in

ನಿದ್ರಾಹೀನತೆ ಸಮಸ್ಯೆಗೆ ಸಾಮಾನ್ಯ ಪರಿಹಾರ

ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆ ಸಮಸ್ಯೆ

ನಿದ್ರಾಹೀನತೆ ಸತತವಾಗಿ ನಿದ್ರೆ ಇಲ್ಲದಿರುವ ತೊಂದರೆಯಾಗಿದ್ದು, ಇದರಿಂದ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆ ಅಲ್ಪಕಾಲಿಕ, ದೀರ್ಘಕಾಲೀಕವಾಗಿ ಕಾಡಬಹುದು.

ಮಿದುಳಿನ ಲಿಂಬಿಕ್ ವ್ಯವಸ್ಥೆ ಯಲ್ಲಿ ನಿದ್ರಾ ಕೇಂದ್ರವಿದೆ. ನರವಾಹಕಗಳು ಈ ನಿದ್ರಾ ಕೇಂದ್ರವನ್ನು ನಿರ್ದೇಶಿಸುತ್ತವೆ, ಹಗಲು ಹೊತ್ತಿನಲ್ಲಿ ಎಚ್ಚರ, ರಾತ್ರಿ ಹೊತ್ತು ನಿದ್ದೆ ಮಾಡುವಂತೆ ನೋಡಿಕೊಳ್ಳುತ್ತವೆ. ನಿದ್ರೆಯ ಮುಖ್ಯ ಅನುಕೂಲ ಮೈಮನಸ್ಸುಗಳನ್ನು ವಿರಮಿಸುವಂತೆ ಮಾಡುವುದು. ದಣಿದ ದೇಹ ಮನಸ್ಸುಗಳು ಒಳ್ಳೆಯ ನಿದ್ರೆಯಿಂದ ಚೇತರಿಸಿಕೊಂಡು ಉತ್ಸಾಹ -ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ.

ದೇಹದಲ್ಲಿ ನಡೆಯುವ ಚಯಾಪಚಯ ಕಾರ್ಯ ನಿರ್ವಹಿಸಲು ನಿದ್ರೆ ಮುಖ್ಯವಾಗಿದೆ. ಉತ್ತಮ ಸ್ಮರಣೆ ಮತ್ತು ಏಕಾಗ್ರತೆ ಹೊಂದಲು ಸಹ ಇದು ಅಗತ್ಯ. ನಿದ್ರೆಯ ಕೊರತೆಯಿಂದಾಗಿ ಅಧಿಕ ರಕ್ತದೊತ್ತಡ, ಬೊಜ್ಜು, ಜಠರಗರುಳಿನ ಸಮಸ್ಯೆಗಳು, ಸಮನ್ವಯದ ಕೊರತೆ, ಏಕಾಗ್ರತೆಯ ಕೊರತೆ ಮುಂತಾದ ಆರೋಗ್ಯ ಪರಿಸ್ಥಿತಿಗಳು ಉಂಟಾಗಬಹುದು.

ನಿದ್ರಾಹೀನತೆ ಸಮಸ್ಯೆಗೆ ಸಾಮಾನ್ಯ ಪರಿಹಾರ
ನಿದ್ರಾಹೀನತೆಯಿಂದ ಏಕಾಗ್ರತೆಯ ಕೊರತೆ ಉಂಟಾಗಬಹುದು

ನಿದ್ರಾಹೀನತೆಯು ಮೆಲಟೋನಿನ್ ಹಾರ್ಮೋನ್ ದುರ್ಬಲತೆಗೆ ಸಂಬಂಧಿಸಿವೆ. ಇದು ರಾತ್ರಿಯ ಸಮಯದಲ್ಲಿ ಪೀನಲ್ ಗ್ರಂಥಿಯಿಂದ ಸ್ರವಿಸುತ್ತದೆ. ಮೆಲಟೋನಿನ್ ಮಟ್ಟವು ನಿದ್ರೆಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಹಾರ್ಮೋನ್ ನಿದ್ರೆ – ಎಚ್ಚರ ಚಕ್ರವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದಲ್ಲಿ ನಡೆಯುವ ಚಯಾಪಚಯ ಕಾರ್ಯವನ್ನು ನಿರ್ವಹಿಸಲು ನಿದ್ರೆ ಮುಖ್ಯವಾಗಿದೆ.

