in

ದೇಹದಲ್ಲಿನ ಅನಗತ್ಯ ಕೂದಲು ಇದ್ದರೆ ಅನೇಕ ಸುಲಭ ಪರಿಹಾರಗಳು

ದೇಹದಲ್ಲಿನ ಅನಗತ್ಯ ಕೂದಲು
ದೇಹದಲ್ಲಿನ ಅನಗತ್ಯ ಕೂದಲು

ಹುಡುಗ ಅಥವಾ ಹುಡುಗಿಗಾಗಲಿ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ, ಇದರಿಂದ ಅವರು ಆತಂಕಕ್ಕೆ ಒಳಗಾಗುತ್ತಾರೆ.‌ ಸಾಮಾನ್ಯವಾಗಿ ಎಲ್ಲರಿಗೂ ಸೌಂದರ್ಯ ಪ್ರಜ್ಞೆ ಇರುತ್ತದೆ ಇದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಅಲ್ಲದೆ ಎಲ್ಲರ ಬಳಿ ಈ ವಿಷಯವನ್ನು ಹೇಳಿಕೊಳ್ಳಲು ಸಂಕೋಚವಾಗುತ್ತದೆ. ಕೆಲವರಿಗೆ ಅನುವಂಶಿಕವಾಗಿ ಅವರ ದೇಹದಲ್ಲಿ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಹುಡುಗಿಯ ಮುಖದಲ್ಲಿ ಕೂದಲು ಬೆಳೆಯಬಾರದು ಆದರೆ ಕೆಲವು ಹುಡುಗಿಯರ ಮುಖದಲ್ಲಿ, ಎದೆ ಭಾಗದಲ್ಲಿ, ಹೊಟ್ಟೆಯ ಭಾಗದಲ್ಲಿ ಕೂದಲು ಬೆಳೆಯುವುದರಿಂದ ಅವರಿಗೆ ಹೊರಗೆ ಹೋಗಲು ಮುಜುಗರವಾಗುತ್ತದೆ ಜೊತೆಗೆ ಆತಂಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹರೆಯದ ಹುಡುಗಿಯರ ಮುಖದಲ್ಲಿ ಬೇಡದ ಕೂದಲು ಗಡ್ಡ, ಮೀಸೆ ಹೀಗೆ ಬೇಡದ ಜಾಗದಲ್ಲಿ ಕೂದಲು ಬೆಳವಣಿಗೆಯಾಗುವುದನ್ನು ಹೆಚ್ಚಾಗಿ ಕಂಡುಬರುತ್ತದೆ. ಹೀಗೆ ಹೆಣ್ಣುಮಕ್ಕಳಿಗೆ ಬೇಡದ ಕೂದಲು ಬೆಳೆಯಲು ಕಾರಣವಿದೆ ಅಂಡಾಶಯದಲ್ಲಿ ನೀರಿನ ಗುಳ್ಳೆಗಳು ತುಂಬಿಕೊಂಡು ಅಂಡಾಣು ಸರಿಯಾಗಿ ಬಿಡುಗಡೆಯಾಗದೆ ಹೆಣ್ಣುಮಕ್ಕಳಿಗೆ ಬೇಡದ ಜಾಗದಲ್ಲಿ ಕೂದಲ ಬೆಳವಣಿಗೆ ಕಂಡುಬರುತ್ತದೆ. ಮೊದಲೇ ಇದಕ್ಕೆ ಚಿಕಿತ್ಸೆ ಪಡೆಯದೆ ಇದ್ದರೆ ನಂತರದ ದಿನಗಳಲ್ಲಿ ಹೆಚ್ಚಿನ ಕೂದಲು ಬೆಳೆದು ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಅದಲ್ಲದೆ ಕೆಲವರಿಗೆ ನಿರ್ನಾಳ ಗ್ರಂಥಿಯ ಸಮಸ್ಯೆಯಿಂದ ಹೆಣ್ಣು ಮಕ್ಕಳಿಗೆ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಹಾರ್ಮೋನ್ ವ್ಯತ್ಯಾಸದಿಂದಾಗಿ ಕೆಲವರಿಗೆ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಇದರ ಜೊತೆಗೆ ಮುಟ್ಟಿನ ತೊಂದರೆ ಸಹ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹದ ತೂಕ ಅತಿಯಾಗಿ ಹೆಚ್ಚಾಗುತ್ತದೆ.

