in

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ

ಬಾಲ್ಯ ಕಾಣದೆ, ಬೆಂಕಿಯಲ್ಲಿ ಜನಿಸಿದವಳು. ತಂದೆಯ ಕೋಪ, ಶಾಪ, ದ್ವೇಷ ಹೊತ್ತುಕೊಂಡು ಬಂದವಳು. ಹೌದು ದ್ರೌಪದಿ ಪಾಂಚಾಲ ರಾಜನ ಮಗಳು, ಪಾಂಡವರ ಪತ್ನಿ. ದ್ರುಪದರಾಜನ ಮಗಳಾಗಿ ಹುಟ್ಟಿ, ಸ್ವಯಂವರದಲ್ಲಿ ಪಣವಾಗಿರಿಸಿದ್ದ ಮತ್ಸ್ಯ ಯಂತ್ರವನ್ನು ಅರ್ಜುನ ಭೇದಿಸಿದಾಗ ದ್ರೌಪದಿ ವರುಣಮಾಲಿಕೆಯನ್ನು ಅರ್ಜುನನ ಕೊರಳಿಗೆ ಹಾಕಿ ಅವನನ್ನು ವರಿಸುತ್ತಾಳೆ. ಕುಂತಿಯ ಅಜಾಗರೂಕ ಮಾತಿನಿಂದ ಈಕೆ ಪಾಂಡವರ ಧರ್ಮಪತ್ನೀಯಾಗ ಬೇಕಾಗುತ್ತದೆ.

ಮಹಾರಾಣಿ ದ್ರೌಪದಿಯ ಹುಟ್ಟು ಹೆಸರು ಕೃಷ್ಣೆಯೆಂಬುದು ಮತ್ತು ಅನ್ವರ್ಥ ನಾಮ. ಕಾರಣ ಅವಳ ಬಣ್ಣ ಕಪ್ಪು ಅಥವಾ ಕಂದು. ಅವಳು ದ್ರುಪದನ ಮಗಳಾದ್ದರಿಂದ ದ್ರೌಪದಿ ಎಂದು ಹೆಸರು. ಪಾಂಚಾಲ ದೇಶದ ಕನ್ಯೆಯಾದ್ದರಿಂದ ಪಾಂಚಾಲಿ ಎಂದು ಹೆಸರು. ದ್ರೋಣನಿಂದ ಅವಮಾನಿತನಾದ ದ್ರುಪದ ಅರ್ಜುನನನ್ನು ಮದುವೆಯಾಗುವ ಮಗಳನ್ನೂ ದ್ರೋಣನನ್ನು ಸಂಹರಿಸಬಲ್ಲ ಮಗನನ್ನು ಪಡೆಯಲು ತಪಸ್ವಿಗಳ ಸಹಾಯ ಪಡೆದ. ಆತನಿಗೆ ಸಹಾಯಮಾಡಿದ ಯಾಜ್ಞಿಕರು ನಿರ್ಮಿಸಿದ ಯಾಗ ಕುಂಡದಿಂದ ಪ್ರಾಯ ಪ್ರಬುದ್ಧರಾದ ದೃಷ್ಟದ್ಯುಮ್ನನೂ ದ್ರೌಪದಿಯೂ ಎದ್ದು ಬಂದರು. ದ್ರುಪದನ ಅಪೇಕ್ಷೆಯಂತೆ ಜನಿಸಿದ್ದರಿಂದ ಅವರು ದ್ರುಪದನ ಮಕ್ಕಳೆನಿಸಿದರು. ಅವಳು ಯಜ್ಞದಿಂದ ಹುಟ್ಟಿಬಂದುದರಿಂದ ಯಾಜ್ಞಸೇನಿ ಅಥವಾ ಯಾಜ್ಞಸೇನೆ ಎಂದು ಹೆಸರು ಬಂತು.

