ಆಲೂಗಡ್ಡೆಯನ್ನ ತರಕಾರಿಗಳ ರಾಜ ಎಂದು ಕರೆಯಲಾಗುತ್ತೆ. ಕೆಲವರು ಮನೆಯಲ್ಲಿ ಆಲೂಗಡ್ಡೆಯಿಂದ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಇಷ್ಟ ಪಡುವುದಿಲ್ಲ. ಆಲೂಗಡ್ಡೆ ತಿಂದ್ರೆ ವಾಯದ ಸಮಸ್ಯೆ ಉಂಟಾಗುತ್ತೆ, ಇದರಲ್ಲಿ ಕಾರ್ಬ್ ಹೆಚ್ಚಾಗಿರೋದ್ರಿಂದ ತೂಕ ಹೆಚ್ಚಳವಾಗುತ್ತೆ ಎನ್ನುವ ಭಯ… ಆದ್ರೆ ವಿಶ್ವದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಸಿಗುವ ಸಾಮಾನ್ಯ ತರಕಾರಿ ಆಲೂಗಡ್ಡೆ.
ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶದ ಆಹಾರ. ಇದರಲ್ಲಿರುವ ಕಾರ್ಬೋಹೈಡ್ರೇಟ್ ದೇಹದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಯಲು ಸಹಕರಿಸುತ್ತದೆ.
ಆಲೂಗಡ್ಡೆ ಸೇವನೆಯಿಂದ ದೇಹಕ್ಕೆ ಬೇಕಾದ ಸಾಕಷ್ಟು ಪ್ರಯೋಜನವಿದೆ :

ಆಲೂಗಡ್ಡೆಯಲ್ಲಿ ಪ್ರೋಟೀನ್ಗಳು ಹೇರಳವಾಗಿ ಕಂಡುಬರುತ್ತವೆ. ಈ ತರಕಾರಿಯಲ್ಲಿ ಕಂಡುಬರುವ ಪ್ರೋಟೀನ್ ಅನ್ನು ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯಲಾಗುತ್ತದೆ. ನಮ್ಮ ರಕ್ತದ ಅಂಗಾಂಶ ಮತ್ತು ಮೂಳೆಗಳನ್ನು ಬಲಪಡಿಸಲು ಇದು ತುಂಬಾ ಪ್ರಯೋಜನಕಾರಿ.
ಆಲೂಗಡ್ಡೆಯ ಸಿಪ್ಪೆ ತೆಗೆದು ಮಾಡುವ ಅಡುಗೆಗೆ ಬಳಸುವುದಕ್ಕಿಂತ ಸಿಪ್ಪೆ ಸಹಿತ ತಯಾರಿಸಿದ ಆಹಾರ ತುಂಬಾ ಆರೋಗ್ಯಕರ. ಸಿಪ್ಪೆಯಲ್ಲಿರುವ ನಾರಿನಂಶ ದೇಹಕ್ಕೆ ತುಂಬಾ ಒಳ್ಳೆಯದು.
ಮಾನಸಿಕ ಖಿನ್ನತೆಯ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೌದು. ಆಲೂಗಡ್ಡೆಗಳು ನಿಮ್ಮ ಮನಸ್ಥಿತಿಯ ಮಟ್ಟವನ್ನು ನಿರ್ವಹಿಸುವ ಜವಾಬ್ದಾರಿಯುತ ಮೆದುಳಿನ ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮೆದುಳಿಗೆ ನೈಸರ್ಗಿಕ ರೂಪದಲ್ಲಿರುವ ಮಾನಸಿಕ ಔಷಧಿಯಾಗಿ ಕೆಲಸ ಮಾಡುತ್ತವೆ.
ವಯಸ್ಸಾಗುತ್ತಾ ಬಂದಂತೆ ಚರ್ಮದಲ್ಲಿ ನೆರಿಗೆ ಹಾಗೂ ಗೆರೆಗಳು ಮೂಡುವುದು ಸಾಮಾನ್ಯ ವಿಚಾರ. ಹೀಗಾಗಿ ಆಲೂಗಡ್ಡೆ ರಸವನ್ನ ಮುಖಕ್ಕೆ ಲೇಪಿಸುತ್ತ ಬಂದ್ರೆ ಮುಖದಲ್ಲಿನ ನೆರಿಗೆಗಳು ಕಡಿಮೆಯಾಗುವವು. ಇನ್ನೂ ಒಣ ಚರ್ಮದ ಸಮಸ್ಯೆಗೂ ಆಲೂಗಡ್ಡೆ ಪರಿಹಾರ.
ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಜೊತೆಗೆ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಗುಣ ಆಲೂಗಡ್ಡೆಯಲ್ಲಿ ಕಂಡುಬರುತ್ತದೆ
ಮುಖದ ಮೇಲೆ ದಿನಾಲೂ ಬಟಾಟೆ ಜ್ಯೂಸ್‌ನ್ನು ಹಚ್ಚಿಕೊಂಡರೆ ನಿಮ್ಮ ಮುಖ ಸುಕ್ಕುಗಟ್ಟುವುದು ತಡೆಯಬಹುದು ಮತ್ತು ಪ್ರಸಕ್ತ ಇರುವ ಸುಕ್ಕನ್ನು ಕಡಿಮೆ ಮಾಡಿಕೊಳ್ಳಬಹುದು.

