in ,

ಮೂಲಂಗಿ ಬೇಡ ಅನ್ನುವವರಿಗೆ ಪ್ರಯೋಜನ ಕೇಳಿ

ಮೂಲಂಗಿ
ಮೂಲಂಗಿ

ವಾಸ್ತವದಲ್ಲಿ ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ. ಇನ್ನೂ ಒಳ್ಳೆಯ ಅಂಶವೆಂದರೆ ಇದನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದು.

ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಅದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ.

ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ. ಇದನ್ನು ಹಸಿಯಾಗಿ ಸೇವಿಸುವ ಜೊತೆಗೇ ಸಾಂಬಾರ್ ಮೊದಲಾದವುಗಳಲ್ಲಿ ಬೇಯಿಸಿ, ಆಲೂ ಪರೋಟದಂತೆಯೇ ಮೂಲೀ ಪರಾಟ ಎಂಬ ರೊಟ್ಟಿಯಂತೆಯೂ, ಸರಳವಾಗಿ ಬೇಳೆಯೊಟ್ಟಿಗೆ ಬೇಯಿಸಿ ಧಿಡೀರನೇ ತಯಾರಿಸಬಹುದಾದ ತೊವ್ವೆಗಳ ರೂಪದಲ್ಲಿಯೂ ಸೇವಿಸಬಹುದು. ಆಲುಗಡ್ಡೆಯೊಂದಿಗೂ ಮೂಲಂಗಿ ಚೆನ್ನಾಗಿ ಬೆರೆಯುವ ಕಾರಣ ಇನ್ನೂ ಹಲವಾರು ಖಾದ್ಯಗಳನ್ನು ತಯಾರಿಸಬಹುದು.

ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.

ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.

ಮೂಲಂಗಿ ಬೇಡ ಅನ್ನುವವರಿಗೆ ಪ್ರಯೋಜನ ಕೇಳಿ
ಮೂಲಂಗಿ ಸೊಪ್ಪು

ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ. Daikon ಎಂಬ ತಳಿಯ ಬಿಳಿ ಮೂಲಂಗಿ ಸಾಮಾನ್ಯವಾಗಿ ಉದ್ದ ಮತ್ತು ದೊಡ್ಡದಾಗಿದ್ದರೆ ಉಳಿದವು ಚಿಕ್ಕ ಬೀಟ್ರೂಟಿನ ಆಕಾರದಲ್ಲಿರುತ್ತವೆ. ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ್ತಿರವಾಗಿರುವ ಗಾಢನೀಲಿ ಬಣ್ಣದ ಮೂಲಂಗಿಗಳೂ ದೊರಕುತ್ತವೆ. ಇದರ ರುಚಿ ಕೊಂಚವೇ ಖಾರವಾಗಿರುವ ಕಾರಣ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದರಲ್ಲಿರುವ ಅದ್ಭುತವಾದ ಆರೋಗ್ಯಕರ ಗುಣಗಳು ಮಾತ್ರ ಈ ತರಕಾರಿಯನ್ನು ಅತಿ ಮಹತ್ವದ್ದಾಗಿಸುತ್ತದೆ.

ಮೂಲಂಗಿಯ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು. ಅದರಲ್ಲಿರುವ ಕಬ್ಬಿಣಾಂಶ ಮತ್ತು ಪೋಷಕಾಂಶಗಳು ಹಲವಾರು ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗೆಯೇ ಮೂಲಂಗಿ ಸೊಪ್ಪಿನಲ್ಲಿ ಸಹ ಹಲವಾರು ಪೋಷಕಾಂಶಗಳಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿದೆ.

ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.

ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.

ಮೂಲಂಗಿ ಬೇಡ ಅನ್ನುವವರಿಗೆ ಪ್ರಯೋಜನ ಕೇಳಿ
ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ

ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.

ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.

ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.

ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.

ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

ಮೂಲಂಗಿ ಎಲೆಗಳಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುವ ಗುಣವನ್ನು ಹೊಂದಿದೆ. ಆಹಾರದಲ್ಲಿ ಮೂಲಂಗಿ ಎಲೆಗಳನ್ನು ಪಲ್ಯಗಳನ್ನು ಸೇವನೆ ಮಾಡಬಹುದು. ಅಥವಾ ಮೂಲಂಗಿ ಎಲೆಗಳ ರಸ ಕುಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣ ಬರುತ್ತದೆ.

ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್ ಗಳಿವೆ. ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ತನ್ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ಕಿಡ್ನಿಯಲ್ಲಿ ಕಲ್ಲು ಸಾಮಾನ್ಯವಾಗಿದೆ ಅದಕ್ಕೆ ಪರಿಹಾರ ಎಂದರೆ ಈ ಮೂಲಂಗಿ ಎಲೆ. ಮೂತ್ರವರ್ಧಕವಾಗಿರುವುದರಿಂದ ಕಲ್ಲು ಕರಗಿಸಿ ಮೂತ್ರದ ಮೂಲಕ ಹಾದು ಹೋಗುವಂತೆ ಮಾಡುತ್ತದೆ.

ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸಿ ಕಣಗಳ ನಷ್ಟವಾಗುವಿಕೆಯಿಂದ ತಡೆಯುತ್ತದೆ. ತನ್ಮೂಲಕ ರಕ್ತದ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮೂಲಂಗಿ ಎಲೆಗಳ ರಸ ನೈಸರ್ಗಿಕವಾಗಿ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದ್ದು, ಮೂತ್ರದ ಸೋಂಕು ನಿವಾರಿಸಲು ಅತಿ ಉತ್ತಮ ಎನ್ನಲಾಗುತ್ತದೆ. ನಿಮ್ಮ ಮೂತ್ರಕೋಶದ ಹಲವಾರು ಸಮಸ್ಯೆಗೆ ಈ ಮೂಲಂಗಿ ಸೊಪ್ಪು ಪರಿಹಾರ.

ಮೂಲಂಗಿ ಬೇಡ ಅನ್ನುವವರಿಗೆ ಪ್ರಯೋಜನ ಕೇಳಿ
ಮೂಲಂಗಿ ರಸ

ಮೂಲಂಗಿ ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಸಹ ಒದಗಿಸುತ್ತದೆ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ, ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ನಿಮಗೆ ಅಗತ್ಯವಾದ ಆಹಾರವಾಗಿದೆ.. ಆಯುರ್ವೇದದ ಪ್ರಕಾರ, ಮೂಲಂಗಿಯು ರಕ್ತವನ್ನು ತಂಪುಗೊಳಿಸುವ ಪರಿಣಾಮವನ್ನು ಬೀರುತ್ತದೆ.

ನೈಸರ್ಗಿಕವಾದ ರೀತಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ನರಮಂಡಲಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನೀರಿನಲ್ಲಿ ಒಣಗಿದ ಮೂಲಂಗಿ ಎಲೆಗಳ ಪುಡಿಯನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸೇವನೆ ಮಾಡುವುದು ಪ್ರಯೋಜನ ನೀಡುತ್ತದೆ.

ಬಾಯಿಯಲ್ಲಿನ ವಸಡುಗಳಲ್ಲಿ ಕಂಡುಬರುವ ರಕ್ತಸ್ರಾವ ಸಮಸ್ಯೆಯನ್ನು ಕಡಿಮೆ ಮಾಡಲು ಮೂಲಂಗಿ ಎಲೆ ಸಹಕಾರಿ. ಮೂಲಂಗಿ ಎಲೆಗಳಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದ್ದು, ವಸಡುಗಳ ರಕ್ಷಿಸಿ ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ.

ಅಧಿಕವಾದ ಕರಗುವ ಮತ್ತು ಕರಗದ ನಾರಿನಂಶ

ಮೂಲಂಗಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ನೀವು ಅದನ್ನು ಸೇವಿಸುತ್ತಿದ್ದರೆ, ನಿಮಗೆ ಜೀರ್ಣಕ್ರಿಯೆಯ ಅಥವಾ ಮಲಬದ್ದತೆಯ ತೊಂದರೆ ಎದುರಾಗದು. ಏಕೆಂದರೆ ಇದರಲ್ಲಿ ಸಮೃದ್ದ ಪ್ರಮಾಣದಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಪಿತ್ತರಸದ ಉತ್ಪಾದನೆಯನ್ನು ನಿಯಂತಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ದತೆಯಾಗದಂತೆ ತಡೆಯುತ್ತವೆ.

