in

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ
ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ

ಕನ್ನಡ ಚಿತ್ರರಂಗದ ಮೂವರು ತಾರೆಗಳಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌, ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬ ಭಾನುವಾರ ನಡೆಯಿತು. ವಿಷ್ಣುವರ್ಧನ್‌ ಹಾಗೂ ಉಪೇಂದ್ರ ಅವರ ಹಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರು.

ಸಾಹಸ ಸಿಂಹ ವಿಷ್ಣುವರ್ಧನ್‌ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. 40 ಅಡಿ ಎತ್ತರದ ವಿಷ್ಣು ಅವರ ಅಭಿನಯದ ಚಿತ್ರಗಳ 50 ಕಟೌಟ್‌ಗಳು, ಸಾಂಸ್ಕೃತಿಕ ತಂಡಗಳ ಮೂಲಕ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನ್ನದಾನ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಸಾಣೆ ಹಾಗೂ ನೇತ್ರ ದಾನಕ್ಕೆ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಕ್ಷಿ ಆದರು.

ಇದೇ ದಿನ ನಟಿ ಶ್ರುತಿ ಅವರು ಕೂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ 47ನೇ ವಸಂತಕ್ಕೆ ಕಾಲಿಟ್ಟರು. ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಭಾನುವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು.

ಡಾ. ವಿಷ್ಣುವರ್ಧನ್ :

ಡಾ. ವಿಷ್ಣುವರ್ಧನ್, ಜನನ : ಸೆಪ್ಟೆಂಬರ್ ೧೮ ೧೯೫೦ ಮರಣ :ಡಿಸೆಂಬರ್ ೩೦ ೨೦೦೯ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ.

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ
ಡಾ. ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು.೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.

ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು. ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ ‘ಸಾಹಸಸಿಂಹ’ ಎಂಬ ಬಿರುದು ಬಂದಿತ್ತು.

ನಟಿ ಶೃತಿ :

ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ ಭಾಷೆಗಳ ಕೆಲವೊಂದು ಪ್ರಸಿದ್ಧ ಚಿತ್ರನಟಿಯರು, ಇಲ್ಲವೇ ಕೆಲವೊಂದು ಪರಭಾಷಾ ನಟಿಯರು. ಇಂತಹವರ ನಡುವೆ ಇಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತವರಲ್ಲಿ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ ಪ್ರಮುಖರು. ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ
ನಟಿ ಶೃತಿ

ಶ್ರುತಿ ಅವರು ಜನಿಸಿದ್ದು ಸಪ್ಟೆಂಬರ್ ೧೮, ೧೯೭೭ರಲ್ಲಿ. ಅವರದ್ದು ಕಲಾವಿದರ ಕುಟುಂಬ.

ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಪರದೆಯ ಮೇಲೆ ಮೂಡಿದ್ದ ಮಗು ಇವರು. ಕಲಾವಿದರ ಕುಟಂಬದಲ್ಲಿ ಬೆಳೆದು ಬಂದ ಹುಡುಗಿ ಪ್ರಿಯದರ್ಶಿನಿ ಕೆಲವೊಂದು ಚಿತ್ರಗಳಲ್ಲಿ ಪುಟ್ಟ ಪುಟ್ಟ ಒಂದೆರಡು ಚಿತ್ರಗಳಲ್ಲಿ ಪಾತ್ರವಹಿಸಿದ ನಂತರ ೧೯೯೦ರ ವರ್ಷದಲ್ಲಿ ತೆರೆಕಂಡ ದ್ವಾರಕೀಶರು ನಿರ್ಮಿಸಿದ ‘ಶ್ರುತಿ’ ಚಿತ್ರದಲ್ಲಿ ‘ಹಾಡೊಂದ ಹಾಡುವೆನು ಹೃದಯ ರಾಗದಲ್ಲಿ’ ಎಂದು ಹಾಡುತ್ತಾ ಬಂದು ಆ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರಾದರು. ಆ ಚಿತ್ರದ ನಾಯಕಿಯಾದಾಗ ಅವರಿಗೆ ಇನ್ನೂ ಹದಿನಾಲ್ಕು ಹದಿನೈದು ವರ್ಷ ವಯಸ್ಸು.

ಇಷ್ಟು ಚಿಕ್ಕವಯಸ್ಸಿನಲ್ಲೇ ಶ್ರುತಿ ಅವರ ನಟಿಸಿರುವ ೧೨೦ ಚಿತ್ರಗಳ ಸಂಖ್ಯೆ ಮಹತ್ವದ್ದು. ಶ್ರುತಿ ಲಕ್ಷಣವಾಗಿದ್ದು ಹಲವಾರು ಪಾತ್ರಗಳನ್ನು ಆಗಾಗ ಮಾಡುತ್ತಿದ್ದಾರೆ.

ತಮ್ಮ ಬದುಕಿನಲ್ಲಿ ಮೂಡಿದ ಹಲವಾರು ಗೊಂದಲಗಳ ಬಗ್ಗೆ ಶ್ರುತಿ ಅವರು ಹೇಳಿದ ಮಾತಿವು. “ನಾನು ಯಶಸ್ಸು ಬಂದಾಗ ಹಿಗ್ಗಲಿಲ್ಲ, ಕಷ್ಟ ಬಂದಾಗ ಮೂಲೆ ಸೇರಲಿಲ್ಲ. ಕಷ್ಟ ಎಂಬುದು ಪ್ರತಿಯೊಬ್ಬರ ಬದುಕಿನಲ್ಲೂ ಬರುತ್ತದೆ. ಬದುಕಿನಲ್ಲಿ ನನ್ನ ಕರ್ತ್ಯವ್ಯಗಳೇನು ಉಂಟೋ ಅದರ ಬಗ್ಗೆ ಶ್ರದ್ಧಾಪೂರ್ವಕವಾಗಿ ಮುನ್ನಡೆಯುತ್ತೇನೆ”.

ಉಪೇಂದ್ರ :

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ
ಸೂಪರ್ ಸ್ಟಾರ್ ಉಪೇಂದ್ರ

ಉಪೇಂದ್ರ (ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ದೇವರು) ನಿರ್ದೇಶಕ ಹಾಗೂ ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ೧೯೯೨ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ ೧೯೯೮ರಲ್ಲಿ ಬಿಡುಗಡೆಯಾದ ಏ. ಇವರ ಬಾಳಸಂಗಾತಿ ಪ್ರಿಯಾಂಕ ಉಪೇಂದ್ರ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡ ಉಪ್ಪಿ ಕನ್ನಡದ ಹೆಸರಾಂತ ನಿರ್ದೇಶಕ ‘ಕಾಶಿನಾಥ’ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು.

1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ‘ಆಪರೇಷನ್ ಅಂತ’, ‘ಸ್ವಸ್ತಿಕ್’ ಚಿತ್ರಗಳನ್ನು ನಿರ್ದೇಶಿಸಿದರು.

1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಸ್ತೂರಿ ಪರಿಮಳ

ಕಸ್ತೂರಿ ಪರಿಮಳ

ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