ಒತ್ತಡ, ಎದೆಯುರಿ, ಋತುಬಂಧ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಅನಿಗದಿತ ರೀತಿಯ ನಿದ್ರಾ ಅಭ್ಯಾಸಗಳು ಅಥವಾ ಅನಿಯಮಿತ ಕೆಲಸದ ಗಂಟೆಗಳು ಇದಕ್ಕೆ ಕಾರಣವಾಗಬಹುದು. ಈ ಎಲ್ಲದರಿಂದ ದೇಹದ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ. ವಯಸ್ಕರಲ್ಲಿ ಶೇ.15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ವಯಸ್ಸಾದಂತೆ ಇದರ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

ನಿದ್ರಾಹೀನತೆ ದೂರ ಮಾಡಲು ಕೆಲವೊಂದು ಸರಳ ಉಪಾಯಗಳು :

ರಾತ್ರಿಯಲ್ಲಿ ನಿದ್ರಿಸಲು ಸಾಧ್ಯವಾಗದೆ, ತೊಂದರೆ ಅನುಭವಿಸುತ್ತಿದ್ದರೆ ಪದಾಭ್ಯಂಗವನ್ನು ಅಭ್ಯಾಸ ಮಾಡಿ. ಇದರಲ್ಲಿ ಎರಡೂ ಪಾದಗಳಿಗೆ ಎಣ್ಣೆ ಹಚ್ಚಬೇಕು. ತದನಂತರ ಇದನ್ನು ಸ್ವಲ್ಪ ಸಮಯ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಗಂಟೆ ಬಿಟ್ಟು ಅದನ್ನು ಒರೆಸಿ ಅಥವಾ ನೀರಿನಿಂದ ತೊಳೆಯಿರಿ. ಪ್ರತಿದಿನ ರಾತ್ರಿ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗುತ್ತದೆ.

ಒಂದು ಬಾಳೆ ಹಣ್ಣನ್ನು 1 ಟೀ ಸ್ಪೂನ್ ಜೀರಿಗೆ ಪೌಡರ್ ಜೊತೆ ಚೆನ್ನಾಗಿ ಕಿವುಚಿ ಪ್ರತಿ ದಿನ ಊಟ ಆದ ಮೇಲೆ ರಾತ್ರಿ ಮಲಗುವ ಮುಂಚೆ ಇದನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ನಿದ್ರಾಹೀನತೆ ಎಂಬ ಪದವೇ ಅವರ ಜೀವನದಿಂದ ಇಲ್ಲವಾಗುತ್ತದೆ.

ವಯಸ್ಸಾದವರು ಕೂಡ ಬಾಳೆ ಹಣ್ಣು ಮತ್ತು ಜೀರಿಗೆ ಪುಡಿಯ ಮಿಶ್ರಣವನ್ನು ಸೇವಿಸಿ ಒಳ್ಳೆಯ ನಿದ್ರೆ ಮಾಡಬಹುದು. ಅಥವಾ ಜೀರಿಗೆಯನ್ನು ಸ್ವಲ್ಪ ಬಾಣಲೆಯಲ್ಲಿ ಹುರಿದು, ಒಂದು ಲೋಟ ನೀರನ್ನು ಚೆನ್ನಾಗಿ ಬಿಸಿ ಮಾಡಿ ಹುರಿದ ಜೀರಿಗೆಯನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಕ್ಕರೆ ಸೇರಿಸಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಅದರಿಂದ ಚಹಾ ತಯಾರಿಸಿ, ಸೋಸಿ ರಾತ್ರಿಯ ಸಮಯದಲ್ಲಿ ಊಟಕ್ಕೆ ಮುಂಚೆ ಊಟ ಆದ ಮೇಲೆ ಸೇವಿಸಿ ನಂತರ ಆರಾಮವಾಗಿ ಮಲಗಿ ನಿದ್ರಿಸಬಹುದು.

ರಾತ್ರಿ ಹೊಟ್ಟೆ ಬಿರಿಯುವ ಹಾಗೆ ತಿನ್ನಬೇಡಿ, ಲಘು ಆಹಾರ ಸೇವಿಸಿ. ಕೆಫಿನ್ ಅಂಶವಿರುವ ಪದಾರ್ಥಗಳಿಂದ ಸಾಧ್ಯವಾದಷ್ಟು ದೂರವಿರಿ. ನಿದ್ದೆ ಬರುವುದಿಲ್ಲವೆಂದು ಲೈಟ್ ಉರಿಸಿಕೊಳ್ಳುವುದು, ಮೊಬೈಲ್, ಟಿವಿ ಜತೆ ಸಮಯ ಕಳೆಯುವುದು ಒಳ್ಳೆಯದಲ್ಲ.

