in

ಇಲ್ಲಿ ವಿದ್ಯುತ್ ದೀಪ ಬಳಸುವಂತಿಲ್ಲ, ನಾಗಾರಾಧನೆಯ ಒಂದು ರೂಪ “ಡಕ್ಕೆಬಲಿ”

ನಾಗಾರಾಧನೆಯ ಒಂದು ರೂಪ "ಡಕ್ಕೆಬಲಿ"
ನಾಗಾರಾಧನೆಯ ಒಂದು ರೂಪ "ಡಕ್ಕೆಬಲಿ"

ಹೌದು, ಇವಾಗೆಲ್ಲ ಜಾತ್ರೆ ಅಂದರೆ, ಸ್ಟಾಲ್ ಗಳು, ಬಗೆ ಬಗೆಯ ತಿನಿಸುಗಳು. ದೇವರ ದರ್ಶನ ಮಾಡಿಕೊಂಡು ಬರ್ತೀವಿ ಅಂತ ಹೋಗುವವರು ಬಹುಶಃ ಕಮ್ಮಿ. 

ಆದರೆ ಇಲ್ಲೊಂದು ಕಡೆ ಪ್ರತಿ ವರ್ಷ ನಡೆಯುತ್ತೆ ನಾಗ ದೇವರಿಗೆ ಸೇವೆ, ಇಲ್ಲಿ ಯಾವುದೇ ಆಡಂಬರ ಇಲ್ಲ, ವಿದ್ಯುತ್ ದೀಪ ಬಳಸುವಂತಿಲ್ಲ ಬರೀ ಎಣ್ಣೆಯ ದೀಪಗಳು ಯಾವುದೇ ರೀತಿಯ ವಿದ್ಯುತ್ ಬಳಸಿ ಅಲಂಕಾರ ಮಾಡುವಂತಿಲ್ಲ ಎಷ್ಟೇ ದೊಡ್ಡ ವ್ಯಕ್ತಿಯಾದರು ಇಲ್ಲಿಗೆ ಬಂದರೆ ಆಸನದ ವ್ಯವಸ್ಥೆ  ಮಾಡುವಂತಿಲ್ಲ, ಬಂದವನು ನೆಲದ ಮೇಲೆ ಕುಳಿತುಕೊಳ್ಳಬೇಕು. ಇದು ಏನು ಸೂಚಿಸುತ್ತದೆ ಎಂದರೆ ಎಷ್ಟೇ ದೊಡ್ಡವನಾದರೂ ಆ ಭಗವಂತನ ಮುಂದೆ ಚಿಕ್ಕವನೇ.

ತುಳುನಾಡಿನಲ್ಲಿ ನಾಗಪೂಜೆಗೆ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ಆರಾಧನಾ ಕೇಂದ್ರಗಳಿವೆ. ನಾಗಬನ, ನಾಗನ ಕಟ್ಟೆ, ನಾಗನಕಲ್ಲು, ನಾಗನಹುತ್ತ, ನಾಗದೇವಾಲಯ ಮತ್ತು ಆಲಡೆಗಳಲ್ಲಿ ನಾಗಪೂಜೆಯ ಮೂಲಕ ನಾಗನನ್ನು ಸಂತೃಪ್ತಿಪಡಿಸುವ ವಿಧಿ-ವಿಧಾನಗಳು ನಿರಂತರವಾಗಿರುತ್ತವೆ. ಇಲ್ಲಿ ಆರಾಧಿಸುವ ದೈವ-ದೇವರುಗಳಲ್ಲಿ ನಾಗಬ್ರಹ್ಮ, ನಾಗರಾಜ, ನಾಗಕನ್ನಿಕೆ, ನಾಗಯಕ್ಷಿ ಮತ್ತು ತಂಬೂರಿ ನಾಗ ಪ್ರಮುಖವಾಗಿ ಕಂಡುಬರುತ್ತವೆ.

