in ,

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೊಬಾರ್
ಅಂಡಮಾನ್ ಮತ್ತು ನಿಕೊಬಾರ್

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು – ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸುಮಾರು 223 ದ್ವೀಪಗಳನ್ನು ಒಳಗೊಂಡಿರುವ ಈ ಸ್ತೋಮ ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿದೆ. (ಉ.ಅ. 70 _ 130 ಮತ್ತು ರೇ 92 ಡಿಗ್ರಿ _95 ಡಿಗ್ರಿ). ವಿಸ್ತೀರ್ಣ 3215 ಚದರ ಮೈಲಿಗಳು. ಅಂಡಮಾನ್ ದ್ವೀಪ ಸ್ತೋಮದಲ್ಲು ಉತ್ತರ ಅಂಡಮಾನ್, ಮಧ್ಯ ಅಂಡಮಾನ್, ದಕ್ಷಿಣ ಅಂಡಮಾನ್ ಮತ್ತು ಪುಟ್ಟ ಅಂಡಮಾನ್‍ಗಳೆಂಬ ನಾಲ್ಕು ದ್ವೀಪಗಳಿವೆ. ನಿಕೋಬಾರ್ ಸ್ತೋಮದಲ್ಲಿ ಕಾರ್‍ನಿಕೋಬಾರ್ ಪುಟ್ಟ ನಿಕೋಬಾರ್ ಮತ್ತು ಗ್ರೇಟ್ ನಿಕೋಬಾರ್ ಎಂಬ ಮೂರು ದ್ವೀಪಗಳಿವೆ. ಈ ಎರಡು ಸ್ತೋಮಗಳನ್ನು ಹತ್ತನೆಯ ಡಿಗ್ರಿಯ ಕಡಲುಗಾಲುವೆ ಬೇರ್ಪಡಿಸಿದೆ. ಈ ದ್ವೀಪಗಳಿಗೆ ಪ್ರಧಾನವಾದ ರೇವುಪಟ್ಟಣ ಪೋರ್ಟ್ ಬ್ಲೇರ್ (ಸ್ಥಾಪನೆ 1858) ಇದು ಮದ್ರಾಸಿಗೆ 1120 ಕಿ.ಮೀ. ರಂಗೂನಿಗೆ 624 ಕಿ.ಮೀ. ಹಾಗೂ ಕೋಲ್ಕತ್ತಾಗೆ 1170 ಕಿ.ಮೀ. ದೂರದಲ್ಲಿದೆ.

ಈ ದ್ವೀಪಸ್ತೋಮ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿತ್ತು. ಇತ್ಸಿಂಗ್, ಮಾರ್ಕೊಪೋಲೊ, ನಿಕಾಲೊ ಕಾಂಟಿ ಮತ್ತು ಇತರ ಪ್ರವಾಸಿಗರು ಇವುಗಳ ವಿಷಯವಾಗಿ ಬರೆದಿದ್ದಾರೆ. 1789 ರಲ್ಲಿ ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್ ಎಂಬುವನು ಇಲ್ಲಿ ಬ್ರಿಟಿಷ್ ವಸಾಹತವನ್ನು ಸ್ಥಾಪಿಸಿದರು. ಬಹಳಕಾಲ ಈ ದ್ವೀಪಗಳು ದುಷ್ಕರ್ಮಿಗಳ ಕೊಲೆಪಾತಕಿಗಳ ಮತ್ತು ರಾಜಕೀಯ ಬಂದಿಗಳ ನಿವಾಸವಾಗಿತ್ತು. 1858ರಲ್ಲಿ ಜಾರಿಗೆ ಬಂದ ಬಂದಿಗಳ ರವಾನೆಯ ಕಾನೂನು 1945ರಲ್ಲಿ ರದ್ದಾಯಿತು. 1942ರಲ್ಲಿ ಜಪಾನರು ಈ ದ್ವೀಪವನ್ನಾಕ್ರಮಿಸಿದರು. 1956ರಿಂದ ಈಚೆಗೆ ಇದು ಭಾರತದ ಕೇಂದ್ರಾಡಳಿತಕ್ಕೆ ಒಳಪಟ್ಟಿದೆ.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
ಈ ದ್ವೀಪಗಳು ಬೆಟ್ಟಗುಡ್ಡಗಳಿಂದ ತುಂಬಿವೆ

