in

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ
ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ

ಲ್ಯುಕೊರಿಯಾ ಅಂದರೆ, ಬಿಳಿಸೆರಗು ಎನ್ನುವರು. ಲ್ಯುಕೊರಿಯಾ ಹಲವು ಕಾರಣಗಳಿವೆ, ಸಾಮಾನ್ಯ ಎಸ್ಟ್ರೊಜೆನ್ ಅಸಮತೋಲನ, ಯೋನಿ ಸೋಂಕು ಅಥವಾ ಎಸ್ಟಿಡಿಗಳ ಕಾರಣದಿಂದಾಗಿ ಬಿಳಿಸೆರಗು ಪ್ರಮಾಣ ಹೆಚ್ಚಾಗಬಹುದು ಮತ್ತು ಇದು ಕಾಲಕಾಲಕ್ಕೆ ಕಣ್ಮರೆಯಾಗಬಹುದು ಮತ್ತು ಮತ್ತೆ ಕಾಣಿಸಿಕೊಳ್ಳಬಹುದು. ಈ ಬಿಳಿಸೆರಗು ವಿಸರ್ಜನೆಯು ವರ್ಷಗಳವರೆಗು ಸಂಭವಿಸಬಹುದು, ಈ ಸಂದರ್ಭದಲ್ಲಿ ಇದು ಹೆಚ್ಚು ಹಳದಿ ಮತ್ತು ವಾಸನೆಯುಕ್ತ ಇರುತ್ತದೆ. ಇದು ಯೋನಿಯ ಅಥವಾ ಗರ್ಭಕಂಠದ ಉರಿಯೂತವು ರೋಗಲಕ್ಷಣವಾಗಿದೆ.

ಮಹಿಳೆಯರಲ್ಲಿ ಬಿಳಿಸೆರಗು ವಿಸರ್ಜನೆ ಸಾಮಾನ್ಯವಾದದ್ದು. ಋತುಚಕ್ರಕ್ಕೂ ಮುನ್ನ ನಿರ್ದಿಷ್ಟ ಅವಧಿಗಳ ಕಾಲ ಬಿಳಿಸೆರಗಿನ ವಿಸರ್ಜನೆ ಆಗುವುದು. ಸಾಮಾನ್ಯವಾಗಿ ಬಿಳಿ ಸೆರಗಿನ ವಿಸರ್ಜನೆಯು ಹದಿಹರೆಯದ ಮಹಿಳೆಯರಲ್ಲಿ ಹಾಗೂ ವಯಸ್ಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು. ನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಬಿಳಿ ಸೆರಗಿನ ವಿಸರ್ಜನೆಯು ಸಮಸ್ಯೆಯಲ್ಲ. ಅದೇ ಬಿಳಿ ಸೆರಗು ಅತಿಯಾಗಿ ವಿಸರ್ಜನೆ ಆಗುವುದು, ದುರ್ವಾಸನೆಯಿಂದ ಕೂಡಿರುವುದು ಅಥವಾ ವಿಸರ್ಜನೆ ಆಗದೆ ಇರುವುದು, ರಕ್ತ ಮಿಶ್ರಿತ ಬಿಳಿಸೆರಗು ವಿಸರ್ಜನೆ ಹೀಗೆ ವಿವಿಧ ಬಗೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು.

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ
ಗರ್ಭಿಣಿ ಸ್ತ್ರೀಯರಲ್ಲಿ ಆಗುವ ಹಾರ್ಮೋನ್ ಬದಲಾವಣೆ ಗಳಿಂದಲೂ ಕೂಡ ಬಿಳಿಸೆರಗು ಕಾಣಬಹುದು

