in , ,

ಹಳೇಬೀಡು ಇತಿಹಾಸ

ಹಳೇಬೀಡು
ಹಳೇಬೀಡು

ಈ ಊರು ಒಂದೊಮ್ಮೆ ಹೊಯ್ಸಳ ವಂಶದ ರಾಜಧಾನಿಯಾಗಿತ್ತು. ಹೊಯ್ಸಳರು ಹತ್ತನೆಯ ಶತಮಾನದ ಆರಂಭದಿಂದ ಹದಿಮೂರನೆಯ ಶತಮಾನದ ಅಂತ್ಯದವರೆವಿಗೂ ಈಗಿನ ಕರ್ನಾಟಕವೂ ಸೇರಿದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ದ ಕೆಲವು ಭಾಗಗಳನ್ನು ಆಳಿದ್ದರು. ಮೂಲತಃ ಹೊಯ್ಸಳರು ಕಲ್ಯಾಣದ ಚಾಲುಕ್ಯರಿಗೆ ಸಾಮಂತರಾಗಿದ್ದುಕೊಂಡೇ ಅಧಿಕಾರವನ್ನು ನೆಡೆಸಿದವರು. ೧೨ ನೆಯ ಶತಮಾನದ ಆರಂಭದಲ್ಲಿ ರಾಜ ವಿಷ್ಣುವರ್ಧನ ಮತ್ತು ವೀರಬಲ್ಲಾಳ ನ ಕಾಲದಲ್ಲಿ ಚಾಲುಕ್ಯರು ಅವನತಿಯನ್ನು ಕಂಡಾಗ ಇವರು ಹೆಚ್ಚು ಸ್ವತಂತ್ರವಾಗಿ ಆಡಳಿತವನ್ನು ನಡೆಸುತ್ತಾರೆ. ಹೊಯ್ಸಳರ ಮೂಲ ಊರು ಇಂದಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಅಂಗಡಿ ಎಂಬ ಪುಟ್ಟ ಗ್ರಾಮ. ಆಗಿಂದಾಗ್ಗೆ ಉಂಟಾಗುತ್ತಿದ್ದ ನೆರೆಯೆ ಶತ್ರುಗಳ ಕಿರುಕುಳದ ನಡುವೆಯೂ ಇವರು ತಮ್ಮ ರಾಜಕೀಯ ಕಾರ್ಯಕ್ಷ್ತೇತ್ರವನ್ನು ಇಂದಿನ ಹಾಸನ ಜಿಲ್ಲೆ ಯ ಮಧ್ಯಭಾಗದಲ್ಲೇ ಸ್ಠಿರಗೊಳಿಸಿಕೊಂಡು ರಾಜ್ಯಭಾರ ನಡೆಸುತ್ತಾರೆ. ಇಂದಿನ ಹಳೇಬೀಡು ಹೊಯ್ಸಳರ ಬಹುಕಾಲದ ರಾಜಧಾನಿಯಾಗಿ ಮೆರೆದಿದ್ದ ಊರು. ಹೊಯ್ಸಳರಿಗಿಂತ ಮುಂಚಿನಿಂದಲೂ ಅಸ್ತಿತ್ವದಲ್ಲಿ ಇದ್ದ ಊರಾದ್ದರಿಂದ ಜನಪದವಾಗಿ ಹಳೆಯ ಬೀಡು(ಊರು), ಹಳೇಬೀಡು ಎಂಬ ರೂಪಾಂತರಗಳನ್ನು ಕಂಡಿದೆ.

