ಬೇಸಿಗೆಕಾಲ ಶುರುವಾಯಿತು, ಎಲ್ಲರನ್ನು ಸಾಮಾನ್ಯವಾಗಿ ಕಾಣುವ ಸಮಸ್ಯೆ ಎಂದರೆ ಅಲರ್ಜಿ. ಹಾಗೂ ಅಲರ್ಜಿ ಎಂದರೇನು ಮೈಮೇಲೆ ಗುಳ್ಳೆಗಳು ಏಳುವುದು ಅದು ಒಂದು ತರದ ಅಲರ್ಜಿ, ಕೆಲವರಿಗೆ ಯಾವುದೇ ಆಹಾರ ತಿಂದರೂ ಅಲರ್ಜಿ. ಗಾಳಿಯಿಂದ ಅಲರ್ಜಿ, ನೀರಿನ ಅಲರ್ಜಿ, ಇಂತಹ ಹಲವಾರು ಬಗೆಯ ಅಲರ್ಜಿಗಳು ಶುರುವಾಗುತ್ತದೆ ಆದರೆ ಅಲರ್ಜಿಗಳು ಯಾಕೆ ಬರುತ್ತದೆ ಯಾವ ರೀತಿಯಿಂದ ಬರುತ್ತದೆ ಎಂದು ತಿಳಿಯೋಣ.
ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ. ಬಹಳಷ್ಟು ಸಲ ಇದನ್ನು ಅಟೊಪಿ ಅಥವಾ ತಕ್ಷಣವೇ ತನ್ನ ವಿರುದ್ಧ ಸ್ಪಂದಿಸುವ ಲಕ್ಷಣವಾಗಿದೆ. ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯುವ ವಸ್ತುಗಳ ಮೇಲೆ ಇದು ಸಂಭವಿಸುತ್ತದೆ. ಇಂತಹ ಪ್ರತಿಕ್ರಿಯೆಗಳು ಹುಟ್ಟಿಕೊಂಡುದುದು,ಊಹಿಸಿದ್ದು ಮತ್ತು ತೀವ್ರ ಪರಿಣಾಮಕಾರಿಯೆನಿಸುತ್ತದೆ. ಕಡ್ಡಾಯವಾಗಿ ಹೇಳುವುದಾದರೆ ಅಲರ್ಜಿಯು ನಾಲ್ಕು ಅತಿಸೂಕ್ಷ್ಮ ಪ್ರತಿಕ್ರಿಯೆಗಳಲ್ಲೊಂದಾಗಿದೆ. ಇದನ್ನು ಪ್ರಕಾರದ ಅಥವಾ ತಕ್ಷಣದ ವಿಪರೀತ ಪ್ರತಿಕ್ರಿಯೆ ಎನ್ನುವರು. ಇದು ಬಿಳಿ ರಕ್ತ ಕಣಗಳ ಅತಿಹೆಚ್ಚಿನ ಕ್ರಿಯಾತ್ಮಕ ವರ್ತನೆಯೇ ಕಾರಣವಾಗಿದೆ. ಇವುಗಳನ್ನು ಮಾಸ್ತ್ ಕಣಗಳು ಮತ್ತು ಬಾಸೊಫಿಲ್ಸ್ ಗಳು ರೋಗನಿರೋಧಕಗಳ ಮೂಲಕ ತನ್ನ ಗುಣಲಕ್ಷಣ ತೋರುತ್ತದೆ. ಇದನ್ನು,ಇದರಲ್ಲಿ ಉರಿತದ ಪರಿಣಾಮ ಕಾಣಿಸುತ್ತದೆ.
