in ,

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು
‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು

‘ಪ್ರಬಂಧ‘ ಎಂಬ ಪದವು ಲ್ಯಾಟಿನ್ ಪದ ‘ಎಕ್ಸಾಜಿಯಂ‘ ನಿಂದ ಬಂದಿದೆ. ಪ್ರಬಂಧಗಳು ಒಬ್ಬರ ವಾದ ಅಥವಾ ಒಬ್ಬರ ಅನುಭವಗಳು, ಕಥೆಗಳು ಇತ್ಯಾದಿಗಳನ್ನು ಪ್ರತಿನಿಧಿಸುವ ಒಂದು ಸಣ್ಣ ಬರವಣಿಗೆಯಾಗಿದೆ. ಪ್ರಬಂಧಗಳು ತುಂಬಾ ವೈಯಕ್ತಿಕವಾಗಿವೆ. ಆದ್ದರಿಂದ ನಾವು ಪ್ರಬಂಧಗಳ ಪ್ರಕಾರಗಳು, ಸ್ವರೂಪ ಮತ್ತು ಪ್ರಬಂಧ-ಬರವಣಿಗೆಯ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರಬಂಧವು ಸಾಮಾನ್ಯವಾಗಿ ಬರಹಗಾರನ ದೃಷ್ಟಿಕೋನ ಅಥವಾ ಕಥೆಯನ್ನು ವಿವರಿಸುವ ಒಂದು ಸಣ್ಣ ಬರವಣಿಗೆಯಾಗಿದೆ. ಇದನ್ನು ಸಾಮಾನ್ಯವಾಗಿ ಕಥೆ ಅಥವಾ ಕಾಗದ ಅಥವಾ ಲೇಖನಕ್ಕೆ ಸಮಾನಾರ್ಥಕವೆಂದು ಪರಿಗಣಿಸಲಾಗುತ್ತದೆ. ಪ್ರಬಂಧಗಳು ಔಪಚಾರಿಕ ಮತ್ತು ಅನೌಪಚಾರಿಕವಾಗಿರಬಹುದು. ಔಪಚಾರಿಕ ಪ್ರಬಂಧಗಳು ಸಾಮಾನ್ಯವಾಗಿ ಶೈಕ್ಷಣಿಕ ಸ್ವರೂಪದಲ್ಲಿರುತ್ತವೆ ಮತ್ತು ಗಂಭೀರ ವಿಷಯಗಳನ್ನು ನಿಭಾಯಿಸುತ್ತವೆ. ನಾವು ಹೆಚ್ಚು ವೈಯಕ್ತಿಕ ಮತ್ತು ಸಾಮಾನ್ಯವಾಗಿ ಹಾಸ್ಯದ ಅಂಶಗಳನ್ನು ಹೊಂದಿರುವ ಅನೌಪಚಾರಿಕ ಪ್ರಬಂಧಗಳ ಮೇಲೆ ಕೇಂದ್ರೀಕರಿಸುತ್ತೇವೆ.

ಪ್ರಬಂಧ ಬರೆಯುವುದು ಒಂದು ಕಲೆ ಮಾತ್ರವೇ ಅಲ್ಲ, ಇದೊಂದು ವ್ಯವಸ್ಥಿತವಾಗಿ ವಿಷಯವನ್ನು ಮಂಡಿಸುವ ಶೈಲಿಯಾಗಿದೆ.

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು

ಪ್ರಬಂಧ ಬರೆಯುವಾಗ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು.

1) ಪ್ರಬಂಧದಲ್ಲಿ ಬರೆಯುವ ಅಂಶಗಳು ನೇರವಾಗಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿರಬೇಕು.

2) ಪ್ರಬಂಧದಲ್ಲಿ ಬರೆಯುವ ಅಂಶಗಳು ಯಾವುದೇ ಧರ್ಮ, ಜಾತಿ, ಜನಾಂಗ, ಲಿಂಗ, ಪ್ರದೇಶವನ್ನು ಅವಹೇಳನ ಮಾಡುವಂತಿರಬಾರದು. 

