in ,

ಆಹಾ ಪುದೀನಾ ಘಮ ಏಷ್ಟು ಚಂದ ಅಲ್ವಾ?

ಪುದೀನಾ
ಪುದೀನಾ

ನೀರಿನ ಆಶ್ರಯವಿರುವ ಕಡೆ ಪುದೀನ ಸೊಂಪಾಗಿ ಬೆಳೆಯುತ್ತದೆ. ಆದುದರಿಂದ ಇದನ್ನು ಲ್ಯಾಟಿನ್ ಭಾಷೆಯಲ್ಲಿ ‘ಮೆಂತ’ ಅಂದರೆ ‘ಜಲದೇವಿ’ ಎಂದೇ ಕರೆಯುತ್ತಾರೆ. ಈ ಸೊಪ್ಪನ್ನು ಸೂಪ್, ಸಾಸ್, ಪಾನೀಯಗಳು ಮತ್ತು ಚಟ್ನಿಗಳಲ್ಲಿ ಯಥೇಚ್ಛವಾಗಿ ಉಪಯೋಗಿಸಲಾಗುತ್ತದೆ. ಇದರಿಂದ ಪಡೆದ ಪೆಪ್ಪರ್‍ಮಿಂಟ್ ಎಂಬ ಪದಾರ್ಥವನ್ನು ಅನೇಕ ಕೈಗಾರಿಕಾ ಮತ್ತು ವೈದ್ಯಕೀಯ ರಾಸಾಯನಿಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಪುದಿನಾವು ಉಸಿರಿನ ತಾಜಾತನಕ್ಕೆ ಕಾರಣವಾಗಬಲ್ಲ ಒಂದು ಸೊಪ್ಪು ಎಂಬುದಷ್ಟೇ ಗೊತ್ತು. ಆದರೆ, ಪುದಿನಾದ ಪ್ರಯೋಜನಗಳು ಅಷ್ಟಕ್ಕೇ ಸೀಮಿತವಾದುದಲ್ಲ. ಪುದಿನಾ ಸೊಪ್ಪಿನ ಕುರಿತು ಇನ್ನೂ ಅನೇಕ ಪ್ರಯೋಜನಗಳಿವೆ.

ಇನ್ನು ಪುದೀನಾ, ಗೃಹಿಣಿಯರು ಅಡುಗೆ ಮನೆಯಲ್ಲಿ ದಿನನಿತ್ಯ ಬಳಕೆ ಮಾಡುವ ಪದಾರ್ಥವಾಗಿದ್ದು ಇದು ಹಲವು ಔಷಧಿಗಳ ಆಗರ. ಇದು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ರೋಗ ನಿರೋಧಕಗಳಿಂದ ತುಂಬಿದ ಸೂಕ್ಷ್ಮ ಪೋಷಕಾಂಶಗಳಾಗಿವೆ.

ಪುದೀನಾವು ಅನೇಕ ಶಾರೀರಿಕ ಏರುಪೇರುಗಳನ್ನು ತಡೆಗಟ್ಟಬಲ್ಲದು ಹಾಗೂ ಜೊತೆಗೆ ಪುದಿನಾವು ಕೆಲವೊಂದು ಆರೋಗ್ಯಕಾರಿ ಸಮಸ್ಯೆಗಳ ಚಿಕಿತ್ಸೆಯಲ್ಲಿಯೂ ಸಹ ಪ್ರಯೋಜನಕಾರಿಯಾಗಬಲ್ಲದು.

ಆಹಾ ಪುದೀನಾ ಘಮ ಏಷ್ಟು ಚಂದ ಅಲ್ವಾ?
ಪುದೀನಾ ಕಷಾಯ

ಇದರ ಕಷಾಯವನ್ನು ದಿನಕ್ಕೆ ೩ ಬಾರಿ ಸೇವಿಸಿದರೆ ಕೆಮ್ಮು ಮತ್ತು ನೆಗಡಿ ಗುಣವಾಗುತ್ತದೆ.
ರಕ್ತಸ್ರಾವವಾಗುವ ಮೊದಲು ೪ ದಿನ ಇದರ ಕಷಾಯ ಬಳಸಿದರೆ ಮುಟ್ಟಾದಾಗ ಉಂಟಾಗುವ ನೋವುಗಳು ಕಡಿಮೆಯಾಗುತ್ತವೆ.

