in

ನಂದಿಬಟ್ಟಲು ಹೂವಿನಲ್ಲಿ ಕೂಡಾ ಆರೋಗ್ಯ ಅಡಗಿದೆ

ನಂದಿಬಟ್ಟಲು ಹೂ
ನಂದಿಬಟ್ಟಲು ಹೂ

ಅಪ್ರೋಸೈನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಟ್ಯಾಬರ್‍ನೀಮಾಂಟಾನ ಕಾರೊನೇರಿಯ ಇದರ ವೈಜ್ಞಾನಿಕ ಹೆಸರು. ಪರ್ಯಾಯ ನಾಮ ಎರ್‍ವಟಾಮಿಯ. ಇದು 1.2 ರಿಂದ 2.4 ಮೀ.ಎತ್ತರಕ್ಕೆ ಬೆಳೆಯುವಂಥ ಪೊದೆ. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 7 ರಿಂದ 15 ಸೆಂ.ಮೀ. ನಂದಿಬಟ್ಟಲು ವರ್ಷಪೂರ್ತಿ ಹೂಬಿಡುತ್ತದೆ. ಹೂಗಳು ಬಿಳಿಬಣ್ಣದವು. ರಾತ್ರಿ ವೇಳೆ ಸುವಾಸನೆಯನ್ನು ಬೀರುತ್ತದೆ. ಫಲ ಫಾಲಿಕಲ್ ಮಾದರಿಯದು. ಉದ್ದವಾಗಿಯೂ ಡೊಂಕಾಗಿಯೂ ಇರುತ್ತದೆ. ಹಣ್ಣಿನ ತಿರುಳು ಕೆಂಪು ಬಣ್ಣದ್ದು. ಮೂರರಿಂದ ಆರು ಬೀಜಗಳಿರುವುವು. ಸೀಮಿತವಾಗಿರುವ ಈ ಸಸ್ಯ ಗಢವಾಲಿನ ಪೂರ್ವದಿಂದ ಅಸ್ಸಾಂ, ಬಂಗಾಳ, ದಕ್ಷಿಣಕ್ಕೆ ವಿಶಾಖ ಪಟ್ಟಣದ ಗುಡ್ಡಗಳವರೆಗೆ ಹರಡಿದೆ. ಸರಾಗವಾಗಿ ನೀರು ಹರಿಯುವ, ಬಿಸಿಲು ಚೆನ್ನಾಗಿ ಬೀಳುವ ತೋಟದ ಮಣ್ಣಿನಲ್ಲಿ ಇದು ಹುಲುಸಾಗಿ ಬೆಳೆಯಬಲ್ಲುದು. ಹಸಿರು ಸಸಿಗಳಲ್ಲಿ ಅಥವಾ ಉದ್ಯಾನಗಳ ಅಂಚಿನಲ್ಲಿ ಅಲಂಕಾರಕ್ಕೆ ಬೆಳೆಸುವ ಎರಡು ಸುತಿನ್ತ ದಳದ ತಳಿ ಅತ್ಯಂತ ಮನಮೋಹಕ. ಇದಕ್ಕೆ ‘ರಂಜಬಟ್ಟಲು’ ಎಂಬ ಹೆಸರೂ ಇದೆ. ಇದರಲ್ಲಿ ದಪ್ಪ ಆರು ಎಸಳಿನ ಹೈಬ್ರೆಡ್ ತಳಿಯೂ ಇದೆ.