ಪ್ರತಿದಿನ ಸಾಧ್ಯವಾದರೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಎಲೆಗಳ ರಸ ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಿ, ಇದು ಜಾಂಡೀಸ್ ಮಾತ್ರವಲ್ಲದೇ ಹೊಟ್ಟೆಯ ಒಳಗಿನ ಸಮಸ್ಯೆಗಳಿಗೆ ಸಹ ಪರಿಹಾರ ನೀಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುವ ಕಾರಣದಿಂದ ಇದು ನೆಗಡಿ ಮತ್ತು ಕೆಮ್ಮು ಎದುರಾಗುವುದನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು. ಇದು ಹಾನಿಕಾರಕ ಫ್ರೀ ರ್‍ಯಾಡಿಕಲ್ ಅಂಬ ಕಣಗಳು, ಉರಿಯೂತ ಎದುರಾಗುವಿಕೆ ಮತ್ತು ಆರಂಭಿಕ ವಯಸ್ಸಾಗುವಿಕೆಯನ್ನೂ ನಿಯಂತ್ರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

ಮೂಲಂಗಿ ಸೊಪ್ಪಿನಲ್ಲಿ ಜಾಂಡೀಸ್ ಕಡಿಮೆ ಮಾಡುವ ಶಕ್ತಿ ಇದೆ ಎಂದು ಸಾಬೀತಾಗಿದೆ. ಈ ರೋಗದಲ್ಲಿ ನೋಡಿದ್ದೆಲ್ಲಾ ಹಳದಿ ಬಣ್ಣದಲ್ಲಿ ಕಾಣುತ್ತದೆ, ಅಲ್ಲದೇ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಕೂಡ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಆದರೆ ಈ ಸಮಸ್ಯೆಗೆ ಮೂಲಂಗಿ ಸೊಪ್ಪಿನಲ್ಲಿ ಪರಿಹಾರವಿದೆ. ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಮೂಲಂಗಿ ಎಲೆಗಳು ಆಂಡೀಸ್ ಹೋಗಲಾಡಿಸಲು ಸಹಕಾರಿ.

ರಕ್ತನಾಳಗಳನ್ನು ಬಲಪಡಿಸುತ್ತದೆ

ಮೂಲಂಗಿಯ ಪ್ರಯೋಜನಗಳಲ್ಲಿಯೇ ಇದು ಮುಖ್ಯವಾಗಿದೆ. ರಕ್ತನಾಳಗಳನ್ನು ಬಲಪಡಿಸುವ ಅಂಗಾಶವಾದ ಕೊಲ್ಯಾಜೆನ್ ಉತ್ಪಾದನೆಯಲ್ಲಿ ಮೂಲಂಗಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ನಮ್ಮ ರಕ್ತನಾಳಗಳನ್ನು ಬಲಪಡಿಸುತದೆ ಮತ್ತು ಅಪಧಮನಿಕಾಠಿಣ್ಯ ಅಥವಾ ರಕ್ತನಾಳಗಳು ಪೆಡಸಾಗುವ ತೊಂದರೆಯ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

ವಿಶೇಷವಾಗಿ ಬೇಸಿಗೆಯಲ್ಲಿ ತ್ವಚೆಯಿಂದ ಹೆಚ್ಚಿನ ನೀರಿನಂಶ ನಷ್ಟವಾಗುತ್ತಿದ್ದಾಗ, ದೇಹಕ್ಕೆ ಹೆಚ್ಚಿನ ನೀರಿನಂಶ ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಜಾಣತನ. ಮೂಲಂಗಿ ಇಂತಹ ಒಂದು ಆಹಾರವಾಗಿದ್ದು ಇದರಲ್ಲಿರುವ ಸಮೃದ್ಧವಾದ ನೀರಿನಂಶ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯುತ್ತದೆ.