ದೇಹದಲ್ಲಿರುವ ಅನಗತ್ಯ ಕೂದಲನ್ನು ತಾತ್ಕಾಲಿಕ ಹಾಗೂ ಶಾಶ್ವತವಾಗಿ ನಿವಾರಿಸಲು ಇತ್ತೀಚೆಗೆ ಹಲವು ಆಧುನಿಕ ವಿಧಾನಗಳು ಬಂದಿದೆ, ಅಲ್ಲದೇ ಹಲವು ಪ್ರಾಡಕ್ಟ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದೆಲ್ಲವೂ ಸತತವಾಗಿ ಬಳಸುತ್ತಾ ತ್ವಚೆಗೆ ಒಂದಿಲ್ಲೊಂದು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಸೂಕ್ಷ್ಮ ತ್ವಚೆಯವರಂತೂ ಬಹಳ ಎಚ್ಚರಿಂದ ಇಂತಹ ಪ್ರಾಡಕ್ಟ್‌ಗಳು ಅಥವಾ ನೂತನ ವಿಧಾನಗಳನ್ನು ಬಳಸಬೇಕಾಗುತ್ತದೆ.

ನಿರಂತರ ಬಳಕೆಯಿಂದಲೇ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಬೇಡದ ಕೂದಲನ್ನು ನಿವಾರಿಸಬಹುದು. ಹಾಗಿದ್ದರೆ ಯಾವೆಲ್ಲಾ ಮನೆಮದ್ದುಗಳು ಕೂದಲ ನಿವಾರಣೆಗೆ ಸಹಕಾರಿ, ನೋಡೋಣ

ದೇಹದಲ್ಲಿನ ಅನಗತ್ಯ ಕೂದಲು ಇದ್ದರೆ ಅನೇಕ ಸುಲಭ ಪರಿಹಾರಗಳು
ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣು ಹಣ್ಣಿನಲ್ಲಿರುವ ಪಪ್ಪೈನ್ ಎಂಬ ಕಿಣ್ವಗಳು (ಎನ್ಜೈಮ್) ಕೂದಲಿನ ಮೂಲವನ್ನು ದುರ್ಬಲಗೊಳಿಸಿತ್ತದೆ ಹಾಗೂ ಮತ್ತೆ ಕೂದಲು ಬೆಳೆಯದಂತೆ ಮಾಡುತ್ತದೆ.

ಒಂದರಿಂದ ಎರಡು ಸ್ಪೂನ್ ಮ್ಯಾಶ್ ಮಾಡಿರುವ ಪಪ್ಪಾಯ ಹಾಗೂ ಅರ್ಧ ಸ್ಪೂನ್ ಅರಿಶಿನವನ್ನು ಚೆನ್ನಾಗಿ ಬೆರೆಸಿ. ಪಪ್ಪಾಯ ಮಿಶ್ರಣವನ್ನು ಕೂದಲ ಬುಡದವರೆಗೂ ತಲುಪುವಂತೆ ಚೆನ್ನಾಗಿ ಮಸಾಜ್ ಮಾಡಿ. ಕನಿಷ್ಠ 15 ನಿಮಿಷ ಹಾಗೇ ಬಿಡಿ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಹಚ್ಚಿಕೊಳ್ಳಬೇಕು.

