in

ಚೀನಾದ ಮಹಾನ್‌ ಗೋಡೆಯ ವರ್ಣನೆ

ಚೀನಾದ ಮಹಾನ್‌ ಗೋಡೆ
ಚೀನಾದ ಮಹಾನ್‌ ಗೋಡೆ


ಪ್ರಪಂಚದ ಅದ್ಭುತಗಳಲ್ಲಿ ಒಂದು ಚೀನಾದ ಮಹಾನ್ ಗೋಡೆ, ಕೆಲವೊಂದು ವರ್ಣನೆ ತಿಳಿಯೋಣ

ದಿ ಗ್ರೇಟ್‌ ವಾಲ್‌ ಆಫ್‌ ಚೀನಾ  ಎಂಬುದು ವಿವಿಧ ಪರಂಪರೆಯ ರಾಜವಂಶಗಳ ಅವಧಿಯಲ್ಲಿ ಕಂಡುಬಂದ ಚೀನಾದ ಸಾಮ್ರಾಜ್ಯದ ಉತ್ತರದ ಗಡಿಭಾಗಗಳನ್ನು ರಕ್ಷಿಸಲು 5ನೇ ಶತಮಾನ BC ಮತ್ತು 16ನೇ ಶತಮಾನದ ನಡುವೆ ನಿರ್ಮಿಸಿ, ಮರುನಿರ್ಮಿಸಿ, ಮತ್ತು ನಿರ್ವಹಣೆ ಮಾಡಲ್ಪಟ್ಟ, ಉತ್ತರದ ಚೀನಾದಲ್ಲಿನ ಕಲ್ಲು ಮತ್ತು ಸುಟ್ಟ ಜೇಡಿಮಣ್ಣಿನ ಕೋಟೆ-ನಿರ್ಮಾಣಗಳ ಒಂದು ಸರಣಿಯಯಾಗಿದೆ.

5ನೇ ಶತಮಾನದ BCಯಿಂದ ಮೊದಲ್ಗೊಂಡು, ಹಲವಾರು ಗೋಡೆಗಳು ಕಟ್ಟಲ್ಪಟ್ಟಿದ್ದು, ಅವು ಮಹಾನ್‌ ಗೋಡೆ ಎಂದು ಉಲ್ಲೇಖಿಸಲ್ಪಟ್ಟಿವೆ. ಕ್ವಿನ್‌ ಷಿ ಹುವಾಂಗ್‌ ಎಂಬ ಮೊದಲನೆಯ, ಚೀನಾದ ಚಕ್ರವರ್ತಿಯಿಂದ 220–206 BCಯ ನಡುವಿನ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಗೋಡೆಯು ಅತ್ಯಂತ ಪ್ರಸಿದ್ಧವಾದವುಗಳಲ್ಲಿ ಒಂದಾಗಿದೆ. ಆ ಗೋಡೆಯ ಅಲ್ಪ ಭಾಗವು ಉಳಿದುಕೊಂಡಿದೆ; ಈಗ ಅಸ್ತಿತ್ವದಲ್ಲಿರುವ ಗೋಡೆಯ ಬಹುಭಾಗಗಳು ಮಿಂಗ್‌ ರಾಜವಂಶದ ಅವಧಿಯಲ್ಲಿ ನಿರ್ಮಿಸಲ್ಪಟ್ಟವು.

ಮಹಾನ್‌ ಗೋಡೆಯು ಪೂರ್ವದಲ್ಲಿನ ಷಾನ್‌ಹೈಗುವಾನ್‌ನಿಂದ ಪಶ್ಚಿಮದಲ್ಲಿನ ಲೊಪ್‌ ನೂರ್‌ವರೆಗೆ, ಮಂಗೋಲಿಯಾದ ಒಳಭಾಗದ ದಕ್ಷಿಣದ ಅಂಚನ್ನು ಸ್ಥೂಲವಾಗಿ ರೂಪಿಸುವ ಒಂದು ಕಮಾನಿನಾಕಾರದ ಉದ್ದಕ್ಕೂ ಹಬ್ಬಿದೆ. ಪುರಾತತ್ತ್ವ ಶಾಸ್ತ್ರದ ಅತ್ಯಂತ ವ್ಯಾಪಕ ಸಮೀಕ್ಷೆಯು ಮುಂದುವರಿದಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು, ಇತ್ತೀಚೆಗಷ್ಟೇ ತೀರ್ಮಾನವೊಂದಕ್ಕೆ ಬಂದಿದ್ದು, ಅದರ ಅನುಸಾರ ಸಂಪೂರ್ಣ ಮಹಾನ್‌ ಗೋಡೆಯು ತನ್ನೆಲ್ಲಾ ಶಾಖೆಗಳೊಂದಿಗೆ, 8,851.8 km (5,500.3 mi) ರವರೆಗೆ ಚಾಚಿಕೊಳ್ಳುತ್ತದೆ. ಇದು ವಾಸ್ತವಿಕ ಗೋಡೆಯ 359.7 km (223.5 mi) ವಿಭಾಗಗಳಿಂದ,6,259.6 km (3,889.5 mi) ಕಂದಕಗಳಿಂದ ಮತ್ತು ಗುಡ್ಡಗಳು ಹಾಗೂ ನದಿಗಳಂಥ ಸ್ವಾಭಾವಿಕ 2,232.5 km (1,387.2 mi) ಪ್ರತಿಬಂಧಕಗಳಿಂದ ಮಾಡಲ್ಪಟ್ಟಿದೆ.

