in

ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯ ಸಂಸ್ಥಾಪಕರು ಶಾತವಾಹನರು

ಶಾತವಾಹನರು
ಶಾತವಾಹನರು

ಶಾತವಾಹನರು ಕರ್ನಾಟಕವನ್ನು ಆಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯದ ಸಂಸ್ಥಾಪಕರು. ಆರಂಭದಲ್ಲಿ ಅವರು ಮೌರ್ಯರ ಸಾಮಂತರಾಗಿದ್ದರು, ಮೌರ್ಯರ ಪತನದ ನಂತರ ಸ್ವತಂತ್ರರಾಗಿ ಶಾತವಾಹನ ವಂಶವನ್ನು ಸ್ಥಾಪಿಸಿದರು. ಪೈಥಾನ್ ಅವರ ರಾಜಧಾನಿಯಾಗಿತ್ತು. ಅವರು ಸುಮಾರು ೪೬೦ ವರ್ಷಗಳ ಕಾಲ ಕರ್ನಾಟಕವನ್ನಾಳಿದರು. ಅವರ ಸಾಮ್ರಾಜ್ಯವು ದಕ್ಷಿಣ ಭಾರತವಲ್ಲದೆ ಉತ್ತರ ಭಾರತಕ್ಕೂ ವ್ಯಾಪಿಸಿತ್ತು. ಕರ್ನಾಟಕದ ಬಹು ಭಾಗಗಳನ್ನು ಅವರು ಆಳಿದರು. ಶಾತಕರ್ಣಿ, ಗೌತಮಿಪುತ್ರ, ಪುಲಮಾಯಿ, ಯಜ್ಞಶ್ರೀಗಳು ಈ ವಂಶದ ಮುಖ್ಯ ದೊರೆ ಗಳು. ಅವರು ವೈದಿಕ ಧರ್ಮದ ಪೋಷಕರು. ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಪುಲವಾಗಿ ಬೆಳೆದವು. ಇವೆಲ್ಲವುಗಳ ಸಂಗಮ ಎಂಬಂತೆ ಕ್ರಿ.ಶ. ೨೭೮ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು. ಶಾತವಾಹನರು ಮಧ್ಯ ಏಷ್ಯಾದಿಂದ ಆಕ್ರಮಣಗಳಿಗೆ ತಡೆದುಕೊಂಡು ಎಂದು ಸೋಲದೆ, ದೊಡ್ಡ ಮತ್ತು ಪ್ರಬಲ ಸಾಮ್ರಾಜ್ಯದ ಆಳ್ವಿಕೆಮಾಡಿದರು.ಅವರು ವಿಷ್ಣುವಿನ ಆರಾಧಕರು ಮತ್ತು ಶಿವ, ಗೌರಿ, ಇಂದ್ರ, ಸೂರ್ಯ ಮತ್ತು ಚಂದ್ರ, ಇತರ ಅವತಾರಗಳು ಅವರ ದೇವಸ್ಥಾನಗಳಲ್ಲಿ ಕಾಣಬರುವವು. ಶಾತವಾಹನರು ವಿಶ್ವದಲ್ಲಿ ವೈದಿಕ ಸಂಸ್ಕೃತಿ, ಭಾಷೆ ಮತ್ತು ಧರ್ಮ ವ್ಯಾಪಿಸುವಂತೆ ಮಾಡಿದ್ದಾರೆ. ಅವರ ನಾಣ್ಯಗಳಲ್ಲಿ ಹಡಗುಗಳ ಚಿತ್ರಗಳನ್ನು ನೋಡಿ ವೀದೇಶಿ ವ್ಯಾಪರದಲ್ಲಿ ಕೂಡ ಅವರು ಮುಂದಿದ್ದರು ಎಂಬುದ್ದನ್ನು ತಿಳಿಯಬಹುದು.

ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯ ಸಂಸ್ಥಾಪಕರು ಶಾತವಾಹನರು
ಶಾತವಾಹನರು

ಸಿಮುಖ ಈ ವಂಶದ ಸ್ಥಾಪಕ, ಪೈಥಾನ್ ಇವನ ರಾಜಧಾನಿ, ಕ್ರಿ.ಪೂ.೨೩೫ರಲ್ಲಿ ಇವನು ಮೌರ್ಯರ ದೊರೆ ಸುಶೀಮನನ್ನು ಕೊಂದು ಸ್ವತಂತ್ರನಾದನು. ನಾನಾಘಾಟ್ ಶಾಸನ ಇವನನ್ನು ರಾಜಸಿಮುಖ ಶಾತವಾಹನ ಎಂದು ವರ್ಣಿಸಿದೆ. ಇವನು ೨೩ವರ್ಷಗಳ ಕಾಲ ರಾಜ್ಯಾವಳಿದನು. ನಂತರ ಅವನ ತಮ್ಮ ಕೃಷ್ಣನು ೧೦ ವರ್ಷ ರಾಜ್ಯಾವಾಳಿದನು. ಈತ ನಾಸಿಕ್ ನವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದನು. ಈತ ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಶ್ರೀಕಾಕುಲಂ ಸಿಮುಖನ ರಾಜಧಾನಿಯಾಗಿತ್ತು. ಅವರು ಮಧ್ಯಪ್ರದೇಶದ ಮೇಲೆ ಶಾತವಾಹನರ ನಿಯಮ ವಿಸ್ತರಿಸಲಾಯಿತು.

ದಕ್ಷಿಣಾಪಥದ ಸಾರ್ವಭೌಮರಾಗಿದ್ದ ಶಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ. ಶಾತವಾಹನರ ಮೂಲಪುರುಷನಾದ ಸೀಮುಕ ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರದ ಅನೇಕ ಶಾಸನಗಳು ಸೂಚಿಸುತ್ತವೆ. ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಪುನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದುವು. ಈ ಕಾಲದಲ್ಲಿ ಸಾತವಾಹನರು ಮೆಡಿಟರೇನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು. ಇವರು ಪೂರ್ವದಿಕ್ಕಿನಲ್ಲಿ ಬಂಗಾಲ ಕೊಲ್ಲಿಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ. ಸಾತವಾಹನರ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು. ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ. ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದಾನೆ. ಗಾಥಾ ಸಪ್ತಶತಿಯ ಕರ್ತೃ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದಾರೆ.

ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯ ಸಂಸ್ಥಾಪಕರು ಶಾತವಾಹನರು
ಶಾತವಾಹನರು

ಶಾತವಾಹನರ ಅನಂತರ ಚುಟುವಂಶದ ರಾಜರು ಬನವಾಸಿ ಪ್ರಾಂತ್ಯದಲ್ಲಿ ಪ್ರಬಲರಾದರು. ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ, ಆಳುಪರೂ,ಸೇಂದ್ರಕರೂ, ನಳರೂ, ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ. ಈಗಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ, ಆತನ ಪುತ್ರಿ ಶಿವಸ್ಕಂಧನಾಗಶ್ರೀ- ಇವರ ಹೆಸರುಗಳು ಉಕ್ತವಾಗಿವೆ. ವಿಣ್ಹುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು ಮಳವಳ್ಳಿ ಶಾಸನ ತಿಳಿಸುತ್ತದೆ. ಬಹುಶಃ ಮಳವಳ್ಳಿ ಶಾಸನದ ವಿಣ್ಹುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು. ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ- ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ. ಕದಂಬ ಸಂತತಿಯ ಸ್ಥಾಪಕ ಮಯೂರಶರ್ಮ ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ. ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು. ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು. ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದೇಹದಲ್ಲಿನ ಅನಗತ್ಯ ಕೂದಲು

ದೇಹದಲ್ಲಿನ ಅನಗತ್ಯ ಕೂದಲು ಇದ್ದರೆ ಅನೇಕ ಸುಲಭ ಪರಿಹಾರಗಳು

ಅಲರ್ಜಿ

ಅಲರ್ಜಿ ಎಂದರೇನು?