ಇಲ್ಲಿ ವಿದ್ಯುತ್ ದೀಪ ಬಳಸುವಂತಿಲ್ಲ, ನಾಗಾರಾಧನೆಯ ಒಂದು ರೂಪ "ಡಕ್ಕೆಬಲಿ"
ನಾಗನ ಚಿತ್ರ, ಮಂಡಲ ಮಾಡುತ್ತಾರೆ

ಡಕ್ಕೆಬಲಿ ಎಂಬುದು ನಾಗಾರಾಧನೆಯ ಒಂದು ರೂಪವಾಗಿದೆ, ಇದನ್ನು ತುಳುನಾಡಿನ ತುಳು ಜನರು ನಾಗಾರಾಧನೆ ಮತ್ತು ಪ್ರಕೃತಿಯ ಆರಾಧನೆ ಎಂದೂ ಕರೆಯುತ್ತಾರೆ. ಇದು ಭಾರತದ ಕರ್ನಾಟಕ, ಉಡುಪಿ ಜಿಲ್ಲೆಯ ಪಡುಬಿದ್ರಿ ಪಟ್ಟಣದಲ್ಲಿ ವಿಶಿಷ್ಟವಾಗಿ ಆಚರಣೆಯಲ್ಲಿದೆ. ಈ ಉತ್ಸವವು ಪ್ರತಿ ವರ್ಷಕ್ಕೊಮ್ಮೆ ನಡೆಯುತ್ತದೆ, ಇದು ಸಮೀಪದ ಉಡುಪಿಯಲ್ಲಿ ಪರ್ಯಾಯ ಉತ್ಸವದೊಂದಿಗೆ ಪರ್ಯಾಯವಾಗಿ ನಡೆಯುತ್ತದೆ. ಇದು ಪ್ರತಿ ವರ್ಷ ತಂತ್ರಾಡಿ ಬೈರಿ ಬೆಟ್ಟು ಉಡುಪಿ ಜಿಲ್ಲೆ ಡಕ್ಕೆಬಲಿ (ಬ್ರಹ್ಮ ಮಂಡಲ) ದಲ್ಲಿ ನಡೆಯುತ್ತದೆ. ಈ ಪೂಜೆನಾಗ, ಬ್ರಹ್ಮ, ರಕ್ತೇಶ್ವರಿ, ನಂದಿಕೊನ್ನ, ಹಾಯ್ಗುಳ್ಳಿ, ಕ್ಷೇತ್ರಪಾಲ, ಬಾಗಿಲು ಬೊಬ್ಬರ್ಯ, ಮೋಟುಕಾಳು ಬೊಬ್ಬರ್ಯ, ಮತ್ತು ಯಕ್ಷಿಯರಿಗಾಗಿ ಪ್ರದರ್ಶಿಸಲಾಗುತ್ತದೆ. ಇದು ಪಂಚ ಶೈವ ಕ್ಷೇತ್ರವಾಗಿದೆ.

ನಾಗಬನಗಳಲ್ಲಿ ಮುಖ್ಯವಾಗಿ ತನುತರ್ಪಣ, ನಾಗ ತಂಬಿಲ, ಆಶ್ಲೇಷಾ ಬಲಿ ಇತ್ಯಾದಿ ಸೇವೆಗಳು ಜರುಗುತ್ತವೆ. ಪ್ರಸ್ತುತ ತುಳುನಾಡಿನ ಬಹುತೇಕ ನಾಗಬನಗಳಲ್ಲಿ ಬ್ರಾಹ್ಮಣ ವೈದಿಕರು, ಪುರೋಹಿತರು ಪೂಜೆ ಮಾಡುತ್ತಾರೆ. ನಾಗಬನಗಳಲ್ಲಿ ನಾಗನೇ ಪ್ರಮುಖವಾಗಿವಾಗಿದ್ದಾನೆ. ಅಂತೆಯೇ ಬ್ರಹ್ಮಸ್ಥಾನ, ಆಲಡೆಗಳಲ್ಲಿಯೂ ನಾಗನೇ/ನಾಗಬ್ರಹ್ಮನೆ ಮುಖ್ಯ ದೈವವಾಗಿ ಪೂಜಿಸಲ್ಪಡುತ್ತಾನೆ. ಒಂದು ಅಂದಾಜಿನ ಪ್ರಕಾರ ತುಳುನಾಡಿನಲ್ಲಿ ನಾಗಬನ-ದೈವಬನಗಳೆಲ್ಲ ಸೇರಿದಂತೆ ದೇವರ ಕಾಡುಗಳ ಸಂಖ್ಯೆ ಸರಿಸುಮಾರು ೪೫ ರಿಂದ ೫೦ ಸಾವಿರ.