ಚೀನಾದ ಮಹಾನ್‌ ಗೋಡೆಯ ವರ್ಣನೆ
1907ರಲ್ಲಿನ ಮಹಾನ್‌ ಗೋಡೆಯ ಛಾಯಾಚಿತ್ರ


ಚೀನಿಯರು ಕ್ರಿ.ಪೂ ೮ನೇ ಶತಮಾನದ ಸುಮಾರಿನ ವಸಂತಋತು ಮತ್ತು ಶರದೃತುವಿನ ಅವಧಿಯ ಹೊತ್ತಿಗಾಗಲೇ ಗೋಡೆ-ಕಟ್ಟುವ ಕಸುಬಿನಲ್ಲಿ ಚೆನ್ನಾಗಿ ಪಳಗಿದ್ದರು. ಕ್ರಿ.ಪೂ. ೫ನೇ ಶತಮಾನದ ಕ್ರಿ.ಪೂ ೨೨೧ರ ಅವಧಿಯ ರಾಜ್ಯಗಳು ಪರಸ್ಪರ ಕಚ್ಚಾಡುತ್ತಿದ್ದ ಅವಧಿಯ ಸಮಯದಲ್ಲಿ, ಕ್ವಿ, ಯಾನ್‌ ಮತ್ತು ಝಾವೋ ಸಂಸ್ಥಾನಗಳೆಲ್ಲವೂ ತಂತಮ್ಮ ಗಡಿಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ವ್ಯಾಪಕವಾದ ಕೋಟೆ-ನಿರ್ಮಾಣಗಳಲ್ಲಿ ತೊಡಗಿಸಿಕೊಂಡವು. ಕತ್ತಿಗಳು ಮತ್ತು ಈಟಿಗಳಂಥ ಸಣ್ಣ ಶಸ್ತ್ರಾಸ್ತ್ರಗಳ ದಾಳಿಯನ್ನು ತಡೆದುಕೊಳ್ಳಲು ನಿರ್ಮಿಸಲಾಗಿದ್ದ ಈ ಗೋಡೆಗಳು, ಹಲಗೆಯ ಚೌಕಟ್ಟುಗಳ ನಡುವೆ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ತುಳಿಯುವ ಮೂಲಕ ಪ್ರಾಯಶಃ ರೂಪಿಸಲ್ಪಟ್ಟವು.

ಪರಸ್ಪರ ವಿರೋಧಿಗಳಾಗಿದ್ದ ಎಲ್ಲ ಸಂಸ್ಥಾನಗಳನ್ನು ಗೆಲ್ಲುವ ಮೂಲಕ ಕ್ವಿನ್‌ ಷಿ ಹುವಾಂಗ್‌ ಎಂಬಾತ ಕ್ರಿ.ಪೂ ೨೨೧ರಲ್ಲಿ ಚೀನಾವನ್ನು ಒಗ್ಗೂಡಿಸಿ, ಕ್ವಿನ್‌ ರಾಜವಂಶದ ಸ್ಥಾಪನೆಗೆ ಕಾರಣನಾದ. ಕೇಂದ್ರೀಕೃತ ಆಡಳಿತವನ್ನು ವಿಧಿಸುವ ಹಾಗೂ ಊಳಿಗಮಾನ್ಯ ಮದ್ಧತಿಯ ಧಣಿಗಳು ಮತ್ತೆ ತಲೆಯೆತ್ತುವುದನ್ನು ತಪ್ಪಿಸುವ ಆಶಯದಿಂದ, ಹಿಂದಿದ್ದ ಸಂಸ್ಥಾನದ ಗಡಿಗಳುದ್ದಕ್ಕೂ ತನ್ನ ಸಾಮ್ರಾಜ್ಯವನ್ನು ವಿಭಜಿಸಿದ್ದ ಗೋಡೆಯ ವಿಭಾಗಗಳ ನಾಶಕ್ಕಾಗಿ ಆತ ಆದೇಶಿಸಿದ. ಉತ್ತರ ಭಾಗದಿಂದ ಬರುವ ಕ್ಸಿಯಾಂಗ್ನು ಜನರಿಂದಾಗುವ ಆಕ್ರಮಣಗಳಿಗೆ ಪ್ರತಿಯಾಗಿ ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು, ಸಾಮ್ರಾಜ್ಯದ ಉತ್ತರ ಭಾಗದ ಹೊಸ ಗಡಿನಾಡಿನ ಉದ್ದಕ್ಕೂ ಇರುವ ಉಳಿದ ಕೋಟೆ-ನಿರ್ಮಾಣಗಳನ್ನು ಸಂಪರ್ಕಿಸಲು ಹೊಸ ಗೋಡೆಯೊಂದನ್ನು ನಿರ್ಮಿಸಲು ಆತ ಆದೇಶಿಸಿದ. ಸದರಿ ನಿರ್ಮಾಣ ಕಾಮಗಾರಿಗಾಗಿ ಅಗತ್ಯವಿರುವ ಬೃಹತ್ ಪ್ರಮಾಣದ ಸಾಮಗ್ರಿಗಳನ್ನು ಸಾಗಣೆಮಾಡುವುದು ತುಂಬಾ ಕಷ್ಟದಾಯಕವಾಗಿತ್ತು. ಆದ್ದರಿಂದ ಕಟ್ಟಡ ನಿರ್ಮಾಣಮಾಡುವವರು ಯಾವಾಗಲೂ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಲು ಪ್ರಯತ್ನಿಸಿದರು. ಪರ್ವತಗಳಿಂದ ತರಿಸಲಾದ ಕಲ್ಲುಗಳನ್ನು ಪರ್ವತ ಶ್ರೇಣಿಗಳ ಮೇಲೆ ಬಳಸಲಾದರೆ, ದಮ್ಮಸು ಮಾಡಿದ ಮಣ್ಣನ್ನು ಸಮತಲದ ಭೂಮಿಯಲ್ಲಿನ ನಿರ್ಮಾಣ ಕಾಮಗಾರಿಗಾಗಿ ಬಳಸಲಾಯಿತು. ಕ್ವಿನ್‌ ರಾಜವಂಶದ ಗೋಡೆಗಳ ಕರಾರುವಾಕ್ಕಾದ ಉದ್ದ ಮತ್ತು ನಿರ್ಮಾಪಥವನ್ನು ಸೂಚಿಸುವ ಯಾವುದೇ ಐತಿಹಾಸಿಕ ದಾಖಲೆಗಳು ಈಗ ಉಳಿದಿಲ್ಲ. ಪ್ರಾಚೀನ ಗೋಡೆಗಳ ಬಹುಭಾಗವು ಶತಮಾನಗಳು ಉರುಳುತ್ತಿದ್ದಂತೆ ಸವಕಳಿಗೀಡಾಗಿದ್ದು, ಕೇವಲ ಸ್ವಲ್ಪೇ ಸ್ವಲ್ಪ ವಿಭಾಗಗಳು ಇಂದು ಉಳಿದುಕೊಂಡಿವೆ. ನಂತರದಲ್ಲಿ, ಹಾನ್‌, ಸೂಯಿ, ಉತ್ತರ ಭಾಗದ ಮತ್ತು ಜಿನ್‌ ರಾಜವಂಶಗಳೆಲ್ಲವೂ ಉತ್ತರ ಭಾಗದ ದಾಳಿಕಾರರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಅಪಾರ ವೆಚ್ಚದಲ್ಲಿ ಸದರಿ ಮಹಾನ್‌ ಗೋಡೆಯ ವಿಭಾಗಗಳನ್ನು ದುರಸ್ತಿಗೊಳಿಸಿವೆ, ಮರುನಿರ್ಮಾಣ ಮಾಡಿವೆ, ಇಲ್ಲವೇ ವಿಸ್ತರಣೆ ಮಾಡಿವೆ.