3) ವಸ್ತುನಿಷ್ಠವಾಗಿ ವಿಮರ್ಶೆ ಮಾಡುವುದಕ್ಕೆ ಅವಕಾಶವಿರುತ್ತದೆ.

4) ವಿಷಯವನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಬೇಕು. 

5) 600 ಪದಗಳಿಗಿಂತ ಮೀರಬಾರದು. 

6) ಪ್ರಬಂಧದ ಹಂತಗಳನ್ನು ಕ್ರಮವಾಗಿ ಅನುಸರಿಸುವುದು ಉತ್ತಮ.

7) ಭಾಷೆಯು ಸ್ಪಷ್ಟವಾಗಿರಬೇಕು.

8) ಅಂಕಿ ಅಂಶಗಳನ್ನು, ಪೂರಕವಾದ ಮಾಹಿತಿಗಳನ್ನು ಒದಗಿಸುವುದು ಸೂಕ್ತವಾಗಿದೆ.

9) ಉಪಸಂಹಾರದಲ್ಲಿ ತಮ್ಮದೇ ಆದ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ. 

10) ಪ್ರಬಂಧ ಬರೆಯುವಾಗ ಅಕ್ಷರಗಳು ಸ್ಪಷ್ಟವಾಗಿದ್ದು, ಅತಿ ದೊಡ್ಡದಾಗಿಯೂ ಅಥವಾ ಅತೀ ಚಿಕ್ಕದಾಗಿಯೂ ಇರಬಾರದು.

ಪ್ರಬಂಧಗಳ ರಚನೆ, ವಸ್ತು, ಉದ್ದೇಶ ಹಾಗೂ ತಾರ್ಕಿಕ ಸಂಯೋಜನೆಯನ್ನು ವಸ್ತುನಿಷ್ಠವಾಗಿ ಆಧರಿಸಿ ಪ್ರಬಂಧಗಳನ್ನು ವರ್ಗೀಕರಿಸಲಾಗಿದೆ:

*ಚಿಂತನಾತ್ಮಕ / ವೈಚಾರಿಕ

*ಕಥನಾತ್ಮಕ

*ಆತ್ಮಕಥನಾತ್ಮಕ

*ಸಂಶೋಧನಾತ್ಮಕ

*ವಿಮರ್ಶಾತ್ಮಕ

*ಚರ್ಚಾತ್ಮಕ

*ವರ್ಣನಾತ್ಮಕ

*ಚಿತ್ರಾತ್ಮಕ

*ಜ್ಞಾನಾತ್ಮಕ

*ಹಾಸ್ಯಾತ್ಮಕ

*ಆತ್ಮೀಯ

*ನೆರೆ ಹೊರೆ ಮತ್ತು ಪರೊಪಕರ

*ಕಾಲ್ಪನಿಕ

*ವ್ಯಕ್ತಿಚಿತ್ರ

*ಹರಟೆ

*ಪತ್ರಪ್ರಬಂಧ

ಪ್ರಬಂಧದ ವಿಧಗಳು ಎಷ್ಟು?

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು

ಪ್ರಬಂಧದ ವಿಧಗಳು ಹಾಗೆ ನೋಡಿದರೆ ಪ್ರಬಂಧವನ್ನು ರಚನೆ, ವಸ್ತು, ಉದ್ದೇಶ, ತಾರ್ಕಿಕ ಸಂಯೋಜನೆ, ವಸ್ತುನಿಷ್ಠತೆ, ಇತ್ಯಾದಿಗಳ ಆಧಾರದ ಮೇಲೆ ಬಹಳ ವಿಧಗಳಾಗಿ ವಿಂಗಡಿಸಬಹುದು.

ಉತ್ತಮ ಪ್ರಬಂಧವು ಈ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ. 

