in ,

ಕಹಿ ಮಿಶ್ರಿತ ಹುಳಿಯ ರುಚಿ ಹೊಂದಿರುವ ಚಕ್ಕೋತ ಹಣ್ಣು

ಚಕ್ಕೋತ ಹಣ್ಣು
ಚಕ್ಕೋತ ಹಣ್ಣು

ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದೊಡ್ದ ಹಣ್ಣುಗಳು ಬಾಚಣೆಗೆಯಂತಹ ದೊಡ್ದ ತೊಳೆಗಳನ್ನು ಒಳಗೊಂಡಿರುತ್ತದೆ. ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಹುಳಿಯ ರುಚಿ ಹೊಂದಿರುವುದರಿಂದ ಇದನ್ನು ಆಸ್ವಾದಿಸುವವರು ಕೆಲವರು ಮಾತ್ರ. ಆದುದರಿಂದ ಇದು ಪ್ರಪಂಚದಲ್ಲಿ ಜನಪ್ರಿಯ ಹಣ್ಣುಗಳ ಸಾಲಿಗೆ ಸೇರಿಲ್ಲ. ಈ ಹಣ್ಣಿನಲ್ಲಿ ‘ಎ’ ‘ಬಿ’ ಮತ್ತು ‘ಸಿ’ ಜೀವಸತ್ವಗಳು ಹೇರಳವಾಗಿವೆ. ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ.

ಚಕ್ಕೋತ ಬೀಜದಿಂದ ತಯಾರಿಸಿದ ಗಿಡದಲ್ಲಿ ಫಸಲು ಬರಲು 4 ವರ್ಷ ಬೇಕಾಗುತ್ತದೆ. ಆದರೆ ಚಕ್ಕೋತ ಮರದ ಬಲಿತ ಕೊಂಬೆಯನ್ನು ಕತ್ತರಿಸಿ ನೆಟ್ಟರೆ 2 ವರ್ಷದಲ್ಲೇ ಫಲ ಪಡೆಯಬಹುದು.

ಆಯುರ್ವೇದದ ಪ್ರಾಚೀನ ಭಾರತೀಯ ಔಷಧ ಪದ್ಧತಿಯಲ್ಲಿ ಎಲೆ ಮತ್ತು ಹೂವಿನ ಅಂಶಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಹಣ್ಣನ್ನು ಸಲಾಡ್, ಸೂಪ್, ನೂಡಲ್ಸ್, ಫ್ರೈಡ್ ರೈಸ್ ಮತ್ತು ಕೇಕ್ ಮತ್ತು ಪುಡಿಂಗ್ ನಂತಹ ಆಹಾರಗಳಲ್ಲಿ ಬಳಕೆ ಮಾಡಲಾಗುತ್ತದೆ. ಚಕ್ಕೋತ ಜ್ಯೂಸ್ ದೇಹವನ್ನು ಶಾಂತವಾಗಿರಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಹಣ್ಣಿನ ಗಟ್ಟಿಯಾದ ಹೊರ ಸಿಪ್ಪೆಯನ್ನು ಸೇವನೆ ಮಾಡಲು ಸಾಧ್ಯವಾಗದಿದ್ದಲ್ಲಿ ಮರ್ಮಲೇಡ್ ಮತ್ತು ಜಾಮ್ ತಯಾರಿಸಲು ಬಳಕೆ ಮಾಡಲಾಗುತ್ತದೆ.

ಇದಕ್ಕೆ ಇಂತಹುದೇ ಮಣ್ಣು ಮತ್ತು ಹವಾಗುಣ ಬೇಕೆಂಬ ವಿಶಿಷ್ಟತೆ ಇಲ್ಲ. ಕಿತ್ತಳೆಯನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಇದು ಬೆಳೆದೀತು. ಶುಷ್ಕ ಮತ್ತು ಹೆಚ್ಚು ಉಷ್ಣತೆಯ ವಾತಾವರಣವಿರುವ ಪ್ರದೇಶಗಳು ಇದಕ್ಕೆ ಬಹು ಸೂಕ್ತ. ಹೆಚ್ಚು ಮಳೆ ಬಂದರೂ ಅಡ್ದಿ ಇಲ್ಲ.

ಇದರಲ್ಲಿ ಪ್ರದೇಶದಿಂದ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ವಿಧಗಳು ಕಂಡು ಬಂದರೂ ನಿಶ್ಚಿತ ಮತ್ತು ವರ್ಣಿಸಿದ ವಿಧಗಳು ಇಲ್ಲ.