ಸಾಮಾನ್ಯ ಅಲರ್ಜಿಯೆಂದರೆ ಎಸ್ಜಿಮಾ, ಚರ್ಮದ ಮೇಲೆ ದದ್ದು, ಏರಿಳಿತದ ಜ್ವರ, ಆಸ್ತಮಾ ರೋಗ, ಆಹಾರದ ಅಲರ್ಜಿಗಳು, ಹುಳುಗಳು ಕಚ್ಚಿದ ನಂಜು ವಿಷ, ಕಣಜಗಳ ಕಡಿತ,ಜೇನುನೊಣಗಳ ಕಡಿತ ಇತ್ಯಾದಿಯಿಂದ ಉಂಟಾಗುವ ಅಲರ್ಜಿಗಳು ಸಾಮಾನ್ಯವಾಗಿವೆ. ಸೌಮ್ಯ ಪ್ರಮಾಣದ ಅಲರ್ಜಿಯೆಂದರೆ ಏರಿಳಿತದ ಜ್ವರಭಾದೆಯು ಅತಿ ಸಾಂದ್ರತೆಯ ಜನಸಂಖ್ಯೆ ಇರುವಲ್ಲಿ ಕಾಣುತ್ತದೆ.ಇದರ ಪ್ರಮುಖ ಲಕ್ಷಣಗಳೆಂದರೆ ಅಲೆರ್ಜಿಕ್ ವಿಪರೀತತೆ,ಕಡಿತದ ಅನುಭವ ಮತ್ತು ನೆಗಡಿಯಿಂದ ಮೂಗು ಸೋರುವಿಕೆ. ಅಸ್ತಮಾ ಉಲ್ಬಣವಾಗಲು ಅಲರ್ಜಿಗಳು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಜನರಲ್ಲಿ ಗಂಭೀರ ಅಲರ್ಜಿಗಳು ಪರಿಸರ ಅಥವಾ ಆಹಾರ ಅಥವಾ ಔಷಧಿಗಳ ಉಪಯೋಗದಿಂದ ಹಲವರು ಜೀವಕ್ಕೆ ಅಪಾಯಕಾರಿಯಾದ ಸೂಕ್ಷ್ಮ ಸಂವೇದನೆಯ ಪ್ರತಿಕ್ರಿಯೆಗಳು ಮಾರಣಾಂತಿಕ ಎನಿಸಬಹುದು. ಸದ್ಯ ಅಲರ್ಜಿಯನ್ನು ಪತ್ತೆಹಚ್ಚಲು ಹಲವಾರು ಬಗೆಯ ಪರೀಕ್ಷೆಗಳು ಲಭ್ಯವಿವೆ.ಸಂವೇದನೆ ಪರೀಕ್ಷೆಗೆ ಚರ್ಮದ ತಪಾಸಣೆಯಿಂದ ರಕ್ತದ ಮಾದರಿ ತೆಗೆಯುವುದು,ಅಲರ್ಜಿಗಳ ನೈಜ ಕಾರಣ ಕಂಡು ಹಿಡಿಯಲು IgE ವಿಧಾನವಿದೆ. ಆಂಟಿ-ಹಿಸ್ಟಾಮೈನ್ ಗಳ ಉಪಯೋಗದ ತಡೆ,ಸ್ಟಿರಿಯಾಡ್ ಗಳ ಬಳ್ಕೆಗೆ ಕಡಿವಾಣ ಅಥವಾ ಸ್ವಯಂ ಔಷಧಿ ಪಡೆಯುವುದು,ಸಂವೇದನೆ ತಡೆಗೆ ಇಮ್ಯುನೊ ಥೆರಪಿ ಅಥವಾ ಇನ್ನಾವುದೊ ಥೆರಪಿ ಅತಿ ಸೂಕ್ಷ್ಮ ಸಂವೇದನೆ ನಿಲ್ಲಿಸಲು ಯಾವುದೊ ಚಿಕಿತ್ಸೆಗೆ ಮುಂದಾಗುವುದನ್ನು ತಡೆಯಬೇಕಾಗುತ್ತದೆ. ವೈದ್ಯಕೀಯ ನಿಘಂಟಿನಲ್ಲಿ ಅಲರ್ಜಿಗಳನ್ನು ಕಂಡು ಹಿಡಿಯುವದನ್ನು ಅಲರ್ಜೊಲೊಜಿ ಎಂದು ಕರೆಯುತ್ತಾರೆ
