in

ರಾಯಚೂರು ನಗರದಲ್ಲಿದೆ ಪಂಚಮುಖಿ ಹನುಮ, ಹಾಗೆಯೆ ಆಂಜನೇಯನ ಕೆಲವು ಅವತಾರಗಳ ಬಗ್ಗೆ 

ಪಂಚಮುಖಿ ಹನುಮ
ಪಂಚಮುಖಿ ಹನುಮ

ಕ್ರಿ.ಪೂ 3ನೇ ಶತಮಾನದ ಹಿನ್ನಡವಳಿಯ ತಾಣಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯು ಹಲವಾರು ಪೌರಾಣಿಕ ಹಿನ್ನಲೆಯ ತಾಣಗಳನ್ನು ಕೂಡ ಹೊಂದಿದೆ.

ಪಂಚಮುಖಿ ಹನುಮಾನ ದೇವಾಲಯ :

ರಾಯಚೂರು ನಗರದಲ್ಲಿದೆ ಪಂಚಮುಖಿ ಹನುಮ, ಹಾಗೆಯೆ ಆಂಜನೇಯನ ಕೆಲವು ಅವತಾರಗಳ ಬಗ್ಗೆ 
ರಾಯಚೂರು ನಗರದ ಪಂಚಮುಖಿ ಹನುಮ ದೇವಾಲಯ

ಈ ದೇವಾಲಯವು ರಾಯಚೂರು ನಗರದಿಂದ ಮಂತ್ರಾಲಯ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಹಾದಿಯಲ್ಲಿ ಬರುವ ಗಾಣದಾಳ ಎಂಬ ಊರಿನಲ್ಲಿದೆ. ಗಾಣದಾಳವು ರಾಯಚೂರು ನಗರದಿಂದ ಸುಮಾರು 36 ಕಿಲೋ ಮೀಟರ್ ದೂರದಲ್ಲಿದೆ. ಈ ದೇವಾಲಯದ ಗುಹೆಯಲ್ಲಿ ಶ್ರೀ ರಾಘವೇಂದ್ರ ಸಾಮ್ವಿಯವರು ಸುಮಾರು 12 ವರ‍್ಶಗಳ ತಪಸ್ಸು ಮಾಡಿದ್ದಾರೆ ಎಂಬ ನಂಬಿಕೆಯಿದೆ. ಅನಂತರ ಹನುಮಂತನು ಪಂಚಮುಖಿ ಅವತಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಅವರಿಗೆ ದರ್ಶನ ನೀಡಿ, ಮಂಚಲ್ ಹಳ್ಳಿಯಲ್ಲಿ ಜೀವಂತ ಸಮಾದಿಯಾಗು ಎಂದು ಹೇಳಿದ್ದಾನೆಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಹಾಗೆಯೇ ಕಲಿಯುಗದಲ್ಲಿ ಹನುಮಂತನು ಕೇವಲ ಶ್ರೀ ರಾಘವೇಂದ್ರ ಸ್ವಾಮಿ ಹಾಗೂ ಸಂತ ತುಳಸಿದಾಸರರಿಗೆ ಮಾತ್ರ ದರ್ಶನ ನೀಡಿದ್ದಾನೆಂದು ಕೂಡ ಪುರಾಣಗಳಲ್ಲಿ ಹೇಳಲಾಗುತ್ತದೆ.