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ

ಮತ್ಸ್ಯ ಯಂತ್ರವನ್ನು ಭೇದಿಸಿದ ಅರ್ಜುನ ತನ್ನ ನಾಲ್ವರು ಸೋದರರೊಡನೆ ಈಕೆಯನ್ನು ವರಿಸಿದ. ದ್ರೌಪದಿ ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಶ್ರುತಸೋಮ, ಅರ್ಜುನನಿಂದ ಶ್ರತುಕೀರ್ತಿ, ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಸೇನ ಎಂಬ ಐದು ಜನ ಮಕ್ಕಳನ್ನು ಪಡೆದಳು. ಪಾಂಡವರಿಗೂ ಕೌರವರಿಗೂ ಇದ್ದ ಬದ್ಧದ್ವೇಷದ ಫಲವಾಗಿ ಈಕೆ ಪಡಬಾರದ ಕಷ್ಟಗಳನ್ನು ಪಟ್ಟಳು. ರಾಜಸೂಯಯಾಗ ಸಂದರ್ಭದಲ್ಲಿ ದೂರ್ಯೋಧನನನ್ನು ಕಂಡು ಈಕೆ ಪರಿಹಾಸ ಮಾಡಿದಳಾಗಿ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ದುರ್ಯೋಧನ ಮುಂದೆ ದ್ಯೂತದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನು ಹೆಂಡತಿಯನ್ನು ಪಣವಾಗಿಟ್ಟು ಸೋತ ಕಾಲದಲ್ಲಿ ಈಕೆಯನ್ನು ತುಂಬಿದ ಸಭೆಗೆ ಕರೆಸಿ ವಸ್ತ್ರಾಪಹರಣ ಮಾಡಲು ಯತ್ನಿಸಿದ.

ಇಲ್ಲಿಂದ ದ್ರೌಪದಿಯ ಕಷ್ಟದ ಕತೆ ಮೊದಲಾಯಿತು ತನ್ನ ಮುಡಿಯನ್ನು ಹಿಡಿದೆಳೆದ ದುಶ್ಯಾಸನನ್ನು ಆಹುತಿ ತೆಗೆದುಕೊಳ್ಳುವವರೆಗೂ ತಾನು ಮುಡಿಗಟ್ಟೆನೆಂದು ಪಣತೊಟ್ಟಳು. ಹಾಗೆಯೇ ತೊಡೆಯೇರೆಂದು ತೊಡೆತಟ್ಟಿದ ದುರ್ಯೋಧನನ ತೊಡೆಗಳನ್ನು ಮುರಿಯುವುದಾಗಿ ಭೀಮ ಪಣ ತೊಟ್ಟ. ಈ ಎರಡು ಪ್ರತಿಜ್ಞೆಗಳು ಪೂರೈಸುವವರೆಗೆ, 12 ವರ್ಷ ವನವಾಸದಲ್ಲಿ, ಒಂದು ವರ್ಷ ಅಜ್ಞಾತವಾಸದಲ್ಲಿ ಅನಂತರದ 18 ದಿನಗಳ ಭಾರತಯುದ್ಧ ಸಮಯದಲ್ಲಿ ತುಂಬ ನವೆದವಳೆಂದರೆ ದ್ರೌಪದಿಯೇ. ವನವಾಸ ಕಾಲದಲ್ಲಿ ಜಯದ್ರಥ ಈಕೆಯನ್ನು ಅಪಹರಿಸಬಂದು ಪರಾಜಿತನಾದ. ಅಜ್ಞಾತವಾಸದಲ್ಲಿ ಕೀಚಕ ಈಕೆಯನ್ನು ಕೆಣಕಿ ಅಸುನೀಗಿದ. ಉಪಕೀಚಕರೂ ಸತ್ತರು. ಈಕೆಯ ಒಂದೇ ಒಂದು ಸಂತಸದ ಸಂಗತಿಯೆಂದರೆ ವಿರಾಟಪರ್ವದ ಕೊನೆಯಲ್ಲಿ ಜರುಗಿದ ಅಭಿಮನ್ಯುವಿನ ವಿವಾಹ. ಉದ್ಯೋಗ ಪರ್ವದಲ್ಲಿ ಪಾಂಡವರು ಸಂಧಿಗೆ ಒಪ್ಪಿದರೂ ಈಕೆ ಒಪ್ಪದೆ ದೌತ್ಯಕ್ಕಾಗಿ ಹೊರಟ ಶ್ರೀಕೃಷ್ಣನಿಗೆ ತಾನು ಮಾಡಿದ ಪ್ರತಿಜ್ಞೆಗಳನ್ನು ನೆನಪಿಸಿ ಯುದ್ಧವನ್ನೇ ಖಚಿತ ಮಾಡಬೇಕೆಂದು ಅವನನ್ನು ಬೇಡಿದಳು. ಯುದ್ಧಕಾಲದಲ್ಲಿ ಭೀಮನಿಂದ ದುಶ್ಯಾಸನ ಹತನಾಗಲು ಈಕೆ ಅವನ ರಕ್ತದಿಂದ ತನ್ನ ತಲೆಗೂದಲನ್ನು ನೆನೆಸಿಕೊಂಡು ಮುಡಿಗಟ್ಟಿದಳು. ಯುದ್ಧದ ಕೊನೆಯಲ್ಲಿ ಭೀಮ ತನ್ನ ಗಧೆಯಿಂದ ದುರ್ಯೋಧನನ ತೊಡೆಗಳನ್ನು ಒಡೆದು ಅವನನ್ನು ಕೊಂದಾಗ ಈಕೆಯ ಎರಡನೆಯ ಬಯಕೆಯೂ ಪೂರ್ಣವಾಗುತ್ತದೆ. ದ್ರೌಪದಿಯ ದಾರುಣ ಕತೆಗೆ ಕಲಶದಂತಿರುವ ಸಂಗತಿಯೆಂದರೆ ಮಕ್ಕಳಾದ ಉಪಪಾಂಡವರನ್ನು ಪಾಂಡವರೆಂದೇ ಗ್ರಹಿಸಿ ಅಶ್ವತ್ಥಾಮ ಕೊಲೆ ಮಾಡುವುದು. ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯ ಸಿಕ್ಕಿದ್ದು ತೀರ ಕೊನೆಯಲ್ಲಿ.

