ಹುಟ್ಟುವ ಮಗುವಿನಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪ್ರೋಟೀನ್ ಅಂಶ ಎಷ್ಟು ಮುಖ್ಯ ಎಂಬುದು ಅವರವರಿಗೇ ಗೊತ್ತು. ದೇಹದ ಮಾಂಸಖಂಡಗಳ ಬೆಳವಣಿಗೆಯಲ್ಲಿ, ಮೂಳೆಗಳ ಸದೃಢತೆಯಲ್ಲಿ, ಬುದ್ಧಿ ಶಕ್ತಿಯ ಚುರುಕುತನದಲ್ಲಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ, ಪ್ರೋಟೀನ್ ಅಂಶದ ಪಾತ್ರ ಇದ್ದೇ ಇರುತ್ತದೆ.
ತೂಕ ಇಳಿಸಲು ಅಥವಾ ತೂಕ ಹೆಚ್ಚಿಸಿಕೊಳ್ಳಲು ಪ್ರೋಟಿನ್ ಮುಖ್ಯ ಕೆಲಸ ಮಾಡುತ್ತದೆ. ಅದಕ್ಕಾಗಿ ಮಾರ್ಕೆಟ್ನಲ್ಲಿ ಬೇಕಾದಷ್ಟು ಸಪ್ಲಿಮೆಂಟ್ ಗಳು ಇವೆ. ಆದರೆ ಅಧಿಕ ಪ್ರೋಟಿನ್ ಸೇವನೆ ಕೂಡ ಒಳ್ಳೆಯದಲ್ಲ.
ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಸೇರಿಸಿ ಇದರ ಜೊತೆಗೆ ಇನ್ನಿತರ ಆಹಾರ ಪದಾರ್ಥಗಳಾದ ಮೊಸರು, ಮೊಟ್ಟೆ, ಮೀನು, ಕಾಳುಗಳು, ಬೀಜಗಳು ಇತ್ಯಾದಿಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ಆರೋಗ್ಯಕರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರವಾದ ದೇಹ ಕೂಡ ನಮ್ಮದಾಗುತ್ತದೆ. ನೀವು ಪ್ರೋಟೀನ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸದೆ ಇದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದರಿಂದ ಬೇಡವಾದ ಆರೋಗ್ಯ ಸಮಸ್ಯೆಗಳು ನಿಮ್ಮಲ್ಲಿ ಕಾಣಿಸಲು ಪ್ರಾರಂಭ ಆಗುತ್ತವೆ. ಸಸ್ಯಾಹಾರಿಗಳಾದರೆ ಸಸ್ಯಗಳಿಂದ ಸಿಗುವ ಉತ್ಪನ್ನಗಳಲ್ಲಿ ಅಡಕವಾಗಿರುವ ಪ್ರೋಟಿನ್ ಅಂಶವನ್ನು ನಿಮ್ಮದಾಗಿಸಿಕೊಳ್ಳಿ. ಮಾಂಸಾಹಾರಿಗಳಾದರೆ ಮಾಂಸಾಹಾರದ ಉತ್ಪನ್ನಗಳಲ್ಲಿ ಅಂದರೆ ಚಿಕನ್, ಟ್ಯೂನ, ಮೀನು ಇತ್ಯಾದಿಗಳಲ್ಲಿ ಲಭ್ಯವಿರುವ ಪ್ರೋಟಿನ್ ಅಂಶವನ್ನು ಸೇವನೆ ಮಾಡಿ. ಇದರ ಜೊತೆಗೆ ಆಲೂಗಡ್ಡೆ, ಕಾಳುಗಳು, ಬಾದಾಮಿ, ಗೋಡಂಬಿ ಬೀಜಗನ್ನು ಸೇವಿಸಿ.
ಸಸ್ಯಾಹಾರಕ್ಕಿ೦ತ ಮಾ೦ಸಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನುವ ವಾದವಿದೆ. ಆದರೆ ಮಾಂಸಹಾರಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಪೋಶಕಾಂಶಗಳು ಇದೆ ಎಂದು ಹೇಳುತ್ತಾರೆ. ಸಸ್ಯಹಾರಿಗಳು ತಾವು ಸೇವಿಸುವುದೇ ಅಧಿಕ ಪೋಶಕಾಂಶಗಳು ಇರುವ ಆಹಾರವೆನ್ನುತ್ತಾರೆ. ಏನೇ ಇರಲಿ ಪ್ರೋಟಿನ್ ಮುಖ್ಯ,ಯಾವುದು ತಿನ್ನಲು ಸಾಧ್ಯ ಅದನ್ನು ತಿಂದರೆ ಸಾಕು.
ಪ್ರೋಟಿನ್ ಅಧಿಕವಾಗಿ ಸಿಗುವ ಆಹಾರ ಪದಾರ್ಥಗಳು.
ಮೊಸರು :
ಮೊಸರು ಒಂದು ಡೈರಿ ಉತ್ಪನ್ನವಾಗಿದ್ದು ನೈಸರ್ಗಿಕವಾಗಿ ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಅಡಗಿವೆ. ಮಾರುಕಟ್ಟೆಗಳಲ್ಲಿ ಎಲ್ಲಾ ಕಡೆ ಸುಲಭವಾಗಿ ಮೊಸರು ಸಿಗುತ್ತದೆ. ಮೊಸರಿನ ಸೇವನೆಯಿಂದ ನಿಮಗೆ ಅನೇಕ ಆರೋಗ್ಯ ಲಾಭಗಳು ಇದೆ. ಪ್ರೊಟೀನ್ ಅಂಶ ಕೂಡ ಮೊಸರಿನಲ್ಲಿ ಹೇರಳವಾಗಿದ್ದು, ನಿಮಗೆ ಬೇಕೆಂದರೆ ರುಚಿಗಾಗಿ ಮತ್ತು ಇನ್ನಷ್ಟು ಪೌಷ್ಟಿಕಾಂಶಗಳ ಅಗತ್ಯತೆಗಾಗಿ ನೀವು ಸೇವಿಸುವ ಮೊಸರಿನಲ್ಲಿ, ಸ್ವಲ್ಪ ಜೇನು ತುಪ್ಪ, ಉಪ್ಪು ಮತ್ತು ವಾಲ್ನಟ್ ಗಳನ್ನು ಬಳಕೆ ಮಾಡಿ ಸೇವನೆ ಮಾಡಬಹುದು.
ಕಪ್ಪು ಒಣದ್ರಾಕ್ಷಿ:
ಕೆಲವು ಪ್ರಮುಖ ಮ್ಯಾಕ್ರೋ-ಪೋಷಕಾಂಶಗಳ ಜೊತೆಗೆ ವ್ಯಾಪಕವಾದ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. 100 ಗ್ರಾಂ ಕಪ್ಪು ಒಣದ್ರಾಕ್ಷಿಯಲ್ಲಿ 2.18 ಗ್ರಾಂ ಪ್ರೋಟೀನ್, ಜೊತೆಗೆ 7 ಗ್ರಾಂ ನಾರಿನಾಂಶ ಇರುತ್ತದೆ.
ಆಲೂಗಡ್ಡೆ:
ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಸ್ಟಾರ್ಚ್ ಅಂಶವಿದೆ. ಆದರೆ ಅದರ ಜೊತೆಗೆ ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕ ಅಂಶಗಳು ಕೂಡ ಲಭ್ಯವಿವೆ. ಆಲೂಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ ಸೇವಿಸುವುದರಿಂದ ತುಂಬಾ ಹೆಚ್ಚಿನ ಪ್ರಮಾಣದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ನಿಮ್ಮ ದೇಹಕ್ಕೆ ಸಿಗುತ್ತದೆ. ಆದರೆ ಆಲೂಗಡ್ಡೆಯಲ್ಲಿ ಕ್ಯಾಲೊರಿ ಅಂಶಗಳು ಹೆಚ್ಚಿರುವ ಕಾರಣ ಸೇವನೆಯಲ್ಲಿ ಮಿತಿ ಕಾಯ್ದುಕೊಳ್ಳಬೇಕು ಅಷ್ಟೇ.
