in

ಭಾರತದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ


ನರೇಂದ್ರ ದಾಮೋದರದಾಸ್ ಮೋದಿ ಇವರು ಭಾರತದ ಪ್ರಧಾನ ಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಭಾರತದ ೧೪ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು, ಗುಜರಾತ್ ನ ವಡೋದರ, ಹಾಗೂ ವಾರಣಾಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಪ್ರಸಕ್ತ ವಾರಣಾಸಿಯ ಸಂಸದರಾಗಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ

ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರದ ಮೋದಿ ಪರಿವಾರದಲ್ಲಿ ೪ ಮಕ್ಕಳ ಪೈಕಿ ಮೂರನೆಯವರಾಗಿ, ೧೭ ಸೆಪ್ಟೆಂಬರ್ ೧೯೫೦ ರಲ್ಲಿ ಮೋಧ್ ಗಂಛಿ ತೆಲಿ ಜಾತಿಯ ಅತಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ದಾಮೋದರ ದಾಸ್ ಮುಲಚಂದ್ ಮೋದಿ ಮತ್ತು ತಾಯಿ ಹೀರಾ ಬೆನ್. ವಾದ್ ನಗರ ರೈಲ್ವೆ ನಿಲ್ದಾಣದಲ್ಲಿ ಒಂದು ಚಹಾದ ಅಂಗಡಿಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು.ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. ೧೯೬೭ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

೧೩ ನೆಯ ವಯಸ್ಸಿನಲ್ಲೇ ಮೋದಿಯವರಿಗೆ ಜಶೋದಾ ಬೆನ್ ಚಿಮಣ್ ಲಾಲ್ ಜೊತೆ ಮದುವೆ ನಿಶ್ಚಿತಾರ್ಥವಾಯಿತು. ೧೮ನೇ ವರ್ಷದಲ್ಲಿ ಮದುವೆ ನೆರವೇರಿತು. ಬಾಲ ದಂಪತಿಗಳು ಜೊತೆಗಿದ್ದು, ನಂತರ ಪತ್ನಿಯನ್ನು ತೊರೆದರು. ಜಶೋದಾಬೆನ್ ತಮ್ಮ ಜೀವನವನ್ನೆಲ್ಲಾ ಶಿಕ್ಷಕಿಯಾಗಿ ಕಳೆದು ಈಗ ನಿವೃತ್ತರಾಗಿದ್ದಾರೆ.

ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು.
ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ಆರೆಸ್ಸೆಸ್‍ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು.

ರಾಷ್ಟ್ರಿಯ ಸ್ವಯಂ ಸೇವಕ ಸಂಘದಲ್ಲಿ ಸೇರಿ ಬಹಳ ಸಕ್ರಿಯವಾಗಿ ಕೆಲಸ ಮಾಡಿದರು. ಭಾರತೀಯ ಇತಿಹಾಸವನ್ನು ಅಭ್ಯಾಸಮಾಡಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಬಗ್ಗೆ ಅರಿತರು. ೧೯೭೫ ರಲ್ಲಿ ಇಂದಿರಾಗಾಂಧಿ ಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ವಿರೋಧಿಸಿ ತಮ್ಮದೇ ರೀತಿಯಲ್ಲಿ ಕಾಣಿಕೆಯನ್ನು ನೀಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ ಬಿ ವಿ ಪಿ) ನ ಮುಖಂಡನಾಗಿ ಸೇವೆ ಸಲ್ಲಿಸಿದರು

ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು.ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ಆರೆಸ್ಸೆಸ್‍ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು.
ಪ್ರಮುಖವಾಗಿ ೧೯೭೪ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ ೧೯ ತಿಂಗಳ (ಜೂನ್ ೧೯೭೫ ರಿಂದ ಜನವರಿ ೧೯೭೭) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು.

ರಷ್ಯಾ ಸರಕಾರವು ಪಿಎಂ ನರೇಂದ್ರ ಮೋದಿಯವರನ್ನು ‘ಆರ್ಡರ್ ಆಫ್ ಅಪಾಸಲ್ ಸೇಂಟ್ ಆಂಡ್ರ್ಯೂ ‘ ಪ್ರಶಸ್ತಿಯೊಂದಿಗೆ ಗೌರವಿಸಿದೆ. – ಎಪ್ರಿಲ್ ೧೨, ೨೦೧೯.
ಸಂಯುಕ್ತ ಅರಬ್ ಸಂಸ್ಥಾಪನೆಗಳು(ಯುಎಇ) ಪ್ರಧಾನಿ ನರೇಂದ್ರ ಮೋದಿಯವರಿಗೆ ಜಾಯೆದ್ ಪದಕ ನೀಡಿ ಗೌರವಿಸಿದೆ – ಎಪ್ರಿಲ್ ೪, ೨೦೧೯
ನರೇಂದ್ರ ಮೋದಿಯವರಿಗೆ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು – ಜನವರಿ ೧೪, ೨೦೧೯

