ಆಹಾರದ ವಿಷಯಕ್ಕೆ ಬಂದರೆ ಪ್ರತಿಯೊಂದು ಆಹಾರ ಪದಾರ್ಥವು ವಿಶೇಷ ಗುಣಗಳನ್ನು ಹೊಂದಿರುತ್ತವೆ. ನಾವು ಸೇವಿಸುವ ಆಹಾರದಲ್ಲಿ ಕೆಲವೊಂದು ಬೇಗ ಕೆಡುತ್ತದೆ. ಕೆಲವೊಂದು ನಿಧಾನವಾಗಿ ಕೆಡುವುದು. ಅವುಗಳ ಆಧಾರದ ಮೇಲೆ ಯಾವ ಆಹಾರವನ್ನು ದೀರ್ಘ ಸಮಯಗಳ ಕಾಲ ಇಟ್ಟುಕೊಳ್ಳಬಹುದು ಎಂದು ನಿರ್ಧರಿಸಬಹುದು. ಕೆಲವು ಆಹಾರ ಪದಾರ್ಥಗಳು ಅಡುಗೆ ಮನೆಯಲ್ಲಿ ಹಾಳಾಗದೆಯೇ ಇರುತ್ತವೆ. ದೀರ್ಘ ಸಮಯಗಳ ಕಾಲ ಹಾಳಾಗದೆ ಇರುತ್ತವೆ.
ಉಪ್ಪು
ಉಪ್ಪು ಕೂಡ ಎಂದಿಗೂ ಕೆಡುವುದಿಲ್ಲ. ಅದಕ್ಕಾಗಿಯೇ ಉಪ್ಪು (ಸೋಡಿಯಂ ಕ್ಲೋರೈಡ್) ಅನ್ನು ಶತಮಾನಗಳಿಂದ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆಹಾರ ಪದಾರ್ಥಗಳಲ್ಲಿ ಉಪ್ಪು ಅದ್ಭುತ ಸ್ಥಾನವನ್ನು ಪಡೆದುಕೊಂಡಿದೆ. ಇದರ ರುಚಿ ಹಾಗೂ ಗುಣವು ಆಹಾರದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಉಪ್ಪು ಇಲ್ಲದ ಆಹಾರದ ರುಚಿಯು ಉತ್ತಮವಾಗಿರುವುದಿಲ್ಲ. ಇದು ನೈಸರ್ಗಿಕವಾಗಿ ಎಂದಿಗೂ ಕೆಡದ ಪದಾರ್ಥ. ಇದನ್ನು ಬಳಸಿ ಕೆಲವು ತರಕಾರಿ, ಹಣ್ಣು ಹಾಗೂ ಆಹಾರ ಪದಾರ್ಥವನ್ನು ಸಹ ದೀರ್ಘ ಸಮಯಗಳ ಕಾಲ ಕೆಡದಂತೆ ಇಡಬಹುದು. ಅಡುಗೆ ಮನೆಯಲ್ಲಿ ಇದರ ಬಳಕೆ ಇಲ್ಲ ಎಂದು ಎಂದಿಗೂ ಆಗದು. ಅಂತೆಯೇ ಉಪ್ಪಿಗೆ ಎಂದಿಗೂ ಅವಧಿ ಮುಗಿಯದು. ದೀರ್ಘ ಸಮಯಗಳ ಕಾಲ ತಾಜಾತನದಿಂದಲೇ ಇರುತ್ತದೆ. ಆಹಾರ ಮತ್ತು ಪಾನೀಯಗಳಲ್ಲಿ ಉಪ್ಪನ್ನು ಹಾಕಿಡುವುದರಿಂದ, ಅವುಗಳು ಬೇಗನೆ ಕೆಡುವುದಿಲ್ಲ. ಇದಕ್ಕೆ ಉದಾಹರಣೆಯೇ, ನಮ್ಮ ಹಿಂದಿನ ತಲೆಮಾರಿನವರು ಮಾವಿನಕಾಯಿ, ಹಲಸಿನ ಕಾಯಿಯನ್ನು ಮಳೆಗಾಲದ ಬಳಕೆಗಾಗಿ ಉಪ್ಪಿನಲ್ಲಿ ಸಂಗ್ರಹಿಸಿಡುತ್ತಿದ್ದಂತಹ ಸಂಗತಿ.