ಮೂಲಂಗಿಯ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಉದಾಹರಣೆಗೆ ಯಕೃತ್ ಮತ್ತು ಜಠರದ ಕಲ್ಮಶಗಳನ್ನು ನಿವಾರಿಸುವ ಮೂಲಕ ಈ ಅಂಗಗಳನ್ನು ಸ್ವಚ್ಛತೆಗೊಳಿಸುತ್ತದೆ. ಕಾಮಾಲೆ ಅಥವಾ ಹಳದಿ ರೋಗ (ಜಾಂಡೀಸ್) ಎದುರಾದರೆ ಕಪ್ಪು ಮೂಲಂಗಿಯ ರಸವನ್ನು ಕುಡಿಸುವುದು, ಇದರ ಎಲೆ ಮತ್ತು ತರಕಾರಿಯನ್ನು ತಿನ್ನಿಸುವುದು ಭಾರತದಲ್ಲಿ ಬಹಳ ಹಿಂದಿನಿಂದ ನಡೆದುಬಂದ ಚಿಕಿತ್ಸಾ ಕ್ರಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಹಳದಿ ಬಣ್ಣ ಬರಲು ಕಾರಣವಾಗಿರುವ ಹೆಚ್ಚಿನ ಪ್ರಮಾಣದ ಬಿಲಿರುಬಿನ್ ಎಂಬ ರಾಸಾಯನಿಕವನ್ನು ನಿವಾರಿಸಲು ನೆರವಾಗುತ್ತದೆ.

ಮೂಲಂಗಿ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಹಾಗೂ ಫಾಸ್ಫರಸ್ ಅಂಶಗಳನ್ನು ಹೊಂದಿದ್ದು, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲವ್ಯಾಧಿ ಅಥವಾ ಪೈಲ್ಸ್ಗೆ ಸಹ ಇದು ಪರಿಹಾರ ನೀಡುತ್ತದೆ.

ಮೂಲಂಗಿ ಬೇಡ ಅನ್ನುವವರಿಗೆ ಪ್ರಯೋಜನ ಕೇಳಿ
ಮೂಲಂಗಿ ಸಾಲಾಡ್

ಜೀವ ರಾಸಾಯನಿಕ ಕ್ರಿಯೆಯನ್ನು ಬೆಂಬಲಿಸುತ್ತದೆ

ಈ ತರಕಾರಿಯ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಮಾತ್ರವಲ್ಲ, ಆಮ್ಲೀಯತೆ, ಸ್ಥೂಲಕಾಯ, ವಾಯುಪ್ರಕೋಪ ಸಮಸ್ಯೆಗಳು ಮತ್ತು ವಾಕರಿಕೆಗಳನ್ನು ಸರಿಪಡಿಸಲೂ ಸಹ ಸಹಾಯ ಮಾಡುತ್ತದೆ.

ಅಗತ್ಯ ಪೋಷಕಾಂಶಗಳಾದ ವಿಟಮಿನ್ ಸಿ, ಸತು ಮತ್ತು ರಂಜಕಗಳನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮ ಒಣಗುವಿಕೆ, ಮೊಡವೆ, ಕೀವುಗುಳ್ಳೆಗಳನ್ನು ಮತ್ತು ದದ್ದುಗಳು ಎದುರಾಗದೇ ಇರುವಂತೆ ಕಾಪಾಡುತ್ತದೆ. ನಿಮ್ಮ ಮುಖವನ್ನು ಶುದ್ಧೀಕರಿಸಲು ನೀವು ಮೂಲಂಗಿಯನ್ನು ಅರೆದು ತಯಾರಿಸಿದ ಲೇಪವನ್ನೂ ತ್ವಚೆಗೆ ಹಚ್ಚಿಕೊಳ್ಳಬಹುದು. ಮತ್ತು ಕೂದಲಿಗೆ ಹಚ್ಚಿದರೆ, ಇದು ತಲೆಹೊಟ್ಟನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕೂದಲ ಬುಡಗಳಿಗೂ ಇಳಿದು ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಕೂದಲ ಉದುರುವಿಕೆಯನ್ನು ತಡೆಯುತ್ತದೆ.

ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರೈಲಿಗೆ ನಾಳೆ ಮೋದಿ ಚಾಲನೆ

‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲಿಗೆ ನಾಳೆ ಮೋದಿ ಚಾಲನೆ

ಆಕ್ಟೊಪಸ್

ಎಂಟು ಕಾಲುಗಳುಳ್ಳ ಜಲಚರ ಆಕ್ಟೊಪಸ್