ಪ್ರಾಣಾಯಾಮವು ನಿದ್ರೆಯ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ. ಚಂದ್ರ ಅನುಲೋಮ್ ವಿಲೋಮ್ ಪ್ರಾಣಾಯಾಮ ಮಾಡುವುದು ದೇಹವು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ

ನಿದ್ರಾಹೀನತೆ ಸಮಸ್ಯೆಗೆ ಸಾಮಾನ್ಯ ಪರಿಹಾರ
ರಾತ್ರಿ ಮಲಗುವ ಮೊದಲು ಬಿಸಿ ಹಾಲು ಕುಡಿಯಬೇಕು

ಹಾಲಿನಲ್ಲಿ ನಮ್ಮ ದೇಹವನ್ನು ವಿಶ್ರಾಂತಗೊಳಿಸುವ ಮತ್ತು ನಿದ್ರೆಯನ್ನು ಹತ್ತಿಸುವ ಎರಡು ಅಂಶಗಳು ಇರುತ್ತವೆ. ಮೆಲಟೋನಿನ್ ಹಾರ್ಮೋನ್ ಮತ್ತು ಅಮೈನೋ ಆಮ್ಲ ಟ್ರಿಪ್ತೋಫನ್. ಅದರ ಸಂಶೋಧಕರು ಹೇಳುವ ಪ್ರಕಾರ ಕೇವಲ ಒಂದು ಲೋಟ ಹಾಲಿನಲ್ಲಿ ಟ್ರಿಪ್ತೋಫನ್ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇದು ನಮಗೆ ನಿದ್ರೆ ಹತ್ತಿಸಲು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಅದರ ಬದಲು ನಮ್ಮ ಮಾನಸಿಕ ಯಾತನೆಯನ್ನು ಕಡಿಮೆ ಮಾಡಿ ನಮ್ಮ ಮನಸ್ಸಿಗೆ ಶಾಂತಿಯನ್ನು ಒದಗಿಸಿ ನೆಮ್ಮದಿಯ ನಿದ್ರೆ ಬರುವಂತೆ ಮಾಡುತ್ತದೆ.

ಹಾಸಿಗೆಗೆ ಜಾರುವುದಕ್ಕಿಂತ 2 ಗಂಟೆ ಮೊದಲೇ ಊಟ ಮಾಡಿ. ಕೊಠಡಿಯಲ್ಲಿ ಬೆಳಕಿದ್ದರೆ ನಿದ್ದೆ ಬರುವ ಸಾಧ್ಯತೆಗಳು ಕಡಿಮೆ. ಸಡಿಲವಾದ ಉಡುಪು ಧರಿಸಿ.

ಧ್ಯಾನದಿಂದ ನಿದ್ರಾವಧಿ ಹೆಚ್ಚಾಗುವುದರ ಜೊತೆಗೆ ನಿದ್ರೆಯ ಗುಣಮಟ್ಟ ಕೂಡ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ. ಅದು ಅಲ್ಲದೆ ಧ್ಯಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಎಂದಿಗೂ ಉಂಟಾಗುವುದಿಲ್ಲ.

ಕೇವಲ ಪ್ರಶಾಂತವಾದ ವಾತಾವರಣದಲ್ಲಿ ಯಾವುದಾದರೂ ಒಂದು ವಸ್ತುವಿನ ಬಗ್ಗೆ ನಮ್ಮ ಇಡಿ ಮನಸ್ಸನ್ನು ಕೇಂದ್ರೀಕೃತಗೊಳಿಸಿ ಸುಮಾರು 30 ನಿಮಿಷಗಳ ಕಾಲ ಧ್ಯಾನ ಮಾಡುತ್ತಾ ಕುಳಿತರೆ ಸಾಕಷ್ಟು ಉಪಯೋಗಗಳು ಲಭ್ಯವಾಗುತ್ತದೆ.

ಮಲಗುವ ವೇಳೆಯನ್ನು ಬದಲಿಸಬೇಡಿ, ಒಂದು ನಿರ್ದಿಷ್ಟ ಸಮಯಕ್ಕೆ ಮಲಗಿ. ಮಲಗುವ ಅರ್ಧಗಂಟೆ ಮೊದಲು, ಯಾವ ಚಿಂತೆ, ಭಯ, ಕೋಪ, ದುಃಖದ ವಿಚಾರಗಳ ಬಗ್ಗೆ ಗಮನ ಕೊಡಬಾರದು.