ಚಕ್ಕೋತ ಮರ ಒಂದು ಸಲಕ್ಕೆ 300ಕ್ಕಿಂತ ಹೆಚ್ಚು ಹಣ್ಣುಗಳನ್ನು ನೀಡುತ್ತದೆ. ಮರ ಬೆಳೆಯುತ್ತಾ ಹೋದಂತೆ ಪ್ರತಿ ಕೊಯ್ಲಿನಲ್ಲೂ 1000ಕ್ಕಿಂತ ಅಧಿಕ ಹಣ್ಣು ಸಿಗುತ್ತದೆ

ಕಹಿ ಮಿಶ್ರಿತ ಹುಳಿಯ ರುಚಿ ಹೊಂದಿರುವ ಚಕ್ಕೋತ ಹಣ್ಣು
ಚಕ್ಕೋತ ಮರ

ಇದು ನಿಂಬೆ ಜಾತಿಯಲ್ಲಿ ಕಂಡುಬರುವ ಏಕಭ್ರೂಣೀಯ ಸಸ್ಯ. ಇದನ್ನು ಜಟಿಕಟ್ಟಿ, ಜಾಂಬೂರಿ ಮುಂತಾದ ಆಧಾರಸಸಿಗಳ ಮೇಲೆ ಕಸಿಕಟ್ಟಿ ಕಸಿಗಿಡಗಳನ್ನು ಪಡೆದುಕೊಳ್ಳಲಾಗುತ್ತದೆ. ಕಿತ್ತಳೆಯಲ್ಲಿ ವಿವರಿಸಿದಂತೆ ಗುರಾಣಿಕಸಿ ವಿಧಾನವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಇದನ್ನು ನಾಟಿ ಮಾಡುವ ಅಂತರ ಪ್ರದೇಶದಿಂದ ಪ್ರದೇಶಕ್ಕೆ ಬದಲಾದರು ಸಾಮಾನ್ಯವಾಗಿ ೫-೬ಮೀ. ಅಂತರದ ಸಾಲುಗಳಲ್ಲಿ ೫-೬ಮೀ.ಗೊಂದರಂತೆ ನಾಟಿ ಮಾಡಲಾಗುತ್ತದೆ.

ಇದು ದಕ್ಷಿಣ ಭಾರತದಲ್ಲಿ ನವೆಂಬರ್‍ನಲ್ಲಿ ಕೊಯ್ಲಿಗೆ ಬರುತ್ತದೆ. ಕಾಯಿಗಳು ಕೊಯ್ಲಿಗೆ ಬಂದಾಗ ಕಡುಹಸಿರಿನಿಂದ ತಿಳಿಹಸಿರು ಬಣ್ಣಕ್ಕೆ ತಿರುಗುತ್ತವೆ. ಚೆನ್ನಾಗಿ ಬೆಳೆದ ಪ್ರತಿಯೊಂದು ಸಸಿಯಿಂದ ಸುಮಾರು ೧೦೦-೨೦೦ ಹಣ್ಣುಗಳನ್ನು ಪಡೆಯಬಹುದು.

ರುಟೇಸೀ ಕುಟುಂಬಕ್ಕೆ ಸೇರಿದ ಈ ಹಣ್ಣು ಸಿಟ್ರಸ್ ಪ್ರಭೇದಗಳಲ್ಲಿ ಇದು ಎಲ್ಲಕ್ಕಿಂತ ದೊಡ್ಡ ಹಣ್ಣು ಎನ್ನಲಾಗುತ್ತದೆ.

ಚಕ್ಕೋತ ಒಂದು ನೈಸರ್ಗಿಕವಾದ ಸಿಟ್ರಸ್ ಹಣ್ಣು ಆದರೆ ಹೊಂದಿದ್ದು ಅವು ಪ್ರಮುಖ ಹಸಿರು ಬಣ್ಣದಲ್ಲಿರುತ್ತವೆ. ಹೂವುಗಳು ಪ್ರಕಾಶಮಾನವಾದ ಬಿಳಿ ಮತ್ತು ಐದು ದಳಗಳು ಮತ್ತು ಒಂದು ವಿಶಿಷ್ಟವಾದ ಆಹ್ಲಾದಕರ ಸುವಾಸನೆಯನ್ನು ಹೊಂದಿರುತ್ತವೆ; ಹೀಗಾಗಿ ಅವುಗಳ ಸಾರಗಳನ್ನು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಪೊಟ್ಯಾಸಿಯಮ್ ಮಟ್ಟಗಳಲ್ಲಿ ಅಧಿಕವಾಗಿರುವ ಚಕ್ಕೋತ ಸಾಮಾನ್ಯ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಸ್ನಾಯುವಿನ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಕೆಟ್ಟ ಐಆಐ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ.

