in

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರ
ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರ

ಗರ್ಭಕೋಶ ಮಹಿಳೆಯರಿಗೆ ಬಹುಮುಖ್ಯವಾದ ಅಂಗವಾಗಿದೆ. ಗರ್ಭಕೋಶ ಸಂತಾನೋತ್ಪತ್ತಿಗೆ ಪ್ರಮುಖವಾಗಿದ್ದು, ಪ್ರತಿಯೊಬ್ಬ ಹೆಣ್ಣಿಗೂ ಪ್ರತೀ ತಿಂಗಳು ಋತುಸ್ರಾವವಾಗಲು ಗರ್ಭಕೋಶವೇ ನೆರವಾಗುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು ಗರ್ಭನಾಳದ ಮುಖಾಂತರ ಗರ್ಭಕೋಶಕ್ಕೆ ತಲುಪಿ, ಅಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಕಾರ ನೀಡುತ್ತಿದೆ.

ಗರ್ಭಾಶಯವು ಮಹಿಳೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಈ ಗರ್ಭಾಶಯದ ಸ್ನಾಯುಗಳು ದೇಹದಲ್ಲಿ ಪ್ರಬಲವಾಗಿವೆ, ಆದರೂ ನಮ್ಮ ತಪ್ಪು ಜೀವನಶೈಲಿ ಅಭ್ಯಾಸಗಳು ಅಜಾಗರೂಕತೆಯಿಂದ ಅದಕ್ಕೆ ಹಾನಿ ಮಾಡುತ್ತವೆ. ಅದರಲ್ಲೂ ಗರ್ಭ ಧರಿಸಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ತಮ್ಮ ಗರ್ಭಕೋಶ ದುರ್ಬಲವಾಗಿದೆ ಎಂಬ ಕಲ್ಪನೆಯೇ ಇರುವುದಿಲ್ಲ. ಆದ್ದರಿಂದಲೇ ಹಿಸ್ಟರೆಕ್ಟಮಿ ಮತ್ತು ಸಿ ಸೆಕ್ಷನ್ ಪ್ರಕರಣಗಳು ಹೆಚ್ಚುತ್ತಿವೆ.

ಗರ್ಭಾಶಯದ ಮುಖ್ಯ ಕಾರ್ಯವೆಂದರೆ ಫಲವತ್ತಾದ ಅಂಡಾಣುವನ್ನು ಪೋಷಿಸುವುದು. ಫಲವತ್ತಾದ ಅಂಡಾಣುವನ್ನು ಎಂಡೋಮೆಟ್ರಿಯಂಗೆ ಕಸಿ ಮಾಡಿದ ನಂತರ, ಅದು ಗರ್ಭಾಶಯದ ರಕ್ತನಾಳಗಳಿಂದ ಪೌಷ್ಟಿಕಾಂಶವನ್ನು ಪಡೆಯುತ್ತದೆ ಮತ್ತು ಅಂತಿಮವಾಗಿ ಭ್ರೂಣವಾಗುತ್ತದೆ. ಈ ಸಮಯದಲ್ಲಿ ಗರ್ಭಾಶಯವು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವ ಅನೇಕ ವಿಷಯಗಳಿವೆ. ಇದರಲ್ಲಿ ಅನಿಯಮಿತ ಅಥವಾ ಭಾರೀ ಮುಟ್ಟಿನ ರಕ್ತಸ್ರಾವ, ಗರ್ಭಾಶಯದ ಫೈಬ್ರಾಯ್ಡ್ ಗಳು ಇತ್ಯಾದಿ ಸೇರಿವೆ. ಫಲವತ್ತತೆಯ ಭಾವನೆಗಳನ್ನು ಹೆಚ್ಚಿಸಲು ಮಹಿಳೆಯರು ಗರ್ಭಾಶಯವನ್ನು ಆರೋಗ್ಯಕರ ಮತ್ತು ಬಲವಾಗಿಡಬೇಕು.

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು
ಗರ್ಭಾಶಯವು ಮಹಿಳೆಯ ಅತ್ಯಂತ ಪ್ರಮುಖ ಭಾಗವಾಗಿದೆ

ಸಾಮಾನ್ಯವಾಗಿ ಪ್ರಥಮ ಹೆರಿಗೆಯ ಬಳಿಕ ಮಹಿಳೆಯರ ಶರೀರ ಹೆಚ್ಚು ಸ್ಥೂಲವಾಗುತ್ತಾ ಹೋಗುತ್ತದೆ. ಅಲ್ಲೊಂದು ಇಲ್ಲೊಂದು ಅಪವಾದವಿದ್ದರೂ ಬಹುತೇಕ ಮಹಿಳೆಯರ ಶರೀರದ ನಡುಭಾಗ ಹಿಂದಿನ ಮೈಕಟ್ಟಿಗೆ ಹಿಂದಿರುಗುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಗರ್ಭದ ಅವಧಿಯಲ್ಲಿ ಶರೀರ ಪಡೆದ ಬದಲಾವಣೆಗಳು. ಅದರಲ್ಲಿಯೂ ಮುಖ್ಯವಾಗಿ ಗರ್ಭಕೋಶದ ಬೆಳವಣಿಗೆ.

