ಕುರುಕ್ಷೇತ್ರ ಯುದ್ಧ ಶ್ರೀಕೃಷ್ಣನ ಸಾರಥ್ಯದಲ್ಲಿ ನಡೆಯುತ್ತದೆ. ಕೌರವರು, ಭೀಷ್ಮ ಪಿತಾಮಹ, ಗುರು ದ್ರೋಣ, ಕರ್ಣ, ಅಭಿಮನ್ಯು, ಉಪ ಪಾಂಡವರು ಎಲ್ಲರೂ ಮರಣ ಹೊಂದುತ್ತಾರೆ. ಯುದಿಷ್ಠಿರ ಪಟ್ಟಕ್ಕೆ ಏರುತ್ತಾನೆ, ಇದಾದ ಹದಿನೈದು ವರ್ಷಗಳ ನಂತರ ವಾನಪ್ರಸ್ಥ ಸ್ವೀಕರಿಸಿ ಅರಣ್ಯವಾಸಕ್ಕೆ ಹೋದ ಗಾಂಧಾರಿ ಹಾಗೂ ದೃತರಾಷ್ಟ್ರ ಮತ್ತು ಕುಂತಿ ಮೂವರು ಅಗ್ನಿಯಲ್ಲಿ ಮುಕ್ತಿ ಪಡೆಯುತ್ತಾರೆ. ಆದರೆ ಕುರುಕ್ಷೇತ್ರದ ನಂತರ ಯುದಿಷ್ಠಿರ ಪಟ್ಟಕ್ಕೆ ಬಂದ ಮೂವತ್ತಾರು ವರ್ಷಗಳ ನಂತರ ಆಗಿದ್ದೆನು? ಮತ್ತು ಕರ್ಣನ ಮಗ ವೃಷಕೇತು ಪಟ್ಟಕ್ಕೆರಲು ನಿರಾಕರಿಸಿದ್ದು ಏತಕ್ಕೆ? ಕೃಷ್ಣನ ಮರಿ ಮೊಮ್ಮಗ ವ್ರಜ ಸಿಂಹಾಸನವನ್ನು ಅಲಂಕರಿಸಿದ್ದು ಏತಕ್ಕೆ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಏನಿದೆ?
ಯುದಿಷ್ಠಿರ ಅಧಿಕಾರ ವಹಿಸಿಕೊಂಡ ಮೂವತ್ತಾರು ವರ್ಷಗಳ ನಂತರ ಕಲಿಪುರುಷ ಧರ್ಮದ ಕಾಲ ಹೊಯಿತು ಇನ್ನೂ ಮೇಲೆ ನನ್ನ ಕಾಲ ಶುರುವಾಗಲಿದೆ ಎನ್ನುತ್ತಾನೆ. ಆದರೆ ಕಲಿ ಪುರುಷನ ಮಾತನ್ನು ಧರ್ಮಜ ನಂಬುವುದಿಲ್ಲ. ತಲೆ ಎತ್ತಿದ್ದ ಅಧರ್ಮದ ಕೆಲಸ ನಿಲ್ಲಿಸಿ ಮತ್ತೆ ಧರ್ಮ ಸ್ಥಾಪನೆ ಮಾಡುವ ಭರವಸೆಯಲ್ಲಿದ್ದ ಧರ್ಮಜ. ಅದರ ನಂತರ ನಡೆದ ಕೆಲವು ಘಟನೆಗಳು ಕಲಿಪುರುಷನ ಮಾತನ್ನು ನಂಬುವಂತೆ ಮಾಡಿತ್ತು. ಸಹೋದರ ಭೀಮನ ಜೊತೆ ಕಲಿಪುರುಷ ಹೇಳಿದ ಮಾತುಗಳನ್ನು ಹಂಚಿಕೊಂಡು, ರಾಜ್ಯದಲ್ಲಿ ಸಂಚರಿಸಿ ವಿಚಾರಗಳನ್ನು ತಿಳಿಸುವಂತೆ ಹೇಳಿದ್ದ. ಧರ್ಮಜ ಇಷ್ಟು ಹೇಳಿದ ಮರುದಿನದಿಂದಲೆ ಕೆಟ್ಟ ಸೂಚನೆಗಳು ಕಂಡುಬಂದವು. ಅರಮನೆಯ ಅಗ್ನಿಹೋತ್ರದ ಬೆಂಕಿ ಇದ್ದಕ್ಕಿದ್ದಂತೆ ಆರಿಹೋಗಿತ್ತು. ಪ್ರತಿನಿತ್ಯ ಕುಲಗುರು ಧೌಮ್ಯರು ಮಾಡುತ್ತಿದ್ದ ಪೂಜೆಗೆ ಅಗ್ನಿದೇವ ಬರಲಿಲ್ಲ.
