in

ಉಗುರಿನ ಆರೋಗ್ಯ ಕೂಡ ತುಂಬಾ ಮುಖ್ಯವಾಗಿರುತ್ತೆ

ಉಗುರಿನ ಆರೋಗ್ಯ
ಉಗುರಿನ ಆರೋಗ್ಯ

ಉಗುರಿನ ಆರೋಗ್ಯಕ್ಕೆ ಹಾಗೂ ದೇಹದ ಆರೋಗ್ಯಕ್ಕೆ ಕೂಡ ನಮ್ಮ ಆಹಾರದಲ್ಲಿ ಉತ್ತಮ ಪೋಷಕಾಂಶಗಳಿರಬೇಕಾದುದು ದೇಹದ ಇತರ ಎಲ್ಲಾ ಅಂಗಗಳ ಜೊತೆಗೇ ಉಗುರುಗಳಿಗೂ ಅಗತ್ಯವಾಗಿದೆ. ಉಗುರುಗಳು ಮತ್ತು ಮೂಳೆಗಳಿಗೆ ಕ್ಯಾಲ್ಸಿಯಂ ಅತಿ ಅಗತ್ಯವಾಗಿದ್ದು ನಮ್ಮ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳಬೇಕು.

ಆರೋಗ್ಯದಲ್ಲಿ ಏನೇ ಏರು ಪೇರು ಉಂಟಾದರೂ ಉಗುರಿನ ಮೂಲಕ ತಿಳಿದು ಬರುತ್ತದೆ. ಉಗುರಿನಲ್ಲಿ ಬಣ್ಣ ಬದಲಾಗುವುದು ಇವುಗಳೆಲ್ಲಾ ಕೆಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಿರುವಾಗ ನಿಮ್ಮ ಉಗುರು ತಪಾಸಣೆಯಿಂದ ನಿಮ್ಮ ಆರೋಗ್ಯ ಲಕ್ಷಣ ಕಂಡು ಬರುತ್ತದೆ.

ಕ್ಯಾಲ್ಸಿಯಂ ಕೊರತೆಯಿಂದಾಗಿ ಉಗುರುಗಳು ಉದ್ದಕ್ಕೆ ಸೀಳುಬಿಡುವುದು, ಒಳಗಿನಿಂದ ಟೊಳ್ಳಾಗುವುದು, ಸುಲಭವಾಗಿ ತುಂಡಾಗುವಂತಿರುವುದು ಮತ್ತು ಕೆಲವೊಮ್ಮೆ ಉಗುರುಗಳ ಅಡಿಯಲ್ಲಿ ಚಿಕ್ಕ ಮೋಡದಂತೆ ಬಿಳಿ ಚುಕ್ಕೆಗಳು ಮೂಡುವುದು ಮೊದಲಾದವು ಕ್ಯಾಲ್ಸಿಯಂ ಕೊರತೆಯನ್ನು ಬಿಂಬಿಸುತ್ತವೆ. ಈ ಪರಿಸ್ಥಿತಿಗೆ ಒಳಗಾಗದಿರಲು ಕ್ಯಾಲ್ಸಿಯಂ ಹೆಚ್ಚಿರುವ ಮೊಟ್ಟೆ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸುತ್ತಿರಬೇಕು. ಹಾಲಿನ ಕ್ಯಾಲ್ಸಿಯಂ ಅನ್ನು ದೇಹ ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಹಾಲಿನೊಂದಿಗೆ ಜೇನನ್ನು ಬೆರೆಸಿ ಕುಡಿಯುವುದನ್ನು ಮರೆಯಬಾರದು.

ಉಗುರುಗಳನ್ನು ಕಚ್ಚುವ ಅಭ್ಯಾಸದಿಂದ ದೂರವಿರಿ
ಬೆರಳು ಕಚ್ಚುವ ಅಭ್ಯಾಸ ಒಳ್ಳೆಯದಲ್ಲ. ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಉಗುರು ಕಚ್ಚುವ ಅಭ್ಯಾಸದಿಂದ ಉಗುರಿನೊಳಗೆ ಸಿಲುಕಿಕೊಂಡಿದ್ದ ಕೆಸರು ಧೂಳು ಮಣ್ಣು ನೇರವಾಗಿ ದೇಹದ ಒಳಕ್ಕೆ ಸೇರುತ್ತವೆ. ಇದು ಆರೋಗ್ಯವನ್ನು ಹದಗೆಡಿಸುತ್ತದೆ.