ಕೋಳಿ ಮೊಟ್ಟೆ :
ಕೋಳಿ ಮೊಟ್ಟೆ ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚಿನ ಪ್ರೋಟಿನ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಕೋಳಿ ಮೊಟ್ಟೆಯಲ್ಲಿ ತುಂಬಾ ಹೇರಳವಾದ ಪ್ರೋಟೀನ್ ಅಂಶಗಳು ಸಿಗುತ್ತವೆ. ಇದರ ಜೊತೆಗೆ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಣ್ಣುಗಳಿಗೆ ಸಹಕಾರಿ ಆಗಿರುವ ಉತ್ಕರ್ಷಣ ನಿರೋಧಕ ಅಂಶಗಳು ಮತ್ತು ದೇಹಕ್ಕೆ ಅಗತ್ಯ ಇರುವ ಆರೋಗ್ಯಕರ ಕೊಬ್ಬಿನ ಅಂಶಗಳು ಮೊಟ್ಟೆಯಲ್ಲಿ ಸಿಗುತ್ತವೆ.
ಒಣದ್ರಾಕ್ಷಿ:
ಇದು ಎಲ್ಲಾ ಸಿಹಿ ಖಾದ್ಯಗಳಲ್ಲಿ ಸ್ಥಾನ ಪಡೆದಿರುವ ಒಣ ಹಣ್ಣು. ಕೆಲವರು ಒಣದ್ರಾಕ್ಷಿಯನ್ನು ರಾತ್ರಿಯ ಹೊತ್ತು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತಿನ್ನುವಂತೆ ಸಲಹೆ ನೀಡುತ್ತಾರೆ. ಯಕೃತ್ತಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಮಾಹಿತಿ ಪ್ರಕಾರ, 100 ಗ್ರಾಂ ಒಣದ್ರಾಕ್ಷಿಯಲ್ಲಿ 3 ಗ್ರಾಂ ಪ್ರೋಟೀನ್ ಇರುತ್ತದೆ ಎಂದು ಹೇಳಬಹುದು.
ಪೇರಳೆ ಹಣ್ಣು:
ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಸಲಾಡ್ ರೂಪದಲ್ಲಿ ಸೇವಿಸಲಾಗುತ್ತದೆ ಅಥವಾ ಪಾನೀಯ ರೂಪದಲ್ಲೂ ಇದನ್ನು ಸೇವಿಸಬಹುದು. ಯುಎಸ್ಡಿಎ ಪ್ರಕಾರ, 100 ಗ್ರಾಂ ಹಣ್ಣಿನಲ್ಲಿ 5 ಗ್ರಾಂ ಪ್ರೋಟೀನ್ ಇರುತ್ತದೆ. ಇದರಲ್ಲಿ ನಾರಿನಾಂಶ ಯಥೇಚ್ಛವಾಗಿದ್ದು, ಇದರಲ್ಲಿ ಸುಮಾರು 2.6 ಗ್ರಾಂ ನಾರಿನಾಂಶ ಇದೆ.