ಮಹಾನ್‌ ಗೋಡೆಯ ಪರಿಕಲ್ಪನೆಯು ಮಿಂಗ್‌ ರಾಜವಂಶದ ಅವಧಿಯಲ್ಲಿ ಮತ್ತೊಮ್ಮೆ ಮರುಹುಟ್ಟು ಪಡೆಯಿತು. 1449ರಲ್ಲಿ ನಡೆದ ಟುಮುವಿನ ಕದನದಲ್ಲಿ ಓಯಿರಾಟ್‌ಗಳಿಂದ ಮಿಂಗ್‌ ಸೇನೆಯು ಸೋತ ನಂತರ ಈ ಬೆಳವಣಿಗೆ ಕಂಡುಬಂತು. ಪರಂಪರೆಯ ಕದನಗಳ ನಂತರ, ಮಂಚೂರಿಯಾದ ಮತ್ತು ಮಂಗೋಲಿಯಾದ ಬುಡಕಟ್ಟು ಜನಾಂಗದವರ ಮೇಲೆ ಒಂದು ಸ್ಪಷ್ಟವಾದ ಮೇಲುಗೈ ಸಾಧಿಸುವಲ್ಲಿ ಮಿಂಗ್‌ ರಾಜವಂಶವು ವಿಫಲಗೊಂಡಿತ್ತು, ಮತ್ತು ಸುದೀರ್ಘಾವಧಿಯ ತಿಕ್ಕಾಟವು ಸಾಮ್ರಾಜ್ಯದ ಮೇಲೆ ಒಂದು ದೊಡ್ಡ ನಷ್ಟವನ್ನುಂಟುಮಾಡುತ್ತಿತ್ತು. ಚೀನಾದ ಉತ್ತರ ಭಾಗದ ಗಡಿಯ ಉದ್ದಕ್ಕೂ ಗೋಡೆಗಳನ್ನು ನಿರ್ಮಿಸುವ ಮೂಲಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಆಚೆಯಲ್ಲೇ ಇಡಲು ಮಿಂಗ್‌ ರಾಜವಂಶವು ಒಂದು ಹೊಸ ಸಮರತಂತ್ರವನ್ನು ಅಳವಡಿಸಿಕೊಂಡಿತು. ಓರ್ಡಸ್‌ ಮರುಭೂಮಿಯಲ್ಲಿ ನೆಲೆಗೊಂಡಿದ್ದ ಮಂಗೋಲರ ನಿಯಂತ್ರಣವನ್ನು ಪರಿಗಣಿಸಿ, ಹುವಾಂಗ್‌ ಹಿಯ ತಿರುವನ್ನು ತನ್ನೊಂದಿಗೆ ಸಂಯೋಜಿಸಿಕೊಳ್ಳುವ ಬದಲು ಮರುಭೂಮಿಯ ದಕ್ಷಿಣ ಭಾಗದ ಅಂಚನ್ನು ಸದರಿ ಗೋಡೆಯು ಅನುಸರಿಸಿತು.


ಮುಂಚಿನ ಕ್ವಿನ್‌ ಕೋಟೆ-ನಿರ್ಮಾಣಗಳಿಗಿಂತ ಭಿನ್ನವಾಗಿದ್ದ ಮಿಂಗ್‌ ನಿರ್ಮಾಣ ಕಾಮಗಾರಿಯು ಸದೃಢವಾಗಿತ್ತು ಮತ್ತು ಹೆಚ್ಚು ವಿಸ್ತಾರವಾಗಿತ್ತು. ದಮ್ಮಸುಮಾಡಿದ ಮಣ್ಣಿನ ಬದಲಿಗೆ ಇಟ್ಟಿಗೆಗಳು ಮತ್ತು ಕಲ್ಲನ್ನು ಬಳಸಿದ್ದು ಇದಕ್ಕೆ ಕಾರಣವಾಗಿತ್ತು. ವರ್ಷಗಳಾಗುತ್ತಿದ್ದಂತೆ ಮಂಗೋಲರ ಆಕ್ರಮಣಗಳು ಆಗಿಂದಾಗ್ಗೆ ಮುಂದುವರಿಯುತ್ತಲೇ ಹೋಗಿದ್ದರಿಂದ, ಗೋಡೆಗಳನ್ನು ದುರಸ್ತಿ ಮಾಡಲು ಹಾಗೂ ಬಲಪಡಿಸಲು ಮಿಂಗ್‌ ರಾಜವಂಶವು ಗಣನೀಯ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಈಕಡೆಗೆ ವಿನಿಯೋಗಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಬೀಜಿಂಗ್‌ನ ಮಿಂಗ್‌ ರಾಜಧಾನಿಗೆ ಸಮೀಪದ ವಿಭಾಗಗಳು ಸದೃಢವಾಗಿದ್ದವು.