ಈ ದೇವಾಲಯದಲ್ಲಿರುವ ಗುಹೆ ಒಳಗೆ ಹನುಮಂತನ ಐದು ಮುಖಗಳ ಅಚ್ಚು ಗಂದದ ಕಣಕದಲ್ಲಿ ಮೂಡಿದ್ದು. ಹಾಗೆಯೇ ಹೊರಗಡೆ ಮಣ್ಣಿನ ಮೇಲೆ ಹನುಮಂತನ ಪಾದದ ಅಚ್ಚು ಮೂಡಿದೆ. ಪಂಚಮುಕಿಯಲ್ಲಿ ಶ್ರೀ ಹನುಮಂತನು ಅಂದು ಬಳಿಸಿದ ನೈಸರ‍್ಗಿಕ ಪುಶ್ಪಕ ವಿಮಾನ, ಹಾಸಿಗೆ, ತಲೆದಿಂಬು, ಗದೆ ಮತ್ತು ಚಪ್ಪಲಿಗಳಿವೆ. ಆದರೆ ಪುಶ್ಪಕ ವಿಮಾನ, ಹಾಸಿಗೆ, ತಲೆದಿಂಬುಗಳೆಲ್ಲವೂ ಇಂದು ಕಲ್ಲುಗಳಾಗಿ ರೂಪಗೊಂಡಿವೆ ಎಂಬ ನಂಬಿಕೆಯಿದೆ.

ಹನುಮಂತನು ಪಂಚಮುಖಿ ಅವತಾರವೆತ್ತಲು ಕಾರಣವೇನು?

ಶ್ರೀ ರಾಮ ಮತ್ತು ರಾವಣನ ನಡುವೆ ನಡೆಯುವ ಯುದ್ದದ ಸಮಯದಲ್ಲಿ ರಾವಣನು ತನ್ನ ತಮ್ಮನಾದ ಪಾತಾಳ ಲೋಕದ ದೊರೆ ಮಹಿರಾವಣನಿಗೆ ಸಹಾಯ ಕೇಳುತ್ತಾನೆ. ಮಹಿರಾವಣನು ವಿಭೀಷಣನ ಮಾರುವೇಶದಲ್ಲಿ ಬಂದು ಶ್ರೀ ರಾಮ ಮತ್ತು ಲಕ್ಶ್ಮಣನನ್ನು ವಂಚನೆಯಿಂದ ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗಿ ಕೈದಿಗಳನ್ನಾಗಿ ಇಟ್ಟುಕೊಳ್ಳುತ್ತಾನೆ. ನಿಜವಾದ ವಿಭೀಷಣನು ಬಂದ ನಂತರ ಹನುಮಂತನಿಗೆ ಇದರ ಬಗ್ಗೆ ಅರಿವಾಗುತ್ತದೆ. ಹನುಮಂತನು ವಿಬೀಶಣನಿಗೆ ನಡೆದ ಗಟನೆಯನ್ನು ವಿವರಿಸುತ್ತಾನೆ. ಬಳಿಕ ವಿಭೀಷಣನು, ಪಾತಾಳ ಲೋಕಕ್ಕೆ ಹೋಗಲು ಕೇವಲ ಎರಡೇ ದಾರಿಗಳಿದ್ದು ಒಂದು ರಾವಣನ ಅರಮನೆಯ ಮೂಲಕ, ಇನ್ನೊಂದು ದಂಡಕಾರಣ್ಯದಲ್ಲಿನ ಯೆರುಕಲಾಂಬ ದೇವಿ ಎಂಬ ಹೆಸರಿನ ದೇವತೆ ಕಾವಲಿನಲ್ಲಿರುವ ಗುಹೆಯ ಮೂಲಕ ಎಂದು ಹನುಮಂತನಿಗೆ ತಿಳಿಸುತ್ತಾನೆ. ಹನುಮಂತನು ದಂಡಕಾರಣ್ಯದಲ್ಲಿನ ಯೆರುಕಲಾಂಬ ದೇವಿಯನ್ನು ಹುಡುಕಿಕೊಂಡು ಹೋಗಿ ನಡೆದ ಗಟನೆಯನ್ನು ವಿವರಿಸಿ, ಮಹಿರಾವಣನು ಸಂಹಾರ ಮಾಡಲು ಸಹಾಯ ಕೇಳುತ್ತಾನೆ. ಯೆರುಕಲಾಂಬ ದೇವಿಯು ಶ್ರೀ ರಾಮನ ಭಕ್ತ ಹಾಗೂ ಒಂದು ಕಾಲದಲ್ಲಿ ಮಹಿರಾವಣನ ಬಂದಿಯಾಗಿದ್ದ ಚಂದ್ರಸೇನಾನ ಸಹಾಯ ಪಡೆಯಲು ತಿಳಿಸುತ್ತಾಳೆ.