ಬಿಳಿ ಸೆರಗು ಇದು ಪ್ರತಿಯೊಂದು ಮಹಿಳೆಯನ್ನು ಹೊಂದಿಲ್ಲದ ಒಂದು ಕಾಲಘಟ್ಟದಲ್ಲಿ ಕಾಡಿರುತ್ತದೆ. ಬಹುಮುಖ್ಯವಾಗಿ ಋತುಮತಿಯಾದ, ಇನ್ನೂ ಮದುವೆಯಾಗದ ತರುಣಿಯರಲ್ಲಿ ಈ ಸಮಸ್ಯೆ ಹೆಚ್ಚಿರುತ್ತದೆ. ನಿಯಮಿತ ಮಟ್ಟದಲ್ಲಿ ಬಿಳಿ ಸೆರಗು ಉಂಟಾದಲ್ಲಿ ಇದರಿಂದ ಏನೂ ತೊಂದರೆ ಇಲ್ಲ. ಆದರೆ, ಇದು ಅತಿಯಾದಲ್ಲಿ ನೀವು ಇದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗುವುದು.

ಬಿಳಿಸೆರಗು ಪ್ರತಿಯೊಂದು ಮಹಿಳೆಯರಲ್ಲಿ ವಿಭಿನ್ನವಾಗಿರುತ್ತದೆ. ನಿಮ್ಮ ತಿಂಗಳಿನ ಮುಟ್ಟಿನ ಸಮಯ, ಗರ್ಭಿಣಿ ಸ್ತ್ರೀಯರಲ್ಲಿ ಆಗುವ ಹಾರ್ಮೋನ್ ಬದಲಾವಣೆ ಗಳಿಂದಲೂ ಕೂಡ ಬಿಳಿಸೆರಗು ಬದಲಾಗಬಹುದು. ಕೆಲವೊಮ್ಮೆ ನಿಮ್ಮ ಆತಂಕಗಳು ನಿಮ್ಮ ವ್ಯಾಯಾಮದ ಅಭ್ಯಾಸಗಳು ಬದಲಾದಾಗ ಕೂಡ ಇದು ಬದಲಾಗುತ್ತದೆ.

ಗರ್ಭಕಂಠದಲ್ಲಿ ಉಂಟಾಗುವ ಲೋಳೆಯಂತಹ ಅಂಶವೇ ಬಿಳಿ ಸೆರಗು. ನಿಮ್ಮ ಗರ್ಭಕೋಶದ ಒಳಪದರ ಹಾಗೂ ಭಾರ್ಥೊಲಿನ್ ಎಂಬ ಗ್ರಂಥಿಗಳ ದ್ರವ ರೂಪವೇ ಬಿಳಿಸೆರಗು. ಇದರಲ್ಲಿ ಅತಿ ಹೆಚ್ಚಾದ ಬ್ಯಾಕ್ಟೀರಿಯ ಹಾಗೂ ಸತ್ತ ಜೀವಕೋಶಗಳು ಗರ್ಭಕೋಶದಿಂದ ಉತ್ಪತ್ತಿ ಆಗಿರುವಂತಹ ದ್ರವಗಳು ತುಂಬಿರುತ್ತದೆ. ಬಿಳಿ ಸೆರಗಿನಲ್ಲಿ ಇರುವಂತಹ ಹಲವು ಬ್ಯಾಕ್ಟೀರಿಯಾಗಳು ಯೋನಿಯನ್ನು ಮತ್ತಷ್ಟು ತೊಂದರೆಗಳಿಂದ ಕಾಪಾಡುತ್ತವೆ. ಇದು ಯೋನಿಯ ಅಕ್ಕ-ಪಕ್ಕ ಆಮ್ಲಿಯ ಅಂಶಗಳನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಮೊದಲಿಗೆ ಬಿಳಿಸೆರಗು ಆಗುವುದು ಸಾಮಾನ್ಯ ಹಾಗೂ ಇದರ ಪ್ರಮಾಣ ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಹಾಗಾಗಿ ಇಷ್ಟೇ ಪ್ರಮಾಣದಲ್ಲಿ ಆದಾಗ ಸಾಮಾನ್ಯ ಎಂದು ಹೇಳಲಾಗದು. ಆರೋಗ್ಯವಂತ ಮಹಿಳೆಯ ದೇಹದಲ್ಲಿ ದಿನವೊಂದಕ್ಕೆ 4 ಎಂಎಲ್ ನಷ್ಟು ಬಿಳಿಸೆರಗು ಉಂಟಾಗಬಹುದು.  ಮುಟ್ಟಿನ ಸಮಯ ಹತ್ತಿರವಾದಾಗ ಅಥವಾ ನೀವು ಗರ್ಭಿಣಿಯರಾದಾಗ ಅಥವಾ ನೀವು ಮಕ್ಕಳಾಗದಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾಗ ಈ ಪ್ರಮಾಣ ಏರುಪೇರಾಗಬಹುದು.