ಚೀನಾದ ಮಹಾನ್‌ ಗೋಡೆಯ ವರ್ಣನೆ
ಜಿನ್‌ಷಾನ್ಲಿಂಗ್‌ನಲ್ಲಿನ ಮಹಾನ್‌ ಗೋಡೆಯ ವಿಭಾಗಗಳ ಒಂದು ಪ್ರದೇಶ

1440 ರ ದಶಕ–1460 ರ ದಶಕದ ಅವಧಿಯಲ್ಲಿ, “ಲಿಯಾವೊಡಾಂಗ್‌ ಗೋಡೆ” ಎಂದು ಕರೆಯಲ್ಪಟ್ಟ ಗೋಡೆಯನ್ನೂ ಸಹ ಮಿಂಗ್ ರಾಜವಂಶವು ನಿರ್ಮಿಸಿತು. ಮಹಾನ್‌ ಗೋಡೆಗೆ (ಒಂದು ಅರ್ಥದಲ್ಲಿ ಈ ಗೋಡೆಯು ಮಹಾನ್‌ ಗೋಡೆಯ ವಿಸ್ತರಣೆಯೇ ಆಗಿತ್ತು) ಹೋಲುವ ರೀತಿಯಲ್ಲಿಯೇ ಕಾರ್ಯಾತ್ಮಕ ಅಥವಾ ಪ್ರಯೋಜನಾತ್ಮಕವಾಗಿದ್ದರೂ ಸಹ, ನಿರ್ಮಾಣಶೈಲಿಯಲ್ಲಿ ಹೆಚ್ಚು ಪ್ರಾಥಮಿಕ ಅಥವಾ ಕೆಳದರ್ಜೆಯನ್ನು ಹೊಂದಿತ್ತು. ಲಿಯಾವೊಡಾಂಗ್‌ ಪ್ರಾಂತ್ಯದ ಕೃಷಿ ಪ್ರಧಾನ ಭೂಭಾಗವನ್ನು ಸುತ್ತುವರಿಯುವ ಮೂಲಕ, ಲಿಯಾವೊಡಾಂಗ್‌ ಗೋಡೆಯು ಅದನ್ನು ವಾಯವ್ಯ ದಿಕ್ಕಿನಿಂದ ಬರುವ ಜರ್ಚೆಡ್‌-ಮಂಗೋಲ್‌ ಓರಿಯಾನ್‌ಘಾನ್‌ ಮತ್ತು ಉತ್ತರ ಭಾಗದಿಂದ ಬರುವ ಜಿಯಾಂಝೌ ಜರ್ಚೆನ್ಸ್‌ರ ಸಂಭಾವ್ಯ ಹಠಾತ್‌ ದಾಳಿಗೆ ಪ್ರತಿಯಾಗಿ ರಕ್ಷಿಸುತ್ತಿತ್ತು. ಲಿಯಾವೊಡಾಂಗ್‌ ಗೋಡೆಯ ಕೆಲವೊಂದು ಭಾಗಗಳಲ್ಲಿ ಕಲ್ಲುಗಳು ಮತ್ತು ಹಾಸುಬಿಲ್ಲೆಗಳನ್ನು ಬಳಸಲಾಗಿತ್ತಾದರೂ, ಅದರ ಬಹುಭಾಗವು ವಾಸ್ತವವಾಗಿ ಒಂದು ಮಣ್ಣಿನ ಮೋಟುಗೋಡೆಯಾಗಿದ್ದು ಎರಡೂ ಪಾರ್ಶ್ವಗಳಲ್ಲಿ ಕಂದಕಗಳನ್ನು ಹೊಂದಿದ್ದವು.

ಮಿಂಗ್‌ ರಾಜವಂಶದ ಅಂತ್ಯದ ವೇಳೆಗೆ, 1600 ರ ಸುಮಾರಿಗೆ ಪ್ರಾರಂಭವಾದ ಮಂಚು ಆಕ್ರಮಣಗಳಿಗೆ ಪ್ರತಿಯಾಗಿ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಮಹಾನ್‌ ಗೋಡೆಯು ನೆರವಾಯಿತು. ಯುವಾನ್‌ ಚೊಂಘುವಾನ್‌ ಎಂಬಾತನ ಸೇನಾ ನಾಯಕತ್ವದಡಿಯಲ್ಲಿ, ಅತೀವವಾದ ರಕ್ಷಣೆಯನ್ನು ಒದಗಿಸಲಾಗಿದ್ದ ಷಾನ್‌ಹೈಗುವಾನ್‌ ಕಣಿವೆಯಲ್ಲಿ ಮಂಚುಗಳನ್ನು ಹಿಮ್ಮೆಟ್ಟಿಸುವ ಮೂಲಕ, ಚೀನಾದ ಪ್ರಧಾನ ಭೂಭಾಗಕ್ಕೆ ಮಂಚುಗಳು ಪ್ರವೇಶಿಸುವುದನ್ನು ತಡೆಯಲಾಯಿತು. ಅಂತಿಮವಾಗಿ ಮಂಚುಗಳು 1644 ರಲ್ಲಿ ಮಹಾನ್‌ ಗೋಡೆಯನ್ನು ದಾಟಿಬರುವಲ್ಲಿ ಯಶಸ್ವಿಯಾದರು. ಷುನ್‌ ರಾಜವಂಶದ ಆಡಳಿತಗಾರರ ಕಾರ್ಯಚಟುವಟಿಕೆಗಳನ್ನು ಇಷ್ಟಪಡದಿದ್ದ ವು ಸಂಗುಯಿ ಎಂಬ ಓರ್ವ ಮಿಂಗ್‌ ಗಡಿರಕ್ಷಣಾ ಮುಖ್ಯಸ್ಥನಿಂದ ಷಾನ್‌ಹೈಗುವಾನ್‌ನಲ್ಲಿನ ಬಾಗಿಲುಗಳು ತೆರೆಯಲ್ಪಟ್ಟಿದ್ದರಿಂದಾಗಿ, ಮಂಚುಗಳು ಮಹಾನ್‌ ಗೋಡೆಯನ್ನು ದಾಟಲು ಸಾಧ್ಯವಾಯಿತು. ಮಂಚುಗಳು ಕ್ಷಿಪ್ರವಾಗಿ ಬೀಜಿಂಗ್‌ನ್ನು ತಮ್ಮ ವಶಕ್ಕೆ ತೆಗೆದುಕೊಂಡರು, ಮತ್ತು ಹೊಸದಾಗಿ ಸ್ಥಾಪನೆಗೊಂಡಿದ್ದ ಷುನ್‌ ರಾಜವಂಶವನ್ನು ಮತ್ತು ಉಳಿದಿದ್ದ ಮಿಂಗ್‌ ಪ್ರತಿರೋಧಕತೆಯನ್ನು ಸೋಲಿಸಿದರು. ಅಲ್ಲಿಂದ ಕ್ವಿಂಗ್‌ ರಾಜವಂಶವು ಸ್ಥಾಪನೆಯಾಯಿತು.