ರಾಯಚೂರು ನಗರದಲ್ಲಿದೆ ಪಂಚಮುಖಿ ಹನುಮ, ಹಾಗೆಯೆ ಆಂಜನೇಯನ ಕೆಲವು ಅವತಾರಗಳ ಬಗ್ಗೆ 
ಶ್ರೀ ರಾಮ ಮತ್ತು ರಾವಣನ ನಡುವೆ ನಡೆಯುವ ಯುದ್ದದ ಸಮಯ

ಚಂದ್ರಸೇನನು ದೇವಿಯ ಆಜ್ನೆಯಂತೆ ಮಹಿರಾವಣನು ಕೊಲ್ಲಲು ಅವನ ಪೂಜಾ ಜಾಗದಲ್ಲಿ ಹಚ್ಚಿರುವ ಐದು ದೀಪಗಳನ್ನು ಒಂದೇ ಸಮಯದಲ್ಲಿ ಆರಿಸಬೇಕೆಂದು ಹನುಮಂತನಿಗೆ ಹೇಳುತ್ತಾನೆ. ಅನಂತರ ಹನುಮಂತನು ಶ್ರೀ ರಾಮರನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಈ ಸಮಸ್ಯೆಗೆ ಪರಿಹಾರವನ್ನು ಕೇಳುತ್ತಾರೆ. ಅದಕ್ಕೆ ಶ್ರೀ ರಾಮನು ನೀನು ಐದು ಮುಖಗಳ ಅವತಾರವನ್ನು ಹೊಂದುವ ಅಗತ್ಯವಿದೆ ಎಂದು ಹೇಳುತ್ತಾರೆ. ನಂತರ ಹನುಮಂತನು ಪ್ರಭು ಶ್ರೀ ರಾಮನು ಸೂಚಿಸಿದಂತೆ ಗುಹೆಯ ಮೂಲಕ ಪಾತಾಳ ಲೋಕಕ್ಕೆ ಹೋಗಿ ಪಂಚಮುಖಿ ಅವತಾರವನ್ನು ತಾಳಿ ಮಹಿರಾವಣನ ಸಂಹಾರ ಮಾಡಿ, ರಾಮ ಲಕ್ಶ್ಮಣರನ್ನು ಅವನಿಂದ ಕಾಪಾಡುತ್ತಾರೆ.

ಬಳಿಕ ಹನುಮಂತನು ಯೆರುಕಲಾಂಬ ದೇವಿಯನ್ನು ಅಬಿನಂದಿಸಿ, ಈ ಜಾಗವು ಇನ್ನು ಮುಂದೆ ಪಂಚಮುಖಿ ಎಂದು ಪ್ರಸಿದ್ದವಾಗುವುದು, ಹಾಗೆಯೇ ನಾನು ಇಲ್ಲಿಗೆ ಬರುವ ಬಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವೆ ಎಂದು ಹೇಳುತ್ತಾನೆ.

ಪಂಚಮುಖಿ ಅವತಾರದಲ್ಲಿರುವ ಹನುಮಂತನ ಪ್ರತಿ ಮುಖವು ಒಂದೊಂದು ಮಹತ್ವವನ್ನು ಹೊಂದಿದೆ.