ಸೊಪ್ಪು ಮತ್ತು ತರಕಾರಿ ನಮ್ಮ ದೇಹದ ಸಂಪೂರ್ಣ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಸೊಪ್ಪಿನಲ್ಲಿರುವ ಅನೇಕ ಅಂಶಗಳು ಮಹಿಳೆಯರ ದೇಹದ ಬಹುತೇಕ ಸಮಸ್ಯೆಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ.

ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಮಾಂಸಾಹಾರಕ್ಕೆ ಬದಲಾಗಿ ಹೆಚ್ಚು ಹಣ್ಣುಗಳು, ಸೊಪ್ಪು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು
ಸೊಪ್ಪು ಮತ್ತು ತರಕಾರಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು

ದೈನಂದಿನ ಫೋಲೇಟ್ ಪ್ರಮಾಣವನ್ನು ಪಡೆದುಕೊಳ್ಳಲು ಇನ್ನೊಂದು ಉತ್ತಮ ಮಾರ್ಗ ಎಂದರೆ ಬೆಣ್ಣೆ ಹಣ್ಣಿನ ಮೊರೆ ಹೋಗುವುದು. ಹಸಿರು ಚರ್ಮದ ಹಣ್ಣಾದ ಇದು ವಿಟಮಿನ್-ಕೆ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತದೆ. ಇದು ಹಾರ್ಮೋನ್‍ಗಳ ಸಮತೋಲನವನ್ನು ಕಾಯ್ದುಕೊಳ್ಳುವುದರ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುವುದು.

ಚಾಕಲೇಟು ಮತ್ತು ಕೋಲಾಗಳಲ್ಲಿ ಕೆಫೀನ್ ಇದ್ದು ಗರ್ಭಕೋಶದೊಳಗಣ ಫೈಬ್ರಾಯ್ಡುಗಳನ್ನು ಬೆಳೆಸಲು ನೆರವಾಗುತ್ತದೆ. ಇದಕ್ಕಾಗಿ ಚಾಕಲೇಟುಗಳ ಬದಲು ಕಾಫಿ ಮತ್ತು ಹಸಿರು ಚಹಾವನ್ನು ಸೇವಿಸಿ.

ವಾಲ್‍ನಟ್ ಅದ್ಭುತ ಬೀಜಗಳಲ್ಲಿ ಒಂದು. ಇದು ಉತ್ತಮ ನಾರಿನಂಶ ಮತ್ತು ಒಮೆಗಾ-3 ಅನ್ನು ಹೊಂದಿರುವ ಏಕೈಕ ಸಸ್ಯಹಾರಿ ಉತ್ಪನ್ನ. ಅಧಿಕ ಪ್ರಮಾಣದ ಮೆಗ್ನೀಷಿಯಮ್ ಹೊಂದಿರುವ ಇದು ಪ್ರೊಜೆಸ್ಟರಾನ್ ಉತ್ಪಾದಿಸಲು ಮತ್ತು ಗರ್ಭಾಶಯಕ್ಕೆ ರಕ್ತ ಪೂರೈಕೆ ಮಾಡಲು ಸಹಾಯ ಮಾಡುವುದು.

ಮಹಿಳೆಯರ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ವ್ಯಾಯಾಮ ಅತ್ಯಗತ್ಯ. ಜೊತೆಗೆ ದೇಹದ ತೂಕ ನಿರ್ವಹಣೆಯಲ್ಲಿ ಮತ್ತು ದೇಹದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಲು ಮಹಿಳೆಯರು ವ್ಯಾಯಾಮ ಮಾಡಬೇಕು.

ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪ, ಚೀಸ್, ಕ್ರೀಂ ಮೊದಲಾದ ಆಹಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಅಥವಾ ಸಾಧ್ಯವಿದ್ದರೆ ತ್ಯಜಿಸಿ. ಸಾಧ್ಯವಿಲ್ಲದಿದ್ದರೆ ಕೆನೆರಹಿತವಗಿ ಸಿಗುವ ಉತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ಸಾವಯವ ಮೊಟ್ಟೆಯಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ. ಇದರಲ್ಲಿ ಇರುವ ಕೋಲೀನ್ ಗುಣಗಳು ಅಮೈನೋ ಆಮ್ಲ ಕೋಶದ ಗುಣಮಟ್ಟವನ್ನು ಸುಧಾರಿಸುತ್ತವೆ. ಪೋಲೇಟ್ ನಂತೆ ಮೆದುಳಿನ ಬೆಳವಣಿಗೆ, ಜನನಾಂಗದ ದೋಷಗಳನ್ನು ನಿವಾರಿಸುತ್ತದೆ.

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು
ಸಾವಯವ ಮೊಟ್ಟೆಯಲ್ಲಿ ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ

ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಳ ಬೆಳವಣಿಗೆಯಿಂದ ಕೆಳಹೊಟ್ಟೆಯಲ್ಲಿ ನೋವಾಗುತ್ತಿದ್ದರೆ ಲ್ಯಾವೆಂಡರ್ ಎಣ್ಣೆಯನ್ನು ನಯವಾಗಿ ಕೆಳಹೊಟ್ಟೆಯ ಭಾಗದಲ್ಲಿ ಮಸಾಜ್ ಮಾಡಿ. ಇದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ನೋವು ನಿಧಾನವಾಗಿ ಕಡಿಮೆಯಾಗುತ್ತದೆ. ಜೊತೆಗೇ ಗರ್ಭಕೋಶದ ನೋವಿನಿಂದ ಆರಾಮವನ್ನೂ ನೀಡುತ್ತದೆ.

ಸಾಧ್ಯವಾದಷ್ಟು ಮಟ್ಟಿಗೆ ಮಾಂಸಾಹಾರವನ್ನು ತ್ಯಜಿಸುವುದೇ ಉತ್ತಮ. ಏಕೆಂದರೆ ಎಲ್ಲಾ ಮಾಂಸಗಳಲ್ಲಿ ಇರುವ ಕೆಲವು ಪೋಷಕಾಂಶಗಳು ಮತ್ತು ಮುಖ್ಯವಾಗಿ ಕೊಬ್ಬು ಗರ್ಭಕೋಶದಲ್ಲಿ ನೀರು ತುಂಬಿಕೊಂಡಿರಲು ಕಾರಣವಾಗುತ್ತವೆ. ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಅಡುಗೆಯನ್ನೇ ಸೇವಿಸಿ.

ದೈನಂದಿನ ಆಹಾರದಲ್ಲಿ ನೀವು ಕನಿಷ್ಠ ಶೇ.50 ರಷ್ಟು ಧಾನ್ಯಗಳ ಆಹಾರವನ್ನು ಹೊಂದುವ ಗುರಿ ಇಟ್ಟುಕೊಳ್ಳಬೇಕು. ಅಂಟು ರಹಿತವಾದ ಈ ಧಾನ್ಯವು ಪ್ರೋಟೀನ್, ಫೋಲೇಟ್ ಮತ್ತು ಸತುಗಳ ಉತ್ತಮ ಮೂಲವಾಗಿದೆ. ಇದರಲ್ಲಿ ಸಮೃದ್ಧವಾದ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ತಡೆಯಬಹುದು.

ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಳ ಬೆಳವಣಿಗೆಯಿಂದ ಕೆಳಹೊಟ್ಟೆಯಲ್ಲಿ ನೋವಾಗುತ್ತಿದ್ದರೆ ಹರಳೆಣ್ಣೆ ಸಹಾ ಉತ್ತಮ ನೋವು ನಿವಾರಕವಾಗಿದೆ. ಇದಕ್ಕಾಗಿ ಕೆಳಹೊಟ್ಟೆಯ ಮಸಾಜ್ ಮಾಡಿ. ಇದರಿಂದ ಗರ್ಭಕೋಶದ ಅಕ್ಕಪಕ್ಕದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ರಕ್ತಸಂಚಾರ ಹೆಚ್ಚುತ್ತದೆ. ಪರಿಣಾಮವಾಗಿ ನೋವು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಪ್ರತಿದಿನ ನಾರಿನ ಬೀಜಗಳನ್ನು ಕೊಂಚ ಪ್ರಮಾಣದಲ್ಲಿ ನೀರಿನೊಂದಿಗೆ ಸೇವಿಸುವ ಮೂಲಕ ದೇಹದಲ್ಲಿ ಈಸ್ಟ್ರೋಜೆನ್ ಎಂಬ ಹಾರ್ಮೋನಿನ ಸ್ರವಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ದೇಹದ ಗರ್ಭಕೋಶದ ತೊಂದರೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಕಿತ್ತಳೆ, ದ್ರಾಕ್ಷಿ, ಮೂಸಂಬಿ ಸೇರಿದಂತೆ ಇನ್ನಿತರ ಸಿಟ್ರಸ್ ಹಣ್ಣುಗಳು ವಿಟಮಿನ್-ಸಿ ಅನ್ನು ಸಮೃದ್ಧವಾಗಿ ಪಡೆದಿರುತ್ತವೆ. ಅವು ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಫೋಲೇಟ್, ವಿಟಮಿನ್-ಬಿ ಯ ಅತ್ಯುತ್ತಮ ಮೂಲ. ಇವುಗಳನ್ನು ನಿತ್ಯ ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದ್ಭುತ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ಆರೋಗ್ಯಕರ ಅಂಶಗಳು ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ.