ಹಲವಾರು ಅಲರ್ಜಿನ್ ಗಳು ಬಹುತೇಕ ಗಾಳಿ ಮೂಲಕ ಉಂಟಾಗುತ್ತವೆ. ಅಂದರೆ ಧೂಳು ಮತ್ತು ಪರಾಗಸ್ಪರ್ಶ ಈ ಪ್ರಕರಣಗಳಲ್ಲಿ ಗಾಳಿ ಮೂಲಕ ಅಲರ್ಜಿಯಾಗಲು ಕಣ್ಣುಗಳು, ಮೂಗು ಮತ್ತು ಶ್ವಾಶಕೋಶಗಳು ಕಾರಣವಾಗುತ್ತವೆ. ಉದಾಹರಣೆಗೆ ಮೂಗಿನ ಹೊರಳೆಯ ಲೋಳೆಯ ಅಲರ್ಜಿಯಿಂದ ಏರಿಳಿತದ ಜ್ವರ, ಮೂಗಿನಲ್ಲಿ ಉರಿತ, ಸೀನುವಿಕೆ ಮತ್ತು ಕಣ್ಣು ಕೆಂಪಾಗುವಿಕೆಯು ಇದರ ಲಕ್ಷಣಗಳೆನಿಸಿವೆ. ಶ್ವಾಶೋಚ್ಚಾಸದ ಮೂಲಕ ಉಂಟಾದ ಅಲರ್ಜಿಗಳು ಅಸ್ತಮಾದ ಲಕ್ಷಣಕ್ಕೆ ಕಾರಣವಾಉತ್ತವೆ, ಬ್ರಾಂಕೊ ಕನ್ ಸ್ಟ್ರಿಕ್ಸನ್ ನಲ್ಲಿ ಗಾಳಿ ಹೋಗುವ ದಾರಿಯನ್ನು ಸಂಕುಚಿತಗೊಳ್ಳಿಸುತ್ತದೆ. ಇದರಿಂದಾಗಿ ಮೂಗಿನ ಲೋಳೆ ಅಥವಾ ಸಿಂಬುಳ ಪ್ರಮಾಣ ಶ್ವಾಶನಾಳದಲ್ಲಿ ಹೆಚ್ಚಾಗುತ್ತದೆ. ಇದರಿಂದ ಉಸುರಾಟಕ್ಕೆ ತೊಂದರೆಯಾಗಿ ಭಾರದ ಅನುಭವ,ಕೆಮ್ಮು ಮತ್ತು ಸೀನುವಿಕೆಯು ಪ್ರಮುಖ ಪಾತ್ರವಹಿಸುತ್ತದೆ. ಇವುಗಳಿಂದಲ್ಲದೇ ಇನ್ನು ಕೆಲವು ಇವುಗಳನ್ನು ಸುತ್ತುವರೆದ ಬೇರೆ ಬೇರೆ ಅಲರ್ಜಿಗಳಿವೆ. ಅವು ಬರುವುದು; ಆಹಾರಗಳು, ಕೀಟಗಳ ಕಡಿತ,ಮತ್ತು ಪ್ರತ್ರಿಕ್ರಿಯೆಗಳು,ಔಷಧೋಪಚಾರಗಳು ಅಂದರೆ ಆಸ್ಪಿರಿಯನ್ ಮತ್ತು ಎಂಟಿಬಯೊಟಿಕ್ ಗಳು ಅಂದರೆ ಪೆನ್ಸಿಲಿಯನ.ಇತ್ಯಾದಿ. ಆಹಾರ ಅಲರ್ಜಿಯ ಉದಾಹರಣೆಗಳು:ಹೊಟ್ಟೆ ನೋವು,ಹೊಟ್ಟೆ ಊದಿಕೊಳ್ಳುವಿಕೆ,ವಾಂತಿಯಾಗುವಿಕೆ,ಬೇಧಿ,ನವೆತದ ಚರ್ಮ ಮತ್ತು ಚರ್ಮದ ಊತ ಅಲರ್ಜಿ ಸಂದರ್ಭದಲ್ಲಿ ಉಂಟಾಗಿದೆ. ಆಹಾರದ ಅಲರ್ಜಿಯಿಂದ ಉಸಿರಾಟದ ತೊಂದರೆ(ಆಸ್ತಮಾ)ಪ್ರರ್ತಿಕ್ರಿಯೆಗಳು ಅಥವಾ ಮೂಗಿನ ಲೋಳೆ ಪದರಿನ ಉರಿಊತದ ಪರಿಣಾಮಗಳು ಉಂಟಾಗುವದಿಲ್ಲ. ಕೀಟಗಳ ಕಡಿತಗಳು,ಆಂಟಿಬಯೊಟಿಕ್ಸ್ , ಮತ್ತು ಕೆಲವು