1) ಪೂರ‍್ವ ದಿಕ್ಕಿನಲ್ಲಿ ಶ್ರೀ ಹನುಮಂತನ ಮೂಲ ರೂಪದ ಮುಕವಿದ್ದು ಈ ಮುಖವು ಮನಸ್ಸಿನ ಶುದ್ದತೆ ಮತ್ತು ಯಶಸ್ಸಿನ ಪ್ರತೀಕವಾಗಿದೆ.

2) ದಕ್ಶಿಣ ದಿಕ್ಕಿನಲ್ಲಿ ಶ್ರೀ ನರಸಿಂಹ ಸ್ವಾಮಿಯ ರೂಪವು ವಿಜಯ ಮತ್ತು ನಿರ‍್ಬಯತೆಯ ಪ್ರತೀಕವಾಗಿದೆ.

3) ಪಶ್ಚಿಮ ದಿಕ್ಕಿನಲ್ಲಿ ಗರುಡ ರೂಪವು ಮಾಟ ಮಂತ್ರ ಮತ್ತು ವಿಶವನ್ನು ತೆಗೆದುಹಾಕುತ್ತದೆ.

4) ಉತ್ತರ ದಿಕ್ಕಿನಲ್ಲಿ ವರಾಹ ರೂಪವು ಏಳಿಗೆ ಮತ್ತು ಸಂಪತ್ತಿನ ಪ್ರತೀಕವಾಗಿದೆ.

5) ಇನ್ನೊಂದು ಆಕಾಶದ ಕಡೆಗೆ ನೋಡುತ್ತಿರುವ ಹಯಗ್ರೀವ ರೂಪವಿದ್ದು. ಈ ಮುಖವು ಅರಿವು ಮತ್ತು ಒಳ್ಳೆಯ ಮಕ್ಕಳನ್ನು ಪಡೆಯುವಂತೆ ಹಾರೈಸುತ್ತದೆ ಎಂಬ ನಂಬಿಕೆಯಿದೆ.

ವೀರ ಆಂಜನೇಯನ ಕಥೆ :

ಹನುಮಂತನು ಸಾಕ್ಷಾತ್ ಶಿವನ ಅವತಾರ ಎಂದು ಹೇಳಲಾಗುತ್ತದೆ. ಅವನು ಅಂಜನಾ ಎಂಬ ಅಪ್ಸರಾ (ಆಕಾಶದ ಕನ್ಯೆ) ಗೆ ಜನಿಸಿದನು, ಅವಳು ಪ್ರೀತಿಯಲ್ಲಿ ಬಿದ್ದರೆ ಕೋತಿಯಾಗುವಂತೆ ಋಷಿಯಿಂದ ಶಾಪಗ್ರಸ್ತಳಾಗಿದ್ದಳು. ಅಂಜನಾಳು ಒಮ್ಮೆ ಕಾಡಿನಲ್ಲಿ ಪದ್ಮಾಸನದಲ್ಲಿ (ಕಮಲ ಭಂಗಿ) ಧ್ಯಾನ ಮಾಡುತ್ತಿದ್ದ ಋಷಿಯನ್ನು ಕಂಡು ಕೋತಿ ಎಂದು ತಪ್ಪಾಗಿ ತಿಳಿದು ಉತ್ಸಾಹದಿಂದ ಹಣ್ಣುಗಳನ್ನು ಅವನ ಮೇಲೆ ಎಸೆದಿದ್ದಳು. ವಾಸ್ತವ ತಿಳಿಯುವಷ್ಟರಲ್ಲಿ ಅಂಜನಾ ಋಷಿಗೆ ಅವಮಾನಿಸಿ ತಪ್ಪು ಮಾಡಿದ್ದಳು. ಇದರಿಂದ ಕೋಪಗೊಂಡ ಋಷಿಯು ಅಂಜನಾಳಿಗೆ ಶಾಪವನ್ನು ನೀಡಿದ್ದನು.