ಇಲ್ಲಿಯವರೆಗೆ ಕಂಡುಹಿಡಿಯದ, ಮಿಂಗ್‌ ರಾಜವಂಶದ ಅವಧಿಯಲ್ಲಿ ಕಟ್ಟಲಾದ ಹೆಚ್ಚುವರಿ 290 ಕಿಲೋಮೀಟರುಗಳಷ್ಟು (180 ಮೈಲುಗಳು) ಗೋಡೆಯ ಭಾಗಗಳು 2009 ರಲ್ಲಿ ಪತ್ತೆಯಾದವು. ಹೊಸದಾಗಿ ಕಂಡುಹಿಡಿಯಲ್ಪಟ್ಟ ವಿಭಾಗಗಳು ಉತ್ತರ ಭಾಗದ ಲಯೋನಿಂಗ್‌ ಪ್ರಾಂತ್ಯದಲ್ಲಿರುವ ಹುಷಾನ್‌ ಪರ್ವತಗಳಿಂದ ಪಶ್ಚಿಮ ಭಾಗದ ಗನ್ಸು ಪ್ರಾಂತ್ಯದಲ್ಲಿನ ಜಿಯಾಯುಗುವಾನ್‌ವರೆಗೂ ಹಬ್ಬಿವೆ. ಶುಷ್ಕ ವಲಯದಾದ್ಯಂತ ಬೀಸಿದ ಮರಳ ಬಿರುಗಾಳಿಗಳಿಂದಾಗಿ ಕಾಲಾನಂತರದಲ್ಲಿ ಈ ವಿಭಾಗಗಳು ಮುಳುಗಿಹೋದವು.

ಕ್ವಿಂಗ್‌ ಆಡಳಿತದಡಿಯಲ್ಲಿ, ಚೀನಾದ ಗಡಿಗಳು ಗೋಡೆಗಳಿಂದಾಚೆಗೆ ವಿಸ್ತರಣೆಗೊಂಡವು ಮತ್ತು ಸಾಮ್ರಾಜ್ಯಕ್ಕೆ ಮಂಗೋಲಿಯಾವು ಸೇರ್ಪಡೆಗೊಂಡಿತು. ಆದ್ದರಿಂದ ಮಹಾನ್‌ ಗೋಡೆಯ ನಿರ್ಮಾಣ ಕಾಮಗಾರಿ ಮತ್ತು ದುರಸ್ತಿ ಕಾರ್ಯಗಳು ಸ್ಥಗಿತಗೊಂಡವು.

ಜುಯೋಂಗ್ಗುವಾನ್‌ ಕಣಿವೆಯ “ಉತ್ತರ ಕಣಿವೆ”, ಬದಾಲಿಂಗ್‌ ಎಂದು ಇದಕ್ಕೆ ಹೆಸರಿದೆ. ಚೀನಿಯರು ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಇದನ್ನು ಬಳಸಿಕೊಂಡಾಗ, ಚೀನಾದ ರಾಜಧಾನಿಯಾದ ಬೀಜಿಂಗ್‌ನ್ನು ಸಂರಕ್ಷಿಸಲು ಗೋಡೆಯ ಈ ವಿಭಾಗವು ಅನೇಕ ರಕ್ಷಕ ಭಟರನ್ನು ಹೊಂದಿತ್ತು. ಬೆಟ್ಟಗಳಿಂದ ಪಡೆದ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾದ ಮಹಾನ್‌ ಗೋಡೆಯ ಈ ಭಾಗವು ಟೆಂಪ್ಲೇಟು : M to ft ಎತ್ತರವಾಗಿದೆ ಮತ್ತು ಟೆಂಪ್ಲೇಟು : M to ft ಅಗಲವಾಗಿದೆ.
ಜಿಯಾಯುಗುವಾನ್‌ ಕಣಿವೆಯ “ಪಶ್ಚಿಮ ಕಣಿವೆ”. ಈ ಕೋಡೆಯು ಮಹಾನ್‌ ಗೋಡೆಯ ಪಶ್ಚಿಮ ಭಾಗದ ಅಂಚುಗಳಿಗೆ ಸಮೀಪದಲ್ಲಿದೆ.

ಚೀನಾದ ಮಹಾನ್‌ ಗೋಡೆಯ ವರ್ಣನೆ
ಬೀಜಿಂಗ್‌ ಸಮೀಪದಲ್ಲಿರುವ ಮುಟಿಯಾನ್ಯುನಲ್ಲಿನ ಮಹಾನ್‌ ಗೋಡೆ

ಷಾನ್‌ಹೈಗುವಾನ್‌‌ನ “ಕಣಿವೆ”. ಈ ಕೋಟೆಯು ಮಹಾನ್‌ ಗೋಡೆಯ ಪೂರ್ವಭಾಗದ ಅಂಚುಗಳಿಗೆ ಸಮೀಪದಲ್ಲಿದೆ.

ಅತ್ಯಂತ ಕಡಿದಾದ ಇಳುಕಲುಗಳನ್ನು ಗೋಡೆಯು ಹತ್ತುವ ಭಾಗವು, ಮಿಂಗ್‌ ಮಹಾನ್‌ ಗೋಡೆಯ ಅತ್ಯಂತ ಆಕರ್ಷಕ ವಿಭಾಗಗಳಲ್ಲಿ ಒಂದಾಗಿದೆ. ಇದು ೧೧ kilometers (೭ mi) ಉದ್ದದವರೆಗೆ ಓಡುತ್ತದೆ, 5 ರಿಂದ 8 ಮೀಟರ್‌ಗಳಷ್ಟು (16–26 ಅಡಿ) ಎತ್ತರವಿದೆ, ಮತ್ತು ತಳದಾದ್ಯಂತ ಟೆಂಪ್ಲೇಟು : M to ft ನಷ್ಟಿದ್ದು, ತುದಿಯಾದ್ಯಂತ ಟೆಂಪ್ಲೇಟು : M to ft ರವರೆಗೆ ಕಿರಿದಾಗುತ್ತಾ ಹೋಗುತ್ತದೆ. ವಾಂಗ್‌ಜಿಂಗ್ಲೌ ಎಂಬುದು ಜಿನ್‌ಷಾನ್ಲಿಂಗ್‌‌ನ 67 ಕಾವಲು ಗೋಪುರಗಳಲ್ಲಿ ಒಂದಾಗಿದ್ದು, ಸಮುದ್ರ ಮಟ್ಟದಿಂದ ಟೆಂಪ್ಲೇಟು : M to ft ನಷ್ಟು ಎತ್ತರದಲ್ಲಿದೆ.

