ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಶುಕ್ರವಾರದಿಂದ ಶುರುವಾಗಿದೆ ಪುನೀತೋತ್ಸವ ಕಾರ್ಯಕ್ರಮ. ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.
ಪಾಂಡವಪುರದಲ್ಲಿ ಶುಕ್ರವಾರದಿಂದ, ನವೆಂಬರ್ 25ರಿಂದ 3 ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರ ದಂಡೇ ಸೇರುತ್ತಿದೆ. ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ. ಎಸ್. ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಟ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶುಕ್ರವಾರ ಸಂಜೆಯ ಕಾರ್ಯಕ್ರಮಕ್ಕೆ ಹಲವು ನಟ-ನಟಿಯರು ಆಗಮಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ ಪ್ರಕಾಶ್ ಹಾಗೂ ಗಾಯಕಿ ಅನನ್ಯ ಭಟ್ ನೇತೃತ್ವದಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ.
ಹಾಸ್ಯ ನಟರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಕೂಡ ನಡೆಯುತ್ತದೆ. ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಶಾಸಕ ಪುಟ್ಟರಾಜು ಪಾಂಡವಪುರದಲ್ಲಿ ಈ ಆಗಲೇ ಮನವಿ ಮಾಡಿಕೊಂಡಿದ್ದಾರೆ.
ಕುಮುಟಾದಲ್ಲಿ ದೇವರ ಮೊರೆ ಹೋದ ಕಾಂಗ್ರೆಸ್ ನಾಯಕರು ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಸ್ಮರಣಾರ್ಥ ಶಾಸಕ ಸಿ. ಎಸ್. ಪುಟ್ಟರಾಜು ನೇತೃತ್ವದಲ್ಲಿ ನವೆಂಬರ್ 25, 26, 27ರವರೆಗೂ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ಕ್ರೀಡಾಂಗಣಕ್ಕೆ ಭೇಟಿ ನೀಡಿ ವೇದಿಕೆಯನ್ನು ಪರಿಶೀಲನೆ ನಡೆಸಿದ್ದರು.
ಪ್ರತಿ ಸ್ವಸಹಾಯ ಸಂಘಕ್ಕೂ ತಲಾ 10 ಸಾವಿರ ಸಹಾಯಧನ: ಮಂಡ್ಯದಲ್ಲಿ ನಾರಾಯಣಗೌಡ ಭರವಸೆ ಸಂಜೆ 5.30ಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಬಾಲಕಿಯರ ಪ್ರೌಢಶಾಲೆ ಹಾಗೂ ಕಾಲೇಜಿನ ಒಂದು ಸಾವಿರ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಪುನೀತೋತ್ಸವ ಕಾರ್ಯಕ್ರಮಕ್ಕೆ ಭಾರಿ ಸಿದ್ಧತೆ ಶುಕ್ರವಾರ ಮೊದಲ ದಿನ ನವೆಂಬರ್ 25 ರಂದು ಗಾಯಕಿ ಅನನ್ಯ ಭಟ್, ಗಾಯಕ ವಿಜಯ ಪ್ರಕಾಶ್ ಅವರ ನೇತೃತ್ವದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಹಾಗೂ ಕಿರುತೆರೆ ಕಲಾವಿದರಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ತಮ್ಮ ವಿಶಿಷ್ಟ ಶೈಲಿಯ ಮಾತಿನ ಮೂಲಕ ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಡಿದ, ಪಾಂಡವಪುರ ತಾಲೂಕಿನವರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಂ. ಕೃಷ್ಣೇಗೌಡ ಅವರನ್ನು ಇದೇ ವೇದಿಕೆಯಲ್ಲಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವ ನೀಡಲಾಗುತ್ತದೆ. ಅಲ್ಲದೇ ನಟಿಯರಾದ ಶ್ವೇತಾ ಪ್ರಸಾದ್, ಪ್ರಿಯಾಂಕ, ನಮ್ರತಾ ಗೌಡ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಮತ್ತೊಂದೆಡೆ ಚೇತನ ಹರಿ ಮತ್ತು ತಂಡದಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದ್ದು, ಸಂತೋಷ್ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅರ್ಜುನ್ ಜನ್ಯರಿಂದ ಸಂಗೀತ ಕಾರ್ಯಕ್ರಮ ಇನ್ನು ನವೆಂಬರ್ 26ರಂದು ಐಶ್ವರ್ಯ ಅನಂತ ಕಾರ್ತಿಕ್ ಅವರಿಂದ ಕಥಕ್ ನೃತ್ಯ, ನಯನ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದೆ. ರುದ್ರ ಮತ್ತು ತಂಡದಿಂದ ಜೈ ಭಜರಂಗಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಅದರಲ್ಲೂ ವಿಶೇಷವಾಗಿ ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಇರುತ್ತದೆ. ಜೊತೆಗೆ ನಟಿಯರಾದ ಶುಭಾಪೂಂಜಾ, ಗೌತಮಿ, ರಜನಿ ಮತ್ತು ಭವ್ಯ ಗೌಡರಿಂದ ನೃತ್ಯ ಪ್ರದರ್ಶನ ಇರಲಿದೆ. ಕಾರ್ಯಕ್ರಮದ ನಿರೂಪಣೆಯನ್ನು ಅನುಪಮ ಭಟ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹಾಸ್ಯ ತಂಡಗಳ ಸಂಪೂರ್ಣ ವಿವರ ಇಲ್ಲಿದೆ ಹಾಗೂ ಕೊನೆಯ ದಿನವಾದ ನವೆಂಬರ್ 27 ಕ್ಕೆ ಜಂಬೆ ಅವರಿಂದ ಚಿತ್ರಕಲಾ ಪ್ರದರ್ಶನ, ಜಗ್ಗಪ್ಪ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ, ರುದ್ರ ಮತ್ತು ತಂಡದಿಂದ ಅಪ್ಪು ನಮನ ಕುರಿತಂತೆ ನೃತ್ಯ ಪ್ರದರ್ಶನ ಮಾಡಲಾಗುತ್ತದೆ. ನಟಿಯರಾದ ವೈಷ್ಣವಿಗೌಡ, ಶಮಿತಾಗೌಡ ಅವರಿಂದ ನೃತ್ಯ ಪ್ರದರ್ಶನ, ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.
ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಡಾ. ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಹಾಜರಿರಲಿದ್ದಾರೆ. ಹಾಗೆಯೇ ಖ್ಯಾತ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಭಾಗಿ ಪುನೀತೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ನವೆಂಬರ್ 27ರಂದು ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಆಡಿಯೋ ಬಿಡುಗಡೆಗೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಯಾವುದೇ ಪಾಸ್, ಟಿಕೆಟ್ ಇರುವುದಿಲ್ಲ. ಉಚಿತ ಪ್ರವೇಶವಿದ್ದು, ಮೊದಲು ಬಂದವರಿಗೆ ಆದ್ಯತೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ಕಾರ್ಯಕ್ರಮದ ವೇದಿಕೆಯ ಸಂಪೂರ್ಣ ನಿರ್ವಹಣೆಯನ್ನು ಚಿತ್ರ ನಿರ್ದೇಶಕ ಎ.ಹರ್ಷ ಮತ್ತು ತಂಡದವರು ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಇನ್ನು ಸಂಜೆ ಕಾರ್ಯಕ್ರಮಕ್ಕೆ ಹಲವು ನಟ ನಟಿಯರು ಆಗಮಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ ಪ್ರಕಾಶ್, ಹಾಗೂ ಗಾಯಕಿ ಅನನ್ಯ ಭಟ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಮತ್ತು ಹಾಸ್ಯ ನಟರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಕೂಡ ನಡೆಯುತ್ತದೆ.
ಧನ್ಯವಾದಗಳು.
GIPHY App Key not set. Please check settings