ವಿಚಲಿತಳಾದ ಅಂಜನಾ ತನ್ನನ್ನು ಕ್ಷಮಿಸಿ ತನ್ನ ಶಾಪವನ್ನು ಹಿಂಪಡೆಯುವಂತೆ ಬೇಡಿಕೊಂಡಳು. ಆದರೆ ಋಷಿಯು ಇದು ನನ್ನಿಂದ ಸಾಧ್ಯವಿಲ್ಲ, ನಾನು ಅಸಹಾಯಕ ಎಂದು ಉತ್ತರಿಸಿದನು. ಆದರೆ ನಾನು ನೀಡಿದ ಶಾಪದ ಪ್ರಭಾವವನ್ನು ಕಡಿಮೆ ಮಾಡಬಹುದೆಂದು ಹೇಳಿ, ನೀನು ಯಾರನ್ನು ಪ್ರೀತಿಸುತ್ತೀಯೋ ಅವರು ನಿನ್ನದು ಕೋತಿ ಮುಖವಾದರೂ ಅಷ್ಟೇ ಪ್ರೀತಿಸುತ್ತಾರೆ ಎಂದು ಭರವಸೆಯನ್ನು ನೀಡಿ ಅಲ್ಲಿಂದ ಹೊರಟು ಹೋದನು.

ರಾಯಚೂರು ನಗರದಲ್ಲಿದೆ ಪಂಚಮುಖಿ ಹನುಮ, ಹಾಗೆಯೆ ಆಂಜನೇಯನ ಕೆಲವು ಅವತಾರಗಳ ಬಗ್ಗೆ 
ನಂದೂರಾ ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, 
 ಬಿಳಿಯ ನೋಟ ಹೊಂದಿರುವ ಭಗವಾನ್ ಹನುಮಾನ್ ಪ್ರತಿಮೆ

ಇತ್ತ ಬ್ರಹ್ಮನು ಅಂಜನಾಳ ಸೇವೆಗೆ ಪ್ರತಿಫಲವನ್ನು ನೀಡಲು ಬಯಸಿದನು. ಆಕೆಗೆ ಏನು ಬೇಕು ಎಂದು ಕೇಳಿದಾಗ ಶಾಪದಿಂದ ಮುಕ್ತಿ ನೀಡುವಂತೆ ಕೇಳಿಕೊಂಡಳು. ಆದ್ದರಿಂದ ಬ್ರಹ್ಮನು ಅವಳನ್ನು ಭೂಮಿಗೆ ಇಳಿದು ಅಲ್ಲಿ ವಾಸಿಸಲು ಹೇಳಿದನು. ಅಲ್ಲಿ, ನೀನು ಪ್ರೀತಿಯಲ್ಲಿ ಬೀಳಲು ಉದ್ದೇಶಿಸಿರುವ ವ್ಯಕ್ತಿಯನ್ನು ಭೇಟಿಯಾಗುತ್ತೀಯಾ ಹಾಗೂ ಶಾಪ ವಿಮೋಚನೆಗಾಗಿ ಶಿವನ ಅವತಾರಕ್ಕೆ ಮಾತ್ರ ಜನ್ಮ ನೀಡಬೇಕೆಂದು ಬ್ರಹ್ಮನು ಅವಳಿಗೆ ಹೇಳಿ ಕಳುಹಿಸಿದನು.

 ಅಂಜನಾ ಪ್ರೀತಿಯಲ್ಲಿ ಬೀಳುತ್ತಾಳೆ:

