in

ವಿಷ್ಣುವಿನ ದಶಾವತಾರ

ವಿಷ್ಣುವಿನ ದಶಾವತಾರ
ವಿಷ್ಣುವಿನ ದಶಾವತಾರ

ದಶಾವತಾರ ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ. ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳು ವಿಷ್ಣುವಿಗೇ ಮೀಸಲಾದವಲ್ಲ. ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದು ವಾಯು ಪುರಾಣ ಹೇಳುತ್ತದೆ.

ವಿಷ್ಣುವಿನ ದಶಾವತಾರ
ವಿಷ್ಣುವಿನ ದಶಾವತಾರ

ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂ ಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದ ಕುಮಾರಿಲ ಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ.

ವಿಷ್ಣುವಿನ ಹತ್ತು ಅವತಾರಗಳು
ಮತ್ಸ್ಯ
ಕೂರ್ಮಾವತಾರ
ವರಾಹ
ನರಸಿಂಹ
ವಾಮನ
ಪರಶುರಾಮ
ರಾಮ – ದಶರಥ ನ ಮಗ ರಾಮ
ಕೃಷ್ಣ – ವಸುದೇವನ ಮಗ ಕೃಷ್ಣ
ಬುದ್ಧ –
ಕಲ್ಕಿ – ಕಲಿಯುಗದ ಅಂತ್ಯದಲ್ಲಿ ಅವತರಿಸುವವ

೧. ಮತ್ಸ್ಯ

ಮತ್ಸ್ಯ, ಎಂದರೆ ಮೀನು. ತರ್ಪಣ (ನೀರು ಅರ್ಪಣೆ) ಮಾಡುವಾಗ ರಾಜ ವೈವಸ್ವತ (ಮನು) ತನ್ನ ಅಂಗೈಯಲ್ಲಿ ಒಂದು ಮೀನು ಕಾಣುತ್ತಾನೆ. ಮನು ಮೀನನ್ನು ತೆಗೆದುಕೊಂಡು ಅರಮನೆಗೆ ಹೋಗುತ್ತಾನೆ.ಅದನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿದಾಗ ಅದು ಬೆಳೆಯುತ್ತಲೇ ಇರುತ್ತದೆ, ಅಂತಿಮವಾಗಿ ಅದನ್ನು ವಿಷ್ಣು ಎಂದು ಅರಿತುಕೊಂಡು ಸಾಗರಕ್ಕೆ ಬಿಡುತ್ತಾನೆ. ವಿಷ್ಣು ಮನು ಮತ್ತು ಮುಂಬರುವ ಪ್ರಪಂಚದ ವಿನಾಶದ ಬಗ್ಗೆ ಬೆಂಕಿ ಮತ್ತು ಪ್ರವಾಹದ ಮೂಲಕ ತಿಳಿಸುತ್ತಾನೆ ಮತ್ತು ಮನುವನ್ನು “ವಿಶ್ವದ ಎಲ್ಲಾ ಜೀವಿಗಳನ್ನು” ಸಂಗ್ರಹಿಸಿ ದೇವರುಗಳು ನಿರ್ಮಿಸಿದ ದೋಣಿಯಲ್ಲಿ ಸುರಕ್ಷಿತವಾಗಿಡಲು ನಿರ್ದೇಶಿಸುತ್ತಾನೆ. ಪ್ರವಾಹ (ಪ್ರಳಯ) ಬಂದಾಗ, ವಿಷ್ಣು ಕೊಂಬಿನೊಂದಿಗೆ ದೊಡ್ಡ ಮೀನಿನಂತೆ ಕಾಣಿಸಿಕೊಳ್ಳುತ್ತಾನೆ, ಅದಕ್ಕೆ ಮನು ದೋಣಿಯನ್ನು ಕಟ್ಟುತ್ತಾನೆ. ಅದು ಅವರನ್ನು ಸುರಕ್ಷತೆಗೆ ಕರೆದೊಯ್ಯುತ್ತದೆ.

೨.ಕೂರ್ಮ (ಆಮೆ)
ಹಿಂದೂಧರ್ಮದಲ್ಲಿ, ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂ (శ్రీకూర్మం‍)ನಲ್ಲಿ ನೆಲೆಗೊಂಡಿವೆ.

೩.ವರಾಹ ಅವತಾರ
ವರಾಹಾವತಾರ ಹಂದಿಯ ರೂಪದಲ್ಲಿ ಹಿಂದೂ ದೇವತೆ ವಿಷ್ಣುವಿನ ಅವತಾರ, ಮತ್ತು ಇದು ಕೂರ್ಮಾವತಾರದ ನಂತರ ಹಾಗು ನರಸಿಂಹಾವತಾರದ ಮೊದಲು ಬರುತ್ತದೆ. ವರಾಹಾವತಾರವನ್ನು ದಶಾವತಾರಗಳಲ್ಲಿ ಮೂರನೆಯದಾಗಿ ಪಟ್ಟಿಮಾಡಲಾಗುತ್ತದೆ. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು (ಭೂದೇವಿಯಾಗಿ ಮೂರ್ತೀಕರಿಸಲಾಗಿದೆ) ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡನು.