1) ಪೀಠಿಕೆ ಹಂತ 

2) ಬೆಳವಣಿಗೆ ಹಂತ 

3) ಉಪಸಂಹಾರ

*ಪೀಠಿಕೆ ಹಂತ:– ಈ ಹಂತದಲ್ಲಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಪೂರಕವಾದ ಪೀಠಿಕೆಯನ್ನು ಹಾಕಬೇಕು. ಉಕ್ತಿಗಳು, ಶ್ರೇಷ್ಟ ವ್ಯಕ್ತಿಗಳ ಹೇಳಿಕೆಗಳಿಂದ ಪೀಠಿಕೆ ಹಂತಗಳನ್ನು ಆರಂಭಿಸುವುದು ಹೆಚ್ಚು ಸೂಕ್ತ, ಆದರೆ ಅದು ಕಡ್ಡಾಯವೇನಲ್ಲ.

* ಪೀಠಿಕೆ ಹಂತವು ಸಾಮಾನ್ಯದಿಂದ ನಿರ್ದಿಷ್ಟವಾದ ವಿಷಯದ ಕಡೆಗೆ ಕೊಂಡೊಯ್ಯಬೇಕು. ಅಂದರೆ ಪ್ರಬಂಧದ ವಿಷಯದ ಕಡೆಗೆ ಕೊಂಡೊಯ್ಯಬೇಕು.

* ಪೀಠಿಕೆ ಹಂತವು. ಗರಿಷ್ಟ 50ರಿಂದ 60 ಪದಗಳನ್ನು ಹೊಂದಿರತಕ್ಕದ್ದು. ಕೆಲವೊಮ್ಮೆ ಪೀಠಿಕೆಯೇ ಪ್ರಬಂಧದ ವಿಷಯವಾಗಬಾರದು.

* ಬೆಳವಣಿಗೆಯ ಹಂತ:- ಹಂತವು ಹೆಚ್ಚು ಮುಖ್ಯವಾದ ಹಂತವಾಗಿದ್ದು, ಯಾವುದೇ ವಿಷಯದ ಬಗ್ಗೆ ಪ್ರಬಂಧ ಬರೆಯಲು ಬೆಳವಣಿಗೆ ಹಂತದಲ್ಲಿ ಈ ಕೆಳಕಂಡಂತೆ ವಿಭಾಗಿಸಿಕೊಳ್ಳುವುದು ಉಪಯುಕ್ತವಾಗಿದೆ. ಮತ್ತು ಪ್ರಬಂಧ ಬರೆಯಲು ಸುಲಭವಾಗುತ್ತದೆ. 

ಉಪಸಂಹಾರ ಎಂದರೇನು?

ಪ್ರಬಂಧದ ಮುಕ್ತಾಯ ಭಾಗವಾದ ಈ ಉಪಸಂಹಾರದಲ್ಲಿ ವಿಷಯದ ಬಗ್ಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು, ಸಲಹೆಗಳು, ತಜ್ಞರ ತೀರ್ಮಾನಗಳು ಹಾಗೂ ನಿಮ್ಮ ಅಭಿಪ್ರಾಯಗಳು ನೀಡುವುದರಿಂದ ಪ್ರಬಂಧವು ತುಂಬಾ ಗಟ್ಟಿಯಾದಂತೆ ಆಗುತ್ತದೆ.

* ಉಪ ಸಂಹಾರ ಹಂತ:- 

ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಶೈಲಿಯಲ್ಲಿ ಉಪ ಸಂಹಾರ ನೀಡಬೇಕು. ಈ ಹಂತದಲ್ಲಿ ಇಡೀ ಪ್ರಬಂಧದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಮಂಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ವಸ್ತುನಿಷ್ಠವಾಗಿ ಮತ್ತು ವಾಸ್ತವಿಕ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ನೀಡಬೇಕು.

ಪ್ರಬಂಧ ಬರವಣಿಗೆಗೆ ಸಲಹೆಗಳು :

೧) ಪ್ರಬಂಧ ರಚನೆಯಲ್ಲಿ ಮೊದಲಿಗೆ ಬಳಸುವ ಭಾಷೆ ಸರಳವಾಗಿರಬೇಕು. 