ಡಕ್ಕೆಬಲಿಯು ಎಲ್ಲರೂ ಭಕ್ತಿಯಿಂದ  ಪ್ರಾರ್ಥಿಸುವುದರ ಫಲಿತಾಂಶವಾಗಿದೆ, ಭಗವಂತನಿಗೆ ಸಂಕೀರ್ಣವಾದ ಉಡುಗೊರೆಗಳನ್ನು ನೀಡುವುದು, ಸಂಗೀತಕ್ಕೆ ನೃತ್ಯ ಮಾಡುವುದು, ದೀಪಗಳು (ಬೆಳಕು), ಮಂಡಲಗಳು, ಹೂವುಗಳು, ಹಣ್ಣುಗಳು ಮತ್ತು ಪಿಂಗಾರಗಳನ್ನು ಬಿಡಿಸುವುದು ಮತ್ತು ಒಟ್ಟಿಗೆ ಪ್ರಾರ್ಥಿಸುವುದು.

ಅನೇಕ ದೇವಾಲಯಗಳಲ್ಲಿ ನಾಗನನ್ನು ದೈವರೂಪದಲ್ಲಿ ಕೋಲ ಕಟ್ಟಿ ಪೂಜಿಸುವ ಸಂಪ್ರದಾಯವೂ ಇದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ನಾಗದೇವಾಲಯ ಎಂಬ ಹೆಸರು ಪಡಿದಿದ್ದು, ನಾಗಸಂಬಂಧಿ ಪೂಜೆ, ಹರಕೆಗಳಿಗಾಗಿ ದೇಶದ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಸಂತಾನಹೀನತೆ, ಚರ್ಮರೋಗ ಮತ್ತು ಇನ್ನಿತರೆ ಖಾಯಿಲೆಗಳನ್ನು ನಾಗ-ಸುಬ್ರಹ್ಮಣ್ಯ ನಿವಾರಿಸುವನೆಂಬ ನಂಬಿಕೆಯಿದೆ.

 ಪಾಣಾರು ನಡೆಸುವ ‘ಡಕ್ಕೆ ಬಲಿ’ ಎಂಬ ಶೀರ್ಷಿಕೆಯಲ್ಲಿಯೇ ಇದು ಅವೈದಿಕ ರೂಪದಲ್ಲಿ ಆರಾಧನೆ ಎಂಬುದನ್ನು ಕಂಡುಕೊಳ್ಳಬಹುದು. ‘ಡಕ್ಕೆ’ ಒಂದು ಚರ್ಮವಾದ್ಯ, ‘ಬಲಿ’ ಎನ್ನುವುದು ರಕ್ತಾರ್ಪಣೆಯ ಮೂಲಕ ಸಂತೃಪ್ತಿಪಡಿಸುವುದು. ಡಕ್ಕೆ ಬಲಿ ಆರಾಧನೆ ಯಾವಾಗ ಪ್ರಾರಂಭವಾಯಿತು ಎಂಬುದು ತಿಳಿದಿಲ್ಲವಾದರೂ,  ಕ್ರಿ.ಶ. ೧೪೫೮ರ ಬಾರಕೂರು ಶಾಸನವೊಂದರಲ್ಲಿ ಡಕ್ಕೆ ಬಲಿಯ ಉಲ್ಲೇಖವಿದೆ ಅನ್ನಬಹುದು. ಹಾಯ್ಗುಳಿ, ಚಿಕ್ಕು, ಹಳೆಯಮ್ಮ, ಬೊಬ್ಬರ್ಯ, ಮಾಂಕಾಳಿ, ಉಮ್ಮಳ್ತಿ ಮೊದಲಾದ ದೈವಗಳ ಸನ್ನಿಧಿಯಲ್ಲಿ ಡಕ್ಕೆ ಬಲಿ ನಡೆಯುತ್ತದೆ. ಡಕ್ಕೆ ಬಲಿ ಬಗ್ಗೆ ಅಮೃತ ಸೋಮೇಶ್ವರ ಅವರು “ಈ ‘ಡಕ್ಕೆ’ ಎಂಬುದು ‘ಯಕ್ಷ’ ಎಂಬುದರಿಂದ ಬಂದಿರಲೂಬಹುದು (ಯಕ್ಷ-ಜಕ್ಕ-ದಕ್ಕ-ಡಕ್ಕ). ಯಕ್ಷಾರಾಧನೆ ಹಿಂದೆ ಈ ವಾದ್ಯವನ್ನು ಬಳಸುತ್ತಿರಬಹುದು. ಈಗಲೂ ಯಕ್ಷನ ಗುಡಿಯ ಮುಂದೆ ದಕ್ಕೆಬಲಿ ಜರಗುವುದಿದೆ. ನಾಗನೂ ಒಬ್ಬ ಯಕ್ಷ ನೇ ಅಲ್ವಾ”?