 ಸಾಧಾರಣ ಮನೆಯಲ್ಲಿ ಮಾಡಬಹುದಾದ ಪರಿಹಾಗಳು ಇಲ್ಲಿವೆ :

*ಆಪಲ್ ಸೈಡರ್ ವಿನೆಗರ್ ಸಾಕಷ್ಟು ಔಷಧೀಯ ಗುಣಗಳಿಂದ ಕೂಡಿದೆ. ಇದನ್ನು ಬಳಸುವುದರ ಮೂಲಕ ಬಿಳಿಸೆರಗು ಅಥವಾ ಬಿಳಿ ವಿಸರ್ಜನೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ
ಆಪಲ್ ಸೈಡರ್ ವಿನೆಗರ್

ಒಂದು ಗ್ಲಾಸ್ ಬೀರನ್ನು ಚೆನ್ನಾಗಿ ಕುದಿಸಿ, ಬತ್ತಿಸಿಕೊಂಡ ನೀರಿಗೆ ಒಂದು ಕಪ್ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ, ಮಿಶ್ರಗೊಳಿಸಿ. ನಂತರ ಉಗುರು ಬೆಚ್ಚಗಿನ ಈ ಮಿಶ್ರಣದಿಂದ ಯೋನಿಯ ಜಾಗವನ್ನು ತೊಳೆಯಿರಿ.

ದಿನದಲ್ಲಿ ಎರಡು ಬಾರಿ ಈ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯು ಗುಣಮುಖವಾಗುವುದು.

* ಬಾಳೆಹಣ್ಣಿನಲ್ಲಿರುವ ಅತಿಯಾದ ನಾರಿನಂಶ ನಿಮಗೆ ಬಿಳಿ ಸೆರಗನ್ನು ಕಡಿಮೆ ಮಾಡಬಹುದು.

*ಬಿಳಿಸೆರಗು ಅಥವಾ ಬಿಳಿ ವಿಸರ್ಜನೆಗೆ ಕೊತ್ತಂಬರಿ ಬೀಜ ಅತ್ಯುತ್ತಮ ಪರಿಹಾರ ನೀಡುವುದು. ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರಿಗೆ 2-3 ಟೀ ಚಮಚ ಕೊತ್ತಂಬರಿ ಬೀಜವನ್ನು ಸೇರಿಸಿ, ಮುಚ್ಚಿಡಿ. ಮುಂಜಾನೆ ಕೊತ್ತಂಬರಿ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ಸಮಸ್ಯೆ ಗುಣಮುಖ ಆಗುವುದು.

*ಕೆಲವು ಮಹಿಳೆಯರು ತಮ್ಮ ಋತು ಚಕ್ರ ದ ಕೊನೆಯ ದಿನಗಳಲ್ಲಿ ರಕ್ತಸ್ರಾವ ಕಡಿಮೆಯಿದ್ದಾಗ ಟ್ಯಾಪೂನ್ಸ್ ಬಳಕೆಯನ್ನು ಮಾಡುತ್ತಾರೆ ಹಾಗು ರಾತ್ರಿ ತುಂಬಾ ಸಮಯದ ವರೆಗೆ ಇದನ್ನು ಬಳಸಿ ಅದನ್ನು ತೆಗೆಯುವುದನ್ನು ಮರೆಯುತ್ತಾರೆ. ಇದರಿಂದ ಯೊನಿಯ ಸೋಂಕು ಉಂಟಾಗಬಹುದು ಹಾಗೊ ಇದು ಬೇರೆ ಅಂಗಗಳಿಗೊ ಹರಡಬಹುದು.

