ಈ ಯಾತ್ರೆಗಾಗಿ ವಿಶೇಷ ವಿನ್ಯಾಸದ ರೈಲನ್ನು ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಸಿದ್ಧಪಡಿಸಲಾಗುತ್ತಿದೆ.
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ಇದೇ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ. ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೊದಲು ರೈಲು ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿ ಆಗಿದೆ.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನ 11) ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. 8 ದಿನಗಳ ಪ್ರವಾಸದಲ್ಲಿ ಈ ರೈಲು ಕಾಶಿ, ಅಯೋಧ್ಯೆ, ಪ್ರಯಾಗ್ರಾಜ್ ಕ್ಷೇತ್ರಗಳಿಗೆ ಯಾತ್ರಿಗಳನ್ನು ಕೊಂಡೊಯ್ಯಲಿದೆ. ನ 11ರಂದು ಬೆಂಗಳೂರಿನಿಂದ ಹೊರಡಲಿರುವ ರೈಲು ನ 18ಕ್ಕೆ ಮತ್ತೆ ಬೆಂಗಳೂರಿಗೆ ಬರಲಿದೆ. ಈ ಯಾತ್ರೆಗಾಗಿ ವಿಶೇಷ ವಿನ್ಯಾಸದ ರೈಲನ್ನು ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಸಿದ್ಧಪಡಿಸಲಾಗುತ್ತಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚೆಗಷ್ಟೇ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಭೇಟಿ ನೀಡಿ ರೈಲನ್ನು ಪರಿಶೀಲಿಸಿದ್ದರು. ರೈಲಿನಲ್ಲಿ ಪ್ರಯಾಣಿಸಲು ಪ್ರತಿ ಪ್ರಯಾಣಿಕರಿಗೆ ₹ 20,000 ಟಿಕೆಟ್ ದರ ವಿಧಿಸಲಾಗಿದೆ. ಈ ಪೈಕಿ ಕರ್ನಾಟಕ ಸರ್ಕಾರವು ₹ 5 ಸಾವಿರ ಸಬ್ಸಿಡಿ ಒದಗಿಸುತ್ತದೆ. ಹೀಗಾಗಿ ಪ್ರಸ್ತುತ ಪ್ರಯಾಣಿಕರು ₹ 15,000ದಲ್ಲಿ ಕಾಶಿಯಾತ್ರೆ ಮಾಡಬಹುದಾಗಿದೆ.

ಅಕ್ಟೋಬರ್ 30 ರಂದು ಬುಕ್ಕಿಂಗ್ ಪ್ರಾರಂಭಿಸಲಾಗಿತ್ತು. ಮೊದಲ ದಿನವೇ 200 ಬುಕ್ಕಿಂಗ್ ಮಾಡಲಾಗಿತ್ತು. ಮೂರನೇ ದಿನ ಎಲ್ಲಾ 540 ಸೀಟ್ ಗಳು ಭರ್ತಿಯಾಗಿವೆ ಇದೊಂದು ನೂತನ ದಾಖಲೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಯಾತ್ರೆಗೆ ಹೊರಡುತ್ತಿರುವ ರೈಲು ನವೆಂಬರ್ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಗಳ ಪ್ರವಾಸ ಮುಗಿಸಿ ನವೆಂಬರ್ 18 ರಂದು ವಾಪಸ್ ಬೆಂಗಳೂರಿಗೆ ಬರಲಿದೆ. ಈ ರೈಲು ಬೆಂಗಳೂರು, ಬಿರೂರ್, ಹಾವೇರಿ, ಹುಬ್ಬಳ್ಳಿ. ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗ್ ರಾಜ್ ಗೆ ಸಂಚರಿಸಲಿದೆ.