ಜಿನ್‌ಷಾನ್ಲಿಂಗ್‌‌ನ ಆಗ್ನೇಯ ಭಾಗವು, ಮುಟಿಯಾನ್ಯು ಮಹಾನ್‌ ಗೋಡೆಯಾಗಿದ್ದು, ಅತ್ಯುನ್ನತವಾದ, ಬಂಡೆಗಳಿಂದ ತೂಂಬಿದ ಪರ್ವತಗಳ ಉದ್ದಕ್ಕೂ ಆಗ್ನೇಯದಿಂದ ವಾಯವ್ಯಕ್ಕೆ ಸರಿಸುಮಾರು 2.25 ಕಿಲೋಮೀಟರುಗಳವರೆಗೆ (ಸುಮಾರು 1.3 ಮೈಲುಗಳು) ಸುತ್ತುತ್ತಾ ಹೋಗುತ್ತದೆ.

ಲಿಯಾವೋ ಟಿಯಾನ್ ಲಿಂಗ್‌ನ 25 ಕಿಮೀ ಪಶ್ಚಿಮಕ್ಕೆ ಮಹಾನ್‌ ಗೋಡೆಯ ಭಾಗವು ನಿಂತಿದ್ದು, ಅದು ಕೇವಲ 2~3 ಅಂತಸ್ತುಗಳಷ್ಟು ಎತ್ತರವಿದೆ. ಲಿನ್‌ ಟಿಯಾನ್‌ನ ದಾಖಲೆಗಳ ಅನುಸಾರ, ಗೋಡೆಯು ಇತರವುಗಳೊಂದಿಗೆ ಅತಿ ಕಡಿಮೆಯಾಗಿ ಹೋಲಿಸಲ್ಪಟ್ಟಿರುವುದು ಮಾತ್ರವಲ್ಲದೆ, ಇದು ಬೆಳ್ಳಿಯಂತೆಯೂ ಕಾಣಿಸಿಕೊಳ್ಳುತ್ತದೆ. ಈ ಗೋಡೆಯ ನಿರ್ಮಾಣಕ್ಕೆ ಷಾನ್‌ ಕ್ಸಿಯಿಂದ ತರಲಾದ ಕಲ್ಲುಗಳನ್ನು ಬಳಸಲಾಗಿದ್ದು, ಅಲ್ಲಿ ಅನೇಕ ಗಣಿಗಳು ಕಂಡುಬಂದಿರುವುದರಿಂದ, ಗೋಡೆಯು ಬೆಳ್ಳಿಯಂತೆ ಕಾಣಿಸುತ್ತದೆ ಎಂದು ಪುರಾತತ್ತ್ವ ಶಾಸ್ತ್ರಜ್ಞರು ವಿವರಿಸುತ್ತಾರೆ. ಅತೀವ ಹೆಚ್ಚು ಪ್ರಮಾಣದ ಲೋಹದ ಅಂಶವು ಸದರಿ ಕಲ್ಲುಗಳಲ್ಲಿರುವುದರಿಂದ ಇದು ಬೆಳ್ಳಿಯಂತೆ ಕಾಣುತ್ತದೆ. ಆದಾಗ್ಯೂ, ಮಹಾನ್‌ ಗೋಡೆಯು ಅನೇಕ ವರ್ಷಗಳಿಂದ ಶಿಥಿಲವಾಗುತ್ತಿರುವುದರ ಕಾರಣದಿಂದಾಗಿ, ಇಂದು ಗೋಡೆಯ ಬೆಳ್ಳಿ ಭಾಗವನ್ನು ನೋಡುವುದು ಅಪರೂಪವಾಗಿ ಪರಿಣಮಿಸಿದೆ.

ಮತ್ತೊಂದು ಗಮನಾರ್ಹ ವಿಭಾಗವು ಗೋಡೆಯ ಪೂರ್ವಭಾಗದ ತುತ್ತತುದಿಯ ಸಮೀಪವಿದೆ. ಈ ಭಾಗದಲ್ಲಿ, ಮಹಾನ್‌ ಗೋಡೆಯು ಹತ್ತುವ ಮೊದಲ ಪರ್ವತವಾದ ಷಾನ್‌ಹೈಗುವಾನ್‌ನ ಮೇಲೆ (“ಪ್ರಪಂಚದ ಅತ್ಯುತ್ಕೃಷ್ಟ ಕಣಿವೆ” ಎಂದೂ ಇದಕ್ಕೆ ಹೆಸರಿದೆ) ಮಹಾನ್‌ ಗೋಡೆಯ ಮೊದಲ ಕಣಿವೆಯು ನಿರ್ಮಿಸಲ್ಪಟ್ಟಿತು. ಜಿಯುಮೆನ್‌ಕೋವ್‌ ಇರುವಂತೆಯೇ ಜಿಯಾ ಷಾನ್‌ ಕೂಡಾ ಇಲ್ಲಿದ್ದು‌, ಅದು ಒಂದು ಸೇತುವೆಯಂತೆ ನಿರ್ಮಿಸಲ್ಪಟ್ಟ ಗೋಡೆಯ ಏಕೈಕ ಭಾಗವಾಗಿದೆ. ಸೋಂಗ್‌ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಮೆಂಗ್ ಜಿಯಾಂಗ್-ನ್ಯು ದೇವಾಲಯದ ಕಾರಣದಿಂದಾಗಿ, ಷಾನ್‌ಹೈಗುವಾನ್‌ ಮಹಾನ್‌ ಗೋಡೆಯು “ಮಹಾನ್‌ ಗೋಡೆಯ ನಿರ್ಮಾಣ ಕಾಮಗಾರಿಯ ವಸ್ತುಸಂಗ್ರಹಾಲಯ” ಎಂದು ಕರೆಯಲ್ಪಡುತ್ತದೆ.

