಿ ಭಾರತಕ್ಕೆ ಹೇಗೆ ಬಂತು ಗೊತ್ತಾ?

ದಾದಾಸಾಹೇಬ್ ಫಾಲ್ಕೆ

ಫೆಬ್ರವರಿ 16ರಂದು, ಚಿತ್ರರಂಗದ ಪಿತಾಮಹ “ದಾದಾಸಾಹೇಬ್ ಫಾಲ್ಕೆ” ಖ್ಯಾತಿಯ ಧುಂಡಿರಾಜ್ ಗೋವಿಂದ್ ಫಾಲ್ಕೆ ಪುಣ್ಯತಿಥಿ