೨) ವಿಷಯದ ನಿರೂಪಣೆ ಸಂಕ್ಷಿಪ್ತ ಮತ್ತು ನಿಖರವಾಗಿರಬೇಕು. 

೩) 300-500 ಪದಗಳ ನಡುವೆ ಇರಿಸಿ. ಇದು ಆದರ್ಶ ಉದ್ದವಾಗಿದೆ, ಅದನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ನೀವು ಸೃಜನಾತ್ಮಕ ಪರವಾನಗಿಯನ್ನು ತೆಗೆದುಕೊಳ್ಳಬಹುದು 

೪) ನಿಮ್ಮ ಭಾಷೆಯನ್ನು ಸರಳ ಮತ್ತು ಗರಿಗರಿಯಾಗಿ ಇರಿಸಿ. ಅನಗತ್ಯ ಸಂಕೀರ್ಣ ಮತ್ತು ಕಷ್ಟಕರವಾದ ಪದಗಳು ವಾಕ್ಯದ ಹರಿವನ್ನು ಮುರಿಯುತ್ತವೆ. 

೫) ವ್ಯಾಕರಣ ತಪ್ಪುಗಳನ್ನು ಮಾಡಬೇಡಿ, ಸರಿಯಾದ ವಿರಾಮಚಿಹ್ನೆ ಮತ್ತು ಕಾಗುಣಿತಗಳನ್ನು ಬಳಸಿ. ಇದನ್ನು ಮಾಡದಿದ್ದರೆ ಅದು ಓದುಗರನ್ನು ವಿಷಯದಿಂದ ದೂರವಿಡುತ್ತದೆ 

೬) ಭಾಷೆ ಮತ್ತು ಬರವಣಿಗೆಯು ತಪ್ಪಿಲ್ಲದಂತೆ ಎಚ್ಚರವಹಿಸಬೇಕು.

೮) ವಿಷಯದ ನಿರೂಪಣೆಯಲ್ಲಿ ಸ್ಪಷ್ಟತೆ ಮತ್ತು ನಿರ್ದಿಷ್ಟವಾದ ಗುರಿಯುಳ್ಳದ್ದಾಗಿರುವಂತೆ ಗಮನವಿರಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್ :

1. ತಪ್ಪಾದರೆ ಗೀಟುಗಳನ್ನು ಹಾಕಬಾರದು 

2. ಧಾರ್ಮಿಕ ಚಿಹ್ನೆ, ಚಿತ್ರಗಳು ಮತ್ತು ವಿವಾದಾತ್ಮಕ ಹೇಳಿಕೆ ಅಥವಾ ಸಂಕೇತಗಳನ್ನು ಬಳಸಬಾರದು.

 3. ಯಾವುದೇ ಪುಸ್ತಕ ಅಥವಾ ಜಾಲತಾಣದಲ್ಲಿನ ಪ್ರಬಂಧಗಳನ್ನು ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯಬಾರದು.

 4. ಪ್ರಬಂಧದಲ್ಲಿ ಗಾದೆಮಾತುಗಳು, ಸೂಕ್ತಿಗಳು, ತಜ್ಞರ ಹೇಳಿಕೆಗಳು ಹಾಗೂ ಉದಾಹರಣೆಗಳನ್ನು ನೀಡಿ. 

 5. ಪ್ರಬಂಧವನ್ನು ಬರೆಯಲು ಶುರು ಮಾಡುವುದಕ್ಕಿಂತ ಮುಂಚೆ, ಏನೆಲ್ಲಾ ಬರೆಯಬೇಕು ಎಂಬುದರ ಕುರಿತು ಯೋಚಿಸಿಕೊಳ್ಳಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ

ಕನ್ನಡದ ಗಾದೆಗಳು

110 ಕನ್ನಡದ ಗಾದೆಗಳು