ಕಾರ್ನ್‍ಸ್ಟಾರ್ಚ್/ ಜೋಳದ ಹಿಟ್ಟು
ಜೋಳದ ಹಿಟ್ಟನ್ನು ಸಾಮಾನ್ಯವಾಗಿ ಸೂಪ್, ಗ್ರೇವಿ ಮತ್ತು ಸಾಸ್ ದಪ್ಪವಾಗಿಸಲು ಬಳಸುತ್ತಾರೆ. ಅಷ್ಟೇ ಅಲ್ಲದೆ ಕೆಲವು ಆಹಾರ ಪದಾರ್ಥವನ್ನು ಗರಿಯಾಗಿಸಲು ಬಳಸುತ್ತೇವೆ. ಈ ಹಿಟ್ಟಿಗೆ ನೀರಿನಂಶ ತಾಗದಂತೆ ಹಾಗೂ ಗಾಳಿಯಾಡದಂತೆ ಡಬ್ಬದಲ್ಲಿ ಶೇಖರಿಸಿ ಇಟ್ಟರೆ ದೀರ್ಘ ಸಮಯಗಳ ಕಾಲ ಕೆಡದ ತಾಜಾತನದಿಂದಲೇ ಇರುತ್ತದೆ.
ಸೋಯಾ ಸಾಸ್
ಸೋಯಾ ಸಾಸ್ ಕೂಡ ದೀರ್ಘಕಾಲದವರೆಗೆ ಕೆಡುವುದಿಲ್ಲ, ಚೈನೀ ಶೈಲಿಯ ಸೂಡಲ್ಸ್, ಫ್ರೇಡ್ ರೇಸ್ ಮತ್ತು ಸ್ಟಿರ್ ಫ್ರೈಡ್ ತರಕಾರಿಗಳನ್ನು ತಯಾರಿಸುವಾಗ ಸೋಯಾ ಸಾಸ್ ಅನ್ನು ವಿಶೇಷವಾಗಿ ಬಳಸಲಾಗುತ್ತದೆ. ಅಧಿಕ ಪ್ರಮಾಣದ ಸೋಡಿಯಮ್ ಹೊಂದಿರುವ ಈ ಸಾಸ್ ಅನ್ನು ಹೆಚ್ಚು ಸಮಯಗಳ ಕಾಲ ಹಾಳಾಗದಂತೆ ಇಡಬಹುದು. ಸೋಯಾ ಸಾಸ್ ಅನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಬೇಕು. ಇದನ್ನು ತಂಪಾದ ಮತ್ತು ಕತ್ತಲೆಯಿಂದ ಕೂಡಿರುವ ಸ್ಥಳದಲ್ಲಿ ಇಡಬೇಕು. ಹೆಚ್ಚು ಸಮಯ ಹಾಳಾಗದೆ ಉಳಿದುಕೊಳ್ಳುತ್ತದೆ. ಏಕೆಂದರೆ ಇದನ್ನು ಹುದುಗುವಿಕೆಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ಇದು ಎಂದಿಗೂ ಹಾಳಾಗುವುದಿಲ್ಲ. ಅದನ್ನು ತೆರೆದ ನಂತರವೂ ಅದನ್ನು ಬಳಸಿ ಆಹಾರವನ್ನು ತಯಾರಿಸಬಹುದು. ಸೋಯಾಸಾಸ್ ಹಲವಾರು ವರ್ಷಗಳವರೆಗೆ ತನ್ನ ಗುಣಮಟ್ಟವನ್ನು, ರುಚಿಯನ್ನು ಕಾಪಾಡಿಕೊಳ್ಳುತ್ತದೆ.