ಐವರನ್ನು ಪತಿಗಳನ್ನಾಗಿ ಪಡೆದುದಕ್ಕೆ ವ್ಯಾಸಮುನಿ ಕಾರಣವನ್ನು ದ್ರುಪದರಾಜನಿಗೆ ವಿವರಿಸುತ್ತಾ- ದ್ರೌಪದಿಯ ಪೂರ್ವಜನ್ಮದಲ್ಲಿನ ಸಂಸ್ಕಾರ ಫಲದಿಂದಲೇ ಈಕೆ ಪಾಂಡವರ ಧರ್ಮಪತ್ನೀಯಾದುದು ಎಂದು ಬಹುಪತಿತ್ವವನ್ನು ಒಪ್ಪಿಕೊಳ್ಳುತ್ತಾರೆ. ಹಿಂದಿನ ಜನ್ಮದಲ್ಲಿ ದ್ರೌಪದಿ ಶಿವನನ್ನು ಕುರಿತು ತಪಸ್ಸು ಮಾಡಿ, ಐದು ಒಳ್ಳೆಯ ಗುಣಗಳಿರುವ ವರನನ್ನು ತನಗೆ ಗಂಡನಾಗಿ ಕೊಡಬೇಕೆಂದು ವಿನಂತಿಸಿಕೊಳ್ಳತ್ತಾಳೆ. ಆದರೆ ಶಿವ ಐದು ಒಳ್ಳೆಯ ಗುಣಗಳು ಒಬ್ಬನಲ್ಲಿ ಇರಲು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನಿನ್ನ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳುತ್ತಾನೆ. ಅದರ ಫಲವಾಗಿ ದ್ರೌಪದಿ ಪಾಂಡವರ ಪತ್ನಿಯಾಗುತ್ತಾಳೆಂದು ಹೇಳುತ್ತಾರೆ