• ಮೆಂತ್ಯ ಕಾಳಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಸಹಾಯ ಮಾಡುತ್ತದೆ. ಸ್ವಲ್ಪವೇ ಮೆಂತ್ಯಕಾಳು ಗಳನ್ನು ನಿಲ್ಲಿಸಿ ನೀರನ್ನು ಕುಡಿಯಿರಿ.

* ಮೊಸರಿನಲ್ಲಿ ದೇಹಕ್ಕೆ ಬೇಕಾಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಇದೆ ನಿಮ್ಮ ವಿಸರ್ಜನೆಯನ್ನು ಇದು ಕೆಟ್ಟ ವಾಸನೆ ಬರದಂತೆ ಕಾಪಾಡುತ್ತದೆ.

*ಬೆಟ್ಟದ ನೆಲ್ಲಿಕಾಯಿಯಲ್ಲಿ ಲ್ಯುಕೋರೊಹಿಯಾ ಮತ್ತು ಆಮ್ಲದ ಗುಣವು ಬಿಳಿಸೆರಗಿನ ಸಮಸ್ಯೆಗೆ ಉತ್ತಮ ಪರಿಹಾರ ನೀಡುವುದು. ಬೆಟ್ಟದ ನೆಲ್ಲಿಕಾಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಿಸಿಲಲ್ಲಿ ಒಣಗಿಸಿಕೊಳ್ಳಬೇಕು.

ಸಂಪೂರ್ಣವಾಗಿ ಒಣಗಿದ ನೆಲ್ಲಿಕಾಯಿ ಚೂರನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ ಪುಡಿಮಾಡಿಕೊಳ್ಳಿ. ನಂತರ ಒಂದು ಟೀ ಚಮಚ ನೆಲ್ಲಿಕಾಯಿ ಪುಡಿಗೆ ಒಂದು ಟೀ ಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ದಿನದಲ್ಲಿ ಎರಡು ಹೊತ್ತು ಸೇವಿಸಿ. ಇದರಿಂದ ಉತ್ತಮ ಪರಿಹಾರ ಪಡೆಯಬಹುದು.

*ಹಾರ್ಮೋನ್ ತುಂಬಿದ ಜನನ ನಿಯಂತ್ರಣ ಮಾತ್ರೆಗಳನ್ನು ಉಪಯೋಗಿಸುವ ಮಹಿಳೆಯರಲ್ಲಿ ವಿಸರ್ಜನೆ ಹೆಚ್ಚಾಗುತ್ತದೆ.

*ದಾಳಿಂಬೆ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು.

ದಾಳಿಂಬೆ ರಸವನ್ನು ಕುಡಿಯುವುದು ಅಥವಾ ತಾಜಾ ಹಣ್ಣಿನ ಬೀಜವನ್ನು ಸೇವಿಸಬಹುದು.ದಾಳಿಂಬೆ ಎಲೆಗಳನ್ನು ಪೇಸ್ಟ್ ಮಾಡಿ ನೀರಿನೊಂದಿಗೆ ಬೆರೆಸಿ ಸವಿಯಬಹುದು.

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ
ಅಕ್ಕಿ ನೆನೆಸಿದ ನೀರು

*ಅಕ್ಕಿ ನೆನೆಸಿದ ನೀರಿನಲ್ಲಿ ಕಡಿತ ಕಡಿಮೆ ಮಾಡುವ ಗುಣಗಳಿವೆ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಅನ್ನ ಬೇಯಿಸುವಾಗ ತೆಳಿಯನ್ನು ತೆಗೆದು ಬೇರ್ಪಡಿಸಿಕೊಳ್ಳಬೇಕು. ಬೇರ್ಪಡಿಸಿಕೊಂಡ ಅನ್ನದ ತೆಳಿಯನ್ನು ಗಣನೀಯವಾಗಿ ಕುಡಿಯುವುದರಿಂದ ಬಿಳಿ ಸೆರಗು ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