ಹಾಲು:
ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದ್ದು ಪ್ರೋಟೀನ್ ಅಂಶ ಕೂಡ ಡೈರಿ ಉತ್ಪನ್ನವಾದ ಹಾಲಿನಲ್ಲಿ ಸಾಕಷ್ಟಿದೆ. ಇದೇ ಕಾರಣದಿಂದ ಕೇವಲ ಒಂದು ಲೋಟ ಹಾಲು ಕುಡಿದರೆ ತುಂಬಾ ಹೊತ್ತಿನವರೆಗೂ ಹೊಟ್ಟೆ ಹಸಿವು ಆಗುವುದಿಲ್ಲ. ಅದೂ ಅಲ್ಲದೆ ಸಂಜೆಯ ಸಮಯದಲ್ಲಿ ಹಾಲನ್ನು ಒಂದು ಅತ್ಯುತ್ತಮ ಸ್ನ್ಯಾಕ್ ಎಂದು ಹೇಳಬಹುದು. ಉತ್ತಮ ಗುಣಮಟ್ಟದ ಅಷ್ಟೇ ಪರಿಣಾಮಕಾರಿಯಾದ ಗುಣಮಟ್ಟದ ಪ್ರೋಟಿನ್ ಅಂಶ ನಿಮಗೆ ಲಭ್ಯವಾಗಬೇಕಾದರೆ ಪ್ರತಿ ದಿನ ಒಂದೊಂದು ಲೋಟ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಚಿಕನ್:
ಮಧುಮೇಹ ನಿವಾರಣೆಗೆ, ಹೃದಯ ರಕ್ತನಾಳ ಸಮಸ್ಯೆಯ ನಿವಾರಣೆಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳಾದ ಎಲ್ ಡಿ ಎಲ್ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರವಾದ ಮೆದುಳಿನ ಬೆಳವಣಿಗೆಯನ್ನು ವೃದ್ಧಿಸಲು ಚಿಕನ್ ಬೇಕೇ ಬೇಕು. ಹಾಗಾಗಿ ಮಾಂಸಹಾರಿಗಳು ತಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾದ ಚಿಕನ್ ಸೇವನೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.
ಡೇಟ್ಸ್:
ಇದು ನೈಸರ್ಗಿಕ ಸಕ್ಕರೆ ಭರಿತ ಹಣ್ಣುಗಳು. ಮಧ್ಯ ಪ್ರಾಂತ್ಯದ ದೇಶಗಳಲ್ಲಿ ಶತಮಾನಗಳಿಂದಲೂ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ವಿವಿಧ ಪದಾರ್ಥಗಳಲ್ಲಿ ಹೇರಳವಾಗಿಯೇ ಬಳಸಲಾಗುತ್ತದೆ. ಮಿಲ್ಕ್ ಶೇಖ್ಗಳಲ್ಲಿ ಹಾಗೂ ಬೇಯಿಸಿದ ಆಹಾರ ಪದಾರ್ಥಗಳಿಗೆ ಸಿಹಿ ಹಾಕುವ ಬದಲು ಇವುಗಳನ್ನು ಬಲಸುವುದುಂಟು. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಮಾಹಿತಿ ಪ್ರಕಾರ, 100 ಗ್ರಾಂ ಡೇಟ್ಸ್ನಲ್ಲಿ 2.45 ಗ್ರಾಂ ಪ್ರೋಟೀನ್ ಮತ್ತು 8 ಗ್ರಾಂ ನಾರಿನಾಂಶ ಇರುತ್ತದೆ.
ಬೇಳೆ ಕಾಳುಗಳು:
ನಾವು ಸೇವಿಸುವ ಯಾವುದೇ ಬಗೆಯ ಬೇಳೆಗಳಲ್ಲಿ ಕೇವಲ ಪ್ರೋಟಿನ್ ಅಂಶ ಮಾತ್ರ ಹೆಚ್ಚಾಗಿರದೆ, ಯಥೇಚ್ಛವಾದ ಖನಿಜಾಂಶಗಳು ಜೊತೆಗೆ ಇನ್ನಿತರ ಪೌಷ್ಟಿಕ ಸತ್ವಗಳಾದ ನಾರಿನ ಅಂಶ, ಕಬ್ಬಿಣ, ಮ್ಯಾಂಗನೀಸ್, ಪೊಟಾಷಿಯಂ, ಪಾಸ್ಪರಸ್ ಮತ್ತು ವಿಟಮಿನ್ ‘ ಬಿ ‘ ಅಂಶ ಹೆಚ್ಚಾಗಿರುತ್ತದೆ. ಬೇಳೆಗಳಲ್ಲಿ ಕಂಡು ಬರುವ ಪ್ರೊಟೀನ್ ಅಂಶ ಆರೋಗ್ಯಕರ ಹೃದಯವನ್ನು, ಉತ್ತಮ ಜೀರ್ಣ ವ್ಯವಸ್ಥೆಯನ್ನು ಮನುಷ್ಯನಿಗೆ ನೀಡಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ. ಹಾಗಾಗಿ ತೊಗರಿ ಬೇಳೆ, ಅವರೇ ಬೇಳೆ, ಹೆಸರು ಬೇಳೆ, ಹುರಳಿ ಬೇಳೆ, ಉದ್ದಿನ ಬೇಳೆ ಎಲ್ಲವೂ ಆರೋಗ್ಯಕರವೇ ಆಗಿವೆ.