ಈ ದ್ವೀಪಗಳು ಬೆಟ್ಟಗುಡ್ಡಗಳಿಂದ ತುಂಬಿವೆ ; ಇವು ಹೆಚ್ಚಾಗಿ ಹವಳ ದ್ವೀಪಗಳು. ಇದರಿಂದಾಗಿ ಭೂಮಿಯ ಮೇಲ್ಮೈ ಲಕ್ಷಣ ಬಹಳ ವ್ಯತ್ಯಾಸಗೊಂಡಿದೆ. ಉತ್ತರದ ದಕ್ಷಿಣಾಭಿಮುಖವಾಗಿ ಹಬ್ಬಿರುವ 1000′ ದಿಂದ 2500′ ಗಳ ಎತ್ತರದ ಬೆಟ್ಟಗಳು ಮತ್ತು ಅವುಗಳ ಮಧ್ಯೆ ಉಂಟಾಗಿರುವ ಕಣಿವೆಗಳು ಮೇಲ್ಮೈ ಲಕ್ಷಣದ ವೈಶಿಷ್ಟ್ಯ. ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ. ಅವುಗಳಲ್ಲಿ ಮುಖ್ಯವಾದುವು ಬ್ಲೇರ್, ಕಾಲ್‍ಪಾಂಗ್, ಕಾಲಾರ ಮತ್ತು ಕಾಂಗೊ. ನದಿಗಳೆಲ್ಲ ಸಣ್ಣವು; ಮಳೆಗಾಲದಲ್ಲಿ ಮಾತ್ರ ಪ್ರವಾಹವುಳ್ಳ ನುಗ್ಗು ಹೊನಲಿನವು.

ಇಲ್ಲಿನ ವಾಯುಗುಣ ಸಾಗರೀಕ ಉಷ್ಣವಲಯದ ಮಾದರೀಯದು. ಶಾಖ 75 ಡಿಗ್ರಿ ಯಿಂದ 85 ಡಿಗ್ರಿಗಳ ವರೆಗೆ ಇರುತ್ತದೆ. ಸರಾಸರಿ ಸಾಪೇಕ್ಷಕ ಆಧ್ರ್ರತೆ 80%. ವಾರ್ಷಿಕ ಮಳೆ ಉತ್ತರ ಭಾಗದಲ್ಲಿ 75. ದಕ್ಷಿಣ ಭಾಗದಲ್ಲಿ 120.

ಇಲ್ಲಿನ ಸಸ್ಯವರ್ಗದಲ್ಲಿ ಪ್ರಧಾನವಾದವು ದಟ್ಟವಾದ ಉಷ್ಣವಲಯದ ಕಾಡುಗಳು ; ನಿತ್ಯ ಹರಿದ್ವರ್ಣದ, ಚಳಿಗಾಲದಲ್ಲಿ ಎಲೆಯುದುರುವ ಮತ್ತು ಮ್ಯಾನ್‍ಗ್ರೋವ್ ಎಂಬ ಜಾತಿಯ ಮರಗಳಿಂದ ತುಂಬಿದ ಮರಗಳು ಎಲ್ಲೆಡೆ ಹಬ್ಬಿವೆ. ನಿತ್ಯಹರಿದ್ವರ್ಣದ ಕಾಡುಗಳು ನದಿ ಕಣಿವೆಗಳಲ್ಲಿಯೂ ಬೆಟ್ಟಗಳ ಮೇಲ್ಭಾಗದಲ್ಲಿಯೂ ಕಾಣಬರುವವು. ಬೆಟ್ಟಗಳ ಇಳಿಜಾರುಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಬೆಳೆಯುತ್ತವೆ. ಮ್ಯಾನ್‍ಗ್ರೊವ್ ಕಾಡುಗಳು ಕರಾವಳಿಯಲ್ಲಿ ಹೆಚ್ಚು. ಈ ದ್ವೀಪಗಳ ಆರ್ಥಿಕ ಸಂಪತ್ತು ಅರಣ್ಯ, ಮೀನುಗಾರಿಕೆ ಮತ್ತು ವ್ಯವಸಾಯಗಳನ್ನವಲಂಬಿಸಿದೆ. ಕೆಲವು ಮುಖ್ಯ ಜಾತಿಯ ಮರಗಳು ಇಲ್ಲಿಂದ ರಫ್ತಾಗುತ್ತಿವೆ.