ವೈದ್ಯಕೀಯ ಉಪಯೋಗ

ನಂದಿಬಟ್ಟಲು ಹೂವಿನಲ್ಲಿ ಕೂಡಾ ಆರೋಗ್ಯ ಅಡಗಿದೆ
ನಂದಿಬಟ್ಟಲು ಹೂವಿನಲ್ಲಿ ಆರೋಗ್ಯ

*ನಂದಿಬಟ್ಟಲಿನ ಬೇರು ಒಗರು ರುಚಿಯದು. ಇದನ್ನು ಅಗಿಯುವುದರಿಂದ ಹಲ್ಲುನೋವು ಉಪಶಮನಗೊಳ್ಳುತ್ತದೆ.
*ಬೇರನ್ನು ನೀರಿನೊಂದಿಗೆ ತೇದು ಕ್ರಿಮಿನಾಶಕವಾಗಿ ಬಳಸಲಾಗುವುದು.
*ನಿಂಬೆರಸದೊಂದಿಗೆ ಬೆರೆಸಿದ ಇದರ ಲೇಪ ಕಣ್ಣುಗುಡ್ಡೆಯ ಪಾರದರ್ಶಕ ಪಟಲದ ಮಬ್ಬನ್ನು ನಿವಾರಿಸುತ್ತದೆ.
*ಇದರ ಹೂವಿನ ರಸ ಕಣ್ಣುನೋವಿಗೆ ಮತ್ತು ಚರ್ಮರೋಗಗಳಿಗೆ ಒಳ್ಳೆಯ ಔಷಧಿ.
*ಹೂವಿನ ರಸದಿಂದ ಕಾಡಿಗೆಯನ್ನು ತಯಾರಿಸುವುದಿದೆ. *ಬೀಜದ ಸುತ್ತಲಿನ ಕೆಂಪು ತಿರುಳನ್ನು ಬಟ್ಟೆಗಳಿಗೆ ಬಣ್ಣಕಟ್ಟಲು ಉಪಯೋಗಿಸುವುದುಂಟು.
*ಕಾಂಡ ಮತ್ತು ಬೇರಿನ ತೊಗಟೆಯಲ್ಲಿ ಟ್ಯಾಬರ್ನಮಾಂಟನೀನ್ ಮತ್ತು ಕಾರೊನೇರಿನ್ ಎಂಬ ಎರಡು ಸಸ್ಯಕ್ಷಾರಗಳು, ಸಕ್ಕರೆ ಮತ್ತು ಕೊಬ್ಬು ಪದಾರ್ಥಗಳಿವೆ.
*ಮರವನ್ನು ಧೂಪ ಮತ್ತು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
*ಮನೆಗಳ ಮುಂದೆ, ಉದ್ಯಾವನಗಳಲ್ಲಿ ಮತ್ತು ಹೂದೋಟಗಳಲ್ಲಿ ಅಲಂಕಾರಕ್ಕಗಿ ಬಳೆಸುತ್ತಾರೆ.

*ಬಿಳಿ ಹೂವುಗಳು ಅರಳಿದಾಗ ನೋಡಲು ಚಂದ, ಹೂವಿನ ಪರಿಮಳ ಮನಮೋಹಕ, ಎಲೆಗಳು ಹಸಿರು ಮತ್ತು ಮಾವಿನ ಎಲೆಗಳನ್ನು ಹೋಲುತ್ತವೆ. ನರಗಳು ಬಹಳ ಸ್ಪಷ್ಟವಾಗಿ ಕಾಣುತ್ತವೆ. ಎಲೆ ಮುರಿದರೆ ಬಿಳಿ ಬಣ್ಣದ ಹಾಲು ಬರುತ್ತದೆ. ಕವಲುಗಳು ನುಣುಪು, ಜುಲೈ, ಅಕ್ಟೋಬರ್ ತಿಮಗಳಲ್ಲಿ ಗಿಡದ ತುಂಬಾ ಮೊಗ್ಗು ಮತ್ತು ಹೂವುಗಳು ಬಿಡುತ್ತವೆ.

ಸರಳ ಚಿಕಿತ್ಸೆಗಳು :

*ಮೂಗು ಬಾಯಿ ರಕ್ತ ಸುರಿಯುವುದು
ಎರಡು ಟೀ ಚಮಚ ಸ್ವಚ್ಛ ಮಾಡಿದ ಜಿರಿಗೆ, ಎರಡು ಟೀ ಚಮಚ ಸಕ್ಕರೆ, ಎರಡು ನಂದಿ ಬಟ್ಲು ಹೂಗಳು ಎರಡು ಟೀ ಚಮಚ ಆಕಳ ಹಾಲು ಸೇರಿಸಿ ನುಣ್ಣಗೆ ಅರೆಯುವುದು. ಈ ಕಲ್ಕವನ್ನು ತೆಳು ಬಟ್ಟೆಯಿಂದ ಶೋಧಿಸಿ ವೇಳೆಗೆ ಒಂದೇ ಟೀ ಚಮಚ ಸೇವಿಸುವುದು. ಹೀಗೆ ಪ್ರತಿನಿತ್ಯ ಎರಡು ವೇಳೆ 7 ದಿನಗಳು ಕೊಡುವುದು.

*ಕಣ್ಣಿನ ಪೊರೆ ಮತ್ತು ಕಣ್ಣಿ ಸಮಸ್ತ ವ್ಯಾಧಿಗಳಿಗೆ
20 ಗ್ರಾಂ ತಾಜಾ ಅರಳಿದ ನಂದಿಬಟ್ಲು ಹೂವುಗಳು, 20 ಗ್ರಾಂ ಹಸುವಿನ ಬೆಣ್ಣೆ ಮತ್ತು ಎರಡು ಚಿಟಿಕಿ ಪಚ್ಚ ಕರ್ಪೂರವನ್ನು ಸೇರಿಸಿ ನುಣ್ಣಗೆ ಅರೆದು ಭರಣಿಯಲ್ಲಿ ಶೇಖರಿಸುವುದು. ಪ್ರತಿನಿತ್ಯ ನಾಲ್ಕೈದು ಸಾರಿ ಕಣ್ಣುಗಳಿಗೆ ಅಂಜನವಿಡುವುದು.

