ಶ್ರೀ ದಿಲೀಪ ಖಾಟ್ವಾಂಗ ಮಹಾರಾಜರು ಇಕ್ಷ್ವಾಕು ವಂಶದಲ್ಲಿ ಜನಿಸಿದ ಬಹು ದೊಡ್ಡ ಅರಸು. ಸತ್ಯನಿಷ್ಠೆ, ಧರ್ಮಪಾಲನೆ ಮತ್ತು ನೀತಿವಂತ ಆಡಳಿತದಿಂದ ಪ್ರಸಿದ್ಧಿಯಾದ ಪುರಾಣಪುರುಷ. ಅಂಶುಮಂತಮಹಾರಾಜನು ದಿಲೀಪ ಖಾಟ್ವಾಂಗರ ತಂದೆ. ಇವನಿಗೆ ಖಾಟ್ವಾಂಗ ಮತ್ತು ಶತಕೃತು ಅಂದರೆ ೧೦೦ ಅಶ್ವಮೇಧ ಯಾಗ ಮಾಡಿದವ ಎಂಬ ಬಿರುದು ಸಹಿತ ಇದೆ.
ದಿಲೀಪನ ತಂದೆ ಅಂಶುಮಂತ. ಹೆಂಡತಿ ಮಗಧ ದೇಶದ ರಾಜಕುಮಾರಿ ಸುದಕ್ಷಿಣಾ. ಮಗ ರಘು. ದಿಲೀಪನು ಮೇರು ಪರ್ವತದ ಹಾಗೆ ಎತ್ತರವಾದ ನಿಲುವು ಹೊಂದಿದವನು ಎಂದು ಪ್ರಸಿದ್ಧಿ ಪಡೆದವನು. ವಸಿಶ್ಠ ಋಷಿಗಳ ಬಳಿ ವಿದ್ಯೆ ಕಲಿವ ದಿಲೀಪನು, ಪ್ರಜೆಗಳನ್ನು ಮಕ್ಕಳಂತೆ ಪಾಲಿಸುತ್ತಾ ಇರುತ್ತಾನೆ. ಪ್ರಜೆಗಳ ಆದಾಯದಲ್ಲಿ ಆರರಲ್ಲಿ ಒಂದು ಭಾಗವನ್ನು ತೆರಿಗೆಗಾಗಿ ಪಡೆಯುವನು ಮತ್ತು ದುಶ್ಟಶಿಕ್ಷಣೆ-ಶಿಷ್ಟಪಾಲನೆ ಮಾಡುತ್ತಾ ಕೀರ್ತಿವಂತನಾಗಿ ರಾಜ್ಯಭಾರ ನಡೆಸಿದ ಕೀರ್ತಿವಂತ.
ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು. ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ ಸೇವೆಯನ್ನು ಮಾಡುತ್ತಿದ್ದನು. ಅವರು ನಂದಿನಿ ಹಸುವಿಗೆ ಎಳೆಯ ಹಸಿ ಹುಲ್ಲು ತಿನ್ನಿಸುತ್ತಿದ್ದನು, ಪ್ರೀತಿಯಿಂದ ಅದರ ಬೆನ್ನು ಮತ್ತು ಕುತ್ತಿಗೆಯನ್ನು ಸವರುತ್ತಿದ್ದನು; ಅದರ ಮೇಲೆ ಕುಳಿತುಕೊಳ್ಳುವ ಸೊಳ್ಳೆ- ನೊಣಗಳನ್ನು ಓಡಿಸುತ್ತಿದ್ದ. ನಂದಿನಿಯೊಂದಿಗೆ ಯಾವಾಗಲೂ ನೆರಳಿನಂತೆ ಇರುತ್ತಿದ್ದ. ಅದು ಕುಳಿತರೆ ಕುಳಿತುಕೊಳ್ಳುತ್ತಿದ್ದ, ಮತ್ತು ನಡೆಯತೊಡಗಿದರೆ ನಡೆಯುತ್ತಿದ್ದ.