ಅರಮನೆಯ ಮೇಲ್ಚಾವಣಿಯಲ್ಲಿ ಕಟ್ಟಿದ್ದ ದೀಪಗಳೂ ಕಳಚಿ ಬಿದ್ದವು. ಹಗಲಿನಲ್ಲೆ ಉದ್ಯಾನವನದಲ್ಲಿ ಗೂಬೆಗಳು ಕಿರುಚುವುದು, ಸಂಜೆಯ ಹೊತ್ತಿನಲ್ಲಿ ಕರ್ಕಶವಾಗಿ ಕೋಗಿಲೆಗಳು ಕೂಗುವುದು, ಆಹಾರ ಬಿಟ್ಟು ಗೋ ಶಾಲೆಯ ಗೋವುಗಳು ಅಳುವುದು ಇದೆಲ್ಲವೂ ನಡೆಯಲು ಶುರುವಾಯಿತು. ಯುದಿಷ್ಠಿರ ಯೋಚನೆಗೆ ಬಿದ್ದ, ಧೌಮ್ಯರು ವಿಚಲಿತರಾಗಿದ್ದರು. ಉತ್ತರ ಸಿಗಲಿಲ್ಲ. ಆಗಲೆ ಪಾಂಡವರಿಗೆ ಶ್ರೀಕೃಷ್ಣನ ಸಾವಿನ ವರದಿ ಮುಟ್ಟಿತು.ಬೇರೆ ಯಾವ ಸಾಕ್ಷ್ಯಗಳು ಯುದಿಷ್ಠಿರನಿಗೆ ಬೇಕಿರಲಿಲ್ಲ ಕಲಿಪುರುಷನ ಮಾತು ಸತ್ಯವೆಂದು ಅರಿವಾಗತೊಡಗಿತ್ತು. ಇದ್ದ ಒಂದು ಭರವಸೆ ಕೃಷ್ಣನೆ ಇಲ್ಲದಾಗ ಏನು ಮಾಡಬೇಕೆಂದು ಯುದಿಷ್ಠಿರನಿಗೆ ಗೊತ್ತಾಗಲಿಲ್ಲ.
ಅನ್ಯಮನಸ್ಕನಾಗಿ ಸುಮ್ಮನೆ ಕೂತುಬಿಡುತ್ತಿದ್ದ ಅರ್ಜುನ. ಹಲವಾರು ವಿಷಯಗಳಲ್ಲಿ ಕುರುಕ್ಷೇತ್ರ ಯುದ್ಧದ ನಂತರ ಭೀಮ ಆಸಕ್ತಿ ಕಳೆದುಕೊಂಡಿದ್ದ. ನಕುಲ ಸಹದೇವ ಸಹ ಅವರವರ ಕೆಲಸದಲ್ಲಿ ಮುಳುಗಿದ್ದರು. ಕೃಷ್ಣನ ಅಗಲುವಿಕೆ ದುಃಖ ತಂದರೂ ಪಾಂಚಾಲಿ ಮಹಾರಾಣಿಯಾದ ಕರ್ತವ್ಯ ನಿಭಾಯಿಸುತ್ತಿದ್ದಳು. ಇದನ್ನೆಲ್ಲ ನೋಡಿದ ಯುದಿಷ್ಠಿರ ಯೋಚಿಸಿದ್ದ. ಯುದ್ಧದ ನಂತರ ಪಟ್ಟ ಬೇಡ ಎಂದ ನನಗೆ ರಾಜ ಪಟ್ಟದ ವ್ಯಾಮೋಹ ಬಂದಿತೆ. ಸಮಾಧಿಯ ಮೇಲೆ ಪಟ್ಟಕ್ಕೆರುವ ಆಸೆ ಇರಲಿಲ್ಲ. ಆದರೆ ಕೃಷ್ಣ ಹಾಗೂ ವೇದವ್ಯಾಸರು ಒತ್ತಾಯವಾಗಿ ದುರ್ಯೋಧನನ್ನು ಸಂಹರಿಸಿರುವುದು ಒಂದೆ ಅಲ್ಲದೆ ಆಡಳಿತದ ಅಧಿಕಾರ ಪಡೆದಿದ್ದಿಯಾ. ಇವತ್ತು ಸಾಮ್ರಾಜ್ಯದ ವ್ಯವಸ್ಥೆಯನ್ನು ತಲೆಕೆಳಗು ಮಾಡಿದ್ದಿಯ. ಈಗ ಅದನ್ನು ಸರಿ ಪಡಿಸುವ ಹೊಣೆಯು ನಿನ್ನದೆ, ವಾರಸುದಾರರಿಲ್ಲದ ಸಾಮ್ರಾಜ್ಯವನ್ನು ಕಾಪಾಡಬೇಕಾದವನು ನೀನೆ, ಅಧರ್ಮದ ವಿರುದ್ಧ ಗೆಲ್ಲುವುದೊಂದೆ ಅಲ್ಲ ಧರ್ಮದ ಸ್ಥಾಪನೆ ಮಾಡಬೇಕು ಎಂದು ಹೇಳಿ ಪಟ್ಟಕಟ್ಟಿದರು. ಧರ್ಮ ನಿರ್ವಹಿಸು, ಪಲಾಯನವಾದಿ ಆಗಬಾರದು ಎಂದಿದ್ದರು ವೇದವ್ಯಾಸರು.