ವಿನೆಗರ್
ವಿನೆಗರ್ ಔಷಧಿ ಮತ್ತು ಆಹಾರ ಉತ್ಪನ್ನಗಳಲ್ಲಿ ಬಳಸಲಾಗುವ ಒಂದು ಉತ್ಪನ್ನ. ವಿವಿಧ ಉದ್ದೇಶಗಳಿಗಾಗಿ ಬಳಸುವ ಬಿಳಿ ವಿನೆಗರ್, ಆಪಲ್ ಸೈಡರ್ ವಿನೆಗರ್, ಅಕ್ಕಿ ವಿನೆಗರ್ ಅಥವಾ ಯಾವುದೇ ರೀತಿಯ ವಿನೆಗರ್ ಅನ್ನು ವರ್ಷಗಳ ಕಾಲ ಕಾಯ್ದಿರಿಸಿಕೊಳ್ಳಬಹುದು. ಫ್ರಿಜ್‍ನಲ್ಲಿ ಇಡದೆಯೂ ಸಹ ವರ್ಷಗಳ ಕಾಲ ಹಾಳಾಗದೆ ಉಳಿದಿರುತ್ತದೆ.
ನೂಡಲ್ಸ್
ಎಲ್ಲಾ ವಯೋಮಾನದವರು ಇಷ್ಟಪಡುವ ಆಹಾರ ಪದಾರ್ಥಗಳಲ್ಲಿ ನೂಡಲ್ಸ್ ಸಹ ಒಂದು. ಇದನ್ನು ಸಂಸ್ಕರಿಸಿದ ಹಿಟ್ಟು, ಮೈದಾ ಬಳಸಿ ತಯಾರಿಸಲಾಗುತ್ತದೆ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಇಡಬೇಕು. ನೀರಿನಂಶ ಅಥವಾ ತಂಪಾದ ಗಾಳಿಗೆ ತೆರೆದಿಡಬಾರದು. ನೀರು ತಾಗಿದರೆ ಹೆಚ್ಚು ದಿನಗಳ ಕಾಲ ಉಳಿಯದು.
ಸಕ್ಕರೆ
ಸಕ್ಕರೆ ಒಂದು ಸಾಮಾನ್ಯ ಅಡುಗೆ ಪದಾರ್ಥ. ಇದನ್ನು ನಿತ್ಯವೂ ಬಳಸುತ್ತಾರೆ. ಇದನ್ನು ಸೂಕ್ತ ಡಬ್ಬದಲ್ಲಿ ಶೇಖರಿಸಿ ಇಡಬೇಕು. ನೀರು ಅಥವಾ ತೇವಾಂಶ ತಾಗಿದರೆ ಹಾಳಾಗಬಹುದು. ಸಕ್ಕರೆ ದೀರ್ಘ ಸಮಯಗಳ ನಂತರ ತನ್ನ ವಿನ್ಯಾಸದಲ್ಲಿ ಬದಲಾವಣೆ ಕಾಣಬಹುದು. ಆದರೆ ಎಂದಿಗೂ ಅದರ ಅವಧಿ ಮುಗಿಯುವುದಿಲ್ಲ. ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿಯೇ ಉಳಿಯುತ್ತದೆ. ದೀರ್ಘ ಸಮಯಗಳ ಕಾಲ ಕೆಡದಂತೆ ಉಳಿದುಕೊಳ್ಳುವುದು.
ಅಕ್ಕಿ
ಅಕ್ಕಿ ದಿನನಿತ್ಯದ ಅಗತ್ಯತೆಗೆ ಬೇಕಾಗುವ ಆಹಾರ ಪದಾರ್ಥ. ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆಯಂಶವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿಯೇ ಅಕ್ಕಿಯನ್ನು ದೀರ್ಘ ಸಮಯಗಳ ಕಾಲ ಕಾಯ್ದಿಡಬಹುದು. ಅಕ್ಕಿಯನ್ನು ತೇವಾಂಶಕ್ಕೆ ತೆರೆಯದೆ, ಗಾಳಿಯಾಡದ ಪಾತ್ರೆ ಅಥವಾ ಶೇಖರಣೆಯಲ್ಲಿ ಇಟ್ಟರೆ ವರ್ಷಗಳ ಕಾಲ ಹಾಳಾಗದೆ ಉಳಿದುಕೊಳ್ಳುತ್ತದೆ. ಇದನ್ನು ತೇವಾಂಶ ಅಥವಾ ಗಾಳಿಗೆ ಹೆಚ್ಚು ತರೆದುಕೊಳ್ಳುವಂತೆ ಇಟ್ಟರೆ ಬಹು ಬೇಗ ಹಾಳಾಗುತ್ತದೆ.