ಪ್ರೋಟಿನ್ ಕೊರತೆ ಎಂದು ಹೇಗೆ ತಿಳಿಯುತ್ತದೆ?
ಸಾಮಾನ್ಯವಾಗಿ ಒಂದು ದಿನಕ್ಕೆ ಎಷ್ಟು ಬಾರಿ ಆಹಾರ ಸೇವನೆ ಮಾಡುತ್ತೇವೆ? ಜಾಸ್ತಿ ಎಂದರೆ ಮೂರು ಬಾರಿ. ಆದರೆ ಯಾವಾಗ ಪ್ರೋಟೀನ್ ಅಂಶದ ಕೊರತೆ ಉಂಟಾಗುತ್ತದೆ ? ಆ ಸಂದರ್ಭದಲ್ಲಿ ನಮಗೆ ಅತಿಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶ ಮತ್ತು ಕಡಿಮೆ ಪ್ರೊಟೀನ್ ಅಂಶ ದೇಹ ಸೇರುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಆಹಾರಸೇವನೆಯ ಮಧ್ಯ ಮಧ್ಯೆ ಬೇರೆ ಬೇರೆ ಪದಾರ್ಥಗಳನ್ನು ತಿನ್ನಬೇಕು ಎನ್ನುವ ಬಯಕೆ ಉಂಟಾಗುತ್ತದೆ ಮತ್ತು ಇದನ್ನು ಪ್ರೋಟೀನ್ ಅಂಶದ ಕೊರತೆಯ ಒಂದು ಚಿಹ್ನೆ ಎಂದು ಕರೆಯಬಹುದು.
ಗಾಯ ಬೇಗ ವಾಸಿ ಆಗುವುದಿಲ್ಲ:
ಯಾವುದಾದರೂ ಸಂದರ್ಭದಲ್ಲಿ ಒಂದು ವೇಳೆ ನಿಮಗೆ ಚರ್ಮದ ಮೇಲೆ ಗಾಯ ಉಂಟಾದರೆ, ನಿಮ್ಮ ದೇಹದಲ್ಲಿ ಪ್ರೋಟೀನ್ ಅಂಶ ಒಂದು ವೇಳೆ ಹೆಚ್ಚಿದ ಪಕ್ಷದಲ್ಲಿ ಅದು ಬಹಳ ಬೇಗನೆ ಗುಣ ಆಗುತ್ತದೆ. ಅದೇ ಪ್ರೋಟೀನ್ ಅಂಶ ಕೊರತೆ ಉಂಟಾದರೆ, ಖಂಡಿತ ನಿಮ್ಮ ಗಾಯ ಅಷ್ಟು ಬೇಗನೆ ವಾಸಿ ಆಗುವುದಿಲ್ಲ. ಇದನ್ನು ನೀವು ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಇಲ್ಲ ಎಂಬುದಾಗಿ ಅರ್ಥಮಾಡಿಕೊಳ್ಳಬಹುದು.