ಇದನ್ನೆಲ್ಲ ಯೋಚಿಸಿದ ಯುದಿಷ್ಠಿರ ತನ್ನ ಎಲ್ಲಾ ಸಹೋದರರೊಂದಿಗೆ ಕಲಿಪುರುಷನ ಮಾತನ್ನು ಹಂಚಿಕೊಂಡಿದ್ದ. ರಾಜ್ಯಭಾರ ಸಾಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದ. ನಮಗಾಗಿ ಎಲ್ಲಾ ಮಾಡಿಕೊಟ್ಟ ಕೃಷ್ಣನಿಗೆ ನಮ್ಮಿಂದ ಏನು ಸಿಗಲಿಲ್ಲ. ಹಾಗಾಗಿ ಅವನು ಬಿಟ್ಟು ಹೋದ ಜನರಿಗೆ ಮಾರ್ಗ ತೋರಿಸಬೇಕು ಅಂದಿದ್ದ. ಯದುಕುಲ ನಾಶವಾದ ವಿಷಯ ತಿಳಿದಿತ್ತು. ಯದು ವಂಶದಲ್ಲಿ ಉಳಿದವ ವಜ್ರ ಒಬ್ಬನೆ. ವಜ್ರ ಪ್ರದ್ಯುಮ್ನನ ಮೊಮ್ಮಗ, ಅನಿರುದ್ಧ ಹಾಗೂ ಉಷೆಯರ ಮಗ. ಉಷೆ ಬಾಣಾಸುರನ ಮಗಳು, ಬಾಣಾಸುರ ಬಲಿಯ ಮಗ.
ಅನಿರುದ್ಧ ಹಾಗೂ ಉಷೆಯರ ಪ್ರೀತಿಯ ವಿಷಯ ತಿಳಿದು ಬಾಣ ಅನಿರುದ್ಧನನ್ನು ಬಂಧಿಸುತ್ತಾನೆ. ಇದನ್ನು ತಿಳಿದ ಯಾದವರು ಬಾಣನನ್ನು ಸೋಲಿಸಿ ಅನಿರುದ್ಧ ಹಾಗೂ ಉಷೆಗೆ ಮದುವೆ ಮಾಡಿಸುತ್ತಾರೆ. ನಂತರ ಬಾಣನು ಒಪ್ಪಿಕೊಳ್ಳುತ್ತಾನೆ. ಬಾಣ ಕೇರಳವನ್ನು ಆಳುತ್ತಿದ್ದ ಎಂದು ಕೆಲವು ಉಲ್ಲೇಖ ಹೇಳಿದರೆ, ಕೆಲವು ಉಲ್ಲೇಖಗಳು ಆಸ್ಸಾಂನ ಶೋನಿತಪುರ ಎಂದು ಹೇಳಲಾಗುತ್ತದೆ. ಯಾದವರ ಅಂತ್ಯದ ವೇಳೆಗೆ ವಜ್ರ ಶೋನಿತಪುರದಲ್ಲಿ ಇದ್ದ. ಪಾಂಡವರು ಅವನ್ನು ಕರೆಯಿಸಿಕೊಂಡರು.