ಕೇವಲ ಅರ್ಧ ಚಕ್ಕೋತ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ವಿಟಮಿನ್ ಸಿ ರಕ್ತ ಪರಿಚಲನೆಗಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ, ಬಿಳಿ ರಕ್ತಕಣಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಯಲ್ಲಿ, ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಬರುವ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ವಿಟಮಿನ್‌ ಸಿ ರಾಮಬಾಣ. ಆದ್ದರಿಂದ ಪ್ರತಿದಿನ ಚಕ್ಕೋತ ಹಣ್ಣು ತಿಂದರೆ ದೇಹಕ್ಕೆ ಬೇಕಾದ ವಿಟಮಿನ್‌ ಸಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.

ಕಹಿ ಮಿಶ್ರಿತ ಹುಳಿಯ ರುಚಿ ಹೊಂದಿರುವ ಚಕ್ಕೋತ ಹಣ್ಣು
ಚಕ್ಕೋತ ಮರ

ಈ ಹಣ್ಣನ್ನು ಊಟವಾದ ನಂತರ ಸೇವಿಸಿದರೆ ಜೀರ್ಣಕ್ರಿಯೆ ಸರಾಗವಾಗುತ್ತದೆ.

ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ.
ಚಕ್ಕೋತ ದೇಹಕ್ಕೆ ಬೇಕಾದ ನಾರುಗಳನ್ನು ಒಳಗೊಂಡಿರುತ್ತದೆ, ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆ ಸರಾಗಗೊಳಿಸಲು ಸಹಾಯ ಮಾಡಿ ಮಲಬದ್ದತೆ ನಿವಾರಣೆ ಮಾಡುತ್ತದೆ. ಅಲ್ಲದೇ ಅಜೀರ್ಣವನ್ನು ಸಹ ಶಮನ ಮಾಡುತ್ತದೆ.

ಮೂತ್ರದ ಸೋಂಕಿನ ವಿರುದ್ಧ ಹೋರಾಡುತ್ತದೆ
ಚಕ್ಕೋತ ಅಪಾರ ಪ್ರಮಾಣದ ವಿಟಮಿನ್ ಸಿ ಅನ್ನು ನೀಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದರ ಆ್ಯಂಟಿ ಆಕ್ಸಿಡೆಂಟ್ಗಳು ದೇಹದಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಮೂತ್ರದ ಸೋಂಕುಗಳನ್ನು ನಿವಾರಣೆ ಮಾಡುತ್ತದೆ.

ವಸಡಿನಲ್ಲಿ ರಕ್ತ ಅಥವಾ ಬಾಯಿ ದುರ್ವಾಸನೆ ಬೀರುತ್ತಿದ್ದರೆ ದೇಹದಲ್ಲಿ ವಿಟಮಿನ್‌ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರ ನಿವಾರಣೆಗೆ ಚಕ್ಕೋತ ಹಣ್ಣು ತಿನ್ನಿ. ಇದರಿಂದ ವಸಡು ಗಟ್ಟಿಯಾಗಿರುತ್ತದೆ.

ಚಕ್ಕೋತ ಹಣ್ಣು ತಿಂದರೆ ಹೆಚ್ಚಿನ ಫೈಬರ್‌ ದೇಹಕ್ಕೆ ಸಿಗುತ್ತದೆ. ಇದರಿಂದ ನೈಸರ್ಗಿಕ ರೀತಿಯಲ್ಲಿಯೇ ದೇಹದಲ್ಲಿರುವ ಕೊಬ್ಬು ಕರಗಿ ಹೋಗುತ್ತದೆ.

ಈ ಹಣ್ಣು ಸಾಕಷ್ಟು ಪ್ರಮಾಣದ ಆಹಾರದ ನಾರುಗಳು, ಖನಿಜಗಳಾದ ಸತು, ತಾಮ್ರ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ತುಂಬಿದ್ದು, ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚಕ್ಕೋತ ಹಣ್ಣುಗಳನ್ನು ತಿನ್ನುವುದು ಕಬ್ಬಿಣವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ಮೂಳೆಗಳು, ಕೀಲುಗಳನ್ನು ಬಲಪಡಿಸಲು, ಚರ್ಮದ ರಚನೆಯನ್ನು ಸಮೃದ್ಧಗೊಳಿಸಲು, ಸ್ನಾಯು ಸೆಳೆತವನ್ನು ಶಮನಗೊಳಿಸಲು, ಬಹಳ ಪ್ರಯೋಜನಕಾರಿಯಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಾರಿಜಾತ ಹೂವು

ಸೂರ್ಯಕಿರಣಗಳು ಮೂಡುವ ಮೊದಲೇ ಉದುರುತ್ತದೆ ಪಾರಿಜಾತ ಹೂವು

ಕಮಲ ಶಿಲೆ ದುರ್ಗಾಪರಮೇಶ್ವರಿ

ಕಮಲ ಶಿಲೆ ದುರ್ಗಾಪರಮೇಶ್ವರಿ