ಉಗುರಿನ ಆರೋಗ್ಯ ಕೂಡ ತುಂಬಾ ಮುಖ್ಯವಾಗಿರುತ್ತೆ
ಉಗುರುಗಳನ್ನು ಕಚ್ಚುವ ಅಭ್ಯಾಸ

ಹಳದಿ ಕಲೆಯನ್ನು ನಿವಾರಿಸಲು ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಂಡು ಇದರಲ್ಲಿ ಕೊಂಚ ಲಿಂಬೆರಸ ಸೇರಿಸಿ ಕಲಕಿ ಈ ನೀರಿನಲ್ಲಿ ಉಗುರುಗಳನ್ನು ಕೊಂಚಕಾಲ ಮುಳುಗಿಸಿಟ್ಟಿರಿ. ಬಳಿಕ ಸ್ವಚ್ಛ ಬಟ್ಟೆಯಿಂದ ಒರೆಸಿಕೊಂಡರೆ ಈ ಹಳದಿ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತದೆ.

ನಿಂಬೆರಸವು ಉಗುರನ್ನು ಸ್ವಚ್ಛಗೊಳಿಸಿ ಅದರ ಅಂದವನ್ನು ಹೆಚ್ಚಿಸುತ್ತದೆ. ಕಳೆಗುಂದಿದ ಉಗುರಿನ ಬಣ್ಣವನ್ನು ನೈಸರ್ಗಿಕವಾಗಿ ಹೊಳಪು ಹೆಚ್ಚುವಂತೆ ಮಾಡುತ್ತದೆ. ಅದಕ್ಕೆ ಒಂದು ಬೌಲ್‌ಗೆ ಒಂದು ಚಮಚ ಅಡುಗೆ ಸೋಡಾ, ಒಂದು ಕಪ್ ನೀರು ಹಾಗೂ ಒಂದು ಟೀ ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣದಲ್ಲಿ ಉಗುರುಗಳನ್ನು ಅದ್ದಿಟ್ಟುಕೊಳ್ಳಬೇಕು.

ಉಗುರು ಕತ್ತರಿಸಿಕೊಳ್ಳುವ ಮೊದಲು ಸಾಕಷ್ಟು ತೇವಗೊಂಡಿದ್ದು ಸುಲಭವಾಗಿ ಕತ್ತರಿಸಲು ಸಾಧ್ಯವಾಗುವಂತಿರಬೇಕು. ಪೂರ್ಣವಾಗಿ ಒಣಗಿರುವ ಉಗುರನ್ನು ಕತ್ತರಿಸಿಕೊಂಡಾಗ ಇದು ಗಾಜು ಮುರಿದಂತೆ ತುಂಡಾಗುವ ಜೊತೆಗೇ ನೀವು ಅಂದುಕೊಂಡ ರೇಖೆಯಲ್ಲಿ ಕತ್ತರಿಸದೇ ಬೇರೆಯೇ ರೇಖೆಯಲ್ಲಿ ಕತ್ತರಿಸಲ್ಪಡಬಹುದು.

ಬೇಗನೆ ತುಂಡಾಗುವ, ಮೃದುವಾದ ಉಗುರಾಗಿದ್ದರೆ ನೀವು ಬೆಳ್ಳುಳ್ಳಿ ಸಹಾಯದಿಂದ ಉಗುರನ್ನು ದೃಢವಾಗಿಸಿಕೊಳ್ಳಬಹುದು. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿ ಉಗುರಿನ ಮೇಲೆ ಚೆನ್ನಾಗಿ ಉಜ್ಜಿ. ಸಮಯವಿದ್ದರೆ ಬೆಳ್ಳುಳ್ಳಿ ರಸ ತಯಾರಿಸಿ, ಉಗುರನ್ನು ಆ ರಸದಲ್ಲಿ ಅದ್ದುವುದರಿಂದಲೂ ಉಗುರು ಚೆನ್ನಾಗಿ ಬೆಳೆಯುತ್ತದೆ. ಅಲ್ಲದೆ ಇದು ಚರ್ಮದ ಒಳಗಿನಿಂದಲೇ ಉಗುರು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ.

ಬೆರಳುಗಳ ತುದಿಭಾಗದ ಆರೈಕೆಯ ಕೊರತೆಯಿಂದಲೂ ಉಗುರುಗಳ ತುದಿಭಾಗ ಅಗತ್ಯಕ್ಕೂ ಹೆಚ್ಚು ಕತ್ತರಿಸಲ್ಪಡಲು ಕಾರಣವಾಗಬಹುದು. ಉಗುರುಗಳ ಆರೈಕೆಯ ಕೊರತೆಯಲ್ಲಿ ಪ್ರಮುಖವಾಗಿ ಉಗುರಿನ ತುದಿಭಾಗದ ಅಡಿಯಲ್ಲಿರುವ ಕೊಳೆಯನ್ನು ಆಗಾಗ ನಿವಾರಿಸದೇ ಇರುವುದು.