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ

ಧರ್ಮರಾಯನ ಜೂಜಿನ ದೌರ್ಬಲ್ಯ ದ್ರೌಪದಿಯನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಯುಧಿಷ್ಠಿರ ಜೂಜಿನಲ್ಲಿ ಮನೆಮಠ, ಐಶ್ವರ್ಯವನ್ನೇಲ್ಲ ಕಳೆದುಕೊಂಡು ಕೊನೆಗೆ ದ್ರೌಪದಿಯನ್ನು ಪಣವಾಗಿಟ್ಟು ಸೋಲುತ್ತಾನೆ. ಯುಧಿಷ್ಠಿರ ದ್ಯೂತದಲ್ಲಿ ದ್ರೌಪದಿಯನ್ನು ಸೋತಾಗ ದುರ್ಯೋದನ ರಾಜಸಭೆಗೆ ಬರುವಂತೆ ಆಗ್ರಹಿಸಿ ಅವಳನ್ನು ಕರೆತರಲು ಪ್ರತಿಕಾಮಿಯೆಂಬ ದೂತನನ್ನು ಕಳುಹಿಸುತ್ತಾರೆ.
ಆಗ ದ್ರೌಪದಿ ಇಡೀ ಸಭೆಯ ಉದ್ದೇಶವನ್ನು ಪ್ರಶ್ನಿಸುತ್ತಾಳೆ. ಅವಳು ಕೇಳುವ ಪ್ರಶ್ನೆ ಮಾರ್ಮಿಕವಾದುದು. ಮೊದಲು ಪಾಂಡವರೆಲ್ಲ ಸೋತು, ನಂತರ ನನ್ನನ್ನು ಪಣವಾಗಿಟ್ಟರೋ? ಇಲ್ಲವೆ ಮೊದಲೆ ನನ್ನನ್ನು ಪಣವಾಗಿಟ್ಟು ಸೋತರೋ? ಅವರಿಂದ ಉತ್ತರವನ್ನು ಕೇಳಿಕೊಂಡು ಬಾ ಎಂದು ವಾಪಾಸು ಕಳುಹಿಸುತ್ತಾಳೆ. ಅವಳ ಪ್ರಶ್ನೆಗೆ ಉತ್ತರ ಹೇಳುವ ವ್ಯವಧಾನ, ಸಹನೆ ಅಲ್ಲಿರುವ ಯಾರಿಗೂ ಇರದೇ ಹೋದುದರಿಂದ, ದುಶ್ಯಾಸನ ದ್ರೌಪದಿಯನ್ನು ಕರೆತರಲು ಬರುತ್ತಾನೆ.
ಆಗ ದ್ರೌಪದಿ ತಾನು ಋತುಮತಿಯಾಗಿರುವುದರಿಂದ ರಾಜಸಭೆಗೆ ಬರುವುದು ತರವಲ್ಲ ಎಂದು ಮೈದುನನಾದ ದುಶ್ಯಾಸನನಿಗೆ ಹೇಳಿದಾಗ, ಅವನು ಕೌರವನ ಆಸ್ಥಾನದಲ್ಲಿ ಫಲವತಿಯಾಗು ನಡೆ ಎಂದು ಬಲವಂತವಾಗಿ ಅವಳನ್ನು ಎಳೆತರುತ್ತಾನೆ. ಇದರಿಂದ ಆಕ್ರೋಶಗೊಂಡ ದ್ರೌಪದಿ ಗಂಡಂದಿರಿಗೆ ರಾಜಸಭೆಯಲ್ಲೇ ಛೀಮಾರಿ ಹಾಕುತ್ತಾಳೆ.

ಗಂಡರೈವರು ಒಬ್ಬಳನಾಳಲಾರಿರಿ? ನೀವು ಗಂಡರೋ ಇಲ್ಲ ಭಂಡರೋ? ಎಂದು ಹಂಗಿಸಿ ಪ್ರತಿಭಟಿಸುತ್ತಾಳೆ. ತನ್ನ ವಾಕ್ ಪ್ರಹಾರದಿಂದ ಭೀಷ್ಮ, ದ್ರೋಣಾದಿಗಳನ್ನು ತರಾಟೆಗೆ ತೆಗೆದು ಕೊಳ್ಳತ್ತಾಳೆ. ರಾಜಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯ ತೊಡಗಿದಾಗ ಪಾಂಡವರು, ಭೀಷ್ಮ, ದ್ರೋಣಾದಿಗಳು ಅಸಹಾಕರಾಗಿ ತಲೆ ತಗ್ಗಿಸುತ್ತಾರೆ. ಕಡೆಗೆ ಶ್ರೀಕೃಷ್ಣ ದ್ರೌಪದಿಯ ಪ್ರಾರ್ಥನೆಯನ್ನು ದಿವ್ಯಜ್ಞಾನದಿಂದ ಅರಿತು ಅವಳ ಮಾನವನ್ನು ಕಾಪಾಡುತ್ತಾನೆ. ಈ ಘಟನೆಯ ನಂತರ ಪಾಂಡವರೊಂದಿಗೆ ದ್ರೌಪದಿ ವನವಾಸಕ್ಕೆ ಹೋಗಬೇಕಾಗಿ ಬರುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಈ ರಾಹು ಕೇತು ಯಾರು? ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಏಕೆ ?

ಈ ರಾಹು ಕೇತು ಯಾರು? ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಏಕೆ ?

fiber food

ನಾರಿನ (ಫೈಬರ್) ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳು