in ,

ಜಾಪತ್ರೆ ಅಥವಾ ಜಾಯಿಕಾಯಿ

ಜಾಯಿಕಾಯಿ
ಜಾಯಿಕಾಯಿ

ಜಾಪತ್ರೆ ಅಥವಾ ಜಾಯಿಕಾಯಿ ಆಗ್ನೇಯ ಏಶಿಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ. ಮರದ ಮೂಲ ಸ್ಥಾನ ಇಂಡೋನೇಶಿಯಾ ದಲ್ಲಿರುವ ಭಾಂಡ್ರಾ.

ಇದು ಮೈರಿಸ್ಟಿಕಾಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರ ವನ್ನು ಶಾಸ್ತ್ರೀಯ ವಾಗಿ ಹೆಸರು ಮಿರಿಸ್ಟಿಕ ಫ್ರಾಗ್ರನ್ಸ್ಎಂದು ಕರೆಯುತ್ತಾರೆ. ಉಷ್ಣವಲಯದಲ್ಲಿ ಬೆಳೆಯುತ್ತದೆ. ಇದು ಮಧ್ಯಮ ಪ್ರಮಾಣದ ಮರ ಆಗಿದೆ. ಒಂದೇ ಮರದಲ್ಲಿ ಜಾಜಿಕಾಯಿ, ಜಾಜಿ ಪತ್ರೆ ಎಂಬ ಎರಡು ಪದಾರ್ಥ ಗಳು ಸಿಗುತ್ತವೆ. ಈ ಎರಡು ಪದಾರ್ಥಗಳನ್ನ ಸಾಂಬಾರ ಪದಾರ್ಥಗಳನ್ನಾಗಿ ಬಳಸುತ್ತಾರೆ. ಜಾಜಿಕಾಯಿ ಮರಗಳನ್ನು ಸುಲಭವಾಗಿ ಬೆಳೆಸಲಾಗುತ್ತದೆ. ಈ ಮರದ ಸಸ್ಯಕ್ಕೆ ಶೇಕಡಾ ೧೦%ರಷ್ಟು ನೆರಳಿದ್ದರೆ ಸಾಕು. ಸಸ್ಯವು ನಾಟಿಮಾಡಿದ ೬-೭ ವರ್ಷಗಳಲ್ಲಿ ಹಣ್ಣು ಬಿಡುವುದು ಆರಂಭವಾಗುತ್ತದೆ. ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಮೊದಲಾಗುತ್ತದೆ. ಜಾಯಿಮರದಲ್ಲಿ ಗಂಡು ಹಾಗೂ ಹಣ್ಣು ಮರ ಬೇರೆಬೇರೆ ಇರುತ್ತವೆ. ಕಾಯಿ ಕಚ್ಚಲು ಒಂದು ಎಕರೆಗೆ ೨-೪ ಗಂಡುಮರಗಳನ್ನು ನಾಟ ಮಾಡಬೇಕಾಗುತ್ತದೆ. ಕಾಯಿಗಳನ್ನು ಬಿಡುವ ಸಮಯ ಮೇ-ಜುಲೈ ವರೆಗೆ. ಜಾಜಿಕಾಯಿ ಹೊಂಬಣ್ಣದಲ್ಲಿರುತ್ತದೆ. ಹಣ್ಣಾದ ಮೇಲೆ ಕಾಯಿಗಳು ತಾವಾಗಿಯೇ ಕೆಳಗೆ ಬಿಳುತ್ತವೆ. ಈ ರೀತಿ ಬೀಳುವಾಗ ಜಾಪತ್ರೆ ಹಾಳಾಗುವುದರಿಂದ ಕಾಯಿಗಳನ್ನು ಕೊಯ್ದು ಪಾತ್ರೆ ಮತ್ತು ಕಾಯಿಗಳನ್ನು ಬೇರ್ಪಡಿಸಿ ಒಣಗಿಸಬೇಕು

ಜಾಪತ್ರೆ ಅಥವಾ ಜಾಯಿಕಾಯಿ
ಜಾಪತ್ರೆಗಳ ಉಪಯೋಗ

ಜಾಪತ್ರೆಗಳ ಉಪಯೋಗ ಪ್ರಾಚೀನ ರೋಮನರಿಗಾಗಲಿ, ಗ್ರೀಕರಿಗಾಗಲಿ ತಿಳಿದಿರಲಿಲ್ಲ. ಕ್ರಿ.ಶ. ೫೪೦ ರ ಸುಮಾರಿನಲ್ಲಿ ಕಾನ್‍ಸ್ಟ್ಯಾಂಟಿನೋಪಲಿನಲ್ಲಿ ಇದರ ಬಗ್ಗೆ ಪ್ರಥಮ ಉಲ್ಲೇಖ ಕಂಡುಬರುತ್ತದೆ. ಬಹುಶಃ ಇದಕ್ಕೂ ಮುಂಚೆ ಭಾರತದಲ್ಲಿ ಇದರ ಬಳಕೆ ಇದ್ದಿರಬೇಕು. ೧೨ನೆಯ ಶತಕದ ವೇಳೆಗೆ ಯೂರೋಪಿನಲ್ಲಿ ಇದರ ಬಳಕೆ ಆರಂಭವಾಯಿತು. ಬಹುಕಾಲ ಅರಬ್ ವ್ಯಾಪಾರಿಗಳು ಕಾಯಿ ಮತ್ತು ಪತ್ರೆಗಳ ಮೂಲವನ್ನು ಗುಟ್ಟಾಗಿ ಇಟ್ಟಿದ್ದರು. ೧೫೧೨ ರಲ್ಲಿ ಪೋರ್ಚುಗೀಸ್ ನಾವಿಕರು ಅಂಬಾಯ್ನ ಮತ್ತು ಬಾಂಡ ದ್ವೀಪಗಳಲ್ಲಿ ಜಾಕಾಯಿ ಮರದ ಇರವನ್ನು ಪತ್ತೆಹಚ್ಚಿ ೧೭ನೆಯ ಶತಮಾನದ ಮಧ್ಯದವರೆಗೆ ಇದರ ವ್ಯಾಪಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದರು. ಅನಂತರ ಡಚ್ಚರು ಜಾಕಾಯಿ ವ್ಯಾಪಾರದ ಏಕಸ್ವಾಮ್ಯ ಪಡೆದು, ಮೇಲೆ ಹೇಳಿದ ದ್ವೀಪಗಳನ್ನು ಬಿಟ್ಟು ಉಳಿದ ಯಾವ ಕಡೆಯಲ್ಲೂ ಜಾಕಾಯಿ ಮರ ಬೆಳೆಯದಂತೆ ನಿರ್ಬಂಧಿಸಿದರು. ಆದರೂ ೧೭೭೨ ರ ವೇಳೆಗೆ ಫ್ರೆಂಚರು ಜಾಕಾಯಿ ಮರವನ್ನು ಮಾರಿಷಸ್ ಮತ್ತು ಫ್ರೆಂಚ್ ಗಯಾನಗಳಲ್ಲಿ ಬೆಳೆಸುವುದರಲ್ಲಿ ಯಶಸ್ವಿಗಳಾದರು. ೧೮ನೆಯ ಶತಮಾನದ ಕೊನೆಯಲ್ಲಿ ಮಲಕಸ್ ದ್ವೀಪಗಳಿಗೆ ಪ್ರಯಾಣ ಮಾಡಿದ ಈಸ್ಟ್ ಇಂಡಿಯ ಕಂಪನಿಯ ಸಸ್ಯಶಾಸ್ತ್ರಜ್ಞ ಕ್ರಿಸ್ಟೋಫರ್ ಸ್ಮಿತ್ ಎಂಬಾತ ಪೆನಾಂಗ್, ಕ್ಯೂ ಸಸ್ಯೋದ್ಯಾನ ಕಲ್ಕತ್ತ, ಮದರಾಸು ಮುಂತಾದೆಡೆಗಳಿಗೆ ಜಾಕಾಯಿ ಮರದ ಸಸಿಗಳನ್ನು ಕಳಿಸಿದ. ಅನಂತರ ಪೆನಾಂಗ್ ಮತ್ತು ಸಿಂಗಪುರಗಳಲ್ಲಿ ಜಾಕಾಯಿ ತೋಟಗಳು ವೃದ್ಧಿಯಾಗತೊಡಗಿದವು. ಲಂಡನ್ ಪ್ರಾಣಿಸಂಗ್ರಹಾಲಯದ ಸ್ಥಾಪಕನಾದ ಸರ್ ಸ್ಟಾಫರ್ಡ್ ರ್ಯಾಫಲ್ಸ್ ಸುಮಾತ್ರದಲ್ಲಿ ಜಾಕಾಯಿ ಮರಗಳನ್ನು ಬೆಳೆಸುವುದನ್ನು ಪ್ರೋತ್ಸಾಹಿಸಿದ. ೧೮೨೪ರ ಸಮಯಕ್ಕೆ ಟ್ರಿನಿಡಾಡಿಗೂ ೧೮೪೩ರ ವೇಳೆಗೆ ಗ್ರನೇಡಕ್ಕೂ ಇದನ್ನು ತಂದು ಬೆಳೆಸಲಾಯಿತು.

ಇದು ಅಗಲವಾಗಿ ಹರಡಿಕೊಂಡು ಬೆಳೆಯುವ ಸದಾ ಹಸಿರಿನ ಮರ. ೫-೧೫ ಮೀ. ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಸಲ ೨೦ ಮೀ.ಗೂ ಹೆಚ್ಚು ಎತ್ತರ ಬೆಳೆಯುವುದುಂಟು. ತೊಗಟೆ ಬೂದು ಮಿಶ್ರಿತ ಕಪ್ಪು ಬಣ್ಣದ್ದು. ವಯಸ್ಸಾದ ತೊಗಟೆ ಉದ್ದುದ್ದವಾಗಿ ಸೀಳಿರುವುದುಂಟು. ಎಲೆಗಳು ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ಅಂಡದಂತೆ, ಬಣ್ಣ ಕಡುಹಸಿರು, ಅಂಚು ನಯವಾಗಿದೆ. ವೃತ್ತಪರ್ಣಗಳಿಲ್ಲ. ಎಲೆಗಳನ್ನು ಉಜ್ಜಿದರೆ ಒಂದು ತೆರನ ಸುವಾಸನೆ ಸೂಸುವುದುಂಟು. ಹೂಗಳು ಏಕಲಿಂಗಿಗಳು, ವಿಭಿನ್ನ ಮರಗಳಲ್ಲಿ ಅರಳುತ್ತವೆ. ಅಪರೂಪಕ್ಕೆ ಒಂದೇ ಮರದಲ್ಲಿ ಗಂಡು ಮತ್ತು ಹೆಣ್ಣುಹೂಗಳೂ ದ್ವಿಲಿಂಗಿ ಹೂಗಳೂ ಇರುವುದುಂಟು. ಗಂಡು ಹೆಣ್ಣು ಹೂಗೊಂಚಲುಗಳೆರಡೂ ಛತ್ರಿಯಾಕಾರದ ಸೈಮೋಸ್ ಮಾದರಿಯವು. ಹೂಗಳಿಗೆ ಮಧುರವಾದ ಗಂಧವೂ ತಿಳಿಹಳದಿ ಬಣ್ಣವೂ ಇವೆ. ಹೂಗಳಲ್ಲಿ ದಳಗಳೇ ಇಲ್ಲ. ಗಂಡುಹೂವಿನಲ್ಲಿ ಗಂಟೆಯಾಕಾರದ ಪುಷ್ಪಪತ್ರ ಸಮೂಹ ಮತ್ತು೮-೧೨ ಕೇಸರಗಳು ಇವೆ. ಕೇಸರಗಳೆಲ್ಲ ಹೂವಿನ ಕೇಂದ್ರಭಾಗದಲ್ಲಿ ಒಟ್ಟಾಗಿ ಕೂಡಿ ಒಂದು ಕಂಬದಂಥ ರಚನೆಯನ್ನು ನಿರ್ಮಿಸಿವೆ. ಹೆಣ್ಣುಹೂವಿನಲ್ಲಿ ಪುಷ್ಪಪತ್ರದ ಜೊತೆಗೆ ಒಂದೇ ಒಂದು ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಉಂಟು. ಅಂಡಾಶಯದೊಳಗೆ ಒಂದೇ ಒಂದು ಅಂಡಕ ಇದೆ. ಫಲ ರಸಭರಿತ ಅಷ್ಟಿಮಾದರಿಯದು. ಇದರ ಬಣ್ಣ ಹಳದಿ.

ಹಣ್ಣುಗಳನ್ನು ಸಂಗ್ರಹಿಸಿ ಹಣ್ಣಿನ ಮೇಲಿರುವ ಸಿಪ್ಪೆಯನ್ನೆಲ್ಲ ತೆಗೆದು, ಬೀಜವನ್ನು ಜಾಪತ್ರೆಯಿಂದ ಬೇರ್ಪಡಿಸಿ ಒಣಗಿಸಬೇಕು. ಇದನ್ನು ಅಲ್ಲಾಡಿಸಿದಾಗ ಬೀಜದ ತಿರುಳು ಶಬ್ದ ಮಾಡಿದರೆ ಬೀಜ ಪೂರ್ತಿ ಒಣಗಿದೆ ಎಂದಾಗುತ್ತದೆ. ಅನಂತರ ಬೀಜದ ಸಿಪ್ಪೆಯನ್ನು ಕೊಡತಿಯಿಂದ ಇಲ್ಲವೆ ಬೇರೆ ಸೂಕ್ತವಾದ ಉಪಕರಣಗಳಿಂದ ಸೀಳಿ ಒಣಗಿದ ತಿರುಳನ್ನು ತೆಗೆದು ಶೇಖರಿಸಲಾಗುತ್ತದೆ. ಇಂಡೋನೇಷ್ಯದಲ್ಲಿ ಒಣಗಿಸುವುದಕ್ಕೆ ಮುಂಚೆ ಕಾಯಿಗೆ ಸುಣ್ಣವನ್ನು ಹಚ್ಚುವ ಕ್ರಮ ಉಂಟು. ಇದರಿಂದ ಬೀಜಕ್ಕೆ ಕೀಟಗಳ ಹಾವಳಿ ಇರುವುದಿಲ್ಲ ಮತ್ತು ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಜಾಪತ್ರೆಯನ್ನು ಕೂಡ ಜಾಕಾಯಿಯಿಂದ ಬೇರ್ಪಡಿಸಿ ಎರಡು ಹಲಗೆಗಳ ಮಧ್ಯೆ ಇಟ್ಟು ಚಪ್ಪಡೆ ಮಾಡಿ ಅನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಉತ್ತಮ ಗುಣದ ಜಾಪತ್ರೆಯನ್ನು ಪಡೆಯಲು ಅದಕ್ಕಾಗಿಯೇ ನಿರ್ಮಿಸಿದ ಒಲೆಯಲ್ಲಿ ಒಣಗಿಸುವುದುಂಟು. ಕೆಲವು ದೇಶಗಳಲ್ಲಿ ಒಣಗುವ ಜಾಪತ್ರೆಯ ಮೇಲೆ ಉಪ್ಪು ನೀರನ್ನು ಸಿಂಪಡಿಸುವುದಿದೆ. ಇದರಿಂದ ಜಾಪತ್ರೆಯನ್ನು ಬಹಳ ಕಾಲ ಕೆಡದಂತೆ ಇಡಬಹುದು. ಒಣಗಿಸುವಾಗ ಜಾಪತ್ರೆ ಮೊದಲು ಕಗ್ಗೆಂಪು ಬಣ್ಣಕ್ಕೆ ತಿರುಗಿ ಬಿದುರವಾಗುತ್ತದೆ. ೬ ವಾರಗಳ ಅನಂತರ ಇದಕ್ಕೆ ಒಳ್ಳೆಯ ಅಂಬರ್ ಬಣ್ಣ ಬರುತ್ತದೆ.