*ಬಂಜೆತನದಲ್ಲಿ
ಮುಟ್ಟಿನ ಅವಧಿಯಲ್ಲಿ 4 ನೇ ದಿವಸದ ಸ್ನಾನ ಮಾಡಿದ ನಂತರ ನಾಲ್ಕೈದು ತಾಜಾ ನಂದಿ ಬಟ್ಲು ಎಲೆಗಳನ್ನು ತಂದು ತೊಳೆದು ಎರಡು ಟೀ ಚಮಚ ಪಾಲೀಶ್ ಮಾಡದ ಅಕ್ಕಿಯಲ್ಲಿ ನುಣ್ಣಗೆ ಅರೆದು ಕಾಲು ಟೀ ಚಮಚ ತುಪ್ಪ ಮತ್ತು ಒಮದು ಟೀ ಚಮಚ ಶುದ್ದ ಜೇನು ಸೇವಿಸುವುದು. ಹೀಗೆ 3-4 ಮುಟ್ಟಿನಲ್ಲಿ ಚಿಕಿತ್ಸೆ ಮುಂದುವರಿಸುವುದು ಮತ್ತು ದಾನ, ಧರ್ಮ ಮಾಡಿ ಇಷ್ಟಾನುದೇವತೆಗಳನ್ನು ಪ್ರಾರ್ಥಿಸುವುದು. ಇರುಳಲ್ಲಿ ಗಂಡ ಹೆಂಡತಿ ಸುಖವಾಗಿರುವುದು.

ನಂದಿಬಟ್ಟಲು ಹೂವಿನಲ್ಲಿ ಕೂಡಾ ಆರೋಗ್ಯ ಅಡಗಿದೆ
ಸರ್ಪದ ವಿಷಕ್ಕೆ

*ಸರ್ಪದ ವಿಷಕ್ಕೆ
ಹಾವು ಕಚ್ಚಿ ವಿಷವೇರಿ ಪ್ರಜ್ಞೆ ತಪ್ಪಿದರೆ ನಂದಿ ಬಟ್ಲು ಗಿಡದ ಬೇರನ್ನು ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ತೇದು ಮೂಗಿನ ಎರಡು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು ಮತ್ತು ಇದೇ ಗಂಧವನ್ನು ಸ್ವಲ್ಪ ಸ್ವಲ್ಪವಾಗಿ ನೆಕ್ಕಿಸುವುದು.

*ವ್ರಣ,ಕಜ್ಜಿ ಮತ್ತು ಹುಣ್ಣುಗಳಿಗೆ
ಒಂದು ಹಿಡಿ ನಂದಿ ಬಟ್ಲು ಎಲೆಗಳನ್ನು ತಂದು ಕಲ್ಪತ್ತಿನಲ್ಲಿ ನುಣ್ಣಗೆ ಅರೆದು 5 ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ವ್ರಣಗಳಿಗೆ ಲೇಪಿಸುವುದು. ವ್ರಣಗಳ ಮೇಲೆ ನಿರ್ಮಲವಾದ ಬಟ್ಟೆಯನ್ನು ಕಟ್ಟುವುದು.

*ಹಲ್ಲು ನೋವಿಗೆ
ಒಂದು ಹಿಡಿ ನಂದಿ ಬಟ್ಲು ಎಲೆಗಳನ್ನು ತಂದು ಕಲ್ಪತ್ತಿನಲ್ಲಿ ನುಣ್ಣಗೆ ಅರೆದು 5 ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ವ್ರಣಗಳಿಗೆ ಲೇಪಿಸುವುದು. ವ್ರಣಗಳ ಮೇಲೆ ನಿರ್ಮಲವಾದ ಬಟ್ಟೆಯನ್ನು ಕಟ್ಟುವುದು.
ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಜಜ್ಜಿ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುವುದು. ಬಾಯಿಯಲ್ಲಿ ಬರುವ ನೀರನ್ನು ಉಗುಳುವುದು.

*ಜ್ವರಕ್ಕೆ
ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಅಷ್ಠಾಂಶ ಕಷಾಯ ಮಾಡಿ ಸ್ವಲ್ಪ ಕಟುಕರೋಹಿಣಿ ಚೂರ್ಣ ಸೇರಿಸಿ ದಿನಕ್ಕೆ ಎರಡು ವೇಳೆ ಎರಡೆರಡು ಟೀ ಚಮಚ ಸೇವಿಸುವುದು. ಹೀಗೆ ಐದು ದಿವಸ ಚಿಕಿತ್ಸೆ ಮುಂದುವರಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಓಂ ಕಾಳು

ಓಂ ಕಾಳಿನಲ್ಲಿ ಸಂಪೂರ್ಣ ಆರೋಗ್ಯ ಅಡಗಿದೆ

ಶುರು ನವದುರ್ಗೆಯರ ಪೂಜೆ

ಇಂದಿನಿಂದ ಶುರು ನವದುರ್ಗೆಯರ ಪೂಜೆ