ಉಡುಪಿ ಜಿಲ್ಲೆಯ ವೈದ್ಯ ಕುಟುಂಬದವರೇ ಹೆಚ್ಚಾಗಿ ಡಕ್ಕೆಬಲಿಯನ್ನು ತಯಾರಿಸುವ ಹೊಣೆ ಹೊತ್ತಿದ್ದಾರೆ. ಡಕ್ಕೆ ವಾದ್ಯವನ್ನು ವೈದ್ಯರು ಆನುವಂಶಿಕ ಕೌಶಲ್ಯವಾಗಿ ನುಡಿಸುತ್ತಾರೆ. ಅವರು ಉಡುಪಿ ಪ್ರದೇಶದ ನೆರೆಹೊರೆಯಾದ ನಾಲ್ಕೂರಿನಲ್ಲಿ ವಾಸಿಸುತ್ತಿದ್ದಾರೆ. ನಾಗ ಕನ್ನಿಕೆಯನ್ನು ಪ್ರತಿನಿಧಿಸುವ ರೀತಿಯಲ್ಲಿ ಪುರುಷರು ಉಡುಗೆ ತೊಡುತ್ತಾರೆ. ನಾಗ ಕನ್ನಿಕೆಯನ್ನು ಹಿರಿಯ ವೈದ್ಯರು ವಿಶಿಷ್ಟವಾಗಿ ನುಡಿಸುತ್ತಾರೆ.

ಇಲ್ಲಿ ವಿದ್ಯುತ್ ದೀಪ ಬಳಸುವಂತಿಲ್ಲ, ನಾಗಾರಾಧನೆಯ ಒಂದು ರೂಪ "ಡಕ್ಕೆಬಲಿ"
ನಾಗ ಪಾತ್ರಿಗಳಿಂದ ನೃತ್ಯ

ದೈವಾರಾಧನೆಯಲ್ಲಿ ದೈವಗಳಿಗೆ ಸಲ್ಲುವ ಪೂಜೆಗಳಲ್ಲಿ ನಾಗತಂಬಿಲ ಒಂದು. ನಾಗತಂಬಿಲವನ್ನು ‘ತನು ಹಾಕುವುದು’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹೂ, ಹಣ್ಣು, ಹಾಲು, ಎಳನೀರು, ತಾಂಬೂಲಗಳನ್ನು ನಾಗನಿಗೆ ಅರ್ಪಿಸಲಾಗುತ್ತದೆ. ಸಹಜ ಚಿಕ್ಕಗಾತ್ರದ ಮರಗಳ ಬುಡದಲ್ಲಿ ಹುತ್ತಗಳ ಸಮೀಪ ಹಾಕಿ ಪೂಜಿಸಿದ ಮೂಲ ಆರಾಧನಾ ಸ್ವರೂಪಕ್ಕೂ ಮೂರನೇ ಹಂತದ ನಾಗತಂಬಿಲ ರೀತಿಗೂ ಆಗಿರುವ ಬದಲಾವಣೆಯನ್ನೂ, ಬ್ರಾಹ್ಮಣೀಕರಣದ ಮೊದಲ ಹಂತವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಇದರ ಜೊತೆ ಜೊತೆಗೆ ನಾಗಪ್ರತಿಷ್ಠೆಯೂ ವೈಚಾರಿಕತೆಯ ಮೂಲಕ ನಾಗಾರಾಧನೆಯಲ್ಲಿ ಪ್ರವೇಶ ಪಡೆಯಿತೆಂದು ಹೇಳಬಹುದು.