ಬ್ರಹ್ಮ ಹೇಳಿದಂತೆ ಎಲ್ಲವೂ ನಡೆಯಿತು. ಅಂಜನಾ ಒಬ್ಬ ವ್ಯಕ್ತಿಯನ್ನು ಭೇಟಿಯಾದಳು ಮತ್ತು ಅವನನ್ನು ಪ್ರೀತಿಸುತ್ತಿದ್ದಳು. ತಕ್ಷಣ ಅವಳು ಕೋತಿಯಾಗಿ ಬದಲಾದಳು. ಆದರೆ ಅವಳು ಪ್ರೀತಿಸಿದ ವ್ಯಕ್ತಿ ಕೇಸರಿ, ವಾನರ ರಾಜ. ಅವನು ಕೋತಿಯ ಮುಖ ಮತ್ತು ಮಾನವ ದೇಹವನ್ನು ಹೊಂದಿದ್ದನು ಏಕೆಂದರೆ ಅವನು ತಾನು ಬಯಸಿದ ಯಾವುದೇ ರೂಪವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದನು. ಶಿವನು ತನಗೆ ಮಾಂತ್ರಿಕ ಶಕ್ತಿಯನ್ನು ನೀಡಿದ್ದಾನೆ ಎಂದು ಅವನು ಅಂಜನಾಗೆ ಹೇಳಿದನು. ಅವಳು ತನ್ನ ಹೆಂಡತಿಯಾಗಬೇಕೆಂದು ಅವನು ಬಯಸಿದನು. ನಂತರ ಇಬ್ಬರು ವಿವಾಹವಾಗಿ ಕಾಡಿನಲ್ಲಿ ಸಂತೋಷದಿಂದ ವಾಸಿಸುತ್ತಿದ್ದರು. ಅಂಜನಾ ಶಿವನನ್ನು ಮೆಚ್ಚಿಸಲು ಕಠಿಣ ತಪಸ್ಸು ಮಾಡಿದಳು. ಒಂದು ದಿನ ಶಿವನು ಅವಳ ಮುಂದೆ ಕಾಣಿಸಿಕೊಂಡನು ಮತ್ತು ಅವನ ಅವತಾರಕ್ಕೆ ಜನ್ಮ ನೀಡುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ.

ದೈವಿಕ ಖೀರ್ :

ಅಯೋಧ್ಯೆಯ ರಾಜ ದಶರಥನು ಮಗನನ್ನು ಹೊಂದಲು ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದಾಗ, ಅಗ್ನಿ (ಅಗ್ನಿದೇವರು) ದಶರಥನಿಗೆ ಸ್ವಲ್ಪ ಖೀರ್ ನೀಡಿ ಅದನ್ನು ನಿನ್ನ ಮೂವರು ಹೆಂಡತಿಯರಿಗೆ ಹಂಚು ಇದರಿಂದ ಅವರು ಗರ್ಭಿಣಿಯರಾಗುತ್ತಾರೆ ಎಂದು ಹೇಳಿದನು. ಆದರೆ ಪಕ್ಷಿಯೊಂದು ಅದರಲ್ಲಿ ಸ್ವಲ್ಪ ಖೀರ್‌ನ್ನು ಕಿತ್ತುಕೊಂಡು ಹಾರಿಹೋಯಿತು. ಅಂಜನಾ ಧ್ಯಾನ ಮಾಡುತ್ತಿದ್ದ ಜಾಗದಲ್ಲಿ ಪಕ್ಷಿಯು ಅದನ್ನು ಬೀಳಿಸಿತು. ಇದನ್ನು ನೋಡಿದ ವಾಯು ದೇವ ಅದನ್ನು ಹಿಡಿದು ಅಂಜನಾಳ ಕೈಯಲ್ಲಿ ಇಟ್ಟನು. ಇದು ಶಿವನ ಕೊಡುಗೆ ಎಂದುಕೊಂಡು ಅಂಜನ ತಿಂದಳು. ಶೀಘ್ರದಲ್ಲೇ, ಅವಳು ಕೋತಿ ಮುಖದ ಮಗನಿಗೆ ಜನ್ಮ ನೀಡಿದಳು ಮತ್ತು ಅವಳು ಶಾಪದಿಂದ ಮುಕ್ತಳಾದಳು. ಅವನಿಗೆ ಆಂಜನೇಯ (ಅಂಜನನ ಮಗ) ಎಂದು ಹೆಸರಿಸಲಾಯಿತು.