ಮುಖದ ಮೇಲೆ ದಪ್ಪವಾದ ಅಥವಾ ಹೆಚ್ಚು ಕೂದಲನ್ನು ಹೊಂದಿದ್ದರೆ ವ್ಯಾಕ್ಸ್ ಸ್ಟ್ರಿಪ್ಸ್ ಅನ್ನು ಬಳಸಬಹುದಾಗಿದೆ. ಇದು ಕೂದಲು ಬೇಗ ಬೆಳವಣಿಗೆಯಾಗುವುದನ್ನು ಆದಷ್ಟು ತಪ್ಪಿಸುತ್ತದೆ. ವ್ಯಾಕ್ಸಿಂಗ್ ಪ್ರಾರಂಭಿಸುವ ಮೊದಲು ನಿಮ್ಮ ಚರ್ಮವನ್ನು ಸ್ವಚ್ಛವಾಗಿಡುವುದು ತುಂಬಾ ಅಗತ್ಯ. ಹೀಗಾಗಿ ಮುಖದ ಮೇಲಿನ ಅಥವಾ ತುಟಿಯ ಮೇಲಿನ ಕೂದಲುತೆಗೆಯುವಾಗ ತೆಳುವಾದ ಮತ್ತು ಆಕಾರಕ್ಕೆ ತಕ್ಕಂತೆ ಸ್ಟ್ರಿಪ್ಸ್​ಗಳನ್ನು ಬಳಸಿ. ವ್ಯಾಕ್ಸ್ ಸ್ಟ್ರಿಪ್ಸ್ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ನಿಮ್ಮ ಮುಖದ ಕಾಂತಿ ಹೆಚ್ಚಿಸಿ, ಕೂದಲು ಸಮಸ್ಯೆಯಿಂದ ಹೊರಬರಲು ನಿಂಬೆ ಎಲ್ಲಕ್ಕಿಂತ ಉತ್ತಮ ಔಷಧ. ಪ್ರತಿದಿನ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಬೆರೆಸಿ, ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಮುಖದ ಬಣ್ಣ ಬದಲಾಗುತ್ತದೆ.

ದೇಹದಲ್ಲಿನ ಅನಗತ್ಯ ಕೂದಲು ಇದ್ದರೆ ಅನೇಕ ಸುಲಭ ಪರಿಹಾರಗಳು
ಅರಿಶಿನ+ಹಾಲು

ಅರಿಶಿನ+ಹಾಲು,ಕೂದಲ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಮೂರು ಸ್ಪೂನ್ ಅರಿಶಿನಕ್ಕೆ ಹಾಗೂ ಒಂದು ಸ್ಪೂನ್ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಕೂದಲು ಬೆಳೆದಿರುವ ದಿಕ್ಕಿಗೆ ತ್ವಚೆ ಸಂಪೂರ್ಣ ಮರೆಯಾಗುವಂತೆ ಹಚ್ಚಿಕೊಂಡು, ತ್ವಚೆ ಒಣಗುವವರೆಗೂ ಹಾಗೆ ಬಿಡಬೇಕು.ನಂತರ ಅಂಗೈಗೆ ಸ್ವಲ್ಪ ನೀರನ್ನು ಹಾಕಿಕೊಂಡು ತ್ವಚೆಯ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. ಬೆಚ್ಚಗಿನ ನೀರಿನಲ್ಲಿ ಸೋಪು ಹಚ್ಚದೆ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಸತತವಾಗಿ ಮಾಡುತ್ತಿರುವುದರಿಂದ ಅನಗತ್ಯ ಕೂದಲ ಬೆಳವಣಿಗೆ ನಿಧಾನವಾಗಿ ನಿವಾರಣೆಯಾಗುತ್ತದೆ.

ಕಿತ್ತಳೆ ಸಿಪ್ಪೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಕಿತ್ತಳೆ ಸಿಪ್ಪೆ ಪುಡಿ ಮಾಡಿ, ಮೊಸರು ಮತ್ತು ನಿಂಬೆ ರಸ ಕಲೆಸಿ, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಮೊಡವೆ ಸಮಸ್ಯೆ ನಿವಾರಿಸಲು ಮತ್ತು ಮುಖದ ಮೇಲಿರುವ ಕೂದಲಿನ ಬಣ್ಣ ಬದಲಾಯಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಇಂದು ಶುಭ ಶುಕ್ರವಾರ ಮುಂದಿನ 48 ಗಂಟೆಯ ಒಳಗೆ 6 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ರಾಜಯೋಗ ಲಕ್ಷ್ಮೀದೇವಿ ಕೃಪೆ

ಇಂದು ಶುಭ ಶುಕ್ರವಾರ ಮುಂದಿನ 48 ಗಂಟೆಯ ಒಳಗೆ 6 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ರಾಜಯೋಗ ಲಕ್ಷ್ಮೀದೇವಿ ಕೃಪೆ

ಶಾತವಾಹನರು

ಕರ್ನಾಟಕವನ್ನು ಆಳಿದ ಮೊದಲ ಸಾಮ್ರಾಜ್ಯ ಸಂಸ್ಥಾಪಕರು ಶಾತವಾಹನರು