ಹಳೇಬೀಡು ಇತಿಹಾಸ
ಹಳೇಬೀಡು ಶಿಲ್ಪಕಲೆ

ಹಳೇಬೀಡಿನ ಐತಿಹಾಸಿಕ ನಾಗರಿಕತೆಯು ಇಂದಿಗಿಂತಲೂ ಉತ್ತಮವಾಗಿಯೇ ಇದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಅಂದು ಹೆಚ್ಚಿನವರು ಕೃಷಿಕರಾಗಿದ್ದು ವಸ್ತುವಿನಿಮಯ ಪಧ್ಧತಿಯನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಹೊಯ್ಸಳರ ರಾಜಕೀಯ ಮತ್ತು ಆರ್ಥಿಕ ಕೇಂದ್ರಸ್ಥಾನವಾಗಿದ್ದ ಈ ಊರು ಇಂದಿನ ಯಾವ ರಾಜಧಾನಿಗೂ ಕಡಿಮೆ ಇರಲಿಲ್ಲವೆಂದು ಅಂದುಕೊಳ್ಳಬಹುದು. ಊರಿನ ರಾಜಬೀದಿಗಳಲ್ಲಿ ನ್ಯಾಯವಾದಿಗಳು, ಆರ್ಥಿಕ ಪರಿಣತರು, ದೊಡ್ಡ ವ್ಯಾಪಾರಸ್ಥರು, ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರು ವಾಸಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ. ಕಲಾವಿದರು, ಸೇವಕರು ಮತ್ತು ಇತರೆ ಎಲ್ಲಾ ವರ್ಗದ ಜನರಿಗೂ ಉತ್ತಮ ಸೌಲಭ್ಯಗಳುಳ್ಳ ಕೇರಿಗಳೂ ಮರ್ಯಾದೆಗಳೂ ದೊರೆಯುತ್ತಿದ್ದವು. ವಿಶೇಷವಾಗಿ ಕಲಾವಿದರಿಗೆಂದೇ ಪ್ರತ್ಯೇಕವಾದ ವಿಹಾರಧಾಮಗಳೂ ಮತ್ತು ವಿದ್ಯಾಲಯಗಳೂ ಇದ್ದುವೆಂದು ಇಲ್ಲಿನ ಪ್ರಾಚೀನ ಕುರುಹುಗಳಿಂದ ತಿಳಿದುಬರುತ್ತದೆ. ಕುಂಬಾರರು, ಹಾಕುಮತದವರು ಮತ್ತು ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲರೂ ತಮ್ಮ ವೃತ್ತಿಯ ಜೊತೆಗೆ ಬಹುವಾಗಿ ಕೃಷಿಯನ್ನೇ ನಂಬಿಕೊಂಡಿದ್ದರು. ಆದರೆ, ಇಂದು ಆ ವೈಭವದ ದಿನಗಳ ಕುರುಹುಗಳು ಅತ್ಯಲ್ಪ ಎನ್ನುವಷ್ಟು ಉಳಿದಿದೆ. ಪದೇಪದೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದೂ ಅಲ್ಲದೆ ಬಹು ವರುಷಗಳ ಕಾಲ ಕಾಲಗರ್ಭದಲ್ಲಿ ಕಳೆದುಹೋಗಿದ್ದೂ ಸಹ ಹಳೇಬೀಡಿನ ನಾಗರಿಕತೆಯ ಕುರುಹುಗಳು ಕಡಿಮೆಯಾಗಲು ಕಾರಣ ಎನ್ನಬಹುದು. ಇಂದು ಹಳೇಬೀಡಿನ ಜನಸಂಖ್ಯೆ ಸುಮಾರು ಹತ್ತುಸಾವಿರದಷ್ಟಿದ್ದು ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ದೊರುಕುತ್ತಿವೆ. ವಾಸಿಸುತ್ತಿರುವ ಜನರಲ್ಲಿ ಅರ್ಧದಷ್ಟು ಮಂದಿ ಕೃಷಿಕರಿದ್ದು ಉಳಿದಂತೆ ಸರ್ಕಾರಿ ನೌಕರರು, ವ್ಯಾಪಾರಸ್ಥರು ಮುಂತಾಗಿ ಹಂಚಿಹೋಗಿದ್ದಾರೆ. ಇಂದಿಗೂ ಕೃಷಿ ಉತ್ಪನ್ನಗಳೇ ಇಲ್ಲಿನ ವ್ಯಾಪಾರದ ಮುಖ್ಯವಸ್ತು.

ಸುಮಾರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ಎಂಬುವವನು ಈ ಊರಿನಲ್ಲಿ ದೊಡ್ಡಕೆರೆಯೊಂದನ್ನು ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಈ ಕೆರೆಯು ೧೨೦೦ ಎಕರೆಗೂ ಮೀರಿ ವ್ಯಾಪ್ತಿಯನ್ನು ಹೊಂದಿದ್ದು ಈಗಲೂ ಕೆರೆಯು ನೀರಿನಿಂದ ತುಂಬಿಕೊಂಡಾಗ ಸಮುದ್ರದಂತೆ ತೋರುತ್ತದೆ. ಈ ಕಾರಣದಿಂದಾಗಿಯೇ ಈ ಕೆರೆಯನ್ನು ದೋರಸಮುದ್ರ ಎಂದು ಉಲ್ಲೇಖಿಸಲಾಗಿದೆಯೆಂದು ತಿಳಿದುಬರುತ್ತದೆ. ಅಂದಿನ ಕಾಲಕ್ಕೆ ದೋರಸಮುದ್ರ ಎನ್ನುವ ಹೆಸರೇ ಊರಿಗೂ ಇತ್ತೆಂದು ಹೊಯ್ಸಳರ ಕಾಲದ ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಹದಿನೆಂಟನೆಯ ಶತಮಾನದ ಆಸು-ಪಾಸಿನಲ್ಲಿ ದ್ವಾರಾವತಿ-ದ್ವಾರಸಮುದ್ರ ಎನ್ನುವ ಹೆಸರಿನ ಬಳಕೆಯೂ ಇತ್ತೆಂದು ಜನಪದದಿಂದ ತಿಳಿದುಬರುತ್ತದೆ. ದೋರಸಮುದ್ರ ಕೆರೆಯೇ ಅಂದಿನ ಕಾಲಕ್ಕೆ ಇಡೀ ರಾಜಧಾನಿಯ ಮತ್ತು ಸುತ್ತಲಿನ ಪ್ರದೇಶಗಳ ಮುಖ್ಯ ನೀರಾವರಿ ಸೌಲಭ್ಯವಾಗಿತ್ತು. ಇಂದಿನ ಬೇಲೂರು ಪಟ್ಟಣದ ಮೂಲಕ ಹರಿಯುವ ಯಗಚಿ ನದಿ ಅಥವಾ ಸೋಮವತೀ ಎನ್ನುವ ನದಿಯು ಈ ಕೆರೆಗೆ ನೀರುಣಿಸುವ ಮುಖ್ಯ ಮೂಲವಾಗಿತ್ತು. ಹನ್ನೆರಡೆನೆಯ ಶತಮಾನದಲ್ಲೇ ನದಿಯ ಪಾತ್ರದಿಂದ ದೊಡ್ಡ ಕಾಲುವೆಗಳನ್ನು ನಿರ್ಮಿಸಿರುವ ಕುರುಹುಗಳನ್ನು ಇಂದೂ ಕಾಣಬಹುದು. ಕೆಲವು ಕಾಲುವೆಗಳು ಇಂದಿಗೂ ದೊಡ್ಡಕೆರೆಗೆ ನೀರುಣಿಸುತ್ತಿವೆ..

ಹಳೇಬೀಡು ಇತಿಹಾಸ
ಹಳೇಬೀಡು

ರಾಜ ವಿಷ್ಣುವರ್ಧನನ ಕಾಲವನ್ನು ಹೊರತುಪಡಿಸಿ ಮಿಕ್ಕ ಎಂಟು ರಾಜರ ಕಾಲದಲ್ಲೂ ಇಂದಿನ ಹಳೇಬೀಡು ಪಟ್ಟಣವೇ ರಾಜಧಾನಿಯಾಗಿತ್ತೆಂದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಹೊಯ್ಸಳರಲ್ಲಿ ಒಂಬತ್ತು ಮಂದಿ ರಾಜರುಗಳು ಆಗಿಹೋಗಿದ್ದರೂ ವೀರಬಲ್ಲಾಳ , ವಿಷ್ಣುವರ್ಧನ ಮತ್ತು ನರಸಿಂಹ ಬಲ್ಲಾಳ ರು ಮಾತ್ರ ಹೆಚ್ಚು ಸಾಮರ್ಥ್ಯವುಳ್ಳರಾಗಿದ್ದರೆಂದು ಇತಿಹಾಸವು ಹೇಳುತ್ತದೆ.

ಅಂದಿನ ಈ ನಗರದಲ್ಲಿ ಸುಮಾರು ಒಂದು ಲಕ್ಷ ಮಂದಿ ವಾಸಿಸುತ್ತಿದ್ದು ನಗರದ ರಕ್ಷಣೆಗಾಗಿ ಹೊರವಲಯದಲ್ಲಿ ಸುತ್ತಲೂ ದೊಡ್ಡ ಕಲ್ಲುಗಳಿಂದ ಎರಡು ಸುತ್ತಿನ ಕೋಟೆಯನ್ನು ನಿರ್ಮಿಲಾಗಿತ್ತು. ಕೋಟೆಯ ಕುರುಹುಗಳನ್ನು ಇಂದೂ ಕಾಣಬಹುದು. ಊರಿನ ಪ್ರವೇಶಕ್ಕೆ ಒಟ್ಟು ಐದು ಹೆಬ್ಬಾಗಿಲುಗಳಿದ್ದುದು ಕೋಟೆಯ ರಚನೆಯಲ್ಲಿ ಕಂಡುಬರುತ್ತದೆ.