ಆಲೂಗಡ್ಡೆಯಲ್ಲಿ ಅದ್ಭುತವಾದ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಸಿಗುತ್ತದೆ ಮತ್ತು ಇದು ನಿಮ್ಮ ಹೊಟ್ಟೆಯ ಕ್ಯಾನ್ಸರ್ ಸಮಸ್ಯೆಯನ್ನು ದೂರಮಾಡುತ್ತದೆ. ಆದ್ದರಿಂದ, ನೀವು ಆಲೂಗಡ್ಡೆಯನ್ನು ಬೇಯಿಸಿದ, ಹಿಸುಕಿದ ರೂಪದಲ್ಲಿ ಸೇವನೆ ಮಾಡಬಹುದು. ಆದರೆ ಇದನ್ನು ಎಣ್ಣೆಯಲ್ಲಿ ಕರಿದು ತಿನ್ನುವುದನ್ನು ತಪ್ಪಿಸಿ.
ರಕ್ತದೊತ್ತಡ ನಿಯಂತ್ರಣದಲ್ಲಿ ಆಲೂಗಡ್ಡೆ ನಿಜಕ್ಕೂ ಒಂದು ಪಾತ್ರವನ್ನು ಹೊಂದಿರಬಹುದು ಎಂದು ಆಧುನಿಕ ಸಂಶೋಧನೆಗಳು ತೋರಿಸಿವೆ.
ಆಲೂಗಡ್ಡೆ ತನ್ನಲ್ಲಿ ನಾರಿನ ಅಂಶವನ್ನು ಮತ್ತು ಪೊಟ್ಯಾಷಿಯಂ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿದೆ. ಹೀಗಾಗಿ ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.
ಮೂಳೆಗಳ ಬಲವರ್ಧನೆಯಲ್ಲಿ ಸಹಾಯ ಮಾಡುತ್ತದೆ. ಆಲೂಗಡ್ಡೆಗಳಲ್ಲಿ ಮೆಗ್ನೀಸಿಯಮ್ ಅಂಶ ಸಮೃದ್ಧವಾಗಿದೆ ಮತ್ತು ನಿಮ್ಮ ಮೂಳೆಗಳಿಗೆ ಸಹಾಯಕವಾಗಬಹುದು. ದೀರ್ಘಕಾಲದಿಂದ ಕೀಲುನೋವು ಮತ್ತು ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಮಿತಿಯ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯಕ್ಕೆ ಅಧಿಕ ಲಾಭವಿದೆ.
ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಲೂಗಡ್ಡೆ ತನ್ನಲ್ಲಿ ಆಲ್ಫಾ ಲಿಪೊಯಿಕ್ ಆಸಿಡ್ ಪ್ರಮಾಣದಿಂದ ತುಂಬಿರುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಿಮ್ಮ ನೆನಪಿನ ಶಕ್ತಿಯ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಆಲೂಗಡ್ಡೆಯ ಸಿಪ್ಪೆಯಲ್ಲಿ ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಬಿ-ವಿಟಮಿನ್‌ಗಳಿದ್ದು ಇವುಗಳು ಆರೋಗ್ಯಕ್ಕೆ ಸಹಕಾರಿಯಾಗಿವೆ.

ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಆಲೂಗಡ್ಡೆ ಹೆಚ್ಚು ಪ್ರಯೋಜನಕಾರಿಯಾದ ತರಕಾರಿ ಎಂದು ಈಗಾಗಲೇ ಕರೆಸಿಕೊಂಡಿದೆ. ನೀವು ಇದನ್ನು ಸೇವನೆ ಮಾಡುವಾಗ ಮಿತಿಯನ್ನು ಕಾಯ್ದುಕೊಂಡರೆ, ಇದರ ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಆಲೂಗಡ್ಡೆಗಳಲ್ಲಿ ವಿಟಮಿನ್ ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ಇದರಿಂದ ನಿಮ್ಮ ಜೀವಕೋಶದ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ.
ಬಹಳ ಹಿಂದೆಯೇ ಆಗಿರುವ ಉಳುಕು, ಮೂಗೇಟು,ಸುಟ್ಟಗಾಯಗಳಿಗೆ ಉತ್ತಮ ಪರಿಹಾರ ಅಂದ್ರೆ ಅದು ಆಲೂಗಡ್ಡೆ ಹೀಗಾಗಿ ಹಳೆಯ ಗಾಯಗಳಿಗೆ ಔಷಧೀಯಾಗಿ ಆಲೂಗಡ್ಡೆ ಬಳಸಲಾಗುತ್ತೆ. ಬಹುಮುಖ್ಯವಾಗಿ ಗರ್ಭಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಆಲೂಗಡ್ಡೆ ಸಹಕಾರಿ.
ಆಲೂಗಡ್ಡೆಯು ಹೊಟ್ಟೆಗೆ ಶಮನ ನೀಡುವುದು, ಹುಣ್ಣಿನ ಪ್ರಭಾವ ಕಡಿಮೆ ಮಾಡುವುದು ಮತ್ತು ಹೊಟ್ಟೆಯ ಅಸಿಡಿಟಿ ಕಡಿಮೆ ಮಾಡುವುದು ಎಂದು ಹೀಲಿಂಗ್ ಫುಡ್ಸ್ ಎನ್ನುವ ಪುಸ್ತಕವು ಹೇಳಿದೆ. ಸಂಧಿವಾತದಿಂದ ಕಾಣಿಸಿಕೊಳ್ಳುವ ಉರಿಯೂತವನ್ನು ಕೂಡ ಇದು ಕಡಿಮೆ ಮಾಡುವುದು.
ಧನ್ಯವಾದಗಳು.
GIPHY App Key not set. Please check settings