ನವಣೆ ಅಕ್ಕಿಯಂತಹ ಧಾನ್ಯಗಳಿಂದ ಪ್ರೋಟೀನ್ ಪಡೆದರೆ ಫಲವತ್ತತೆ ಸುಧಾರಣೆಯಾಗುವುದು. ಅಲ್ಲದೆ ಗರ್ಭಧಾರಣೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸುವುದು. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಗರ್ಭಾವಸ್ಥೆಗೆ ಉಂಟಾಗುವ ತೊಡಕುಗಳನ್ನು ನಿವಾರಿಸುತ್ತದೆ.

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು
ಒಣ ಬೀಜಗಳನ್ನುಆಹಾರದಲ್ಲಿ ಸೇರಿಸಬೇಕು

ಗೋಡಂಬಿ, ಬಾದಾಮಿ, ವಾಲ್ ನಟ್ಸ್ ಮತ್ತು ಲಿನ್ ಸೀಡ್ ನಂತಹ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕೊಲೆಸ್ಟ್ರಾಲ್ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಗರ್ಭಾಶಯದ ಫೈಬ್ರಾಯ್ಡ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಎಲೆಕೋಸು, ಹೂಕೋಸು, ಬ್ರೋಕೋಲಿ ಮತ್ತು ಕೇಲ್ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದರಿಂದ ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಈಸ್ಟ್ತೋಜೆನ್ ಎಂಬ ಹಾರ್ಮೋನು ಸ್ರವಿಸಲು ಸಾಧ್ಯವಾಗುತ್ತದೆ. ಈ ಹಾರ್ಮೋನು ಗರ್ಭಕೋಶದ ನೀರನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಹಾಲು ಮತ್ತು ಬೆಣ್ಣೆಯಲ್ಲಿ ಬಹಳ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುತ್ತದೆ, ಇದು ಗರ್ಭಾಶಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆಯಾದರೂ, ಗರ್ಭಾಶಯದ ಫೈಬ್ರಾಯ್ಡ್ ಗಳನ್ನು ದೂರವಿರಿಸುವಲ್ಲಿ ವಿಟಮಿನ್ ಡಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಲಿಂಬೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದ್ದು, ಇದು ಗರ್ಭಕೋಶದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ನಿಂಬೆ ಹಣ್ಣು ಯಾವುದೇ ರೂಪದಲ್ಲಿ ತಿಂದರೆ ಅದು ಗರ್ಭಾಶಯವನ್ನು ಬಲಪಡಿಸುತ್ತದೆ.

ಜಂಕ್ ಫುಡ್ ತಿನ್ನುವುದನ್ನು ತಡೆಯಬಹುದು ಮತ್ತು ಗರ್ಭಕೋಶವನ್ನು ಆರೋಗ್ಯವಾಗಿಡಲು ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸಬಹುದು. ಆದುದರಿಂದ ಸಾಧ್ಯವಾದಷ್ಟು ಹಣ್ಣುಗಳನ್ನು ಸೇವಿಸಿ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಳ್ಳು ಬೆಲ್ಲ ತಿನ್ನಿ, ಸಿಹಿಯಾಗಿ ಮಾತಾಡಿ 

ಮಕರ ಸಂಕ್ರಾತಿಯ ಎಳ್ಳು ಬೆಲ್ಲ ತಿನ್ನಿ, ಸಿಹಿಯಾಗಿ ಮಾತಾಡಿ 

ದಿ ಕ್ವೀನ್ ಆಫ್ ಪೆಪ್ಪರ್

ಪೋರ್ಚುಗೀಸರಿಂದ ‘ ದಿ ಕ್ವೀನ್ ಆಫ್ ಪೆಪ್ಪರ್ ‘ ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