ಔಷಧಗಳು ಅಲರ್ಜಿಕ್ ಪ್ರತಿಕ್ರಿಯೆಗಳನ್ನು ತೋರುತ್ತವೆ. ಉದಾಹರಣೆಗೆ: ಅನಿಫಿಲ್ಯಾಕ್ಸಿಸ; ಹಲವಾರು ಅಂಗಗಳಿಗೆ ಇದು ಹಾನಿಕಾರಕವಾಗಬಹುದು. ಅಂದರೆ ಜೀರ್ಣಾಂಗ ವ್ಯವಸ್ಥೆ,ಉಸಿರಾಟದ ವ್ಯವಸ್ಥೆ,ಮತ್ತು ರಕ್ತಪರಿಚಲನೆ ವ್ಯವಸ್ಥೆ ಇದರಿಂದ ವ್ಯತ್ಯಯಕ್ಕೊಳಗಾಗಬಹುದಾಗಿದೆ. ಈ ಅಲರ್ಜಿಗಳು ಗಂಭೀರತೆಯ ಮೇಲೆ ಬೇರೆ ಬೇರೆ ಪರಿಣಾಮಗಳನ್ನು ಬೀರುತ್ತವೆ. ಚರ್ಮದ ಮೇಲಿನ ಪ್ರತಿಕ್ರಿಯೆಗಳು,ಬ್ರಾಂಕೊಕನ್ ಸ್ಟ್ರಿಕ್ಸನ್ಸ್ ಆಸ್ತಮಾ ಲಕ್ಷಣ ಎಡೆಮಾ,ಹೈಪೊಟೆನ್ಸನ್ ,ಕೋಮಾ ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಇಂತಹ ದುಷ್ಪರಿಣಾಮವು ಹಠಾತ್ ಆಗಿ ಕಾಣಿಸಬಹುದು, ಇಲ್ಲವೇ ಇದರ ಪರಿಣಾಮ ಕೊಂಚ ವಿಳಂಬವಾಗಬಹುದು. ಈ ಪ್ರಕಾರದ ಗಂಭೀರ ಅಲರ್ಜಿಯು ಚುಚ್ಚುಮದ್ದುಗಳನ್ನು ಹಾಕಿಸಿದಾಗ ಕಡಿಮೆಯಾಗಬಹುದು.ಎಪಿನೆಫ್ರಿನ್ ಇಲ್ಲವೆ ಎಪಿ ಪೆನ್ ಅಥವಾ ಟ್ವಿಂಜೆಕ್ಟ್ ಅಟೊ ಇಂ&ಜೆಕ್ಟರ್ ನ್ನು ಬಳಸಲಾಗುತ್ತದೆ. ಅನಾಫಿಲ್ಯಾಕ್ಸಿಸ್ ನ ಸ್ವಭಾವವೆಂದರೆ ಪ್ರತಿಕ್ರಿಯೆಯು ಕಡಿಮೆಯಾದಂತೆ ಅನಿಸಿದರೂ ಇದು ಸುಧೀರ್ಘ ಕಾಲದ ವರೆಗೆ ಮುಂದುವರೆಯಬಹುದು. ಚರ್ಮದೊಂದಿಗೆ ಸಂಪರ್ಕಕ್ಕೆ ಬರುವ ಲ್ಯಾಟೆಕ್ಸ್ ನಂತಹವುಗಳು ಸಹ ಅಲರ್ಜಿಕ್ ಪ್ರತಿಕ್ರಿಯೆಗೆ ಸಾಮಾನ್ಯ ಕಾರಣಗಳೆನಿಸಿವೆ. ಇವುಗಳನ್ನು ಸೋಂಕು ಚರ್ಮರೋಗಗಳು ಅಥವಾ ಎಸ್ಜಿಮಾ ಎನ್ನುತ್ತಾರೆ. ಚರ್ಮದ ಅಲರ್ಜಿಗಳು ಮೇಲಿಂದ ಮೇಲೆ ದದ್ದುಗಳು ಅಥವಾ ಊತ ಮತ್ತು ಉರಿಯನ್ನು ಉಂಟು ಮಾಡುತ್ತವೆ. ಇದನ್ನು “ಸರ್ಪ ಸುತ್ತು ಮತ್ತು ವಿಪರೀತ”ಇವು ಚರ್ಮದ ಪ್ರತಿರೋಧದ ಕ್ರಿಯೆಗಳನ್ನು ವ್ಯಕ್ತಪಡಿಸುತ್ತದೆ.