ಸೂರ್ಯವಂಶವನ್ನು ಬೆಳಿಗಿದವರು ಶ್ರೀ ದಿಲೀಪ ಖಾಟ್ವಾಂಗ್ ಮಹಾರಾಜರು, ದಿಲೀಪ ಖಾಟ್ವಾಂಗ ಮಹಾರಾಜರ ಮಗನಾದ ಶ್ರೀ ರಘು ಮಹಾರಾಜರಿಂದ ಸೂರ್ಯವಂಶವನ್ನು ರಘುವಂಶ ಎಂದು ಕರೆದರು, ಶ್ರೀ ದಿಲೀಪ ಖಾಟ್ವಾಂಗ ಮಹಾರಾಜರ ಸಂತಾನಗಳಾದ ರಘುವಂಶ ಕ್ಷತ್ರಿಯರನ್ನು ನಾಲ್ಕು ಶಾಖೆಗಳಾಗಿ ಗುರುತಿಸಲ್ಪಡುತ್ತಾರೆ.
ಮೊದಲನೇ ಶಾಖೆ:- ಕನ್ಯಾಕುಂಬ್ಜ್ ನಲ್ಲಿ ಖಟ್ ಕುಲ ಗೋತ್ರದವರೆ ಕನ್ಯಾಕುಂಬ್ಜ್ ನಲ್ಲಿರುವ ಬ್ರಹ್ಹನೋಮರು.
ಎರಡನೇ ಶಾಖೆ:- ರಘುವಂಶ 360 ಗೋತ್ರನಾಮವಳಿ ಗಳಾದ ರಘುವಂಶಿ ತಥ “ಖಶ್ ಕುಲ”ಗೋತ್ರದಿಂದ ಪ್ರಚಲಿತಗೊಂಡರು, ಇವರು ದಿಲೀಪ ಖಾಟ್ವಾಂಗ ಮಹಾರಾಜರ ಮೂಲ ಸೂರ್ಯವಂಶ ಅಥವಾ ರಘುವಂಶದವರೆಂದು ಇತಿಹಾಸದಲ್ಲಿ ಕಾಣಬವುದು, ಕಾಲಾಂತರದಲ್ಲಿ ಸೂರ್ಯವಂಶ ಅಥವಾ ರಘುವಂಶ ಕ್ಷತ್ರಿಯರನ್ನು ತಮ್ಮ ಪೂರ್ವಜರಾದ ದಿಲೀಪ ಖಾಟ್ವಾಂಗ ಮಹಾರಾಜರ ಹೇಸಿರಿನಿಂದ ಖಾಟ್ವಾಂಗವಂಶಿ, ಖಾಟೆಕ್ ಹಾಗೂ ಖಾಟಿಕ್ ಎಂದು ಕರೆಯಲ್ಪಟ್ಟರು, ಇವತ್ತಿಗೂ ಶ್ರೀ ದಿಲೀಪ ಖಾಟ್ವಾಂಗ ಮಹಾರಾಜರನ್ನು ತಮ್ಮ ಕುಲದ ಮೂಲಪುರಷನೆಂದು ಆರಾಧಿಸುತ್ತಾ ಬರುತ್ತಿದ್ದಾರೆ.
ಮೂರನೇ ಶಾಖೆ:- ರಾಜಪೂತರು ಮತ್ತು ಮರಾಠರಲ್ಲಿ ಗುರುತಿಸಲ್ಪಡುತ್ತದೆ, ಇದೆ ಪೂರ್ವಜರ ಹೇಸರಿನಿಂದ ಇವರಲ್ಲಿ ‘ಖಟ್’ ಗೋತ್ರ ಪ್ರಸಿದ್ಧವಾಗಿದೆ.
ನಾಲ್ಕನೇ ಶಾಖೆ: ಪೂರ್ವಜರಾದ ಖಾಟ್ವಾಂಗ ಮಹಾರಾಜರ ಹೇಸಿರಿಂದ ‘ಖಾಟವಾ,ಖಿಟ್ವಾಲ್,ಖಾಟ್’ ಗೋತ್ರ ನಾಮಗಳನ್ನು ಸೂರ್ಯವಂಶಕ್ಕೆ ಸೇರುವ ಕ್ಷತ್ರಿಯರಲ್ಲಿ ಕಾಣಬಹುದು.
ದಿಲೀಪನಿಗೆ ರಘು ಸಕಲಶಾಸ್ತ್ರಗಳನ್ನು ಬಲ್ಲವನೂ ಮತ್ತು ಶತ್ರುಗಳನ್ನು ಸದೆಬಡಿಯಬಲ್ಲವನೂ ಎಂದರ್ಥ ಎಂಬ ಮಗನು ಜನಿಸುತ್ತಾನೆ. ದೇವತೆಗಳ ಪೂಜೆಗೆ ಪಾತ್ರವಾದ ಹಸು ಕಾಮಧೇನುವಿನ ಮಗಳಾದ ನಂದಿನಿಧೇನು ಹಸುವಿನ ಆಶೀರ್ವಾದದಿಂದ ಹುಟ್ಟಿದ ರಘುವು ೪ ಪುರುಷಾರ್ಥಗಳಾದ ಧರ್ಮ-ಅರ್ಥ-ಕಾಮ-ಮೋಕ್ಷ ಇವು ಎಲ್ಲವನ್ನು ಪಡೆವ ಪುಣ್ಯ ಪುರುಷನಾಗುತ್ತಾನೆ.