ಚೀನಾದ ಮಹಾನ್‌ ಗೋಡೆಯ ವರ್ಣನೆ
ಮಂಜುಮುಸುಕಿದಾಗ ಮಹಾನ್‌ ಗೋಡೆಯು ಕಾಣುವ ರೀತಿ

ಆದಾಗ್ಯೂ, ಮಿಂಗ್‌ ರಾಜವಂಶದ ಅವಧಿಯಲ್ಲಿ, ಹಾಸುಬಿಲ್ಲೆಗಳು, ಸುಣ್ಣಕಲ್ಲು, ಮತ್ತು ಕಲ್ಲಿನಂಥ ಸಾಮಗ್ರಿಗಳಂತೆ ಇಟ್ಟಿಗೆಗಳನ್ನು ಗೋಡೆಯ ಅನೇಕ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಯಿತು. ಇಟ್ಟಿಗೆಗಳ ಗಾತ್ರ ಮತ್ತು ತೂಕವು, ಮಣ್ಣು ಮತ್ತು ಕಲ್ಲಿಗಿಂತ ಸುಲಭಸಾಧ್ಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟವು. ಆದ್ದರಿಂದ ನಿರ್ಮಾಣ ಕಾಮಗಾರಿಯು ಕ್ಷಿಪ್ರಗತಿಯಲ್ಲಿ ಸಾಗಿತು. ಎಲ್ಲಕ್ಕಿಂತ ಮಿಗಿಲಾಗಿ, ದಮ್ಮಸುಮಾಡಿದ ಮಣ್ಣಿಗಿಂತ ಇಟ್ಟಿಗೆಗಳು ಹೆಚ್ಚು ತೂಕವನ್ನು ಹೊರಬಲ್ಲವು ಹಾಗೂ ಉತ್ತಮವಾಗಿ ಸಹಿಸಿಕೊಳ್ಳಬಲ್ಲವು. ತನ್ನದೇ ಸ್ವಂತ ತೂಕದಡಿಯಲ್ಲಿ ಇಟ್ಟಿಗೆಗಿಂತ ಉತ್ತಮವಾಗಿ ಕಲ್ಲು ಹಿಡಿದುಕೊಳ್ಳಬಲ್ಲುದಾದರೂ, ಅದನ್ನು ಬಳಸುವುದು ತುಂಬಾ ಕಷ್ಟ. ಇದರ ಪರಿಣಾಮವಾಗಿ, ಆಯತಾಕಾರದ ವಿನ್ಯಾಸದಲ್ಲಿ ಕತ್ತರಿಸಲಾದ ಕಲ್ಲುಗಳನ್ನು ತಳಪಾಯ, ಒಳಗಿನ ಮತ್ತು ಹೊರಗಿನ ಏಣುಗಳು, ಮತ್ತು ಗೋಡೆಯ ಬಾಗಿಲುದ್ವಾರಗಳಿಗಾಗಿ ಬಳಸಲಾಯಿತು. ಕೋಟೆಮಾಳಿಗೆಗಳು ಗೋಡೆಯ ವಿಶಾಲ ಭಾಗದ ಅತಿ ಎತ್ತರದ ಭಾಗವನ್ನು ತುಂಬುತ್ತವೆ. ಇದರ ರಕ್ಷಣಾತ್ಮಕ ಅಂತರಗಳು 30 ಸೆಂಮೀಗಿಂತ (ಒಂದು ಅಡಿ) ಎತ್ತರವಾಗಿದ್ದು, ಅಗಲವು ಸುಮಾರು 23 ಸೆಂಮೀಗಳಷ್ಟಿದೆ (9 ಇಂಚುಗಳು).

ಬೀಜಿಂಗ್‌ನ ಉತ್ತರ ಭಾಗ ಮತ್ತು ಪ್ರವಾಸಿ ಕೇಂದ್ರಗಳ ಸಮೀಪವಿರುವ ಕೆಲವೊಂದು ಭಾಗಗಳು ಸಂರಕ್ಷಿಸಲ್ಪಟ್ಟಿದ್ದು, ವ್ಯಾಪಕವಾಗಿ ನವೀಕರಿಸಲ್ಪಟ್ಟಿವೆಯಾದರೂ, ಅನೇಕ ತಾಣಗಳಲ್ಲಿ ಗೋಡೆಯು ದುರಸ್ತಿ ಮಾಡಲಾಗದ ಸ್ಥಿತಿಯನ್ನು ತಲುಪಿದೆ. ಆ ಭಾಗಗಳು ಹಳ್ಳಿಯೊಂದರ ಆಟದ ಮೈದಾನವಾಗಿ ಇಲ್ಲವೇ, ಮನೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಲು ಬೇಕಾಗುವ ಕಲ್ಲುಗಳ ಒಂದು ಮೂಲವಾಗಿ ಪಾತ್ರವಹಿಸಬಹುದೆನಿಸುತ್ತದೆ. ಗೋಡೆಯ ವಿಭಾಗಗಳು ಗೀಚುಬರಹ ಮತ್ತು ವಿಧ್ವಂಸಕತೆಗೂ ಸಹ ಈಡಾಗುವಂತಿವೆ. ಗೋಡೆಯು ನಿರ್ಮಾಣದ ಹಾದಿಯಲ್ಲಿರುವುದರಿಂದಾಗಿ ಕೆಲವೊಂದು ಭಾಗಗಳು ನಾಶಗೊಳಿಸಲ್ಪಟ್ಟಿವೆ.

ಗನ್ಸು ಪ್ರಾಂತ್ಯದಲ್ಲಿನ ಗೋಡೆಯ 60 kilometres (37 mi)* ಕ್ಕಿಂತ ಹೆಚ್ಚು ಭಾಗವು, ಮರಳ ಬಿರುಗಾಳಿಗಳ ಕಾರಣದಿಂದಾಗಿ ಮುಂದಿನ 20 ವರ್ಷಗಳಲ್ಲಿ ಕಣ್ಮರೆಯಾಗಬಹುದು. ಕೆಲವೊಂದು ಕಡೆ ಗೋಡೆಯ ಎತ್ತರವು ಐದು ಮೀಟರುಗಳಿಗಿಂತ ಹೆಚ್ಚಿನ ಎತ್ತರದಿಂದ (16.4 ಅಡಿ) ಎರಡು ಮೀಟರುಗಳಿಗಿಂತಲೂ ಕಡಿಮೆಯ ಎತ್ತರಕ್ಕೆ ಕಡಿಮೆಗೊಳಿಸಲ್ಪಟ್ಟಿದೆ. ಗೋಡೆಯ ಅತ್ಯಂತ ಸುಪ್ರಸಿದ್ಧ ಬಿಂಬಗಳನ್ನು ನಿರೂಪಿಸುವ ಚೌಕಾಕಾರದ ವೀಕ್ಷಣಾ ಗೋಪುರಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಗೋಡೆಯ ಪಶ್ಚಿಮ ಭಾಗದ ಅನೇಕ ವಿಭಾಗಗಳನ್ನು ಇಟ್ಟಿಗೆ ಮತ್ತು ಕಲ್ಲಿನ ಬದಲಿಗೆ ಮಣ್ಣಿನಿಂದ ನಿರ್ಮಿಸಲಾಗಿದೆ, ಮತ್ತು ಈ ಕಾರಣದಿಂದಾಗಿ ಅದು ಹೆಚ್ಚು ಸವಕಳಿಗೊಳಗಾಗುತ್ತದೆ.

