ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟಿದ್ದು 1904ರ ಅಕ್ಟೋಬರ್ 2ರಂದು ಜನಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದೇ ಅವರ ಹುಟ್ಟುಹಬ್ಬವನ್ನೂ ದೇಶಾದ್ಯಂತ ಆಚರಿಸಲಾಗುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿ 1966ರ ಜನವರಿ 11ರಂದು ಉಜ್ಬೆಕಿಸ್ತಾನ್ದ ತಾಷ್ಕೆಂಟ್ನಲ್ಲಿ ನಿಧನರಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಜವಾಹರ್ ಲಾಲ್ ನೆಹರೂ ಬಳಿಕ ದೇಶದ ಪ್ರಧಾನಿ ಹುದ್ದೆಗೆ ಏರಿದವರು. ಅಂದರೆ ಭಾರತದ ಎರಡನೇ ಪ್ರಧಾನಿ. ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಹೀಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು ಇವರು.
ಲಾಲ್ ಬಹಾದ್ದೂರ್ ಮೊಘಲ್ ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

1965ರಲ್ಲಿ ಭಾರತ-ಪಾಕ್ ಯುದ್ಧ ನಡೆದಿತ್ತು. ಅದರ ಬೆನ್ನಲ್ಲೇ 1966ರ ಜನವರಿ 10ರಂದು ಅವರು ತಾಷ್ಕೆಂಟ್ಗೆ ತೆರಳಿದ್ದರು. ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಂಬಂಧ ಅಲ್ಲಿಗೆ ತೆರಳಿದ್ದರು. ಆದರೆ ಅಯೂಬ್ ಖಾನ್ರನ್ನು ಭೇಟಿಯಾಗಿ ಒಂದೇ ತಾಸಿನಲ್ಲಿ ನಿಧನರಾದರು. ಈ ಸಾವು ಇಂದಿಗೂ ನಿಗೂಢವೇ ಆಗಿದೆ. ಶಾಸ್ತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದೇ ಹೇಳಲಾಯಿತಾದರೂ ಕೆಲವು ಅನುಮಾನಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಮೃತದೇಹದ ಮುಖ ಮತ್ತು ಇಡೀ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಹೊಟ್ಟೆ, ಬೆನ್ನು, ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತು ಹಾಗೂ ಬಿಳಿ ಕಲೆಗಳು ಇದ್ದವು ಎಂದು ಕುಟುಂಬದ ಸದಸ್ಯರೇ ಹೇಳಿದ್ದಾರೆ. ಶಾಸ್ತ್ರಿ ಸಾವಿನ ತನಿಖೆ ಸಂಬಂಧಪಟ್ಟ ಯಾವುದೇ ದಾಖಲೆ ಪಾರ್ಲಿಮೆಂಟ್ ಲೈಬ್ರರಿಯಲ್ಲೂ ಇಲ್ಲ. ಹಾಗಾಗಿ ಇಂದಿಗೂ ಅವರ ಸಾವು ನಿಗೂಢ. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.
ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.

ಭಾರತದ ಪ್ರಧಾನಿಯಾಗಿ ಹುದ್ದೆಗೇರಿದರು. ದೇಶದ ಆಹಾರ ಮತ್ತು ಡೇರಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅವರು ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದ್ದರು.
ಶಾಸ್ತ್ರಿ ಸೋಮವಾರ
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.
ಧನ್ಯವಾದಗಳು.
GIPHY App Key not set. Please check settings