ಮಕ್ಕಳಿಲ್ಲದ ಕೊರಗನ್ನು ನಿವಾರಿಸಲೋಸುಗ, ದಿಲೀಪ ಖಾಟ್ವಾಂಗನು ಕುಲಗುರು ವಸಿಶ್ಠರ ಸಲಹೆ ಕೇಳಿದ. ಸ್ವರ್ಗದಲ್ಲಿ ದೇವತೆಗಳ ಪರವಾಗಿ ಯುದ್ಧ ಮಾಡುವ ಸಮಯದಲ್ಲಿ ಕಾಮಧೇನು ಹಸುವಿಗೆ ಗೌರವ ಸಲ್ಲಿಸಿವುದನ್ನು ಮರೆತುದು ಮುಳುವಾಗಿದೆಯೆಂದೂ, ಕಾಮಧೇನುವಿನ ಶಾಪ ನಿವಾರಿಸಲೋಸುಗ ಮಗಳು ನಂದಿನಿಧೇನುವಿನ ಸೇವೆ ಸಲ್ಲಿಸಿದರೆ ದಿಲೀಪನಿಗೆ ಪುತ್ರಪ್ರಾಪ್ತಿಯಾಗುವುದು ಎಂದು ವಸಿಷ್ಠರು ಸಲಹೆ ನೀಡುತ್ತಾರೆ.
೨೧ ದಿನಗಳ ಕಾಲ ಸತತವಾಗಿ ನಂದಿನಿಧೇನುವಿನ ಸೇವೆ ಮಾಡುವ ದಿಲೀಪನಿಗೆ ಯಾವ ತೊಂದರೆಯು ಒದಗದು, ರಾಜನಾದರೂ ನಂದಿನಿಧೇನು ಕುಳಿತಲ್ಲಿ, ನಿಂತಲ್ಲಿ, ಮೇವು ತಿನ್ನುವಲ್ಲಿ, ಅದರ ಹಿಂದೆಯೇ ದಣಿವು ಅರಿಯದೆಯೇ ಸೇವೆ ಮಾಡುತ್ತಾನೆ. ೨೨ನೆ ದಿನ ಶಿವನ ಮಾಯಾಜಾಲದ ಸಿಂಹವೊಂದು ನಂದಿನಿಧೇನುವನ್ನು ತಿನ್ನಲು ನುಗ್ಗುತ್ತದೆ. ಮಹಾವೀರನಾದ ದಿಲೀಪನು ಸಿಂಹದ ಮುಂದೆ ಸೋತು ಹೋಗುತ್ತಾನೆ. ತನ್ನನ್ನು ತಿಂದು ಹಸಿವು ನೀಗಿಸಿಕೊಳ್ಳಬೇಕೆಂದು ಸಿಂಹದ ಪಾದಕ್ಕೆ ಬೀಳುತ್ತಾನೆ. ಮಾಯಾಸಿಂಹವು ಮರೆಯಾಗಿ ನಂದಿನಿಧೇನುವು ಪ್ರಸನ್ನಳಾಗಿ, ತನ್ನ ತಾಯಿ ಕಾಮಧೇನುವಿನ ಶಾಪದಿಂದ ದಿಲೀಪನು ಮುಕ್ತನಾದನೆಂದು ತಿಳಿಸುತ್ತಾಳೆ.