ಜೇನುತುಪ್ಪ
ಜೇನುತುಪ್ಪವು ಎಂದಿಗೂ ಕೆಡದ ಏಕೈಕ ಆಹಾರ ಎಂದು ಹೇಳಲಾಗುತ್ತದೆ. ಜೇನುತುಪ್ಪವು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಜೇನುತುಪ್ಪವು ಕಡಿಮೆ ಪ್ರಮಾಣದ ಆಮ್ಲೀಯತೆಯನ್ನು ಹೊಂದಿರುತ್ತದೆ. ಇದು ತೇವಾಂಶದ ಮಟ್ಟವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತದೆ. ಹಾಗಾಗಿ ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಸುಲಭವಾಗಿ ತೆಗೆಯುವುದು. ಇದು ನೈಸರ್ಗಿಕವಾಗಿಯೇ ದೀರ್ಘ ಸಮಯಗಳ ಕಾಲ ಉಳಿಯುತ್ತದೆ. ಕಾಲಾಂತರದಲ್ಲಿ ಇದು ಸ್ಫಟಿಕ ರೂಪದಲ್ಲಿ ಬದಲಾಗಬಹುದು. ಆದರೆ ಆಗಲೂ ಅದನ್ನು ಬಳಸಲು ಯೋಗ್ಯವಾಗಿರುತ್ತದೆ. ಹೂವುಗಳ ಮಕರಂದದಿಂದ ಉತ್ಪತ್ತಿಯಾಗುವ ಜೇನುತುಪ್ಪವು ಉತ್ಪಾದನೆಯ ಸಮಯದಲ್ಲಿ ಜೇನುನೊಣದ ಕಿಣ್ವಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ರಸವನ್ನು ಸರಳ ಸಕ್ಕರೆಯಾಗಿ ಪರಿವರ್ತಿಸುತ್ತದೆ, ಈ ಕ್ರಿಯೆಯಿಂದ ಜೇನುತುಪ್ಪದ ಜೀವಿತಾವಧಿ ಹೆಚ್ಚಾಗುವುದು. ಆದ್ದರಿಂದ ಸಾವಯವ ಜೇನುತುಪ್ಪವನ್ನು ಎಷ್ಟು ವರ್ಷಗಳ ಕಾಲ ಇಟ್ಟರೂ, ಅದು ಕೆಡುವುದಿಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ಕಲಬೆರೆಕೆ ಜೇನುತುಪ್ಪಕ್ಕೆ ಯಾವುದೇ ವ್ಯಾರಂಟಿಯಿಲ್ಲ.
ಬಿಳಿ ಅಕ್ಕಿ
ಎಂದಿಗೂ ಹಾಳಾಗದ ವಸ್ತುಗಳಲ್ಲಿ ಒಂದು ಬಿಳಿ ಅಕ್ಕಿ. ಬಿಳಿ ಅಕ್ಕಿಯ ಪೌಷ್ಟಿಕಾಂಶವು 30 ವರ್ಷಗಳವರೆಗೆ ಮುಕ್ತಾಯಗೊಳ್ಳುವುದಿಲ್ಲ. ಅಲ್ಲಿವರೆಗೆ ತನ್ನ ಪೋಷಕಾಂಶವನ್ನು ಹಿಡಿದಿಟ್ಟುಕೊಂಡಿರುತ್ತದೆ. ಆದರೆ, ಅದನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿಡುವುದು ತುಂಬಾ ಮುಖ್ಯ. ಬಿಳಿ ಅಕ್ಕಿಯನ್ನು 40 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿದರೆ, ಅದು ವರ್ಷಗಳವರೆಗೆ ಹಾಳಾಗುವುದಿಲ್ಲ.
ಧನ್ಯವಾದಗಳು.
GIPHY App Key not set. Please check settings