ಕೃಷ್ಣನ ಉತ್ತರಾಧಿಕಾರಿಗೆ ಇಂದ್ರಪ್ರಸ್ಥದ ರಾಜನನ್ನಾಗಿ ಮಾಡಲಾಯಿತು. ಮಥುರೆಯನ್ನು ಮತ್ತೆ ಸರಿಪಡಿಸಲಾಯಿತು. ಪಾಂಡವರು ಆಡಳಿತವನ್ನು ವಜ್ರನಿಗೆ ವಹಿಸಿದರು. ಇನ್ನೂ ಹಸ್ತಿನಾಪುರವನ್ನು ಅಭಿಮನ್ಯುವಿನ ಮಗನಿಗೆ ಕೊಡುವ ತಿರ್ಮಾನ ಮಾಡಿದ್ದ. ಜೇಷ್ಠ ಕರ್ಣನ ಮಗನನ್ನು ಉತ್ತರಾಧಿಕಾರಿ ಮಾಡಲು ನೋಡಿದಾ, ವೃಷಕೇತು ಯುವರಾಜ ಪಟ್ಟವನ್ನು ನಿರಾಕರಿಸಿದ್ದ. ಅಂಗ ರಾಜ್ಯವನ್ನು ಮಾತ್ರ ಪಡೆದಿದ್ದ. ಆದ್ದರಿಂದ ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ಆಚಾರ್ಯ ಕೃಪರಿಂದ ವಿದ್ಯೆ ಕಲಿತ ಹಾಗೂ ಸಾಮ್ರಾಟನಾದ. ದೃತರಾಷ್ಟ್ರನ ಮಗ ಯುಯುತ್ಸು ಸಾಮ್ರಾಜ್ಯದ ಮಹಾಮಂತ್ರಿ ಮತ್ತು ಸಾಮ್ರಾಜ್ಯದ ಉಸ್ತುವಾರಿ ವಹಿಸಿಕೊಂಡ. ಎಲ್ಲವನ್ನು ಮುಗಿಸಿದ ಪಾಂಡವರಿಗೆ ಹಸ್ತಿನಾಪುರವನ್ನು ತೊರೆಯುವ ಮನಸ್ಸಾಯಿತು. ರೀತಿ, ನೀತಿ, ಜನರ ಯೋಚನೆ ಎಲ್ಲವೂ ಬದಲಾಗಿತ್ತು. ಹಸ್ತಿನಾಪುರದಲ್ಲಿಯೆ ಉಳಿಯಲು ಯಾವ ಆಸಕ್ತಿ ಇರಲಿಲ್ಲ. ಅರ್ಜುನನಂತೂ ಯಾವಾಗ ಹೋಗುವೆನೋ ಎಂದು ಕಾಯುತ್ತಿದ್ದ. ಕೃಷ್ಣ ಕನಸಿನಲ್ಲಿ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದ. ನಾನು ಬಂದ ಕೆಲಸ ಮುಗಿಯಿತು ನಾನು ಹೊರಟೆ ಪಾರ್ಥ. ನೀನಿಲ್ಲದೆ ನಾನೂ ಅಲ್ಲಿಯೂ ಒಂಟಿತನದ ಅನುಭವ ಪಡುತ್ತಿದ್ದೆನೆ ಬೇಗ ಬಾ ಅಂದಂತೆ ಆಗಿತ್ತು. ಇವುಗಳೆ ನೆನಪಾಗುತ್ತಿತ್ತು. ಹಸ್ತಿನಾಪುರದ ಬಿಟ್ಟು ಹೊರಡಲು ಪಾಂಡವರು ಸಿದ್ದರಾಗಿದ್ದರು.
ಜಾತಸ್ಯ ಮರಣಂ ದೃವಂ ಎಂಬಂತೆ ತಮ್ಮ ಬಂದ ಕಾರ್ಯ ಮುಗಿಸಿ ಪಾಂಡವರು ಹೊರಡಲು ಅನುವಾಗಿದ್ದರು. ಕುಂತಿ ಹಾಗೂ ಬಂಧುಗಳು, ಕೃಷ್ಣ ಎಲ್ಲರೂ ಮೊದಲೆ ಪ್ರಸ್ಥಾನಗೈದಿದ್ದರು. ಈಗ ತಮ್ಮ ಸರದಿಯೆಂದು ಭಾವಿಸಿ, ಅಧಿಕಾರ ವರ್ಗಾಯಿಸಿ ಮುಕ್ತಿಯ ಹಾದಿಯಲ್ಲಿ ಪಾಂಡವರು ನಡೆದಿದ್ದರು.
ಧನ್ಯವಾದಗಳು.
CRぱちんこ 新鬼武者
オンラインカジノ
戦略的な要素もあり、運だけでなく技術が試されるのが面白いです。
CR七つの大罪
https://www.jewangcasino.com/article/144.html
新しい台が出るたびにワクワクします。流行を追うのが楽しいです。
CR 花の慶次斬
[url=https://sites.google.com/view/cr-surprise-sengoku-musou]k8 カジノ パチンコ CR びっくり戦国無双 Light Editionパチスロ スロット 機械割 解析 天井 初打ち 打ち方 スペック ゾーン 設定判別 ヤメ時・演出・プレミアムまとめ
[/url]
パチスロ龍が如く OF THE END
ケロロ軍曹
吉宗
P とある魔術の禁書目録
https://www.pachinko777.org/article/463.html
シンプルなデザインとルールが魅力。初心者でも安心して楽しめます。
真モグモグ風林火山
https://www.k8casino.casa/archives/post-905.html
ボーナスゲームの演出が豪華で、楽しみが倍増します。特に大当たり時は圧巻。
Pフィーバーダンベル何キロ持てる
https://injapan.today/news/id5612.html
定期的に新しいイベントがあり、飽きずに楽しめます。新しい体験が待っています。