ಮೀನುಗಾರಿಕೆ ಹೆಚ್ಚಾಗಿ ಬೆಳೆಯಲವಕಾಶವಿದ್ದರೂ ಈಗ ಇಲ್ಲಿನ ಜನರ ಅವಶ್ಯಕತೆಯನ್ನು ಮಾತ್ರ ಪೂರೈಸುವಷ್ಟಿದೆ. ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳ ನೆಲೆಸುನಾಡಾದಾಗಲೇ ಇಲ್ಲಿ ಭೂ ವ್ಯವಸಾಯ ಪ್ರಾರಂಭವಾಯಿತು ; ಈಗ ಕೇವಲ ಒಂದರಷ್ಟು ಭೂಮಿಯನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ. ಉಷ್ಣ ವಲಯದ ಬೆಳೆಗಳಾದ ಎಣ್ಣೆ ಕಾಳುಗಳು, ಕಬ್ಬು, ಭತ್ತ, ಸಿಹಿ ಆಲೂಗೆಡ್ಡೆ, ಬಾಳೆ, ಪರಂಗಿ, ಮಾವು, ಸೇಬು, ತೆಂಗು, ರಬ್ಬರ್, ಟೀ ಇವೇ ಮೊದಲಾದವುಗಳನ್ನು ಬೆಳೆಯುತ್ತಾರೆ. ಆಹಾರಕ್ಕಾಗಿ ಕೋಳಿ ಸಾಕಣೆ ಎಲ್ಲೆಡೆಯೂ ಕಂಡುಬರುತ್ತದೆ. ಮರ ಕಡಿಯುವುದು ಮತ್ತು ಮರ ಕೊಯ್ಯುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಜನರ ಮುಖ್ಯ ಉದ್ಯೋಗ. ಜಾತಂ ದ್ವೀಪದಲ್ಲಿರುವ ಚಾತಂ ಮರ ಕೊಯ್ಯುವ ಕಾರ್ಖಾನೆ ಭಾರತದಲ್ಲಿಯೇ ದೊಡ್ಡದು. ಪೋರ್ಟ್‍ಬ್ಲೇರ್‍ನಲ್ಲಿ ಒಂದು ಬೆಂಕಿಪೊಟ್ಟಣದ ಕಾರ್ಖಾನೆ ಇದೆ. ವಿವಿಧ ಕೈಗಾರಿಕೆಗಳ ಬೆಳವಣಿಗೆಗೆ ಇಲ್ಲಿ ಸಾಕಷ್ಟು ಅನುಕೂಲಗಳಿವೆ.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
ಪೋರ್ಟ್‍ಬ್ಲೇರ್

ಈ ದ್ವೀಪ ಸ್ತೋಮದಲ್ಲಿನ ಜನಸಂಖ್ಯೆ ೩,೭೯,೯೪೪ (೨೦೧೧). ಸುಮಾರು 400 ಹಳ್ಳಿಗಳಿವೆ. ಈ ದ್ವೀಪಸ್ತೋಮದಲ್ಲಿ ಪೋರ್ಟ್‍ಬ್ಲೇರ್ ಒಂದೇ ಜನನಿಬಿಡವಾದ ಪಟ್ಟಣ. ಜನಸಂಖ್ಯೆ-೧,೦೮,೦೫೮ (೨೦೧೧) 1951,_61ರ ಅವಧಿಯಲ್ಲಿ ಪೂರ್ವಬಂಗಾಳದಿಂದ ನಿರಾಶ್ರಿತರನ್ನು ಇಲ್ಲಿ ನೆಲೆಸುವಂತೆ ಮಾಡಿದುದರಿಂದ ಜನಸಂಖ್ಯೆ 105% ಹೆಚ್ಚಿತು. ಸ್ಥಳೀಯ ಬುಡಕಟ್ಟಿನ ಒಟ್ಟು ಜನಸಂಖ್ಯೆ 14,122. ಇದು ಒಟ್ಟು ಜನಸಂಖ್ಯೆಯ 22 % ರಷ್ಟಿದೆ. ಇಲ್ಲಿನ ಜಾರಾವಾಸ್, ಒಂಗೇಸ್, ಅಂಡಮಾನೀಸ್ ಮತ್ತು ಸೆಂಟಿನಲೀಸ್ ಪಂಗಡದವರು ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದವರು. ದಟ್ಟವಾದ ಕಾಡುಗಳು, ಅನಾಗರೀಕ ಜನರು, ಪ್ರವೇಶಿಸಲು ಅಸಾಧ್ಯವಾದ ಭೂಸ್ಥಿತಿ ಇವುಗಳಿಂದ ಈ ದ್ವೀಪಗಳು ವಿಚಿತ್ರವಾದೊಂದು ಅಸ್ತಿತ್ವವನ್ನು ಪಡೆದಿವೆ. ಇತ್ತೀಚಿನವರೆಗೆ ಈ ದ್ವೀಪಗಳು ದಂಡನೆಗೊಳಗಾದ ಅಪರಾಧಿಗಳನ್ನಿಡುವ ಸ್ಥಳವಾಗಿದ್ದವು.ಈ ಸ್ತೋಮ ಇಂದು ಭಾರತ ಒಕ್ಕೂಟದ ಒಂದು ಭಾಗವಾಗಿ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದೆ. ಅರಣ್ಯ ಮತ್ತು ಮೀನುಗಾರಿಕೆಯ ಸಂಪತ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಂಡರೆ ಈ ದ್ವೀಪಗಳ ಭವಿಷ್ಯ ಉತ್ತಮವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

46 Comments

  1. The Yahoo Cricket app is your one-stop solution for everything cricket-related information. It provides all essential cricket news, and users can create their own fantasy cricket teams with this app.   Dream 11 is by far the most popular as well as trending fantasy sports app in India with the largest user base. In this app, users can play a wide range of fantasy games, including cricket, hockey, football, basketball, and kabaddi. Dream11, the best fantasy sports app in India, was co-founded by Harsh Jain and Bhavit Sheth and has more than 110 million daily users and several brand ambassadors, including M. S. Dhoni, Hardik Pandya, and Jasprit Bumrah. On a daily basis, the company pays out over ₹250 million in winnings. Gortonshire Cricket PRODUCTS AND SERVICES Cricket still holds a place in the hearts of many English people, but it is fair to say that, in recent times, the sport has developed a mixed reputation in the country. A survey by Statista in 2022 revealed some interesting statistics. Of those surveyed, 32% said that they liked cricket, while 40% said that they disliked it. This would suggest that cricket is not as popular as it once was in the UK.
    http://front-wiki.win/index.php?title=Today_night_football_match
    As the members of the contingent walked out of the terminal, hundreds of fans, who had gathered outside the airport, chanted ‘India, India’, welcoming them to the Kerala capital. Hyderabad, the third venue for warm-up matches, has seen relatively clear weather and is scheduled to host just one more match – between Australia and Pakistan. The drop-in square – the type used around the world including at Adelaide Oval and Eden Park – has been curated in Florida and transported by road to New York via a convoy of more than 20 semi-trailer trucks, thanks to the support of the ICC’s Official Global Logistics Partner DP World. The Indian team has already reached Australia, and they will play a couple of ICC T20 World Cup 2022 warmup games. On 17th October 2022, India will face Australia, whereas New Zealand will be India’s next challenge on 19 October 2022. Both games will be played at the Gabba in Brisbane.

  2. 125 USD no deposit bonus code for Captain Jack CasinoYour bonus code:CJSEP125FC30X Playthrough100 USD maximum CashoutGood Luck! New post, Nina replied to Top 4 Winners for the week of 11 March $50 No Deposit Bonus at Captain Jack CasinoBonus code:EPIC50Bonus type:No Deposit Bonus for New players and account holdersGames allowed:Keno, Slots,Wagering:30xBMax cash out: $100 125 USD no deposit bonus code for Captain Jack CasinoYour bonus code:CJSEP125FC30X Playthrough100 USD maximum CashoutGood Luck! 125 USD no deposit bonus code for Captain Jack CasinoYour bonus code:CJSEP125FC30X Playthrough100 USD maximum CashoutGood Luck! Receive your exclusive bonuses! #casino #onlinecasino #nodepositbonuscasino BONUS CODE: CASINOICE4 With a no deposit bonus, you won’t need to put any money down and the casino will deposit a specified amount of money into your online casino account. You won’t be able to simply withdraw this. Instead, you can use it in line with the terms & conditions in place to play a variety of games in the hope of turning your free stake into a profit.
    https://erickwuvr666539.diowebhost.com/82552044/wonka-slot-coins
    Even so, other categories like live casino games, casino gaming, and sports betting don’t fall back behind. All new players will be able to use the Betfred new customer offer to enhance the gaming sensation on the site! Betfred are to promote their Live Casino offering on web and mobile with a major television advertising campaign and a £10 no deposit bonus. CasinoReviews.net offers unbiased in-depth reviews of land-based and online casinos. Join a vibrant casino community to compare operators, test games for free, and see what other fellow players are sharing. All in all, the casino bonus offer on Betfred makes a stunning final touch to the full bonus offer. No matter if you are a US player or a UK player, the casino bonus and free spins remain a possibility. Even so, other categories like live casino games, casino gaming, and sports betting don’t fall back behind. All new players will be able to use the Betfred new customer offer to enhance the gaming sensation on the site!

ಪ್ರಧಾನಿ ಮೋದಿ ಜನ್ಮದಿನ

ಪ್ರಧಾನಿ ಮೋದಿ ಜನ್ಮದಿನ : 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ

ಕಸ್ತೂರಿ ಪರಿಮಳ

ಕಸ್ತೂರಿ ಪರಿಮಳ