ಹೊಯ್ಸಳರ ಕಾಲದಲ್ಲಿ ಈ ಪ್ರಾಂತ್ಯವು ದಟ್ಟವಾದ ಮಲೆನಾಡಾಗಿದ್ದು ಕಾಡಿನ ಉತ್ಪನ್ನಗಳು ಹೆಚ್ಚಾಗಿ ಬಳಕೆಯಲ್ಲಿತ್ತು. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಮತ್ತು ಹುರುಳಿ, ರಾಗಿ ಮುಂತಾದ ಧಾನ್ಯಗಳನ್ನೂ ಬೆಳೆಯುತ್ತಿದ್ದರು. ಕೃಷಿ ಉತ್ಪನ್ನಗಳು ಸ್ಥಳೀಯವಾಗಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ ಹಣಕ್ಕೆ ಹೆಚ್ಚಿನ ಆದ್ಯತೆ ದೊರೆತಿರಲಿಲ್ಲ. ಬಂಗಾರ ಮುಂತಾದ ಬೆಲೆಬಾಳುವ ವಸ್ತುಗಳ ಬಳಕೆಯೂ ಕಡಿಮೆಯೇ ಇದ್ದೀತೆಂದು ಹೇಳಬಹುದು. ಆದರೆ, ಒಡವೆಗಳ ರಚನಾ ಚಾತುರ್ಯ ಮತ್ತು ತಾಂತ್ರಿಕತೆಯು ಉನ್ನತಮಟ್ಟದಾಗಿತ್ತೆಂಬುದು ಹೊಯ್ಸಳರ ಶಿಲ್ಪಕಲೆಯಿಂದಲೇ ತಿಳಿದುಬರುತ್ತದೆ. ಹೊಯ್ಸಳರ ಕಾಲದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಸಿಕ್ಕಿರುವ ಕೆಲವಷ್ಟನ್ನು ಇಲ್ಲಿಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಇಂದು ಈ ಪ್ರಾಂತ್ಯವು ಅರೆಮಲೆನಾಡು ಪ್ರದೇಶಕ್ಕೆ ಸೇರಿದ್ದು ಎಲ್ಲ ಬಗೆಯ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಾರೆ. ಸೂರ್ಯಕಾಂತಿ. ರಾಗಿ, ಹತ್ತಿ, ಮುಸುಕಿನ ಜೋಳ , ತೆಂಗು, ಬಾಳೆ ಇಲ್ಲಿಯ ಪ್ರಮುಖ ಉತ್ಪನ್ನಗಳಾಗಿದ್ದು ಅವರೆಕಾಯಿ , ಆಲೂಗೆಡ್ಡೆ ಮತ್ತು ಸೌತೆಕಾಯಿ ಋತುಮಾನದ ವಿಶೇಷ ಬೆಳೆಯಾಗಿದೆ. ಈ ಪ್ರಾಂತ್ಯದ ಅವರೆಕಾಯಿಗೆ ವಿಶೇಷ ರುಚಿಯ ಕಾರಣ ಹೆಚ್ಚು ಬೇಡಿಕೆ ಇದೆ. ಕಬ್ಬು ಮತ್ತು ಹತ್ತಿ ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಆ ಜಾಗವನ್ನು ಇಂದು ಶುಂಠಿ ಮತ್ತು ಅರಿಸಿನ ಬೆಳೆಗಳು ಆವರಿಸಿಕೊಂಡಿದೆ. ಅಡಿಕೆ, ಏಲಕ್ಕಿ ಮತ್ತು ಮೆಣಸನ್ನೂ ಸಹ ಸಾಮಾನ್ಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉಳಿದಂತೆ ಎಲ್ಲಾ ಆಧುನಿಕ ಅಂಗಡಿಗಳು , ಹೋಟೆಲ್ಲುಗಳು ಮುಂತಾದವು ಇಲ್ಲಿವೆ. ಸದ್ಯ ಇದು ಹಾಸನ ಜಿಲ್ಲೆ – ಬೇಲೂರು ತಾಲ್ಲೂಕಿನಲ್ಲಿ ಒಂದು ಹೋಬಳಿ ಕೇಂದ್ರವಾಗಿದೆ.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಏಕದಂತ

ವಿಘ್ನೇಶ್ವರನಿಗೆ ಏಕದಂತ ಎಂದು ಹೆಸರು ಬರಲು ಕಾರಣ ಏನು?

ಭೂತಾರಾಧನೆ

ಭೂತಾರಾಧನೆ ತುಳುನಾಡಿನ ಸಂಸ್ಕೃತಿ