ನಿದ್ರಾಹೀನತೆ ಸಮಸ್ಯೆ ನಿವಾರಿಸಲು ಔಷಧೀಯ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಸಲು ಒಂದು ಗ್ಲಾಸ್ ಹಾಲಿಗೆ ಕಾಲು ಚಮಚ ಜಾಯಿಕಾಯಿ ಪುಡಿ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಏಲಕ್ಕಿ ಪುಡಿ ಮಿಶ್ರಣ ಮಾಡಿ. ಈಗ ಅದನ್ನು 5 ನಿಮಿಷ ಕುದಿಸಿ. ಇದನ್ನು ಫಿಲ್ಟರ್ ಮಾಡಿ ಮತ್ತು ಮಲಗುವ ಮುನ್ನ ಪ್ರತಿದಿನ ಸೇವಿಸಿ.

ವ್ಯಾಯಾಮ, ದೈಹಿಕ ಶ್ರಮ ಉತ್ತಮ ನಿದ್ದೆಗೆ ಸಹಾಯಕ.

ಹಗಲು ಹೊತ್ತು ದೀರ್ಘ ನಿದ್ದೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಡಿ. ಮಲಗುವ ಆರು ತಾಸಿನ ಮೊದಲು ಧೂಮಪಾನ ಹಾಗೂ ಮದ್ಯಪಾನ ಮಾಡಬೇಡಿ.

ನಿದ್ರಾಹೀನತೆ ಸಮಸ್ಯೆಗೆ ಸಾಮಾನ್ಯ ಪರಿಹಾರ
ಧ್ಯಾನದಿಂದ ನಿದ್ರಾವಧಿ ಹೆಚ್ಚಾಗುವುದು

ನಿದ್ರಾಹೀನತೆಯ ಸಮಸ್ಯೆಯನ್ನು 7-14 ದಿನಗಳಲ್ಲಿ ಪರಿಹರಿಸಲು ಸಹಾಯ ಮಾಡುವ ಅನೇಕ ಗಿಡಮೂಲಿಕೆಗಳಿವೆ. ಕೆಲವು ಗಿಡಮೂಲಿಕೆಗಳು ಅಶ್ವಗಂಧ, ಜಟಮಾನ್ಸಿ, ಬ್ರಾಹ್ಮಿ, ಮಂಡೂಕಪರ್ಣಿ, ಮಮ್ಸ್ಯಾಡಿ ಕ್ವಾಥಾ, ಸರ್ಪಗಂಧತಿ ವತಿ, ಇತ್ಯಾದಿ.

ಭಾರತದಲ್ಲಿ ಬ್ರಾಹ್ಮಿಯನ್ನು ಆಯುರ್ವೇದ ಮೆದುಳಿನ ನಾದದ ರೂಪದಲ್ಲಿ ಹೆಚ್ಚು ಪರಿಗಣಿಸಲಾಗುತ್ತದೆ, ಆದರೆ ಈ ಸಸ್ಯವು ನೀಡಲು ಇನ್ನೂ ಹೆಚ್ಚಿನದನ್ನು ಹೊಂದಿದೆ. ಮಿದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಇದು ಪರಿಣಾಮಕಾರಿಯಾಗಿದ್ದರೂ, ಇದು ಮೋಟಾರ್ ಕೌಶಲ್ಯ ಕಲಿಕೆಯನ್ನು ಸುಧಾರಿಸುತ್ತದೆ ಮತ್ತು ಬುದ್ಧಿಮಾಂದ್ಯತೆಯಿಂದ ರಕ್ಷಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಲಾಲ್ ಬಹದ್ದೂರ್​ ಶಾಸ್ತ್ರಿ ಪುಣ್ಯ ತಿಥಿ

ಜನವರಿ 11, ಲಾಲ್ ಬಹದ್ದೂರ್​ ಶಾಸ್ತ್ರಿ ಪುಣ್ಯ ತಿಥಿ

ಇಂದ್ರ ಮತ್ತು ಇಂದ್ರಾಣಿ

ಇಂದ್ರ – ಸ್ವರ್ಗಲೋಕದ ಒಡೆಯ ಮತ್ತು ಇಂದ್ರಾಣಿ – ಸಪ್ತಮಾತೃಕೆಗಳಲ್ಲಿ ಪ್ರಮುಖಳು