೯೯ ಅಶ್ವಮೇಧ ಯಾಗ ಗಳನ್ನು ಮುಗಿಸಿದ ದಿಲೀಪನಿಗೆ ೧೦೦ ಅಶ್ವಮೇಧ ಯಾಗ ಮಾಡಿ ಇಂದ್ರನಂತೆ ಶತಕೃತು ಎಂದು ಅನ್ನಿಸಿಕೊಳ್ಳುವಾಸೆ ಇರುತ್ತದೆ. ೧೦೦ನೆಯ ಅಶ್ವಮೇಧ ಯಾಗದ ಕುದುರೆಗೆ ಸ್ವತಃ ರಘುವೇ ಬೆಂಗಾವಲಾಗಿ ತೆರಳುತ್ತಾನೆ. ಇಂದ್ರನು ದಿಲೀಪನಿಗೆ ಹಲವು ಬಗೆಯ ವಿಘ್ನಗಳನ್ನು ಒಡ್ಡುತ್ತಾನೆ. ಅವೆಲ್ಲವನ್ನೂ ರಘುವು ಗೆದ್ದಾಗ, ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತಾನೆ. ರಘುವು ಇಂದ್ರನೊಡನೆ ಹೋರಾಡಿ, ಇಂದ್ರನ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
ರಘುವು ಸ್ವಯಂವರದಲ್ಲಿ ತನ್ನ ಪತ್ನಿಯನ್ನು ಗೆದ್ದು ತರುವಾಗ, ಸೋತ ಇತರ ರಾಜರುಗಳು ರಘುವಿನ ಮೇಲೆ ಯುದ್ಧ ಮಾಡುತ್ತಾರೆ. ಅವರ ಹಗೆತನವನ್ನೂ ಮತ್ತು ಮೋಸಗಳನ್ನು ಗೆದ್ದು ರಘು, ತನ್ನ ಪತ್ನಿಯನ್ನು ಅಯೋಧ್ಯೆಗೆ ಕರೆತರುತ್ತಾನೆ. ಜಯೆಯನ್ನೂ, ಯುದ್ಧದಲ್ಲಿ ವಿಜಯ ಜಾಯೆಯನ್ನೂ (ಹೆಂಡತಿ) ಹೊತ್ತು ತಂದ ಮಗನಿಗೆ ಆನಂದದಿಂದ ದಿಲೀಪನು ಪಟ್ಟ ಕಟ್ಟುತ್ತಾನೆ. ಹಂಸತೂಲಿಕಾಕಲ್ಪದಲ್ಲಿ ತನ್ನ ಮೃತ ಪತ್ನಿಯನ್ನು ನೆನಪಿಸಿಕೊಳ್ಳುತ್ತಾ ಅಸು ನೀಗುತ್ತಾನೆ. ದೇವರಾಜ ಇಂದ್ರನೇ ರಘುವಿಗೆ ಸಮಾಧಾನ ಹೇಳಲು ಅಯೋಧ್ಯೆಗೆ ತೆರಳುತ್ತಾನೆ. ದಿಲೀಪನಿಗೆ ಮುಕ್ತಿಯು ತನ್ನ ವಂಶಸ್ಥನಾದ ಭಗೀರಥನಿಂದ ದೊರಕುತ್ತದೆ ಎಂದು ತಿಳಿಸುತ್ತಾನೆ.
ಪುರಾನಗಳ ಐತಿಹ್ಯದ ಪ್ರಕಾರ ದಿಲೀಪನ ಮಗ ಗಂಗೆಯನ್ನು ಭೂಮಿಗೆ ತಂದ ಭಗೀರಥ. ತನ್ನ ಪೂರ್ವಜರು ಎಲ್ಲರಿಗೂ ಮುಕ್ತಿಪ್ರಾಪ್ತಿಯಾಗಲಿ ಎಂದು ಸಹಸ್ರಾರು ವರ್ಷ ತಪಸ್ಸನ್ನು ಭಗೀರಥ ಆಚರಿಸುತ್ತಾನೆ. ಆದರೆ ಕಾಳಿದಾಸನು ರಘುವಂಶ ಕಾವ್ಯದಲ್ಲಿ ದಿಲೀಪನ ಮಗನಾಗಿ ರಘುವನ್ನು ಚಿತ್ರಿಸುತ್ತಾನೆ.
ಕಾಳಿದಾಸನ ರಘುವಂಶದಲ್ಲಿ ದಿಲೀಪನ ಬಗ್ಗೆ ವಿಸ್ತಾರವಾದ ಉಲ್ಲೇಖವಿದೆ. ಭಾರತದೇಶದಲ್ಲಿ ದಿಲೀಪ ಎಂಬುದು ಮಕ್ಕಳಿಗೆ ಹೆಸರಿಡಲು ಬಹು ಜನಪ್ರಿಯವಾದ ಹೆಸರು.
ಧನ್ಯವಾದಗಳು.
Как правильно приобрести диплом колледжа или ПТУ в России, важные моменты
промокод продамус [url=http://www.alhambra.bestforums.org/viewtopic.php?f=2&t=50755]http://www.forumbar.anihub.me/viewtopic.php?id=982[/url] .