ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ – ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.
ಡೊಳ್ಳಿನ ಇತಿಹಾಸ
ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹೀಗಿದೆ.
ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಆತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತೀಕ) ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರಿತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿದೆ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ.
ಈ ಬೇಟೆಗೆ ಕಲಾವಿದರ ವೇಷ ಭೊಷಣಗಳು ಆಕರ್ಷಕ ರೀತಿಯಲ್ಲಿ ಮಾರ್ಪಾಟಾಗಿ ಕಲೆಗೆ ಮೆರಗುಕೊಟ್ಟದೆ. ಡೊಳ್ಳು ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯವನ್ನು ಡೊಳ್ಳು ಎನ್ನಬಹುದು. ತಾಳೆ ಅಥವಾ ಹಗುರವಾದ ಮರದಿಂದ ಎರಡುವರೆ ಇಂದ ಮೂರುವರೆ ಅಡಿ ಉದ್ದದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳನ್ನು ಸಿದ್ದಪಡಿಸಿರುತ್ತಾರೆ. ಇದರ ಎಡಬಾಗಕ್ಕೆ ಆಡಿನ ಚರ್ಮವನ್ನು ಬಲಬಾಕ್ಕೆ ಕುರಿಯ ಚರ್ಮವನ್ನು ಬಿಗಿಯಾಗಿ ಬಿಗಿಯುತ್ತಾರೆ. ಬಳಿಕ ಡೊಳ್ಳುನ್ನು ಬಡಿಯಲು ಬಳಸುವುದು ಸುಮಾರು ಒಂದುವರೆ ಅಡಿ ಉದ್ದದ ಬಿದಿರು ಕೋಲು. ಇದಕ್ಕೆ ‘ಗಣಿ’ ಎಂದು ಕರೆಯುತ್ತಾರೆ. ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ಧೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಕುರುಬರು ಬಾವಿಸುತಾರೆ, ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ಥರು ಪಾರಂಪರಿಕವಾಗಿ ಈ ನೃತ್ಯವನ್ನು ತಲತಲಾಂತರದಿಂದ ಮಾಡಿಕೊಂಡು ಬಂದವರು. ಜನಪದದಲ್ಲೇ ಉಳಿದುಕೊಂಡ ಈ ಕಲೆಗೆ ಪ್ರೋತ್ಸಾಹ ನೀಡಲು ಇತ್ತೀಚೆಗೆ ಸಾಮಾನ್ಯವಾಗಿ ದಸರಾ ಸಂಭ್ರಮದಲ್ಲಿ, ವಸಂತಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಇತರೆ ಕಾರ್ಯಕ್ರಮಗಳೊಂದಿಗೆ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇರುತ್ತದೆ.
ಡೊಳ್ಳು ಕುಣಿತ :ಸ್ತ್ರೀಯರಿಂದ ಪ್ರದರ್ಶನ
ಡೊಳ್ಳಿನ ಬಾರಿಸುವ ನಿಯಮ
ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲುಗಳನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. ಪದಕ್ಕೆ ಪ್ರತ್ಯೇಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೊಲಿರುತ್ತದೆ. ಒಮ್ಮೆ ಕೊಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ಬಲಗೈ ಗುಣಿಯ ಬಡಿತ ಬ್ರಹ್ಮದೊಡ್ ಎಂದು ಸಪ್ಪಲ ಮಾಡಿದರೆ ಎಡಗೈ ಪೆಟ್ಟು ಡೌಂವ ಎಂದು ನಾದ ಹಬ್ಬಿಸುತ್ತದೆ. ಹೀಗೆ ಅದು ಬ್ರಹ್ಮ ದೊಡ್ಡಂವ ಎಂದು ಶದ್ದ ಹೊರಹೊಮ್ಮುತ್ತದೆ. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ. ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಲ್ಲಿಸಿದಂತ್ತಾಗಿ, ಮತ್ತೆ ನಿಧಾನವಾಗಿ ಬೆರೋಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ದಿಲ್ಗಿಗೆ ಹೋದರೂ ಡೊಳ್ಳಿಗೆ ಒಂದೆ ಪೇಟ್ಟು ಎಂಬ ಗಾದೆಯಿಂದ ತಿಳಿಯಬಹುದು.
ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಕೊಲು ಬಲಕ್ಕೆ ಒಂದು ಪೆಟ್ಟು ಎಡಕ್ಕೆ. ಇದೇ ಕ್ರಮೇಣ ಹೆಚ್ಚುತ್ತಾ ಹೊಗುತ್ತದೆ. ಏಳು ಗುಣಿ ಪೆಟ್ಟು ಮಾತ್ರ ಬಾರಿಸುವುದಿಲ್ಲ ಕಾರಣ ಅವರ ದೃಶ್ಟಿಯಲ್ಲಿ ಏಳು ಅಶುಬ ಸಂಖ್ಯೆ!ಎನ್ನುತ್ತಾರೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ. ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.
7 ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.
ಡೊಳ್ಳಿನ ಪ್ರಕಾರಗಳು
*ಕುಳಿತು ಭಾರಿಸುವುದು: ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಕೂತು ಪೌಲಿ ಎಂದು ಕರೆಯುತ್ತಾರೆ. ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬರಿಸುತ್ತಾ ಕುಪ್ಪಳಿಸುವುದು. ಇದು ನಿಧಾನವಾಗಿ ನಡೆಯುತ್ತದೆ.
*ಲಾಗ ಹಾಕುವುದು: ಇದನ್ನು ತಂಡದ ಒಂದೆರಡು ಮಂದಿ ಮಾತ್ರ ಅಭ್ಯಾಸ ಮಾಡುತ್ತಾರೆ. ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು.
*ಹಾರಿ ಬಾರಿಸುವುದು: ಡೊಳ್ಳು ಬಾರಿಸುವಾಗಲೆ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು.
*ಮಂಡಿ ಬಡಿತ: ಜೊಡಿ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.
*ಮರಗಾಲು ಬಡಿತ: ಸುಮಾರು ಒಂದರಿಂದ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು.
*ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು *ಡೊಳ್ಳು ಬಾರಿಸುವುದು. ಇದೊಂದು ವಿಶೇಷ ಪ್ರಕಾರವೆನಿಸುತ್ತದೆ. ಬಾಯಲ್ಲಿ ತುಂಬಿದ ಕೊಡ ಕಚ್ಚಿಕೊಂಡು ನೀರು ಚಲ್ಲದಂತೆ ಡೊಳ್ಳು ಬಾರಿಸುತ್ತ ಕುಣಿಯುವುದು. ಈ ರೀತಿ ಬಾರಿಸುವುದು ತುಂಬಾ ವಿರಳ.
*ಇತರೆ ಪ್ರಕಾರಗಳು: ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು.
ಡೊಳ್ಳು ಕುಣಿತದಲ್ಲಿ ಮತ್ತೊಂದು ಪ್ರಾಕರವೆಂದರೆ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ವೃತ್ತಾಕಾರದಲ್ಲಿ ಸಣ್ಣ ಹಲಗೆಯ ಮೇಲುಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಲಗತ್ತಿಸಿ ಅದರ ಸುತ್ತಲೂ ಎಂಟ ರಿಂದ ಹತ್ತು ರಂಧ್ರಗಳನ್ನು ಮಾಡಿ ಅದಕ್ಕೆ ನೂಲಿನ ಸಣ್ಣ ಹಗ್ಗಗಳನ್ನು ಸೇರಿಸಿ ಇಳಿಬಿಟ್ಟಿರುತ್ತಾರೆ. ಎಂಟು ಹತ್ತು ಅಡಿ ಎತ್ತರದಲ್ಲಿ ಕಟ್ಟಿರುವ ಬಿದಿರು ಬೊಂಬಿಗೆ ಈ ಕೊಂಡಿಯನ್ನು ಹುರಿಯಿಂದ ಭದ್ರವಾಗಿ ಬಿಗಿಯುತ್ತಾರೆ. ಡೊಳ್ಳು ಬಡಿಯುವವರು ಒಬ್ಬೊಬರು ತಮ್ಮ ಎಡಗೈಯಲ್ಲಿ ಹಗ್ಗವನ್ನು ಹಿಡಿದು, ಬಲಗೈಯಲ್ಲಿ ಡೊಳ್ಳನ್ನು ಬಾರಿಸುತ್ತಾರೆ ಎದುರು-ಬದುರು, ಅಕ್ಕ-ಪಕ್ಕ, ವೃತ್ತಾಕರವಾಗಿ ಹೀಗೆ ಒಂದು ಕಮ್ರದಲ್ಲಿ ಸುತ್ತುತ್ತಾರೆ. ಮಧ್ಯದಲ್ಲಿ ನಾಯಕ ನಿಂತು ಪದ ಹಾಡುತ್ತಾನೆ. ಕಲಾವಿದರು ಕ್ರಮವಾಗಿ ಸುತ್ತಿದಾಗ ಹಗ್ಗಗಳು ಜಡೆಯಂತೆ ಹೆಣೆದುಕೊಳುತ್ತದೆ. ಹಾಗೆಯೇ ಹಿಮ್ಮುಕ ಮಾಡಿದರೆ ಅದು ಬಿಡಿಸಿಕೊಳುತ್ತಾ ಹೊಗುತ್ತದೆ. ಈ ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ. ತಂಡದ ನಾಯಕ ತಾಳ ಬಡಿಯುತ್ತಾ ಪದ ಹೇಳಿಕೊಟ್ಟರೆ ಉಳಿದವರು ಧ್ವನಿ ಗೂಡಿಸುತ್ತಾರೆ. ಡೊಳ್ಳಿನ ವಿವಿಧ ಪ್ರಕಾರಗಳನ್ನು ನೋಡಿದಾಗ ಇದು ಶಕ್ತಿ-ಯುಕ್ತಿ ಎರಡನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವ ವಿಶೇಷ ಕಲೆ ಎಂಬುದು ಸ್ವಷ್ಟವಾಗುತ್ತದೆ. ಡೊಡ್ಡ ಗಾತ್ರದ ಡೊಳ್ಳುಗಳನ್ನು ಸೊಂಟಕ್ಕೆ ಬಿಗಿದು ನಿಂತು ಗುಂಪಿನ ಪ್ರಥಮ ದರ್ಶನದಲ್ಲೆ ಪ್ರೇಕ್ಷಕರಿಗೆ ಕಲೆಯ ಭವ್ಯತೆಯ ಕಲ್ಪನೆಯುಂಟಾಗುತ್ತದೆ. ಕ್ರಮ ಕ್ರಮವಾಗಿ ಪೆಟ್ಟುಗಳೊಂದಿಗೆ ಬಡಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡೊಳ್ಳಿನ ನಾದ ಮುಗಿಲೇರುತ್ತದೆ. ಆರಂಭದಲ್ಲಿ ಡೊಳ್ಳಿನ ಗತ್ತು ಎಂಬ ಘೋಷಣೆಯನ್ನು ಹುಟ್ಟಿಸಿದೆರೆ ಮುಕ್ತಾಯಕ್ಕೆ ಬರುವ ಹೊತ್ತಿಗೆ ಹಿಡಿದ್ದಾಂಗ್ ಬಟ್ಟಂಗ್ ಎಂಬಂತೆ ಕೆಳುವ ಪೆಟ್ಟು ಹಾಕುತ್ತಾ ಡುಬ್ಬದ್ಹರಿ ಡುಬ್ಬದ್ದುರಿ ಎಂದು ತಿರ್ಮಾನ ಹೇಳುವಂತೆ ಗತ್ತನ್ನು ಮುಗಿಸುತ್ತಾರೆ.
ಡೊಳ್ಳಿನ ಹಾಡು ಎಂದರೆ ಕುರುಬರ ಹಾಡುಗಳು ಎಂದು ಕರೆಯುತ್ತಾರೆ. ಬೀರದೇವರ ವರ್ಣನೆ ಮತ್ತು ಆತನ ಭಕ್ತಿಯ ಮಹಿಮೆಯನ್ನು ಕುರಿತು ಇರುವ ಹಾಡುಗಳೆ ಹೆಚ್ಚು ಬಹುತರವಾಗಿ ಡೊಳ್ಳಿನ ಹಾಡುಗಳನ್ನು ರಚಿಸಲಾಗಿದೆ. ಹಾಡುಗಳಲ್ಲಿ ಹಾಲುಮತ ಪುರಣ, ಅನಸೂಯ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕಿನ ಪದ, ಪಡವರ ಪದ, ಡೊಳ್ಳು ಮರದ ಪದ, ಬಸವಣ್ಣನ ಚರಿತ್ರೆ, ಬೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಜಂಗುಮನ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ ಇತ್ಯಾದಿ ಪ್ರಸಂಗಗಳು ಸೇರಿವೆ.
ಧನ್ಯವಾದಗಳು.
GIPHY App Key not set. Please check settings