in

ಜಾವರ್ ಗಣಿಗಳು

ಜಾವರ್ ಗಣಿಗಾರಿಕೆ
ಜಾವರ್ ಗಣಿಗಾರಿಕೆ

ಜಾವರ್ ಗಣಿಗಳು – ಭಾರತದಲ್ಲಿ ದೊರೆಯುವ ಸೀಸ ಮತ್ತು ಸತುವಿನ ಅದುರುಗಳ ಮುಖ್ಯ ಆಕರಗಳು ಇವು ರಾಜಸ್ಥಾನದ ಉದಯಪುರದ ಬಳಿ ಇವೆ.

ಇಲ್ಲಿ ಏಳನೆಯ ಶತಮಾನದಷ್ಟು ಹಿಂದೆಯೇ ಗಣಿಕೆಲಸ ಮತ್ತು ಲೋಹಶುದ್ಧೀಕರಣ ನಡೆದಿದ್ದಕ್ಕೆ ದಾಖಲೆಗಳಿವೆ. ಇಲ್ಲಿನ ಪುರಾತನ ಕೆಲಸಗಾರರಿಗೆ ಉತ್ತಮ ತಾಂತ್ರಿಕ ಜ್ಞಾನ ಇತ್ತು. 1850ರಲ್ಲಿ ಕ್ಯಾಪ್ಟನ್ ಬ್ರೂಕ್‍ನ ಸಮ್ಮುಖದಲ್ಲಿ ಈ ಗಣಿಗಳ ಕೆಲಸಗಾರನೊಬ್ಬ ಲೋಹಶುದ್ಧೀಕರಣ ಕಾರ್ಯವನ್ನು ಪ್ರದರ್ಶಿಸಿದನಂತೆ. ಅವನು ಅದುರನ್ನು ಒಡೆದು ಪುಡಿಮಾಡಿ ಕಳಪೆ ವಸ್ತುಗಳನ್ನು ಆಯ್ದು ತೆಗೆದು ಒಪ್ಪಮಾಡಿದ. ತರುವಾಯ ಸುಮಾರು 0.75ಉದ್ದ ಮತ್ತು 0.25 ಅಗಲದ ಬಾಯುಳ್ಳ ಮೂಸೆಗಳಲ್ಲಿ ಅದುರನ್ನು ತುಂಬಿಸಿ ಮೂಸೆಯ ಬಾಯನ್ನು ಮಣ್ಣಿನಿಂದ ಮುಚ್ಚಿ ಸಣ್ಣ ರಂಧ್ರವನ್ನು ಕೊರೆದ. ಬಳಿಕ ಅವನ್ನು ಕಾಸಿದಾಗ ರಂಧ್ರದ ಮೂಲಕ ಕಾದ ಲೋಹದ ದ್ರವ ಮಾತ್ರ ಹೊರಗೆ ಬಂತು. ಇಂಥ ಹಳೆಯ ಮೂಸೆಗಳು ಜಾವರ್ ಪ್ರದೇಶದಲ್ಲಿ ರಾಶಿ ಬಿದ್ದಿರುವುದನ್ನು ಇಂದಿಗೂ ಕಾಣಬಹುದು. ಈ ಬಗೆಯ ರಾಶಿಗಳನ್ನು ತಾನೇ ಸ್ವತಃ ನೋಡಿರುವುದಾಗಿ ಕ್ಯಾಪ್ಟನ್ ಬ್ರೂಕ್ ಬರೆದಿದ್ದಾನೆ. ಜಾವರ್‍ನಲ್ಲಿ ದೊರೆಯುವ ಸೀಸ-ಸತುವಿನ ಅದುರಿನ ಆಧುನಿಕ ಗಣಿಗಾರಿಕೆ 1940ರಲ್ಲೇ ಪ್ರಾರಂಭವಾಯಿತು. ಭಾರತೀಯ ಪುರಾತತ್ವ ಇಲಾಖೆ ಮತ್ತು ಭೂವಿಜ್ಞಾನಿಗಳು ಜಂಟಿಯಾಗಿ ಈ ಭಾಗವನ್ನು ಉತ್ಖನನಮಾಡಿದಾಗ ಪ್ರಾಚೀನ ಗಣಿಗಾರಿಕೆ ಕುರಿತಂತೆ ಅನೇಕ ಮಹತ್ವಪೂರ್ಣ ಪುರಾವೆಗಳು ದೊರೆತುವು. ಜಾವರ್‍ಗಣಿಗಳ ಪ್ರಾಚೀನತೆಯನ್ನು ಇನ್ನಷ್ಟು ನಿಖರವಾಗಿ ಅರಿಯಲು 1983ರಲ್ಲಿ ಅಂತರರಾಷ್ಟ್ರೀಯ ಸಂಶೋಧನಾ ತಂಡವೊಂದು ಕಾರ್ಯನಿರತವಾಯಿತು. ಈ ತಂಡದಲ್ಲಿ ಹಿಂದೂಸ್ಥಾನ್ ಜಿಂಕ್ ಲಿಮಿಟೆಡ್ ಕಂಪೆನಿ, ಬರೋಡ ವಿಶ್ವವಿದ್ಯಾಲಯ, ಬ್ರಿಟಿಷ್ ಮ್ಯೂಸಿಯಂ ಪಾಲ್ಗೊಂಡಿದ್ದುವು. ಇಲ್ಲಿನ ಪ್ರಾಚೀನ ಸತುವಿನ ಸಂಸ್ಕರಣೆಯ ಜಾಗಗಳು ತಿರಿ ಎಂಬ ನದಿ ದಡದಲ್ಲಿ ಕಂಡುಬಂದಿವೆ. ಈ ನದಿಯ ಸುತ್ತ ಸತುವಿನ ಅದುರಾದ ಸ್ಪ್ಯಾಲರೈಟ್ ಮತ್ತು ಅದರೊಡನೆ ಬೆರೆತಿರುವ ಸೀಸದ ಅದುರಾದ ಗೆಲಿನ ಸಿರಗಳಿರುವ ಪ್ರಿಕೇಂಬ್ರಿಯನ್ ಕಾಲದ ಶಿಲೆಗಳು ಹಬ್ಬಿವೆ. ಸಂಶೋಧನಾ ತಂಡ ಈ ಸ್ಥಳವನ್ನು ಪರೀಕ್ಷಿಸಿದಾಗ ಸತುವನ್ನು ಆಸವನ ಮಾಡಲು ಬಳಸುತ್ತಿದ್ದ ಮೂಸೆಗಳು, ಕುಲುಮೆಯ ಉಳಿಕೆಗಳು, ಬೂದಿ ಮುಂತಾದವು ರಾಶಿರಾಶಿಯಾಗಿ ಬಿದ್ದುದು ಕಂಡುಬಂದಿತು. ಈ ರಾಶಿ ಅಂದಾಜು ಹತ್ತು ಲಕ್ಷಟನ್ನುಗಳಾಗುತ್ತದೆ ಎಂದ ಮೇಲೆ ಅದುರನ್ನು ಸಂಸ್ಕರಿಸಿ ಪಡೆದ ಸತುವಿನ ಪ್ರಮಾಣವೂ ದೊಡ್ಡದೇ ಎಂದು ಊಹಿಸಲಾಗಿದೆ.

ದೊರೆಯಬಹುದೆಂಬುದು ಮೊದಲಿನ ಅಂದಾಜು. ಇತ್ತೀಚೆಗೆ ಭಾರತ ಸರ್ಕಾರ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಎಂಬ ಸಾರ್ವಜನಿಕ ಉದ್ಯಮ ಸಂಸ್ಥೆಯನ್ನು ಪ್ರವರ್ತಿಸಿ ಅದಕ್ಕೆ ಇಲ್ಲಿಯ ಗಣಿಯ ಕೆಲಸವನ್ನು ವಹಿಸಿಕೊಟ್ಟಿದೆ. ಈ ಸಂಸ್ಥೆ ನಡೆಸಿದ ಅತ್ಯಾಧುನಿಕ ಭೂಸಮೀಕ್ಷೆಯ ಪ್ರಕಾರ ಇಲ್ಲಿ 60 ಮಿಲಿಯನ್ ಟನ್ನುಗಳಿಗೂ ಮಿಕ್ಕಿದ ಅದುರು ನಿಕ್ಷೇಪವಿದೆಯೆಂದು ತಿಳಿದುಬಂದಿದೆ.

ಜಾವರ್ ಗಣಿಗಳು
ಗಣಿ ಕೆಲಸ

ಜಾವರ್ ಪ್ರದೇಶದಲ್ಲಿನ ಮುಖ್ಯ ಗಣಿ ಅಂದರೆ ಜಾವರ್ ಗಣಿ. ಇದು ಮೋಚಿಯಮಾಗ್ರ ಬೆಟ್ಟದಲ್ಲಿ ಇದೆ. ಇದರ ಎತ್ತರ ನೆಲಮಟ್ಟದಿಂದ ಸುಮಾರು 120ಮೀ. ಪೂರ್ವ ಪಶ್ಚಿಮವಾಗಿ ಇದರ ಉದ್ದ ಸುಮಾರು 3 ಕಿ.ಮೀ. ದಪ್ಪ ಸುಮಾರು 1.5ಕಿಮೀ. ಪೂರ್ವದತ್ತ ಈ ಜಾಡು 2 ಕಿ.ಮೀ. ನಷ್ಟು ಪಶ್ಚಿಮದತ್ತ 1.5 ಕಿ.ಮೀ.ನಷ್ಟು ಅಗಲವಾಗಿದೆ. ದಕ್ಷಿಣದತ್ತ ಸುಮಾರು 75ಲಿ ಗಳಷ್ಟು ಇಳಿವೋರೆ ಉಂಟು. ಕೆಲವು ಕಡೆ ಇಳಿವೋರೆ ಇನ್ನೂ ಅಧಿಕವಾಗಿದ್ದು ಶಿಲಾಸ್ತರಗಳು ನೆಟ್ಟಗೆ ನಿಂತಿರುವುದೂ ಉಂಟು. ಇಲ್ಲಿ ಆರಾವಳಿ ಶಿಲಾಸ್ತೋಮಕ್ಕೆ ಸೇರಿದ ಫಿಲ್ಲೈಟ್, ಸ್ಲೇಟ್ ಮೈಕಪದರುಶಿಲೆ, ಡಾಲೊಮೈಟ್ ಮತ್ತು ಕ್ವಾಟ್ರ್ಸೈಟ್ ಶಿಲಾಸ್ತರಗಳನ್ನು ಗುರುತಿಸಲಾಗಿದೆ. ಅದುರಿನ ಮಚ್ಚೆ, ಕಣ ಮತ್ತು ಸಿರಗಳು ಡಾಲೊಮೈಟ್ ಸ್ತರಗಳಿಗೆ ಬಲುಮಟ್ಟಿಗೆ ಸೀಮಿತವಾಗಿರುವುದನ್ನು ಕಾಣಬಹುದು. ಅದುರಿನ ನಿಕ್ಷೇಪಗಳ ಅಗಲ ಅತಿ ಎಂದರೆ 45 ಮೀ. ಕೆಲವು ಕೇವಲ 3 ಮೀ.ನಷ್ಟು ಕಿರಿದಾಗಿಯೂ ಇವೆ. ಸಾಮಾನ್ಯವಾಗಿ ಡಾಲೊಮೈಟ್ ಸ್ತರಗಳು ಕ್ವಾಟ್ರ್ಸೈಟ್ ಮತ್ತು ಫಿಲ್ಲೈಟುಗಳ ನಡುವೆ ಇದ್ದು ಭೂಚಟುವಟಿಕೆಗಳ ನಿಮಿತ್ತ ಹೆಚ್ಚಿನ ತುಯ್ತಕ್ಕೆ ಒಳಗಾಗಿವೆ. ಆ ವೇಳೆ ಉಂಟಾದ ಬಿರುಕು ಮತ್ತು ಸೀಳುಗಳಲ್ಲಿ ಖನಿಜದ ಅದುರುಗಳಿಂದ ಕೂಡಿದ ಖನಿಜೀಕರಣದ್ರವಗಳು ಪ್ರವಹಿಸಿ ಕ್ರಮೇಣ ಅಕ್ಕಪಕ್ಕದ ಶಿಲಾಭಾಗಗಳಿಗೂ ವ್ಯಾಪಿಸಿ ಡಾಲೊಮೈಟ್ ಕಣಗಳನ್ನು ಕಾರ್ಯಾಂತರಗೊಳಿಸಿ ಶೇಖರಗೊಂಡ ಹಾಗೆ ತೋರುವುದು. ಸೀಸ ಮತ್ತು ಸತುವಿನ ಸಲ್ಫೈಡ್ ಮತ್ತು ಕಾರ್ಬೊನೇಟ್ ಅಂಶಗಳಿಂದ ಕೂಡಿದ ದ್ರಾವಣಗಳು ಖನಿಜೀಕರಣದ ಮುಖ್ಯ ಜೀವನಾಡಿ ಎನಿಸಿದ್ದವು. ಈ ತೆರನಾಗಿ ಉಂಟಾದ ಮುಖ್ಯ ಅದುರುಗಳೆಂದರೆ ಗೆಲಿನಾ, ಸ್ಫಾಲರೈಟ್ ಮತ್ತು ಪೈರೈಟ್. ಗೆಲಿನ ಸಾಮಾನ್ಯವಾಗಿ ನಿಕ್ಷೇಪದ ಕೆಲವೆಡೆಗಳಿಗೆ ಮಾತ್ರ ಸೀಮಿತವಾಗಿದ್ದು ಸ್ಫಾಲರೈಟ್ ಇಡೀ ನಿಕ್ಷೇಪದ ಉದ್ದಕ್ಕೂ ಹರಡಿರುವುದನ್ನು ಕಾಣಬಹುದು. ಈ ನಿಕ್ಷೇಪ 350 ಮೀ.ಗಳಿಗೂ ಆಳವನ್ನು ಮುಟ್ಟಿರಬಹುದೆಂದು ಊಹಿಸಲಾಗಿದೆ.

ಜಾವರ್ ಪ್ರದೇಶದ ಅದುರು ಅಷ್ಟು ಉತ್ತಮವಾದುದಲ್ಲ. ಅದರ ಲೋಹಾಂಶ ಇಡೀ ಪ್ರಪಂಚದಲ್ಲೇ ಅತ್ಯಂತ ಕನಿಷ್ಠ ದರ್ಜೆಯದೆಂದು ಪರಿಗಣಿತವಾಗಿದೆ. ಆದ್ದರಿಂದ ಆರ್ಥಿಕವಾಗಿ ಲಾಭದಾಯಕವಾಗುವ ರೀತಿಯಲ್ಲಿ ಇಲ್ಲಿನ ಗಣಿಗಾರಿಕೆಯನ್ನು ಮಾಡಲಾಗುತ್ತಿದೆ. ಪ್ರಸಕ್ತ ಗಣಿಯ ಕೆಲಸವನ್ನು ಮೋಚಿಯಾ ಮತ್ತು ಬಾಲೇರಿಯಾಗಳಿಗೂ ವಿಸ್ತರಿಸಿದ್ದು ಜಾವರ್‍ಮಾಲಾ, ರಾಜಪುರ ಹಾಗೂ ದರಿಬಾ ಗಣಿಗಳನ್ನೂ ಅಭಿವೃದ್ಧಿಗೊಳಿಸಲಾಗಿದೆ.

ಜಾವರ್ ಗಣಿಗಳು
ಜಾವರ್ ಪ್ರದೇಶ

ನಾಡಶಿಲೆಯಾದ ಡಾಲೊಮೈಟ್ ಗಡುಸಾಗಿರುವುದೇ ಅಲ್ಲದೆ ಅಡಕವಾದ ಒಳರಚನೆಯಿಂದಲೂ ಕೂಡಿದೆ. ಹೀಗಾಗಿ ಇಲ್ಲಿನ ಗಣಿಗಾರಿಕೆಯಲ್ಲಿ ಕುಸಿತದ ಸಂಭವಗಳು ಬಲು ಕಡಿಮೆ. ಮುಖ್ಯ ಕೂಪದ ಅಡ್ಡಕೊಯ್ತ 5.2 ( 3.8 ಚ.ಮೀ. ಆಳ ಮತ್ತು 300 ಮೀಗೂ ಹೆಚ್ಚು. ಗಣಿಗೂ ಹೊರಭಾಗಕ್ಕೂ ಇದೇ ಮುಖ್ಯ ಸಂಪರ್ಕ ಸಾಧನ. ಆಳದಲ್ಲಿ ತೋಡಿದ ಅದುರನ್ನು ಮೇಲಕ್ಕೆ ಸಾಗಿಸುವುದು ಇದರ ಮುಖಾಂತರವೇ. ನಾಡಶಿಲೆಯಲ್ಲಿ ವ್ಯಾಪಿಸಿರುವ ಅದುರಿನ ಜಾಡುಗಳನ್ನು ಅನುಸರಿಸಿ ಅನೇಕ ಸುರಂಗಗಳನ್ನು ಕೊರೆದಿದ್ದಾರೆ. ಸದ್ಯದಲ್ಲಿ 6ನೆಯ ನಂಬರಿನ ಸುರಂಗದಲ್ಲೇ ಹೆಚ್ಚಿನ ಗಣಿ ಕೆಲಸ ನಡೆಯುತ್ತಿದೆ. ಗಣಿಯ ಕೆಲಸದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಗಣಿಯಿಂದ ಹೊರತೆಗೆದ ಅದುರಿನ ಚೂರುಗಳನ್ನು ಮೊದಲು ಕುಟ್ಟುವುದು, ಪುಡಿಮಾಡುವುದು, ಹಿಟ್ಟುಮಾಡುವುದು ಮುಂತಾದ ಯಾಂತ್ರಿಕ ಕ್ರಿಯೆಗಳಿಗೆ ಒಳಪಡಿಸಿ ತರುವಾಯ ರಾಸಾಯನಿಕ ಕ್ರಿಯೆಗಳಿಗೆ ಒಡ್ಡಲಾಗುವುದು. ಇವುಗಳ ಅಂತಿಮ ಉತ್ಪನ್ನವಾಗಿ ಸಲ್ಫೈಡ್ ಲೋಹ ಖನಿಜಗಳಾದ ಗೆಲಿನ ಮತ್ತು ಸ್ಫಾಲರೈಟುಗಳು ವಿವಿಧ ಮಟ್ಟಗಳಲ್ಲಿ ತೇಲಿ ಸಾಂದ್ರೀಕರಿಸುತ್ತವೆ. ಹೀಗೆ ಶೇಖರಿಸಿದ ಅದುರಿನಲ್ಲಿ ಸಾಕಷ್ಟು ಸೀಸದ ಲೋಹಾಂಶವೂ ಸತುವಿನ ಅಂಶವೂ ಇರುವುವು. ಇವನ್ನು ಲೋಹಶುದ್ಧೀಕರಣ ವಿಧಾನಗಳಿಗೆ ಒಳಪಡಿಸಿ, ಒಪ್ಪಮಾಡಿ ಸೀಸ ಮತ್ತು ಸತುವಿನ ಗಟ್ಟಿಗಳನ್ನು ಪಡೆಯಲಾಗುತ್ತದೆ. ಈ ಶುದ್ಧೀಕರಣದಲ್ಲಿ ಸಲ್ಫೂರಿಕ್ ದ್ರಾವಣ, ಸೂಪರ್ ಫಾಸ್ಫೇಟ್ ರಾಸಾಯನಿಕ ಗೊಬ್ಬರ, ಕ್ಯಾಡ್ಮಿಯಮ್ ಪೆನ್ಸಿಲ್ ಮತ್ತು ಉಂಡೆಗಳು ಜಿಂಕ್ ಸಲ್ಫೇಟ್ ಹರಳು ಮತ್ತು ಬೆಳ್ಳಿ ಇವನ್ನು ಉಪೋತ್ಪನ್ನಗಳನ್ನಾಗಿಯೂ ಪಡೆಯಲಾಗುತ್ತಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ನಾಟಕದ ಅಣೆಕಟ್ಟುಗಳು

ಕರ್ನಾಟಕದ ಅಣೆಕಟ್ಟುಗಳು

ಆರ್ಕಿಡ್ ಹೂವು

ಶುಭ ಹಾರೈಸಲು, ಅದರ ಅಂದ ಹೆಚ್ಚಿಸಲು ಆರ್ಕಿಡ್ ಹೂವುಗಳು ಬೇಕು