ಚರ್ಮದ ಸಿಪ್ಪೆ ಸುಲಿಯುವುದು, ತಲೆ ಕೂದಲು ಉದುರುವುದು:
ಗೊತ್ತಿರಬಹುದು, ನಮ್ಮ ಚರ್ಮದ ಆರೋಗ್ಯವನ್ನು ಮತ್ತು ನಮ್ಮ ತಲೆಕೂದಲಿನ ಸಮೃದ್ಧತೆಯನ್ನು ಕಾಪಾಡಲು ನಮ್ಮ ದೇಹದಲ್ಲಿ ಮೆಲನಿನ್ ಮತ್ತು ಕ್ಯಾರೋಟಿನ್ ಎಂಬ ಎರಡು ಅಂಶಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು ಎಂದು. ಆದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ನಮಗೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಸಿಗುತ್ತಿಲ್ಲ ಎಂದಾದರೆ, ನಮ್ಮ ಚರ್ಮದ ಆರೋಗ್ಯ ಹದಗೆಡುತ್ತದೆ ಮತ್ತು ತಲೆ ಕೂದಲು ನಿಧಾನವಾಗಿ ಉದುರಲು ಪ್ರಾರಂಭವಾಗುತ್ತದೆ. ಇದು ಸಹ ನಮ್ಮ ದೇಹದಲ್ಲಿ ಪ್ರೋಟೀನ್ ಅಂಶದ ಕೊರತೆ ಎಂದು ಹೇಳುವ ಒಂದು ಲಕ್ಷಣ.
ಮೈಕೈ ನೋವು ಮತ್ತು ಕೀಲು ನೋವು:
ನಾವು ಮೊದಲೇ ಹೇಳಿದಂತೆ ನಮ್ಮ ಮಾಂಸಖಂಡಗಳ ಬಲವರ್ಧನೆಯಲ್ಲಿ ನಾವು ಸೇವನೆ ಮಾಡುವ ಪ್ರೋಟಿನ್ ಅಂಶ ಸಹಾಯಮಾಡುತ್ತದೆ. ಆದರೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಸಿಗುತ್ತಿಲ್ಲ ಎಂದಾದರೆ ನಾವು ನೋಡಲು ಸಾಕಷ್ಟು ದುರ್ಬಲರಾಗಿ ಕಾಣುತ್ತೇವೆ ಮತ್ತು ನಮ್ಮ ದೇಹದಲ್ಲಿ ಮಾಂಸಖಂಡಗಳ ಬೆಳವಣಿಗೆ ಇರುವುದಿಲ್ಲ. ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಹೆಚ್ಚಾಗಿ ಸೇವನೆ ಮಾಡುವ ಬದಲು ಪ್ರೋಟೀನ್ ಅಂಶ ಹೆಚ್ಚಾಗಿರುವ ಕೋಳಿಮೊಟ್ಟೆ, ಹಾಲು, ಮೊಸರು, ಮೀನು ಮತ್ತು ಚಿಕನ್ ಇತ್ಯಾದಿಗಳನ್ನು ಸೇವನೆ ಮಾಡಲು ಮುಂದಾಗಬೇಕು.
ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಉಂಟಾಗಬಹುದು:
ನಮ್ಮ ಆಹಾರದಲ್ಲಿ ಕಂಡು ಬರುವ ಪ್ರೊಟೀನ್ ಅಂಶ ಪರೋಕ್ಷವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಯಾವಾಗ ನಮ್ಮ ದೇಹದಲ್ಲಿ ಪ್ರೋಟೀನ್ ಅಂಶದ ಕೊರತೆ ಕಾಣುತ್ತದೆ ಆಗ ಖಂಡಿತವಾಗಿ ರೋಗ ನಿರೋಧಕ ಶಕ್ತಿಯ ನಷ್ಟ ಉಂಟಾಗುತ್ತದೆ. ಇದು ಹಲವು ಬಗೆಯ ಆರೋಗ್ಯದ ಸೋಂಕುಗಳಿಗೆ ಕಾರಣವಾಗುತ್ತದೆ ಜೊತೆಗೆ ಆರೋಗ್ಯ ಕೂಡ ಬಹಳ ಬೇಗನೆ ಹದಗೆಡುತ್ತದೆ.
ಧನ್ಯವಾದಗಳು
GIPHY App Key not set. Please check settings