‘ಡಕ್ಕೆ ಬಲಿ’ ಶೀರ್ಷಿಕೆಯಲ್ಲಿಯೇ ಇದೊಂದು ಸ್ಥಳೀಯ ಆಚರಣೆ ಎಂಬುದನ್ನು ಗುರುತಿಸಬಹುದು. ಬಹುತೇಕ ತುಳು ಸಂಸ್ಕೃತಿ ದೈವಾರಾಧನೆಯಲ್ಲಿ ‘ಬಲಿ’ಯ ಮೂಲಕ ದೈವಗಳನ್ನು ಸಂತೃಪ್ತಿಪಡಿಸಲು ಸಾಧ್ಯ ಎಂಬುದನ್ನು ಹಿರೀಕರು, ಜನಪದರು ನಂಬಿಕೊಂಡಿದ್ದರು. ಹಾಗಾಗಿ ತಲೆ ತಲಾಂತರದಿಂದಲೂ ರೀತಿಯಲ್ಲಿ ಬದಲಾದರೂ ಮುಂದುವರೆದುಕೊಂಡು ಬಂದಿದೆ. ವೈದಿಕ ಸಂಸ್ಕೃತಿಯಲ್ಲಿ ಕುಂಬಳಕಾಯಿ ಒಡೆದು ಕುಂಕುಮ ಹಾಕಿದರೆ ಶಾಸ್ತ್ರೋಕ್ತ ರೀತಿಯಲ್ಲಿ ಅದು ‘ಬಲಿ’ ಸಮರ್ಪಣೆ ಎಂದೇ ಪರಿಗಣಿತವಾಗುತ್ತದೆ. ಆದರೆ ಅವೈದಿಕ ಸಂಸ್ಕೃತಿಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿಯ ರಕ್ತಾರ್ಪಣೆಯೇ ‘ಬಲಿ’ಯಾಗಿರುತ್ತದೆ.

ನಾಗಬೆರ್ಮರ್ ತುಳುವರ ಆದಿಮೂಲ ದೈವವಾಗಿದ್ದು, ಬ್ರಹ್ಮಸ್ಥಾನ ಅಥವಾ ಆಲಡೆಗಳೆಂಬ ಆರಾಧನಾ ಕೇಂದ್ರಗಳಲ್ಲಿ ಪೂಜಿಸಲ್ಪಡುತ್ತಾನೆ. ಇದೇ ಆಲಯಗಳಲ್ಲಿಯೂ ಡಕ್ಕೆ ಬಲಿಯಂತೆಯೇ ಹಾಯ್ಗುಳಿ, ಮರ್ಲ್‍ಚಿಕ್ಕು, ಮಾಂಕಾಳಿಯಮ್ಮ ಮುಂತಾದ ದೈವಗಳೂ ಆರಾಧನೆಗೆ ಒಳಗಾಗುತ್ತಿರುವುದನ್ನು ಸ್ಪಷ್ಟವಾಗುತ್ತದೆ. ಡಕ್ಕೆ ಬಲಿ ‘ವೈದ್ಯ’ರ ಮೂಲಕ ವೈದಿಕ ಸಂಸ್ಕೃತಿಗೆ ಸ್ಥಿತ್ಯಂತರಗೊಂಡಿರುವುದು ಸ್ಪಷ್ಟವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಸಿವಿಲ್ಲ ಅನ್ನುವ ಮಕ್ಕಳಿಗೆ

ಹಸಿವಿಲ್ಲ ಅನ್ನುವ ಮಕ್ಕಳಿಗೆ ತಾಯಂದಿರು ಈ ಕ್ರಮಗಳನ್ನು ಅನುಸರಿಸಿ

ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ

ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ ಎಂದರೆ ಕಾರಣ ಏನಿರಬಹುದು?