ಜಾಪತ್ರೆ ಅಥವಾ ಜಾಯಿಕಾಯಿ
ಜಾಕಾಯಿ

ಒಳ್ಳೆಯ ಜಾಕಾಯಿ ೨-೩.೫ ಸೆಂ.ಮೀ. ಉದ್ದವೂ ೧.೫-೨.೮ ಸೆಂ.ಮೀ. ಅಗಲವೂ ಇದ್ದು ಅಂಡಾಕಾರದ್ದಾಗಿದೆ. ಇದರ ಬಣ್ಣ ಬೂದುಮಿಶ್ರಿತ ಕಂದು. ಅಲ್ಲಲ್ಲೆ ಸೂಕ್ಷ್ಮವಾದ ಕೆಂಗಂದು ಬಣ್ಣದ ಮಚ್ಚೆಗಳೂ ಗೆರೆಗಳೂ ಉಂಟು. ಅಲ್ಲದೆ ಬಲೆಯಾಕಾರದ ಜಾಡುಗಳೂ ಇವೆ. ಇದಕ್ಕೆ ತೀವ್ರವಾದ ಸುವಾಸನೆಯೂ ಕಟು ರುಚಿಯೂ ಉಂಟು. ಸಾಮಾನ್ಯವಾಗಿ ಜಾಕಾಯಿಯಲ್ಲಿ ಈಸ್ಟ್ ಇಂಡಿಯನ್ ಮತ್ತು ವೆಸ್ಟ್ ಇಂಡಿಯನ್ ಎಂಬ ಎರಡು ಮುಖ್ಯ ಬಗೆಗಳುಂಟು. ಇವುಗಳಲ್ಲಿ ಮೊದಲನೆಯದು ಉತ್ತಮ ದರ್ಜೆಯದೆಂದು ಹೆಸರಾಗಿದೆ. ಇದರಲ್ಲೂ ಬಾಂಡ, ಸಿಯಾವ್ ಮತ್ತು ಪೆನಾಂಗ್ ಜಾಕಾಯಿಗಳೆಂಬ ವರ್ಗಗಳಿವೆ. ಇವುಗಳೆಲ್ಲೆಲ್ಲ ಅತ್ಯುತ್ತಮವಾದ್ದು ಬಾಂಡ ಜಾಕಾಯಿ. ಇವಲ್ಲದೆ ಮಿರಿಸ್ಟಿಕ ಆರ್ಜೆಂಶಿಯ ಪ್ರಭೇದದಿಂದ ಪಡೆಯಲಾಗುವ ಪಾಪುವ ಜಾಕಾಯಿ ಮತ್ತು ಮಿ.ಮಲಬಾರಿಕ ಪ್ರಭೇದದಿಂದ ಪಡೆಯಲಾಗುವ ಬಾಂಬೆ ಜಾಕಾಯಿ ಎಂಬ ಬಗೆಗಳೂ ಉಂಟು. ಇವನ್ನು ಜಾಕಾಯಿಯೊಂದಿಗೆ ಕಲಬೆರಕೆ ಮಾಡುವುದಿದೆ.

ಉಪಯೋಗಗಳು :

ಜಾಜಿಕಾಯಿ ಸಿಹಿತಿಂಡಿ ಪಾನೀಯಗಳಲ್ಲಿ ಸುವಾಸನೆ ವೃದ್ಧಿಗಾಗಿ ಬಳಸ್ಪಡುತ್ತದೆ. ಔಷಧ ಗುಣವನ್ನು ಹೊಂದಿದ ಜಾಯಿಹಣ್ಣಿನ ಸಿಪ್ಪೆಯಲ್ಲಿ ತಂಬುಳಿ, ಜ್ಯಾಮ್, ಹಾಗೂ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ.

ಜಾಯಿಶ್ಯಾಂಪೂ, ಸುಗಂಧದ್ರವ್ಯ ಮತ್ತು ಕೀಟಕನಾಶಕಗಳ ತಾಯಾರಿಕೆಯಲ್ಲಿ ಜಾಯಿಕಾಯನ್ನು ಬಳಸುತ್ತಾರೆ. ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.

ಕಾಯಿಯ ತಿರುಳಿನಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಇದನ್ನು ಜಾಯಿ ಬೆಣ್ಣೆ ಎಂದು ಕರೆಯುತ್ತಾರೆ. ಜಾಯಿ ಬೆಣ್ಣೆಯಲ್ಲಿ ಮಿರಿಸ್ಟಿಕ್ ಆಮ್ಲಎನ್ಲಲಾಗುವ ಪರ್ಯಾಪ್ತ ಕೊಬ್ಬಿನ ಆಮ್ಲ ೭೦% ರಷ್ಟು ಇರುತ್ತದೆ. ಜಾಯಿ ಬೆಣ್ಣೆಯನ್ನು ಕೋಕೋ ಬಟ್ಟರು ಬದಲಾಗಿ ಚಾಕೋಲೆಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೋಂಪು

ಆರೋಗ್ಯ ಗುಣವನ್ನು ಹೊಂದಿರುವ ಸೋಂಪು

ಹುಣಸೆ ಬೆಳೆ

ಹುಣಸೆ ಬೆಳೆ