ಅಲರ್ಜಿಯ ಮುಖ್ಯ ಕಾರಣಗಳು ಮತ್ತು ಅಪಾಯಗಳನ್ನು ಎರಡು ವಿಧದಲ್ಲಿ ವಿಭಾಗಿಸಬಹುದು: ಆಂತರಿಕ ಮತ್ತು ವಾತಾವರಣದ ಅಂಶಗಳು.. ಆಂತರಿಕ ಕಾರಣಗಳೆಂದರೆ ಅನುವಂಶೀಯತೆ, ಲಿಂಗವೈವಿಧ್ಯ,ಜನಾಂಗ ಮತ್ತು ವಯಸ್ಸು ಅಂದರೆ ಇಲ್ಲಿ ವಂಶಪಾರಂಪರೆ ಒಮ್ಮೊಮ್ಮೆ ದೂರ ಉಳಿಯಬಹುದು ಇತ್ತೀಚಿನ ಅಲರ್ಜಿಕ್ ಏರುಪೇರುಗಳು ಹೆಚ್ಚಾಗುತ್ತಿದ್ದು ಇದರ್ಫಲ್ಲಿ ಕೇವಲ ವಂಶವಾಹಿನಿ ಮೂಲಕ ಉಂಟಾಗಿವೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಬಾಲ್ಯಾವಸ್ಥೆಯಲ್ಲಿವಾತಾವರಣದ ಮೂಲಕ ಸೋಂಕುರೋಗಗಳಿಗೆ ತುತ್ತಾಗುವ ನಾಲ್ಕು ಅಂಶಗಳೆಂದರೆ ವಾತಾವರಣ ಮಾಲಿನ್ಯ,ಅಲ್ರ್ಜಿನ್ ನ ಮಟ್ಟಗಳು ಮತ್ತು ಆಹಾರ ಪದ್ದತಿಯಲ್ಲಿನ ಬದಲಾವಣೆಗಳು ಪ್ರಮುಖ ಕಾರಣವಾಗುತ್ತವೆ.
ಅನುವಂಶೀಯ ಮೂಲಕಾರಣ
ಅಲರ್ಜಿಕ್ ರೋಗಗಳು ಸಾಮಾನ್ಯವಾಗಿ ಕೌಟುಂಬಿಕ ಕಾರಣಗಳಿಂದ ಕಾಣಿಸುವ ಸಾಧ್ಯತೆ ಇದೆ:ಒಂದೇ ರೂಪದ ಅವಳಿಗಳು ಒಂದೇ ತೆರನಾದ ಅಲರ್ಜಿಯ ಲಕ್ಷಣವನ್ನು ಸುಮಾರು ೭೦%ರಷ್ಟು ತೋರುತ್ತವೆ;ಇಂತಹದೇ ಅಲರ್ಜಿ ಸೋಂಕು ಒಂದೇ ತೆರನಲ್ಲದ ಮಕ್ಕಳಿಗೆ ಸುಮಾರು ೪೦%ರಷ್ಟು ಅಂಟುವ ಸಾಧ್ಯತೆ ಹೆಚ್ಚ್ಕು. ಅಲರ್ಜಿಕ್ ಪೋಷಕರು ಅಥವಾ ತಂದೆ-ತಾಯಿಗಳು ಅಲರ್ಜಿ ಇರುವ ಮಕ್ಕಳಿಗೆ ಜನ್ಮ ಕೊಡುವ ಸಾಧ್ಯತೆ ಇದೆ. ಅಂತವರಲ್ಲಿ ಅಲರ್ಜಿಯಿಲ್ಲದವರಿಗಿಂತ ತೀವ್ರ ಪ್ರಮಾಣದಲ್ಲಿ ಈ ಸೋಂಕು ಬರುವ ಸಂಭವ ಹೆಚ್ಚಾಗಿರುತ್ತದೆ. ಆದರೆ ಕೆಲವು ಅಲರ್ಜಿಗಳು ವಂಶವಾಹಿನಿಗಳಿಂದ ಬಂದರೂ ಅವುಗಳಲ್ಲಿ ಉಳಿಯುವ ಸ್ಥಿರತೆ ಕಡಿಮೆ ಇರುವುದು. ಇಲ್ಲಿ ತಂದೆ-ತಾಯಿಗಳಿಗೆ ಬಟಾಣಿ ಕಾಳುಗಳ ಅಲರ್ಜಿ ಇದ್ದರೆ ಮಕ್ಕಳಿಗೆ ಯಾವದೇ ಒಂದು ಸಸ್ಯದ ಬಗ್ಗೆ ಅಲರ್ಜಿ ಇರುವುದು. ಆದರೆ ಅಲರ್ಜಿಗಳು ಯಾವಾಗಲೂ ಅನುವಂಶೀಯತೆಯಿಂದಲೇ ಬೆಳವಣಿಗೆ ಹೊಂದುವದಿಲ್ಲ. ಇವುಗಳು ಅನಿಯಮಿತ ರೋಗನಿರೋಧಕ ಶಕ್ತಿಯಿಂದಾಗಿ ಅಲರ್ಜಿಗಳು ಕಂಡುಬರುತ್ತದೆ. ಇಲ್ಲಿ ವಿಶೇಷ ಅಲರ್ಜೆನ್ ಕಾಣಿಸುವುದಿಲ್ಲ. ಅಲರ್ಜಿಕ್ ಸಂವೇದನೆಯ ಅಪಾಯವು ಇಲ್ಲಿ ಕಂಡು ಬರುತ್ತದೆ.