in

ಪಾಂಡವರ ಬತ್ತಿ

ಪಾಂಡವರ ಬತ್ತಿ
ಪಾಂಡವರ ಬತ್ತಿ

ಆರತಿ ಸೊಪ್ಪು, ಆದ್ರಿ, ದೊಡ್ಡ ನಾಥದ ಗಿಡ, ಋಷಿ ಪತ್ರೆ…. ಮುಂತಾದ ಹತ್ತಾರು ಹೆಸರಿನಿಂದ ಕರೆಯಲ್ಪಡುವ 12 – 15 ಅಡಿ ಎತ್ತರ ಬೆಳೆಯುವ ಅಪರೂಪದ ಔಷದೀಯ ಗುಣಗಳನ್ನು ಹೊಂದಿರುವ ಪುಟ್ಟ ಮರ.

ಈ ಚಿಗುರಿಗೆ, ಹಸಿಯಾಗಿದ್ದರೂ ಸಹ ಉರಿಯುವ ಗುಣವಿದೆ. ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಕಾಡಿನ ಹಾದಿಯಲ್ಲಿ ಬೆಳಕಿಗಾಗಿ ಇದನ್ನು ಉರಿಸುತ್ತಿದ್ದರೆಂದು ಪ್ರತೀತಿ. ಹಾಗಾಗಿ ಇದಕ್ಕೆ ಪಾಂಡವರ ಬತ್ತಿ ಎಂಬ ಹೆಸರು ಸಹ ಇದೆ.

ಕ್ಯಾಲಿಕಾರ್ಪಾ ಟೊಮೆಂಟೋಸಾ ಎಂಬುದು ಕುಟುಂಬದಲ್ಲಿ ಬ್ಯೂಟಿಬೆರಿ ಸಸ್ಯದ ಒಂದು ಜಾತಿಯಾಗಿದೆ. ಇದು ಭಾರತ ಮತ್ತು ಶ್ರೀಲಂಕಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇದು ಸುಮಾರು 5 ಮೀಟರ್ ಎತ್ತರವಿರುವ ಚಿಕ್ಕ ಮರವಾಗಿದೆ. ಎಲೆಗಳು ಸರಳವಾಗಿದ್ದು ವಿರುದ್ಧವಾಗಿರುತ್ತವೆ. ದೀರ್ಘವೃತ್ತದಿಂದ ವಿಶಾಲ ಅಂಡವೃತ್ತದವರೆಗೆ, ಚೂಪಾದ ಅಥವಾ ಮೊನಚಾದ ತುದಿ. ನೇರಳೆ ಹೂವುಗಳು ಕವಲೊಡೆದ ಅಕ್ಷಾಕಂಕುಳಿನ ಸೈಮ್ಗಳನ್ನು ತೋರಿಸುತ್ತವೆ. ಹಣ್ಣು 3-4 ಬೀಜಗಳ ಗೋಳಾಕಾರದ ಡ್ರೂಪ್ ಆಗಿದೆ. ಹಣ್ಣುಗಳು ವನ್ಯಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ಅವುಗಳನ್ನು ಕೆಲವೊಮ್ಮೆ ಗಿಡಮೂಲಿಕೆ ಔಷಧಿ ತಯಾರಿಸಲು ಬಳಸಲಾಗುತ್ತದೆ. ಎಲೆಗಳು ವನ್ಯಜೀವಿಗಳಿಗೂ ಆಹಾರ. ಎಲೆಯನ್ನು ಎಣ್ಣೆಯ ದೀಪವನ್ನು ಬೆಳಗಿಸಲು ಬತ್ತಿಯಾಗಿ ಬಳಸಲಾಗುತ್ತದೆ ಎಂದು ತಿಳಿದಿದೆ.

ಜೂಜಿನಲ್ಲಿ ಸೋತ ಪಾಂಡವರು ವನವಾಸಕ್ಕೆಂದು ಕಾಡಿಗೆ ಹೊರಟರು. ವೃದ್ಧೆಯಾದ ಕುಂತಿಯು ಹಸ್ತಿನಾಪುರದಲ್ಲಿಯೇ ವಿದುರನ ಮನೆಯಲ್ಲಿ ಉಳಿದಳು. ದುಃಖದಿಂದ ಬಿಕ್ಕಳಿಸುತ್ತಿದ್ದ ಕುಂತಿಯು ದ್ರೌಪದಿಗೆ ಸಮಾಧಾನ ಹೇಳುತ್ತಾ, “ಧರ್ಮವು ನಿನ್ನನ್ನು ಕಾಪಾಡುತ್ತದೆ’ ಎಂದು ಧೈರ್ಯ ಹೇಳಿದಳು. “ಸಹದೇವನು ಬಹಳ ಸೂಕ್ಷ್ಮ ಸ್ವಭಾವದವನು, ಅವನನ್ನು ಹೆಚ್ಚು ಎಚ್ಚರಿಕೆಯಿಂದ ನೋಡಿಕೋ’ ಎಂದೂ ಹೇಳಿದಳು. ಪಾಂಡವರು ಕುಂತಿಗೆ ಸಾಂತ್ವನ ಹೇಳಿದರು. ಪುರಜನರೆಲ್ಲರೂ ದುಃಖ ಪಡುತ್ತಿರುವಂತೆ ಅವರು ಕಾಡಿಗೆ ಹೊರಟರು, ಕುಂತಿಯು ವಿದುರನ ಮನೆಗೆ ಹೋದಳು.

ಪಾಂಡವರ ಬತ್ತಿ
ಪಾಂಡವರ ಬತ್ತಿ

ಅಪರೂಪದ ಮರದ ಮೊಗ್ಗಿಗೆ ಇದೆ ತಾಸುಗಟ್ಟಲೆ ಉರಿಯುವ ಶಕ್ತಿ ಇದರ ಹೆಸರು ಕರಿಕಲುಮರ. ಕೈಕರಿಕಲು ಮರ ಎಂತಲೂ ಕರೀತಾರೆ. ಪಾಂಡವರ ಬತ್ತಿ ಮರವೆಂದು ಇದು ಪುರಾಣ ಪ್ರಸಿದ್ಧ. ಈ ಮರ, ಅರಣ್ಯಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅದೇ ರೀತಿ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲೂ ಈ ಮರಗಳಿದ್ದು, ತೇಗಿನ ಜಾತಿಗೆ ಸೇರಿದ ಪ್ರಭೇದ ಅಂತಾರೆ ಪರಿಸರ ತಜ್ಞರು. ಕರಿಕಲು ಮರದ ಮೊಗ್ಗುಗಳು ಎಷ್ಟು ಬೆಳಕು ನೀಡುತ್ತವೋ, ಇವುಗಳಲ್ಲರಳುವ ಹೂಗಳು ಅಷ್ಟೇ ಸುವಾಸನೆ ಭರಿತವಾಗಿವೆ. ಈ ಮರದಲ್ಲರಳುವ ಹೂವಿನ ಮೊಗ್ಗುಗಳಿಗೆ ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಹೀಗಾಗಿಯೇ ಎಲೆಗಳು ತಾಸುಗಟ್ಟಲೆ ಉರಿಯಬಲ್ಲವು ಎಂಬುದು ಮತ್ತೊಂದು ಅಚ್ಚರಿ.

ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ. ಪಾಂಡವರು ವನವಾಸದಲ್ಲಿದ್ದ ವೇಳೆ ಬುಡಕಟ್ಟು ಮಹಿಳೆಯೊಬ್ಬಳಿಂದ ದ್ರೌಪದಿ ಈ ಮರದ ಮೊಗ್ಗಿನ ಬಗ್ಗೆ ತಿಳಿದುಕೊಂಡಳಂತೆ. ಹಸ್ತಿನಾವತಿಯಿಂದ ತಂದಿದ್ದ ಎಣ್ಣೆಬತ್ತಿಗಳು ಮುಗಿಯುವ ಹಂತಕ್ಕೆ ಬಂದಾಗ ಬುಡಕಟ್ಟು ಜನರು ಉಪಯೋಗಿಸುತ್ತಿದ್ದ ಈ ಮೊಗ್ಗು ನೆನಪಿಗೆ ಬಂದು, ಭೀಮನ ಮೂಲಕ ಕರಿಕಲು ಮರದ ಮೊಗ್ಗುಗಳನ್ನು ತರಿಸಿಕೊಂಡು, ಹಣತೆ ಹೊತ್ತಿಸಿದಳು ಎಂಬ‌ ಐತಿಹ್ಯವೂ ಇದೆ ಎನ್ನುತ್ತಾರೆ ವಿಜಿಕೆಕೆಯ ಶಿಕ್ಷಕ ರಾಮಾಚಾರಿ.

ಪಾಂಡವರ ಬತ್ತಿ ಮರ ಬೆಳಕು ನೀಡುವುದಷ್ಟೇ ಅಲ್ಲದೆ ಕಾಡಿನ‌ ಮಕ್ಕಳ ಬದುಕಿಗೂ ಆಸರೆಯಾಗಿದೆ. ಈ ಮರದ ಹೂಗಳು ಹೆಚ್ಚು ಸುವಾಸನೆಯಿಂದ ಕೂಡಿರುವುದರಿಂದ ಜೇನುನೊಣಗಳು ಮಕರಂದ ಹೀರಿ‌ ಕೆಲವೊಮ್ಮೆ ಮರದಲ್ಲಿ ಗೂಡು ಕಟ್ಟುತ್ತದೆ. ಸೋಲಿಗರ ಜೇನು ಸಂಗ್ರಹಕ್ಕೆ ಈ ಮರ ಅತ್ಯವಶ್ಯಕ.‌ ರೊಟ್ಟಿ ಹಬ್ಬದ ವೇಳೆ ಈ ಮರದ ಎಲೆಗಳಿಂದ ರೊಟ್ಟಿ ತಯಾರಿಸುತ್ತಾರೆ.‌ ಸಾಮಾನ್ಯ ದಿನಗಳಲ್ಲಿ ಮುದ್ದೆಯನ್ನೂ ತಯಾರಿಸಿ ಈ ಎಲೆಯಲ್ಲಿ ಊಟ ಮಾಡುವ ಪರಿಪಾಠ ಇಂದಿಗೂ ಮುಂದುವರೆದಿದೆ.

ಪಾಂಡವರ ಬತ್ತಿ
ಪಾಂಡವರ ಬತ್ತಿ ಸಸ್ಯ

ಈ ಸಸ್ಯದ ಬೀಜಗಳ ಕಷಾಯವನ್ನು ನಮ್ಮ ಪಕ್ಕದ ಬಾಂಗ್ಲಾದೇಶದಲ್ಲಿ ಮೂತ್ರಕೋಶದ ತೊಂದರೆ ಮತ್ತು ರಕ್ತದೊತ್ತಡ ನಿವಾರಣೆಗಾಗಿ ಬಳಸುತ್ತಾರೆ.

ಹಾಗೂ ಬಲಿತ ಬೀಜಗಳಿಂದ ತೆಗೆದ ಎಣ್ಣೆಯನ್ನು ಅಲ್ಲಿನ ಯುನಾನಿ ವೈದ್ಯರು ಪಾರ್ಶುವಾಯು ತೊಂದರೆಯ ಉಪಶಮನದ ಮಸಾಜ್ ಗೆ ಉಪಯೋಗಿಸುತ್ತಾರೆ.

ಮಲೇರಿಯಾ ಹಾಗೂ ವಿಷಮ ಶೀತ ಜ್ವರಕ್ಕೆ :- ತಲಾ 5 ಗ್ರಾಮ್ ಬೇರಿನ ಚೂರ್ಣ ಮತ್ತು ತೊಗಟೆಯ ಚೂರ್ಣಗಳನ್ನು ಒಂದು ಲೀಟರ್ ನೀರಲ್ಲಿ ಕುದಿಸಿ, ಅರ್ಧಕ್ಕೆ ಇಳಿಸಿದ ಕಷಾಯವನ್ನು ಹೊತ್ತಿಗೆ 10 ml ನಂತೆ ದಿನಕ್ಕೆ 3 ಸಲ ಸೇವಿಸಬೇಕು.

ಇಬ್ಬನ್ನೇ ಸಸ್ಯದಲ್ಲಿ ಸಾಕಸ್ಟು ಒಲಿಯೊನೊಲಿಕ್ ಆಮ್ಲ ಅಂಶವಿದ್ದು, 1 ಗ್ರಾಮ್ ತೊಗಟೆಯ ಚೂರ್ಣವನ್ನು ಕಾಯಿಸಿ ಆರಿಸಿದ ನೀರಿನಲ್ಲಿ ದಿನಕ್ಕೆ ಒಮ್ಮೆ ಮಾತ್ರ ಸೇವಿಸುವುದರಿಂದ ಯಕೃತ್ತಿನ ಎಲ್ಲ ತೊಂದರೆಗಳು ನಿವಾರಣೆ ಆಗುತ್ತೆ.

ಜೊತೆಗೆ ಉರ್ಸೋಲಿಕ್ ಆಮ್ಲ ಇದ್ದು ಇದು ದೇಹದ ಕೆಟ್ಟ ಬಿಳಿ ಕೊಬ್ಬನ್ನು ನಿವಾರಿಸುವ ಗುಣ ಹೊಂದಿದೆ.

ಹೆಚ್ಚಾಗಿರುವ ಲುಪಿಯೋಲ್ ಪ್ರಾಸ್ಟೇಟ್ ಅಂಶ ಮತ್ತು ಪ್ರಾಸ್ಟೇಟ್ ಚರ್ಮ ಕ್ಯಾನ್ಸರ್ ನಿವಾರಣೆಗೆ ಸಹಕಾರಿಯಾಗಿರುತ್ತದೆ. ಜೊತೆಗೆ ಇದೇ ಅಂಶ ಮಲೇರಿಯಾ ನಿವಾರಕ ಸಹ ಹೌದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವೀರ ಕೇಸರಿ ಪೃಥ್ವಿರಾಜ್ ಚೌಹಾಣ್

ವೀರ ಕೇಸರಿ ಪೃಥ್ವಿರಾಜ್ ಚೌಹಾಣ್

ರಬ್ಬರ್ ಮರ ಮತ್ತು ಬಳಕೆ

ರಬ್ಬರ್ ಮರ ಮತ್ತು ಬಳಕೆ