ನಮ್ಮ ಅಡಿಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ತರಕಾರಿ ಅಂದರೆ ಹೀರೆಕಾಯಿ. ಹೆಚ್ಚಾಗಿ ಇದರಿಂದ ಸಾಂಬಾರ್,ಪಲ್ಯ, ತಂಬುಳಿ, ಬಿಸಿ ಬಿಸಿ ಬಜ್ಜಿ ಮಾಡ್ತೀವಿ.ಹೀಗೆ ದಕ್ಷಿಣ ಕರ್ನಾಟಕದ ಕಡೆ ಹೋದ್ರೆ ಹೀರೆಕಾಯಿ ದೋಸೆ ಅಂತಾನು ಮಾಡ್ತಾರೆ. ಇದರ ಸಿಪ್ಪೆಯನ್ನು ಬಳಸಿ ಚಟ್ನಿ ಕೂಡ ಮಾಡಬಹುದು.ಇದು ದೋಸೆ ಮತ್ತು ಇಡ್ಲಿಗೆ ಒಳ್ಳೆ ಕಾಂಬಿನೇಶನ್. ಅಬ್ಬಾ ಹೀರೆಕಾಯಿ ಅಂತ ಮೂಗು ಮುರಿಬೇಡಿ, ಇದರ ಆರೋಗ್ಯ ಲಾಭದ ಬಗ್ಗೆ ಗೊತ್ತಾದ್ರೆ ನೀವೆ ಆಶ್ಚರ್ಯ ಪಡ್ತೀರಾ. ಹೀರೆಕಾಯಿ ಸೇವಿಸೋದ್ರಿಂದ ನಮ್ಮ ಇಮ್ಮ್ಯೂನಿಟಿ ಬೂಸ್ಟ್ ಆಗುತ್ತೆ, ಕಣ್ಣಿನ ಆರೋಗ್ಯಕ್ಕೆ ಹಾಗೂ ದೇಹದ ತೂಕ ಇಳಿಸೋದಕ್ಕೆ ಕೂಡ ಸಹಾಯ ಮಾಡುತ್ತೆ.
ಹೀರೇಕಾಯಿಯಲ್ಲಿ ಹೆಚ್ಚಾಗಿ ನಾರಿನ ಅಂಶವಿದೆ, ನೀರಿನ ಅಂಶ, ವಿಟಮಿನ್ ಎ, ವಿಟಮಿನ್ ಸಿ,ಐರನ್, ಮೆಗ್ನಿಶಿಯಂ ಮತ್ತು ವಿಟಮಿನ್ ಬಿ6. ಇದರಲ್ಲಿ ಪ್ರಭಲವಾದ ಆಂಟಿಓಕ್ಸಿಡೆಂಟ್ಸ್ ಹೊಂದಿದ್ದು ನಮ್ಮ ಮೆಟಬೋಲಿಸಂ ನಿಯಂತ್ರಿಸುತ್ತದೆ. ಅಲ್ಲದೆ ದೇಹದ ಟಾಕ್ಸಿನ್ಸ್ ಹೊರಹಾಕುತ್ತದೆ.
ಇದರ ಒಂದೊಂದೇ ಆರೋಗ್ಯದ ಉಪಯೋಗ ತಿಳಿದುಕೊಳ್ಳೋಣ,
1.ಡಯಾಬಿಟಿಸ್ ನಿಯಂತ್ರಣದಲ್ಲಿಡುತ್ತದೆ: ಇದರಲ್ಲಿ ಕಡಿಮೆ ಕ್ಯಾಲೊರಿ ಮತ್ತು ಆಂಟಿಓಕ್ಸಿಡೆಂಟ್ಸ್ ಗುಣಗಳಿದ್ದು ಡಯಾಬಿಟಿಸ್ ಇರೋರಿಗೆ ಇದು ಒಂದೊಳ್ಳೆ ತರಕಾರಿ. ಹಾಗಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
2.ಮಲಬದ್ದತೆಗೆ ರಾಮಬಾಣ: ಹೀರೇಕಾಯಿಯಲ್ಲಿ ಯಥೇಚ್ಛವಾದ ನೀರಿನ ಅಂಶ ಮತ್ತು ನಾರಿನ ಅಂಶಗಳಿವೆ. ಇದರ ಸೇವನೆಯಿಂದ ಮಲಬದ್ಧತೆಯಿಂದ ನಿವಾರಣೆ ಸಿಗುತ್ತೆ.
3.ದೇಹದ ತೂಕ ಇಳಿಸಲು: ಇದರಲ್ಲಿ ಹೆಚ್ಚು ನಾರಿನ ಅಂಶವಿರುವುದರಿಂದ ನಮ್ಮ ದೇಹ ಇದನ್ನು ಹೀರಿಕೊಳ್ಳಲು ಸಮಯ ಹಿಡಿಯುತ್ತದೆ. ಹಾಗಾಗಿ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ.ಹಾಗಾಗಿ ದೇಹದ ತೂಕದ ನಿಯಂತ್ರಣಕ್ಕೆ ಇದು ಒಳ್ಳೆಯ ಆಯ್ಕೆ.
ಹೀಗೆ ಹೀರೆಕಾಯಿಯನ್ನು ನಮ್ಮ ಆಹಾರದ ಪಟ್ಟಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ದೇಹಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಗಳಿವೆ. ಇನ್ನುಮೇಲೆ ಇದನ್ನು ಆರೋಗ್ಯದ ದೃಷ್ಟಿನಿಂದ ಸೇವಿಸಿ, ಆರೋಗ್ಯದಿಂದಿರಿ.