ಉಗುರಿನ ಆರೋಗ್ಯ ಕೂಡ ತುಂಬಾ ಮುಖ್ಯವಾಗಿರುತ್ತೆ
ಬೆರಳುಗಳ ತುದಿಭಾಗದ ಆರೈಕೆ

ಆಲಿವ್‌ ಎಣ್ಣೆಯಲ್ಲಿ ಆದ್ರತೆಯ ಅಂಶ ಹೆಚ್ಚಿರುವ ಕಾರಣ ಇದು ಉಗುರಿನ ಹೊರಪೊರೆಗಳಿಗೆ ಪೋಷಕಾಂಶ ಒದಗಿಸುತ್ತವೆ. ಅಲ್ಲದೆ ಉಗುರಿನ ಹೊಳಪನ್ನು ಹೆಚ್ಚಿಸುತ್ತದೆ. ಉ‌ಗುರಿನ ಆರೋಗ್ಯ ಹೆಚ್ಚಿಸಲು ಆಲಿವ್ ಎಣ್ಣೆ ಬಳಸುವ ಮೊದಲು ಕೆಲ ಮಾರ್ಗಗಳನ್ನು ಅನುಸರಿಸಬೇಕು. ಮೊದಲು ಉಗುರುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಮಾಡಿ ಒರೆಸಿಕೊಳ್ಳಬೇಕು. ನಂತರ ಬಿಸಿ ಮಾಡಿರುವ ಆಲಿವ್‌ ಎಣ್ಣೆಯಲ್ಲಿ ಉಗುರುಗಳನ್ನು ಅದ್ದಬೇಕು. ಕನಿಷ್ಠ 15 ನಿಮಿಷಗಳ ಕಾಲ ಹಾಗೇ ಇಡಿ. ನಂತರ ಸ್ವಚ್ಛವಾದ ಟವೆಲ್‌ನಿಂದ ಚೆನ್ನಾಗಿ ಒರೆಸಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಒಂದು ವೇಳೆ ಉಗುರುಗಳ ಅಡಿಭಾಗದಲ್ಲಿ ಉರಿ ಇದ್ದರೆ ಹೈಡ್ರೋಜೆನ್ ಪೆರಾಕ್ಸೈಡ್ ದ್ರಾವಣ ಬಳಸಿ ಸ್ವಚ್ಛಗೊಳಿಸುವುದು ಅಗತ್ಯ. ವಿಶೇಷವಾಗಿ ಎಷ್ಟೋ ದಿನಗಳವರೆಗೆ ಉಗುರುಗಳ ಅಡಿಭಾಗವನ್ನು ಸ್ವಚ್ಛಗೊಳಿಸದೇ ಇಲ್ಲಿ ದಪ್ಪನಾಗಿ ಕೊಳೆ ತುಂಬಿಕೊಂಡಿದ್ದು ಉಗುರಿನ ಮೇಲ್ಭಾಗದ ತುದಿ ಸ್ಪಷ್ಟವಾಗಿ ಕಪ್ಪಗೆ ಕಾಣುತ್ತಿದ್ದರೆ ಈ ದ್ರಾವಣ ಈ ಕೊಳೆಯನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ಬರುವಂತೆ ಮಾಡುತ್ತದೆ.

ಉಗುರು ಬಿಳುಚಿಕೊಂಡಿದ್ದರೆ, ರಕ್ತ ಕಡಿಮೆ ಇದೆ ಎಂದರ್ಥ. ಇವರು ಹೃದಯ ಬಡಿತವೂ ಕಡಿಮೆ ಇರುತ್ತದೆ. ಹಿಮೊಗ್ಲೋಬಿನ್ ಸಹ ಹೆಚ್ಚಾಗುವಂತೆ ನೋಡಿಕೊಳ್ಳುವುದು ಒಳ್ಳೆಯದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಂಡೆಕಾಯಿ ಆರೋಗ್ಯ ಲಾಭ

ಬೆಂಡೆಕಾಯಿ ಕೃಷಿ ಮತ್ತು ಆರೋಗ್ಯ ಲಾಭ

ದೆಹಲಿಯ ಕೆಂಪು ಕೋಟೆ

ದೆಹಲಿಯ ಕೆಂಪು ಕೋಟೆ