೪.ನರಸಿಂಹ ಅವತಾರ
ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ಒಂದು. ದಶಾವತಾರಗಳಲ್ಲಿ ನಾಲ್ಕನೆಯದು. ಅರ್ಧ ದೇಹ ಮನುಷ್ಯನಂತೆ ಮತ್ತು ಇನ್ನರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಹಿರಣ್ಯ ಕಶಿಪು ಎಂಬ ರಾಕ್ಷಸನನ್ನು ಕೊಲ್ಲಲು ಮಹಾವಿಷ್ಣು ಈ ರೂಪದಿಂದ ಭೂಮಿಯಲ್ಲಿ ಅವತರಿಸಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ.

೫.ವಾಮನ ಅವತಾರ
ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು, ಮತ್ತು ಎರಡನೇ ಯುಗ ಅಥವಾ ತ್ರೇತಾಯುಗದ ಮೊದಲ ಅವತಾರವೆಂದು ವಿವರಿಸಲಾಗಿದೆ. ಅವನು ಮಾನವರೂಪಿ ಲಕ್ಷಣಗಳಿಲ್ಲದೆ ಕಾಣಿಸಿಕೊಂಡ ಮೊದಲ ಅವತಾರ, ಆದಾಗ್ಯೂ ಅವನು ಕುಬ್ಜ ಬ್ರಾಹ್ಮಣನಾಗಿ ಕಾಣಿಸಿಕೊಳ್ಳುತ್ತಾನೆ. ಇವನು ಉಪೇಂದ್ರ, ಮತ್ತು ತ್ರಿವಿಕ್ರಮನೆಂದೂ ಪರಿಚಿತನಾಗಿದ್ದಾನೆ.

೬.ಪರಶುರಾಮ
ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಇವರು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ಇವರು ತಮ್ಮ ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಸ್ಸು ಮಾಡಿ ವಿಶ್ನುವಿನಿಂದ ಪರುಶು(ಕೊಡಲಿ) ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು.

ವಿಷ್ಣುವಿನ ದಶಾವತಾರ
ವಿಷ್ಣುವಿನ ದಶಾವತಾರ

೭.ರಾಮ ಅವತಾರ
ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ.

೮.ಕೃಷ್ಣನ ಅವತಾರ
ಶ್ರೀ ಕೃಷ್ಣ ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬನಾಗಿದ್ದಾನೆ.

೯.ಗೌತಮ ಬುದ್ಧ
ಗೌತಮ ಬುದ್ಧ (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೩] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ.

೧೦.ಕಲ್ಕಿ ಅವತಾರ
ಕಲ್ಕಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರ. ಕಲಿಯುಗದ ಕೊನೆಯಲ್ಲಿ ಕಲ್ಕಿಯ ಪ್ರವೇಶ ಆಗಲಿರುವುದು. ಕಲಿಮಹಾಪುರುಷನ ಪ್ರಭಾವದಿಂದ ಜನರಲ್ಲಿ ಧರ್ಮ, ದಯೆ ಮೊದಲಾದ ಗುಣಗಳು ಅಳಿದು ಅಧರ್ಮ ಅತಿ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಅಶ್ವಾರೂಢನಾಗಿ, ಖಡ್ಗ ಹಿಡಿದು ಹೊರಟು ಮ್ಲೇಚ್ಛ ಸಮೂಹವನ್ನು ಸಂಹರಿಸಿ, ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಶಾಂತಿಸೌಖ್ಯಗಳನ್ನು ನೆಲೆಗೊಳಿಸುತ್ತಾನೆಂದು ನಂಬಿಕೆ. ವೈದಿಕ ಸಾಹಿತ್ಯದಲ್ಲಿ ಕಲ್ಕಿಯು ಮಹಾವಿಷ್ಣುವಿನ ಹತ್ತನೆಯ ಮತ್ತು ಕೊನೆಯ ಅವತಾರ. ಅವನು ಈಗ ಇರುವ, ಅಸತ್ಯ, ಅಧರ್ಮ ಮತ್ತು ಅನ್ಯಾಯಗಳಿಂದ ಕೂಡಿದ ಕಲಿಯುಗವನ್ನು ಕೊನೆಗೊಳಿಸಿ ಸತ್ಯ, ಧರ್ಮ, ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುವನು. ಬೌದ್ಧಧರ್ಮದಲ್ಲಿ ಶಾಂಭಲಾ ರಾಜ್ಯದ ೨೫ ಜನ ಅರಸರು ಕಲ್ಕಿ ಎಂಬ ಬಿರುದನ್ನು ಹೊಂದಿರುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ

ಸಂಬಂಧಗಳು

ಬಂದು ಬಳಗ, ತಂದೆ ತಾಯಿ, ಅಣ್ಣ ತಮ್ಮ,ಅಕ್ಕ ತಂಗಿ ಇಂಥಹ ಸಂಬಂಧಗಳು ಎಲ್ಲಿಯವರೆಗೆ?