in ,

ಹಸಿವಿಲ್ಲ ಅನ್ನುವ ಮಕ್ಕಳಿಗೆ ತಾಯಂದಿರು ಈ ಕ್ರಮಗಳನ್ನು ಅನುಸರಿಸಿ

ಹಸಿವಿಲ್ಲ ಅನ್ನುವ ಮಕ್ಕಳಿಗೆ
ಹಸಿವಿಲ್ಲ ಅನ್ನುವ ಮಕ್ಕಳಿಗೆ

ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಆದ್ದರಿಂದ ಸಣ್ಣಗಿದ್ದಾರೆ ಅನ್ನುವುದು ತುಂಬಾ ತಾಯಿಂದಿರ ಚಿಂತೆಯಾಗಿದೆ. ಮಕ್ಕಳು ವಯಸ್ಸಿಗೆ ತಕ್ಕ ಕನಿಷ್ಠ ತೂಕವನ್ನು ಹೊಂದಿಲ್ಲವೆಂದರೆ ಅನಾರೋಗ್ಯ ಸಮಸ್ಯೆ ಕಾಣುವುದು.

ಸಾಮಾನ್ಯವಾಗಿ ಎರಡು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಲ್ಲಿ ಬೆಳವಣಿಗೆ ಕಡಿಮೆಯಾಗುತ್ತದೆ. ಆದ್ದರಿಂದ ಆಹಾರದ ಅವಶ್ಯ ಹಾಗೂ ಹಸಿವು ಕೂಡ ಕಮ್ಮಿ ಇರುತ್ತದೆ. ಮಕ್ಕಳಿಗೆ ಹಸಿವಾದಾಗ ಆಹಾರ ಕೊಡುವ ಬದಲು ವೇಳಾಪಟ್ಟಿಯಂತೆ ಆಹಾರ ಕೊಡುವುದರಿಂದ ಮಕ್ಕಳು ಕೊಟ್ಟ ಆಹಾರವನ್ನು ತಿರಸ್ಕರಿಸುತ್ತಾರೆ.

ಮಕ್ಕಳು ಊಟ ಮಾಡಲ್ಲ ಅಂದ್ರೆ ನೀವು ನೀಡುವ ಟಾನಿಕ್ ಅಥವಾ ಇನ್ಯಾವುದೋ ಆಹಾರ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬೇಕು.

ಹಸಿವಿಲ್ಲ ಅನ್ನುವ ಮಕ್ಕಳಿಗೆ ತಾಯಂದಿರು ಈ ಕ್ರಮಗಳನ್ನು ಅನುಸರಿಸಿ
ತಾಯಂದಿರಿಗೆ ಕಷ್ಟವಾದ ಕೆಲಸ ಮಕ್ಕಳಿಗೆ ತಿನ್ನಿಸುವುದು

ಮಕ್ಕಳ ಊಟ ತಾಯಂದಿರ ದೊಡ್ಡ ತಲೆ ನೋವು. ಆಹಾರ ತಿಂದಿಲ್ಲವೆಂದ್ರೆ ಮಕ್ಕಳು ಆರೋಗ್ಯ ಹದಗೆಡುತ್ತೆ. ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ. ಹಸಿ ತರಕಾರಿ, ಬೇಳೆ,ಕಾಳು, ಡ್ರೈಫ್ರೂಟ್ಸ್ ಗಳನ್ನು ಮಕ್ಕಳಿಗೆ ನೀಡ್ಲೇಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಸಿಕ್ಕದೆ ಮಾತ್ರ ಮಕ್ಕಳು ಆರೋಗ್ಯ ಸುಧಾರಿಸಿ, ಮಕ್ಕಳು ಸದೃಢವಾಗಿರಲು ಸಾಧ್ಯ. ಇದಕ್ಕೆ ಪಾಲಕರು ಏನೆಲ್ಲ ಪ್ರಯತ್ನ ನಡೆಸ್ತಾರೆ. ಎಂಥ ರುಚಿಯಾದ ಆಹಾರ ಮುಂದಿಟ್ಟರೂ ಮಕ್ಕಳು ಮಾತ್ರ ತಿನ್ನೋದಿಲ್ಲ. ಮೊದಲು ಮಕ್ಕಳ ಹಸಿವನ್ನು ಹೆಚ್ಚಿಸಬೇಕು. ಇಂದು ಮಕ್ಕಳ ಹಸಿವು ಹೆಚ್ಚಾಗುವ ಆಹಾರದ ಬಗ್ಗೆ ಮಾಹಿತಿ ತಿಳಿಯೋಣ

ಒಂದೇ ಬಾರಿ ಮಕ್ಕಳಿಗೆ ಹೆಚ್ಚು ಆಹಾರ ಸೇವನೆ ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಅನೇಕ ಮಕ್ಕಳು ಪ್ಲೇಟ್ ನಲ್ಲಿ ಆಹಾರ ಬಿಡ್ತಾರೆ. ಹಾಗಾಗಿ 2 ಗಂಟೆಗೊಮ್ಮೆ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡ್ತಿರಿ. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಆಹಾರವನ್ನು ತಿನ್ನಲು ಮತ್ತು ಜೀರ್ಣಿಸಿಕೊಳ್ಳಲು ಉತ್ತೇಜಿಸುತ್ತದೆ.

ಸೊಪ್ಪು, ತರಕಾರಿಗಳನ್ನು ಅಧಿಕವಾಗಿ ಕೊಡಬೇಕು: ಹಸಿ ಸೊಪ್ಪಿನಲ್ಲಿ ಆರೋಗ್ಯಕರ ಪ್ರೊಟೀನ್ ಗಳು ಮತ್ತು ವಿಟಮಿನ್ ಗಳಿರುತ್ತವೆ. ಅಲ್ಲದೆ ವಿಟಮಿನ್ ಇರುವ ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಮಕ್ಕಳ ತೂಕ ಹೆಚ್ಚಾಗುವುದು.

ಮಕ್ಕಳಿಗೆ ಹಾಲು ಅತ್ಯಗತ್ಯ. ಅಂಥ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಡೈರಿ ಉತ್ಪನ್ನಗಳನ್ನು ನೀಡಿ. ಹಾಲಿನ ಬದಲು ಮಕ್ಕಳು ಮೊಸಲು, ಚೀಸ್ ಇಷ್ಟಪಡ್ತಿದ್ದರೆ ಅದನ್ನು ನೀಡಿ. ಕೆಲ ಮಕ್ಕಳು ಮಿಲ್ಕ್ ಶೇಕ್ ಇಷ್ಟಪಡ್ತಾರೆ. ಅಂಥವರಿಗೆ ನೀವು ಮಿಲ್ಕ್ ಶೇಕ್ ಮಾಡಿ ಕೊಡಿ.

ಮೊಸರು ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಮತ್ತು ಕ್ಯಾಲ್ಸಿಯಂ ಹೊಂದಿರುತ್ತದೆ. ಮೊಸರಿನ ಸೇವನೆಯಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಹಸಿವು ಕೂಡ ಹೆಚ್ಚುತ್ತದೆ. 

ಮಕ್ಕಳ ಆಹಾರಕ್ರಮದಲ್ಲಿ ಹಣ್ಣುಗಳನ್ನು ತಪ್ಪದೆ ಸೇರಿಸಬೇಕು. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮಕ್ಕಳಿಗೆ ಹೆಚ್ಚು ಶಕ್ತಿ ಬರುತ್ತದೆ. ಕೃತಕ ಸಿಹಿ ಇರುವ ಆಹಾರ, ಕುರುಕಲು ತಿಂಡಿಗಳನ್ನು ಕಡಿಮೆ ಕೊಡುವುದು.

ಅಡುಗೆ ಮಾಡುವಾಗ ಮಕ್ಕಳ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮಸಾಲೆಯನ್ನು ಬಳಸಿ. ಕೊತ್ತಂಬರಿ ಪುಡಿ, ದಾಲ್ಚಿನ್ನಿ, ಸೋಂಪು ಸೇರಿದಂತೆ ಅನೇಕ ಮಸಾಲೆಗಳು ಹಸಿವು ಹೆಚ್ಚಿಸುತ್ತವೆ.

ಕಡಲೆಕಾಯಿ ಹಸಿವನ್ನು ಹೆಚ್ಚಿಸುತ್ತದೆ. ಅಲ್ಲದೆ ಪ್ರೊಟೀನ್ ಉತ್ತೇಜಿಸುವ ಅಂಶಗಳು ಇದ್ರಲ್ಲಿದೆ. ಇದು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಹಸಿ ಕಡಲೆಕಾಯಿಯನ್ನು ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ಕಡಲೆಕಾಯಿಯ ರುಚಿ ಹೆಚ್ಚಿಸಿ ಅವರಿಗೆ ನೀಡಿ. ಮಕ್ಕಳಿಗೆ ಕಡಲೆಕಾಯಿಯನ್ನು ಹುರಿದು ಅಥವಾ ಕಡಲೆಕಾಯಿಯಲ್ಲಿ ಸ್ವೀಟ್ ತಯಾರಿಸಿ ನೀಡಿ.

ಹೊಟ್ಟೆ ಹಸಿವು ಕಡಿಮೆಯಾಗಲು ಸತುವಿನಂಶ ಕಡಿಮೆಯಾಗಿರುವುದು ಕಾರಣವಾಗಿದೆ. ಆದರೆ ಸತುವಿನಂಶ ಅಧಿಕವಿರುವ ಆಹಾರಗಳನ್ನು ಕೊಡಬೇಕು. ಬಟಾಣಿ, ಬೀನ್ಸ್, ಕಲ್ಲಂಗಡಿ, ಹಾಲನ್ನು ಕೊಡುವುದು ಆರೋಗ್ಯಕ್ಕೆ ಒಳ್ಳೆಯದು.

ಹಸಿವಿಲ್ಲ ಅನ್ನುವ ಮಕ್ಕಳಿಗೆ ತಾಯಂದಿರು ಈ ಕ್ರಮಗಳನ್ನು ಅನುಸರಿಸಿ
ಡೈರಿ ಉತ್ಪನ್ನ ಒಳ್ಳೆಯದು

ಮಕ್ಕಳ ಹಸಿವು ಹೆಚ್ಚಾಗ್ಬೇಕು, ಒಳ್ಳೆ ಆಹಾರ ತಿನ್ನಬೇಕೆಂದ್ರೆ ನೀವು ಕಷ್ಟಪಟ್ಟಾದ್ರೂ ಶುಂಠಿ – ಜೇನುತುಪ್ಪ ತಿನ್ನಿಸಲೇಬೇಕು. ಶುಂಠಿ ಪುಡಿಗೆ ಜೇನುತುಪ್ಪ ಸೇರಿಸಿ ಸ್ವಲ್ಪ ತಿನ್ನಲು ನೀಡಿ.

ಮಕ್ಕಳಿಗೆ ದಿನಕ್ಕೆ 1-2 ಗ್ಲಾಸ್ ನಿಂಬೆ ಪಾನಕವನ್ನು ನೀಡಿ. ನಿಂಬೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಗುವಿನ ಹಸಿವನ್ನು ಹೆಚ್ಚಿಸುತ್ತದೆ.

ಪುದೀನಾ ಚಟ್ನಿಯನ್ನು ಕೂಡ ಮಕ್ಕಳಿಗೆ ನೀಡಬಹುದು. ಪುದೀನಾ ಮಕ್ಕಳ ಹಸಿವನ್ನು ಹೆಚ್ಚಿಸುತ್ತದೆ. ದೋಸೆ, ಚಪಾತಿ ಜೊತೆ ಪುದೀನಾ ಚಟ್ನಿಯನ್ನು ಮಕ್ಕಳಿಗೆ ತಿನ್ನಿಸುವ ಪ್ರಯತ್ನ ಮಾಡಿ.

ಒಂದು ಮನೆಮದ್ದು ಪ್ರಯತ್ನಿಸಿ ನೋಡಿ :

ಎರಡು ಲೋಟ ನೀರನ್ನು ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಒಂದು ಸ್ಪೂನ್ ಜೀರಿಗೆ ಹಾಕಿ ಕುದಿಸಿ ಅಂದರೆ ಎರಡು ಲೋಟ ನೀರು ಹಾಕಿದರೆ ಅದು ಒಂದು ಲೋಟ ನೀರು ಆಗುವ ತನಕ ಚೆನ್ನಾಗಿ ಕುದಿಸಬೇಕು.

ನಂತರ ಇದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಆರಲು ಬಿಡಿ ಅನಂತರ ಅದನ್ನು ಶೋಧಿಸಿಕೊಳ್ಳಿ ಆಮೇಲೆ ಇದನ್ನು ಮಕ್ಕಳಿಗೆ ಪ್ರತಿದಿನ ಕೊಡಿ ಇನ್ನೂ ಈ ಜೀರಿಗೆಯಲ್ಲಿ ಹಲವಾರು ಅದ್ಭುತವಾದ ಪ್ರಯೋಜನಗಳಿವೆ ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗಾಗಿ ಮಕ್ಕಳಿಗೆ ತಾವು ಸೇವಿಸಿದ ಆಹಾರ ಜೀರ್ಣವಾಗಿ ಹಸಿವು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಬೆಲ್ಲದಲ್ಲಿ ಆಂಟಿ ಬಯೋಟೆಕ್ ಗುಣ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳ ಗಮನ ಊಟದತ್ತ ಹರಿಸಬೇಕು :

ಹಸಿವಿಲ್ಲ ಅನ್ನುವ ಮಕ್ಕಳಿಗೆ ತಾಯಂದಿರು ಈ ಕ್ರಮಗಳನ್ನು ಅನುಸರಿಸಿ
ಸಹಭೋಜನ ಮಾಡಿ

* ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲ ಸೇರಿ ಸಹಭೋಜನ ಮಾಡಿ.

* ಊಟದ ಸಮಯದಲ್ಲಿ ಗಮನ ಸೆಳೆಯುವ ಇತರೇ ಚಟುವಟಿಕೆಯನ್ನು ನಿರ್ಬಂಧಿಸಿ.

* ತಾವೇ ಊಟ ಮಾಡುವಂತೆ ಪ್ರೇರಣೆ ನೀಡಬೇಕು.

* ಊಟದ ಸಮಯವನ್ನು ಸಂಘರ್ಷ ರಹಿತ ಸಮಯವನ್ನಾಗಿಸಿ.

* ಪೋಷಕರು ಮಕ್ಕಳ ಜತೆ ಕುಳಿತು ಊಟ ಮಾಡಬೇಕು.

* ಜವಾಬ್ದಾರಿ ಹಂಚಿಕೊಳ್ಳಿ. ಮಕ್ಕಳು ಎಷ್ಟು ತಿನ್ನಬೇಕು ಎಂದು ನಿರ್ಧರಿಸುತ್ತಾರೆ. ಪೋಷಕರು ಎಲ್ಲಿ ,ಎಷ್ಟು ತಿನ್ನಬೇಕು ಅನ್ನುವುದನ್ನು ಹೇಳಬೇಕು.

* ಆಹಾರ ತಿನ್ನಿಸಲು ಬಲವಂತ ಬೇಡ. ಒಂದೇ ಬಾರಿ ಹೆಚ್ಚು ತಿನ್ನಿಸುವ ಬದಲು ಹಲವು ಬಾರಿ ಸ್ವಲ್ಪ ವೇ ತಿನ್ನಿಸುವುದು ಸೂಕ್ತ.

* ಅತಿಯಾದ ಹಾಲು ಸೇವನೆ ಬೇಡ. ಜಂಕ್‌ಫುಡ್ ನೀಡಬೇಡಿ.

* ಮಕ್ಕಳನ್ನು ಅಡುಗೆ ಅಥವಾ ಊಟದ ತಯಾರಿಯಲ್ಲಿ ತೊಡಗಿಸುವುದರಿಂದ ಅವರಿಗೂ ಅದರಲ್ಲಿ ಆಸಕ್ತಿ ಮೂಡುತ್ತದೆ.

* ಆಹಾರವನ್ನು ಆಕರ್ಷಕವಾಗಿ ತಯಾರಿಸುವುದು ಹಾಗೂ ಪ್ರಸ್ತುತ ಪಡಿಸುವುದರಿಂದ ವೈವಿಧ್ಯತೆ ಕಾಪಾಡಿಕೊಳ್ಳಬಹುದು.

* ಯಾವುದೇ ಔಷಧೋಪಚಾರಗಳಿಂದ ಮಕ್ಕಳಿಗೆ ಊಟ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಟಾನಿಕ್ ಹಾಗೂ ಆರೋಗ್ಯ ಪಾನೀಯ ನೀಡುವ ಅಗತ್ಯವಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹುತಾತ್ಮರ ದಿನ

ಜನವರಿ 30, ಹುತಾತ್ಮರ ದಿನ ಅಥವಾ ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ

ನಾಗಾರಾಧನೆಯ ಒಂದು ರೂಪ "ಡಕ್ಕೆಬಲಿ"

ಇಲ್ಲಿ ವಿದ್ಯುತ್ ದೀಪ ಬಳಸುವಂತಿಲ್ಲ, ನಾಗಾರಾಧನೆಯ ಒಂದು ರೂಪ “ಡಕ್ಕೆಬಲಿ”