ಅಲರ್ಜಿಯು ಮಕ್ಕಳು ಮತ್ತು ವಯಸ್ಕರಿಗೆ ಅಧಿಕ ಪ್ರಮಾಣದಲ್ಲಿ ಕಾಣುತ್ತದೆ. ವಿಭಿನ್ನ ಅಧ್ಯಯನಗಳು IgE ಮಟ್ಟವು ಮಕ್ಕಳು ಹಾಗು ಸುಮಾರು ೧೦-೩೦ವರ್ಷದವರೆಗಿನ ವ್ಯಕ್ತಿಗಳು ಅಲರ್ಜಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಏರಿಳಿತದ ಜ್ವರ ಅದರ ತಾಪಮಾನವು ಮಕ್ಕಳಲ್ಲಿ ಅತ್ಯುಗ್ರವಾಗಿ ಹೆಚ್ಚಾಗುತ್ತದೆ. ಅಲ್ಲದೇ ೦ವರ್ಷದೊಳಗಿನ ಮಕ್ಕಳಲ್ಲಿ ಆಸ್ತಮಾ ಕಾಯಿಲೆಯು ಬೆಳೆಯುವ ಅಪಾಯವೇ ಹೆಚ್ಚು. ಅಲರ್ಜಿ ಪ್ರಮಾಣವು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚು ಕಂಡು ಬರುತ್ತದೆ,ಗಂಡು ಮಕ್ಕಳು ಆಸ್ತಮಾ ರೋಗಕ್ಕೆ ತುತ್ತಾಗುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ಆಸ್ತಮಾಕೆ ತುತ್ತಾಗುವುದು ಕಡಿಮೆ. ಲಿಂಗ ಭೇದದ ವ್ಯತ್ಯಾಸವು ವಯಸ್ಕತೆಯ ಪ್ರತಿಶತಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಆದರೆ ಸಾಮುದಾಯಿಕ ಜನಾಂಗದ ಅಂಶಗಳು ಅಲರ್ಜಿಯ ಉಗಮಕ್ಕೆ ಕಾರಣವಾದರೂ ಆಯಾ ಜನಸಮೂಹವು ಬೆಳೆಯುವ ವಾತಾವರಣದ ಮೇಲೆ ಸೋಂಕಿನ ಪ್ರಮಾಣ ನಿಗದಿಯಾಗುತ್ತದೆ. ಒಂದು ಪರಿಸರದಿಂದ ಇನ್ನೊಂದಕ್ಕೆ ವಲಸೆ ಹೋಗುವ ಅಥವಾ ಬರುವ ಕಾರಣಕ್ಕೂ ಅಲರ್ಜಿಗಳ ಅಪಾಯವಿರುತ್ತದೆ. ಇದರಲ್ಲಿ ಕುತೂಹಲಕಾರಿ ಅಂಶವೆಂದರೆ ಅಯಾ ಜನಾಂಗ ಅಥವಾ ಜನಸಮೂಹ ಜೀವಿಸುತ್ತಿರುವ ವಂಶವಾಹಿನಿಯ ಸ್ಥಳೀಯತೆಯನ್ನು ಬಹುವಾಗಿ ಅವಲಂಬಿಸಿರುತ್ತದೆ. ಬಹುಮುಖ್ಯವಾಗಿ ಯುರೊಪಿಯನ, ಹಿಸ್ಪಾನಿಕ್ , ಏಷ್ಯನ್ ಮತ್ತು ಆಫ್ರಿಕನ್ ಮೂಲದವರಲ್ಲಿ ಇಂಥ ಅಲರ್ಜಿಯ ಕಾಯಿಲೆ ಕಸಾಲೆಗಳು ಕಾಡುತ್ತವೆ.
ಧನ್ಯವಾದಗಳು.
GIPHY App Key not set. Please check settings