*ತುಳಸಿ ಎಲೆಯಿಂದ ರಸವನ್ನು ತೆಗೆದು ಸ್ವಲ್ಪ ಜೇನುತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಮಿಶ್ರಣವನ್ನು ಪ್ರತಿ ದಿನ ಎರಡು ಬಾರಿ ಸೇವಿಸಬೇಕು. ಈ ಕ್ರಮಗಳ ಪರ್ಯಾಯವಾಗಿ ತುಳಸಿ ರಸವನ್ನು ಹಾಲಿಗೆ ಸೇರಿಸಿಕೊಂಡು ಕುಡಿಯಬಹುದು. ಸಕ್ಕರೆ ಪಾಕಕ್ಕೆ ತುಳಸಿ ರಸವನ್ನು ಸೇರಿಸಿ ಕುಡಿಯುವುದರಿಂದಲೂ ಸಮಸ್ಯೆಗೆ ಪರಿಹಾರ ಪಡೆಯಬಹುದು.

​*ಪೇರಳೆ ಎಲೆಯನ್ನು ತೆಗೆದುಕೊಂದು ಚೆನ್ನಾಗಿ ತೊಳೆದುಕೊಂಡು, . ಒಂದು ಪಾತ್ರೆಯಲ್ಲಿ ನೀರನ್ನು ಮತ್ತು ಎಲೆಯನ್ನು ಸೇರಿಸಿ ಕುದಿಸಿ. ಮಿಶ್ರಣವು ಚೆನ್ನಾಗಿ ಕುದಿ ಬಂದು ಅರ್ಧದ ಪ್ರಮಾಣ ಬರುವವರೆಗೂ ಕುದಿಸಬೇಕು. ನಂತರ ಆರಲು ಬಿಟ್ಟು, ನೀರನ್ನು ಸೋಸಿಕೊಂಡು ದಿನಕ್ಕೆ ಎರಡು ಬಾರಿ ಕುಡಿಯಿರಿ. ಸಮಸ್ಯೆ ಬಹುಬೇಗ ಗುಣಮುಖವಾಗುವುದು.

*ಶುಂಠಿಯನ್ನು ಚೆನ್ನಾಗಿ ಹೆಚ್ಚಿಕೊಂಡು ಬಿಸಿಲಲ್ಲಿ ಒಣಗಿಸಿಕೊಂಡು, ಅದನ್ನು ನೀರಿನೊಂದಿಗೆ ಬೆರೆಸಿ ಕುದಿಸಿ. ನೀರಿನ ಪ್ರಮಾಣ ಅರ್ಧ ಪ್ರಮಾಣಕ್ಕೆ ಇಳಿದ ಬಳಿಕ ಉರಿಯನ್ನು ಆರಿಸಿ. ಶುಂಠಿ ನೀರು ಅಥವಾ ಉಗುರ ಬೆಚ್ಚಗಿನ ಶುಂಠಿ ನೀರನ್ನು ದಿನದಲ್ಲಿ ಎರಡು ಬಾರಿ ಕುಡಿಯಬೇಕು. ಮೂರು ವಾರಗಳ ಕಾಲ ಮುಂದುವರಿಸಿದ ಬಳಿಕ ಸಮಸ್ಯೆ ಗಮನಾರ್ಹವಾಗಿ ಗುಣಮುಖವಾಗುವುದು.

 ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಮರಶಿಲ್ಪಿ ಜಕಣಾಚಾರಿ

ಅಮರಶಿಲ್ಪಿ ಜಕಣಾಚಾರಿ ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆಗಳನ್ನು ನೀಡಿದವರು

ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ

ಪ್ರತೀ ವರ್ಷ ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಕಾಣಿಸಿಕೊಳ್ಳುವುದು ನಿಜಾನಾ?