ಕಳೆದ ಜುಲೈ ತಿಂಗಳಲ್ಲಿ ಕರ್ನಾಟಕ ಸರ್ಕಾರವು ‘ಕಾಶಿ ಯಾತ್ರಾ’ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯ ಅನ್ವಯ ಕರ್ನಾಟಕದ 30,000 ಜನರು ಕಾಶಿ ಯಾತ್ರೆಗಾಗಿ ತಲಾ ₹ 5 ಸಾವಿರ ಸಬ್ಸಿಡಿ ಪಡೆಯಲಿದ್ದಾರೆ ಎಂದು ಸರ್ಕಾರವು ಹೇಳಿತ್ತು. ‘ನ 11ರ ಯಾತ್ರೆಯ 547 ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ರೈಲು ತನ್ನ ಮುಂದಿನ ಸಂಚಾರವನ್ನು ನ 23ರಂದು ಆರಂಭಿಸಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಮುಂದಿನ ಯಾತ್ರೆಯ 100 ಟಿಕೆಟ್ಗಳು ಮಾರಾಟವಾಗಿವೆ’ ಎಂದು ಸಚಿವರು ತಿಳಿಸಿದ್ದಾರೆ. ‘ವಂದೇ ಭಾರತ್ ಎಕ್ಸ್ಪ್ರೆಸ್ ಜೊತೆಗೆ ಕಾಶಿ ಗೌರವ್ ಯಾತ್ರೆ ರೈಲು ಸಂಚಾರಕ್ಕೂ ಚಾಲನೆ ನೀಡುವಂತೆ ವಿನಂತಿಸಿದ್ದೇವೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಮಾರ್ಚ್ ತಿಂಗಳಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಈ ರೈಲಿನ ಬಗ್ಗೆ ಪ್ರಸ್ತಾಪಿಸಿದ್ದರು.

ಬೆಂಗಳೂರು ನಗರದ ಜೊತೆಗೆ ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಮತ್ತು ರಾಯಭಾಗ ನಿಲ್ದಾಣಗಳಲ್ಲಿಯೂ ರೈಲಿಗೆ ಜನರು ಹತ್ತಲು ಅವಕಾಶವಿದೆ. ಆದರೆ ಟಿಕೆಟ್ಗಳನ್ನು ಮೊದಲೇ ಖರೀದಿಸಿರಬೇಕು. 5 ವರ್ಷ ಮೇಲ್ಪಟ್ಟ ಎಲ್ಲರಿಗೂ ಪೂರ್ಣ ಚಾರ್ಜ್ ವಿಧಿಸಲಾಗುವುದು. ಪ್ರಯಾಣಿಕರಿಗೆ ರೈಲಿನಲ್ಲಿಯೇ ಊಟ, ತಿಂಡಿ, ಪಾನೀಯದ ವ್ಯವಸ್ಥೆ ಇರುತ್ತದೆ. ಪ್ರವಾಸಿ ಸ್ಥಳಗಳಲ್ಲಿ ಹೊಟೆಲ್ನಲ್ಲಿ ಊಟೋಪಚಾರದ ವ್ಯವಸ್ಥೆ ಇರುತ್ತದೆ.
ಪ್ಯಾಕೇಜ್ ವಿವರ
‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್’ ಹೆಸರಿನ ರೈಲು ಒಟ್ಟು 8 ಹಗಲು 7 ರಾತ್ರಿಗಳ ಸಂಚಾರವನ್ನು ಒಳಗೊಂಡಿರುತ್ತದೆ. ಬೆಂಗಳೂರಿನಿಂದ ಹೊರಡುವ ರೈಲು ವಾರಾಣಸಿ (ಕಾಶಿ), ಅಯೋಧ್ಯೆ, ಪ್ರಯಾಗ್ರಾಜ್ ಸಂದರ್ಶಿಸಿ ನಂತರ ಬೆಂಗಳೂರಿಗೆ ಮರಳುತ್ತದೆ.
ಏನೆಲ್ಲಾ ನೋಡಬಹುದು
ವಾರಾಣಸಿಯಲ್ಲಿ ತುಳಸಿ ಮಾನಸ ದೇಗುಲ, ಸಂಕಟಮೋಚನ ಹನುಮಾನ್ ದೇಗುಲ, ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾರತಿ. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇಗುಲ, ಹನುಮಾನ್ ಗಡಿ, ಸರಯೂ ಘಾಟ್. ಪ್ರಯಾಗ್ರಾಜ್ನಲ್ಲಿ ಗಂಗಾ-ಯಮುನಾ ಸಂಗಮ, ಹನುಮಾನ್ ದೇಗುಲ.
Howdy! Do you know if they make any plugins to help with SEO?
I’m trying to get my site to rank for some targeted keywords but I’m not seeing very good
success. If you know of any please share. Kudos! You can read similar blog here: Eco bij