in ,

ಓಂ ಕಾಳಿನಲ್ಲಿ ಸಂಪೂರ್ಣ ಆರೋಗ್ಯ ಅಡಗಿದೆ

ಓಂ ಕಾಳು
ಓಂ ಕಾಳು

ಟ್ರ್ಯಾಕಿಸ್ಪರ್ಮಾಮ್ ಎನ್ನುವ ಗಿಡಮೂಲಿಕೆಗಳ ಜಾತಿಗೆ ಸೇರಿದ ಓಂ ಕಾಳುಗಳು ಭಾರತೀಯರ ಅಡುಗೆ ಮನೆಗಳಲ್ಲಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಓಂ ಕಾಳುಗಳನ್ನು ಅಜ್ವೈನ್ ಎಂದು ಕರೆಯಲಾಗುತ್ತದೆ. ಈ ಬೀಜಗಳ ಬಣ್ಣವು ಹಸಿರು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಭಾರತದ ಹಲವಾರು ಅಡುಗೆಗಳಲ್ಲಿ ಉಪ್ಪಿನಕಾಯಿ ಸಾಂಬಾರುಗಳು, ಗೊಜ್ಜುಗಳು ಹಾಗೂ ದಾಲ್ ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ನಿಮ್ಮ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಗುಣಪಡಿಸುವ ಗುಣಗಳನ್ನು ಇದು ಹೊಂದಿದೆ. ಕೆಲವೊಮ್ಮೆ ಬೀಜಗಳನ್ನು ಇದರ ಗಮನಕ್ಕಾಗಿ ಹುರಿದು ನಂತರ ಅಡುಗೆಗಳಲ್ಲಿ ಬಳಸಲಾಗುತ್ತದೆ. ಭಾರತವನ್ನು ಹೊರತುಪಡಿಸಿ ಈ ಬೀಜಗಳನ್ನು ಇರಾನ್, ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನಗಳಲ್ಲಿ ಬೆಳೆಯಲಾಗುತ್ತದೆ.

ಹಲವಾರು ಜನರಿಗೆ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳು ಆಗುವುದರ ಬಗ್ಗೆ ಕೇಳಿದ್ದೇವೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅವರು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಬಹಳಷ್ಟು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ನಿಮಗೆ ಸಹಾಯ ಮಾಡುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಲವಾರು ಸಂಶೋಧನೆಗಳ ಪ್ರಕಾರ ಜೀರ್ಣಕ್ರಿಯೆಯ ವಿವಿಧ ಅಂಗಗಳಾದ ಹೊಟ್ಟೆ, ಕರುಳು ಹಾಗೂ ಅನ್ನನಾಳಗಳಲ್ಲಿ ಉಂಟಾದ ಹುಣ್ಣುಗಳನ್ನು ಓಂ ಕಾಳುಗಳು ವಾಸಿ ಮಾಡಬಲ್ಲವು. ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂದ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲೀಂದ್ರದ ಮುಖಾಂತರ ನಿಮಗೆ ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಅವುಗಳನ್ನು ನಿಮ್ಮ ಚರ್ಮ ಸಮಸ್ಯೆ ಇರುವ ಜಾಗಕ್ಕೆ ನೇರವಾಗಿ ಹಚ್ಚಬಹುದು. ನಿಮ್ಮ ಮೊಡವೆ ಅಥವಾ ಕಲೆಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಓಂ ಕಾಳುಗಳ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ನಂತೆ ತಯಾರಿಸಿ. ಇದನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ವರೆಗೆ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಿ.

ಓಂ ಕಾಳಿನಲ್ಲಿ ಸಂಪೂರ್ಣ ಆರೋಗ್ಯ ಅಡಗಿದೆ
ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವು ಓಂ ಕಾಳುಗಳು ಸಹಾಯ ಮಾಡುತ್ತದೆ

ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಓಂ ಕಾಳುಗಳು ಸಹಾಯ ಮಾಡುತ್ತದೆ. ಜೀರ್ಣವಾದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಕೂಡ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರ ಮುಖಾಂತರ ಈ ತೊಂದರೆಯಿಂದ ನೀವು ಹೊರಬರಬಹುದು. ಓಂ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಓಂ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯಬಹುದು.

ಓಂಕಾಳು ಗಳಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ತೆಗೆಯಲು ಸಹಾಯ ಮಾಡುತ್ತದೆ. ಆರ್ಥ್ರೈಟಿಸ್ ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಹಾಗೂ ನೋವನ್ನು ಇದು ಹೋಗಲಾಡಿಸುತ್ತದೆ. ಓಂ ಕಾಳುಗಳಲ್ಲಿ ಉರಿಯೂತ ಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಓಂ ಕಾಳುಗಳನ್ನು ನಿಂಬೆಯ ರಸದಲ್ಲಿ ನೆನೆಸಿ ಇದಕ್ಕೆ ಕಪ್ಪು ಉಪ್ಪನ್ನು ಬೆರೆಸಿ ಸೂರ್ಯನ ಕಿರಣಗಳ ಕೆಳಗೆ ಒಣಗಿಸಿದಾಗ ನಂತರದ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಇವುಗಳನ್ನು ಬಳಸಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಕಾಳುಗಳನ್ನು ಉಪಯೋಗಿಸುವ ವಿಧವೆಂದರೆ ನಿಮ್ಮ ಟೀ ಜೊತೆಗೆ ಓಂ ಕಾಳುಗಳನ್ನು ಬೇಯಿಸಿ ಕುಡಿಯಬಹುದು.

ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.

ಓಂ ಕಾಳು ನಮ್ಮ ದೇಹದ ಜೀರ್ಣಕಾರಿ ಅಂಗಗಳಾದ ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಓಂ ಕಾಳು ಹೆಚ್ಚಾಗಿ ಆಮ್ಲೀಯತೆ, ಗ್ಯಾಸ್ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೀವು ಅರ್ಧ ಟೀ ಚಮಚ ಓಂ ಕಾಳು ಜಗಿದು ರಸ ನುಂಗಬೇಕು ಅಥವಾ ನೀರಿನೊಂದಿಗೆ ಈ ಕಾಳನ್ನು ಕುದಿಸಿ ಕೂಡ ಕುಡಿಯಬಹುದು.

ಇಂದಿನ ಒತ್ತಡ ಹಾಗೂ ಆಹಾರ ಕ್ರಮಗಳಿಂದ ಬಹಳ ಚಿಕ್ಕ ವಯಸ್ಸಿಗೆ ಬಿಳಿಕೂದಲು ಆರಂಭವಾಗುತ್ತದೆ. ಇಂತಹ ಸಮಸ್ಯೆಗೆ ಹಾಗೂ ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು. ಓಂ ಕಾಳುಗಳನ್ನು ಬಿಳಿ ಕೂದಲನ್ನು ಹೋಗಲಾಡಿಸಲು ಸೇವಿಸಬೇಕು ಎಂದುಕೊಂಡಿದ್ದರೆ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.

ಓಂ ಕಾಳಿನಲ್ಲಿ ಸಂಪೂರ್ಣ ಆರೋಗ್ಯ ಅಡಗಿದೆ
ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು

ಓಂ ಕಾಳಿನಲ್ಲಿ ಪೋಷಕಾಂಶಗಳಿವೆ. ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ನೀವು ಓಂ ಕಾಳನ್ನು ಹಲವು ವಿಧಗಳಲ್ಲಿ ಬಳಸಬಹುದು. ದಾಲ್, ಕರಿ ಅಥವಾ ಸಾಂಬಾರು ಮಾಡುವಾಗ ನೀವು ಓಂ ಕಾಳಿನ ಪುಡಿಯನ್ನು ಬಳಸಬಹುದು. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಬದಲು ಓಂ ಕಾಳು ಬಳಸಬಹುದು. ಇದನ್ನು ಮೌತ್ ಫ್ರೆಶ್ನರ್ ಆಗಿ ಕೂಡ ಬಳಸಬಹುದು.

ಓಂ ಕಾಳುಗಳಲ್ಲಿ ಹೆಚ್ಚಿನ ನಾರಿನಾಂಶವಿದೆ. ಆದ್ದರಿಂದ ನೀವು ಬಹಳಷ್ಟು ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಯಂತ್ರಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ. ಆಶ್ಚರ್ಯವೆಂದರೆ ಹಸಿವು ಆಗುವುದಿಲ್ಲ ಎನ್ನುವ ಮನುಷ್ಯರಿಗೆ ವೈದ್ಯರು ಓಂ ಕಾಳುಗಳನ್ನು ತಿನ್ನಲು ಸೂಚಿಸುತ್ತಾರೆ. ಹಸಿವನ್ನು ಹೆಚ್ಚಿಸುವುದಕ್ಕಾಗಿ ಓಂ ಕಾಳುಗಳನ್ನು ತಿನ್ನಬೇಕು ಎಂದಿದ್ದರೆ ಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿ ಬಿಸಿಬಿಸಿಯಾಗಿರುವಾಗಲೇ ತುಪ್ಪದೊಂದಿಗೆ ಸೇರಿಸಿ ನಿಮ್ಮ ಊಟದ ಜೊತೆಗೆ ತೆಗೆದುಕೊಳ್ಳಬೇಕು.

ದೇಹದಿಂದ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಇದರಲ್ಲಿರುವ ಮೊನೊ ಮತ್ತು ಪಾಲಿ ಅಪರ್ಯಾಪ್ತ ಕೊಬ್ಬುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಓಂ ಕಾಳು ಸಂಧಿವಾತ, ಕೀಲುಗಳ ಸುತ್ತಲಿನ ಕೆಂಪು ಬಣ್ಣವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ನೋವನ್ನು ಶಮನಗೊಳಿಸಲು ಮತ್ತು ಸಂಧಿವಾತದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓಂ ಕಾಳು ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯುವಲ್ಲಿ ಪರಿಣಾಮಕಾರಿ. ಇದರ ಸೇವನೆಯಿಂದ ಲಿವರ್ ಮತ್ತು ಕಿಡ್ನಿ ಸುಲಭವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪ್ರಸವ ಮರಣ

ಭಾರತದಲ್ಲಿ ಪ್ರಸವ ಮರಣ

ನಂದಿಬಟ್ಟಲು ಹೂ

ನಂದಿಬಟ್ಟಲು ಹೂವಿನಲ್ಲಿ ಕೂಡಾ ಆರೋಗ್ಯ ಅಡಗಿದೆ