ನರೇಂದ್ರ ಮೋದಿಯವರಿಗೆ “ಮೋಡಿನೋಮಿಕ್ಸ್” ಗಾಗಿ ಪ್ರತಿಷ್ಠಿತ ಸಿಯೋಲ್ ಬಹುಮಾನ ೨೦೧೮ನ್ನು ನೀಡಲಾಯಿತು – ಅಕ್ಟೋಬರ್ ೨೪, ೨೦೧೮
ಪ್ರಧಾನಿ ಮೋದಿಯವರಿಗೆ ವಿಶ್ವ ಸಂಸ್ಥೆಯ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ೨೦೧೮ನ್ನು ನೀಡಿ ಗೌರವಿಸಲಾಯಿತು – ಸೆಪ್ಟೆಂಬರ್ ೨೬, ೨೦೧೮

ಪ್ರಧಾನಿ ಮೋದಿಯವರಿಗೆ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಫೆಬ್ರವರಿ ೧೦, ೨೦೧೮
ಪ್ರಧಾನಿ ನರೇಂದ್ರ ಮೋದಿಯವರಿಗೆ ಅಫ್ಘಾನಿಸ್ತಾನದ ಅಮೀರ್ ಅಬ್ದುಲ್ಲಾ ಖಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಜೂನ್ ೪, ೨೦೧೬
ಮೋದಿಯವರಿಗೆ ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾಜಿಜ್ ಸಾಶ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಎಪ್ರಿಲ್ ೩, ೨೦೧೬

ಭಾರತದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಸಂಪೂರ್ಣ ಬಹುಮತದಿಂದ ಆಯ್ಕೆಯಾದ ಮೋದಿಯವರು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಜನಧನ ಯೋಜನೆ ಮುಖಾಂತರ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟು, ನೇರವಾಗಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಮುಖಾಂತರ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದರು. ನರೇಂದ್ರ ಮೋದಿಯವರ ತುಂಬಾ ಪ್ರಭಾವ ಬೀರಿದ ಯೋಜನೆಯೆಂದರೆ ಸ್ವಚ್ಛ ಭಾರತ ಅಭಿಯಾನ, ಸ್ವತಃ ತಾವೇ ಕಸ ಗುಡಿಸಿ ಜನರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಡಲು ಪ್ರೇರೆಪಿಸಿದರು.

೨೬ ಮೇ ೨೦೧೪ ರಂದು ಭಾರತದ ಪ್ರಧಾನಿಯಾಗಿ ಮೋದಿಯವರು ಪ್ರಮಾಣವಚನವನ್ನು ಸ್ವೀಕರಿಸಿದರು.ಮೋದಿಯವರು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಪ್ರಧಾನಿಯಾಗಿ ಅವರ ಮೊದಲ ವರ್ಷದಲ್ಲಿ ಹಿಂದಿನ ಆಡಳಿತಗಳಿಗೆ ಸಂಬಂಧಿಸಿದ ಅಧಿಕಾರವನ್ನು ಕೇಂದ್ರೀಕರಣಗೊಳಿಸಿದರು. ರಾಜ್ಯಸಭೆಯಲ್ಲಿ ಅಥವಾ ಮೇಲ್ಮನೆಯಲ್ಲಿ ಬಹುಮತವನ್ನು ಹೊಂದಿರದಿದ್ದರೂ, ಮೋದಿಯವರು ತಮ್ಮ ನೀತಿಗಳನ್ನು ಜಾರಿಗೆ ತರಲು ಹಲವು ಆದೇಶಗಳನ್ನು ಜಾರಿಗೊಳಿಸಿದರು. ಇದರಿಂದಾಗಿ ಅಧಿಕಾರವು ಇನ್ನಷ್ಟು ಕೇಂದ್ರೀಕರಣಗೊಂಡಿತು. ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವುದರ ಮೇಲೆ ತಮ್ಮಲ್ಲಿ ಇದ್ದ ನಿಯಂತ್ರಣವನ್ನು ಹೆಚ್ಚಿಸುವ ಸಲುವಾಗಿ ಮತ್ತು ನ್ಯಾಯಾಂಗದ ನಿಯಂತ್ರಣವನ್ನು ಕಡಿಮೆ ಮಾಡುವ ಸಲುವಾಗಿ ಸರಕಾರವು ಒಂದು ಮಸೂದೆಯನ್ನು ಜಾರಿಗೆ ತಂದಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

45 Comments

ಕಲಂಗಡಿ ಹಣ್ಣು ಇವತ್ತಿ ತಿನ್ನಿ ಜನ್ಮದಲ್ಲಿ ಈ ಸಮಸ್ಯೆಗಳು ಇರಲ್ಲ.

ಕಲಂಗಡಿ ಹಣ್ಣು ಇವತ್ತಿ ತಿನ್ನಿ ಜನ್ಮದಲ್ಲಿ ಈ ಸಮಸ್ಯೆಗಳು ಇರಲ್ಲ.

ವಿಷ್ಣುವಿನ ದಶಾವತಾರ

ವಿಷ್ಣುವಿನ ದಶಾವತಾರ