ಕಾವಲು ಗೋಪುರ
ವೈರಿಗಳ ಚಲನವಲನಗಳ ಕುರಿತು ರಕ್ಷಕ ಸೈನ್ಯಗಳನ್ನು ಎಚ್ಚರಿಸುವ ಹಾಗೂ ಸೈನ್ಯದ ಬಲವನ್ನು ಹೆಚ್ಚಿಸುವ ಸಾಮರ್ಥ್ಯವೂ ಸೇರಿದಂತೆ, ಮಹಾನ್‌ ಗೋಡೆಯ ಉದ್ದಕ್ಕೂ ಇರುವ ಸೇನಾ ತುಕಡಿಗಳ ನಡುವಿನ ಸಂವಹನೆಯು, ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಸೂಚನಾ ಗೋಪುರಗಳನ್ನು ಅವುಗಳ ದೃಗ್ಗೋಚರತೆಯ ಕಾರಣಕ್ಕಾಗಿ ಬೆಟ್ಟದ ತುದಿಗಳ ಮೇಲೆ ಅಥವಾ ಗೋಡೆಯ ಉದ್ದಕ್ಕೂ ಇರುವ ಇತರ ಎತ್ತರದ ಬಿಂದುಗಳಲ್ಲಿ ನಿರ್ಮಿಸಲಾಗಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

6 Comments

  1. hey there and thank you for your info – I’ve definitely picked up anything new from right here.
    I did however expertise a few technical issues using this site, as
    I experienced to reload the web site a lot of
    times previous to I could get it to load properly. I had been wondering if your web host is
    OK? Not that I’m complaining, but slow loading instances times will very frequently affect your
    placement in google and can damage your high-quality score if advertising and
    marketing with Adwords. Well I’m adding this RSS to my e-mail
    and can look out for much more of your respective fascinating content.
    Ensure that you update this again soon.. Lista escape roomów

  2. Das Casino bietet über 200 kreative Spielautomaten, die eine aufregende Mischung aus klassischen und modernen Themen präsentieren. Bei der Bewertung spielen Faktoren wie Sicherheit, Benutzerfreundlichkeit und
    die Geschwindigkeit der Auszahlungen eine zentrale Rolle.
    Diese Casinos bieten nicht nur eine Menge Spiele, sondern auch attraktive Bonusangebote und einen schnellen Kundendienst.
    Bitte beachten Sie, dass Sie mindestens 18 Jahre alt sein müssen, um diese Webseite und
    die Angebote von Online-Casinos und Wettanbietern zu nutzen. Die
    Nutzung von kann eine sichere und unkomplizierte Zahlungsmethode darstellen, wenn
    man einige grundlegende Tipps beachtet. Seriöse Online Casinos mit Paysafecard verwenden fortschrittliche Verschlüsselungstechnologien, um sicherzustellen, dass
    Ihre Transaktionen und persönlichen Informationen gesichert sind.

    Viele der besten Paysafecard Casinos Casinos bieten attraktive Willkommensboni an. Öffnen Sie den Kassenbereich
    und wählen dann eine alternative Auszahlungsmethode wie Banküberweisung, Skrill oder Neteller aus.
    Die Transaktion ist anonym, sicher und dauert meist weniger als eine Minute.
    Das Guthaben wird sofort Ihrem Spielkonto gutgeschrieben, sodass Sie direkt in der Paysafecard Online Spielhalle ihr Glück testen können. Tragen Sie, wenn sie im
    Casino spielen mit Paysafecard wollen, den 16-stelligen PIN-Code Ihrer Paysafecard in das vorgesehene Feld ein und bestätigen Sie die Zahlung.

    References:
    https://online-spielhallen.de/evolve-casino-deutschland-dein-umfassender-ratgeber/

  3. The deal would see Star give up assets, including its 50 per cent stake in the $3.6 billion Queen’s Wharf casino complex,
    and the Treasury car park and hotel. Brisbane’s resort and
    casino precinct Queen’s Wharf has faced financial woes.

    He said he would not like to see the company go into liquidation “for the people’s sake”.
    Bruce Mathieson, who operates poker machine and pub empire Australian Liquor and Hospitality with Woolworths,
    holds about a 10 per cent share in Star and has been interested in buying the
    Gold Coast casino. Earlier this month Star confirmed its partners in the Queen’s Wharf facility — Chow Tai Fook
    Enterprises (CTF) and Far East Consortium (FEC) — have offered to buy out its share.

    TubiTV is the world’s largest free ad-supported video on demand (AVOD) streaming service, offering a vast
    library of movies and TV shows at no cost to viewers. Watch thousands of free
    movies and TV shows on the largest ad-supported streaming service.
    You can watch everything from local news to true
    crime documentaries that are showing live on Tubi now.
    The streaming service offers a free ad-supported experience and boasts one of the largest collections of
    movies and TV shows on any free streaming service.
    Tubi is a treasure trove of over 40,000 movies and TV shows and
    over 200 live channels to watch.
    “The situation for Star workers in terms of this current financial crisis dates back to September of last year, but for many Star workers, they’ve been dealing with Star’s uncertainty for two to three years.”
    The potential collapse of the company puts the jobs of about 9,000 workers across
    its three casinos on the line. The casino group could be broken up in the process, as administrators
    would search for buyers for individual assets, if the company can’t be rescued as a whole.
    The company, which operates casinos in Brisbane, the Gold
    Coast and Sydney, confirmed on Monday morning that it would not be able
    to lodge its accounts until it secured a funding package.
    The future of Star Entertainment and its thousands of workers remains uncertain as the company’s efforts to
    secure a financial lifeline go down to the wire. Star Entertainment failed to deliver
    its financial results to the market on Friday.

    References:
    https://blackcoin.co/explore-the-worlds-biggest-source-of-information-about-online-casinos/

ಡಾ. ವೀರೇಂದ್ರ ಹೆಗ್ಗಡೆ ಜನುಮ ದಿನ

ಧರ್ಮಸ್ಥಳ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆ ಜನುಮ ದಿನ

ಪಂಚಮುಖಿ ಹನುಮ

ರಾಯಚೂರು ನಗರದಲ್ಲಿದೆ ಪಂಚಮುಖಿ ಹನುಮ, ಹಾಗೆಯೆ ಆಂಜನೇಯನ ಕೆಲವು ಅವತಾರಗಳ ಬಗ್ಗೆ