ಆಂಜನೇಯ ಹೇಗೆ ವೀರ ಹನುಮಾನ್ ಆದನು..?

ಬಾಲ್ಯದಲ್ಲಿ ಆಂಜನೇಯ ತುಂಬಾ ಹಠಮಾರಿ. ಒಮ್ಮೆ, ಸೂರ್ಯನನ್ನು ಹಣ್ಣು ಎಂದು ತಪ್ಪಾಗಿ ಭಾವಿಸಿ, ಅವನು ಅದನ್ನು ತಿನ್ನಲು ಆಕಾಶಕ್ಕೆ ಹಾರಿದನು. ಸೂರ್ಯನು ಭಯಗೊಂಡನು ಮತ್ತು ಸಹಾಯಕ್ಕಾಗಿ ಇಂದ್ರನನ್ನು ಕೇಳಿದನು. ಇಂದ್ರನು ತನ್ನ ವಜ್ರಾಯುಧವನ್ನು ಹನುಮಂತನೆಂದು ತಿಳಿಯದೇ ಆತನ ಬಳಿ ಬೀಸುತ್ತಾನೆ. ಇಂದ್ರನ ವಜ್ರಾಯುಧ ಹನುಮಂತನ ಕೆನ್ನೆಗೆ ಬಂದು ಬೀಳುತ್ತದೆ. ಇದರಿಂದ ಹನುಮಂತನು ಗಾಯಗೊಂಡು ನೆಲಕ್ಕೆ ಬಿದ್ದನು. ಇದನ್ನು ನೋಡಿದ ವಾಯುವಿಗೆ ಕೋಪ ಬಂತು. ಅವನು ಆಂಜನೇಯನನ್ನು ಕರೆದುಕೊಂಡು ಪಾತಾಳಲೋಕಕ್ಕೆ ಹೋದನು. ಗಾಳಿಯಿಲ್ಲದೆ, ಜನರು, ಪ್ರಾಣಿಗಳು ಮತ್ತು ಸಸ್ಯಗಳು ಭೀಕರವಾಗಿ ನರಳಲಾರಂಭಿಸಿದವು. ಆಂಜನೇಯನನ್ನು ನೋಯಿಸಿದಕ್ಕಾಗಿ ಬ್ರಹ್ಮನು ಇಂದ್ರನನ್ನು ನಿಂದಿಸಿದನು. ಅವನು ಇಂದ್ರ ಮತ್ತು ಇತರ ದೇವತೆಗಳೊಂದಿಗೆ ಪಾತಾಳಕ್ಕೆ ಹೋಗಿ ಭೂಮಿಗೆ ಹಿಂತಿರುಗುವಂತೆ ವಾಯುವನ್ನು ಬೇಡಿಕೊಂಡನು. ವಾಯುವನ್ನು ಮೋಹಿಸಲು, ಬ್ರಹ್ಮನು ಆಂಜನೇಯನ ಗಾಯಗಳನ್ನು ಗುಣಪಡಿಸಿದನು ಮತ್ತು ಹನುಮಂತನಿಗೆ ಭೂಮಿಯ ಮೇಲಿನ ಯಾವುದೇ ಆಯುಧವು ಹಾನಿ ಮಾಡಲಾಗದು ಎನ್ನುವ ವರವನ್ನು ನೀಡಿದನು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚೀನಾದ ಮಹಾನ್‌ ಗೋಡೆ

ಚೀನಾದ ಮಹಾನ್‌ ಗೋಡೆಯ ವರ್ಣನೆ

ಪಾಂಡವಪುರದಲ್ಲಿ ನಡೆಯುತ್ತ ಇದೆ ಪುನೀತೋತ್ಸವ

ಪಾಂಡವಪುರದಲ್ಲಿ ನಡೆಯುತ್ತ ಇದೆ ಪುನೀತೋತ್ಸವ