ಗಂಟಲು ತುರಿಕೆ ನಿವಾರಣೆಯ ಚಾಕಲೇಟುಗಳಲ್ಲೂ, ಹಲ್ಲುಜ್ಜುವ ಪೇಸ್ಟುಗಳಲ್ಲೂ ಇದು ಬಳಕೆಯಾಗುತ್ತದೆ.
ಇದನ್ನು ಅನೇಕ ತಿಂಡಿ ತಿನಿಸುಗಳಲ್ಲಿ ಬಳಸುತ್ತಾರೆ.
ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಪುದೀನವು ನೆನಪುಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಅರಿವಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಇದು ಜಾಗರೂಕತೆಯನ್ನು ಸುಧಾರಿಸುತ್ತದೆ. ನಮ್ಮ ದಿನಚರಿಯನ್ನು ಪುದೀನ ಎಲೆ ತಿನ್ನುವ ಮೂಲಕ ಚುರುಕಾಗಿ ಆರಂಭಿಸಬಹುದು.

ಪುದೀನವನ್ನು ಚಹಾಗೆ ಹಾಕಿ ಕುಡಿಯುವುದು, ಚಟ್ನಿ ಮಾಡುವುದು, ಸಲಾಡ್, ಹಣ್ಣು, ಮೊಸರಿನೊಂದಿಗೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಪುದೀನವನ್ನು ಬಳಸಿ ಹಲವು ರೀತಿಯಲ್ಲಿ ಚಟ್ನಿ ಮಾಡುತ್ತಾರೆ. ಪುದೀನ ಎಲೆಗಳನ್ನು ಹಲವು ಪದಾರ್ಥಗಳಲ್ಲಿ ಬಳಸುತ್ತಾರೆ.

ಎಲೆಗಳ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ವಾಂತಿ ನಿಲ್ಲುತ್ತದೆ.
ನೋವು ನಿವಾರಕ ಔಷಧಿಗಳಲ್ಲಿ ಈ ತೈಲವನ್ನು ಬಳಸಲಾಗುತ್ತಿದೆ.

ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಪುದೀನದಲ್ಲಿ ಸಮೃದ್ಧವಾಗಿರುವುದರಿಂದ ಇದು ಜೀರ್ಣಕಾರಿ ಕಿಣ್ವಗಳಿಗೆ ಆಹಾರವನ್ನು ಸಂಸ್ಕರಿಸಲು ಸಹಾಯ ಮಾಡುತ್ತದೆ. ಪುದೀನದಲ್ಲಿನ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಲ್ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಅದು ಹೊಟ್ಟೆಯ ಸೆಳೆತವನ್ನು ಶಮನಗೊಳಿಸುತ್ತದೆ, ಆಮ್ಲೀಯತೆ ಮತ್ತು ವಾಯುವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಕ್ಕಳಿಗೆ ಅತಿಸಾರ ಭೇದಿ, ವಾಂತಿ ಇದ್ದಾಗ 1 ಚಮಚ ಪುದೀನಾ ರಸ ಬೆಳಗ್ಗೆ ಮತ್ತು ಸಂಜೆ ಕುಡಿಸಿದರೆ ತಕ್ಷಣ ನಿವಾರಣೆಯಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಹಿರಿಯರಿಗೂ ಶೀಘ್ರ ಗುಣವಾಗುತ್ತದೆ.

ಆಹಾ ಪುದೀನಾ ಘಮ ಏಷ್ಟು ಚಂದ ಅಲ್ವಾ?
ತಲೆನೋವು

ಪುದೀನಾ ಎಲೆಗಳನ್ನು ಜಜ್ಜಿ ಮೂಸುತ್ತಿದ್ದರೆ, ತಲೆನೋವು, ತಲೆ ಸುತ್ತುವಿಕೆ ಶಮನವಾಗುತ್ತದೆ. ಪುದೀನಾ ಕಷಾಯಕ್ಕೆ ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಪುದೀನ ಎಲೆಯನ್ನು ಜಗಿಯುವುದರಿಂದ ಬಾಯಿ ಸ್ವಚ್ಛವಾಗುವುದಲ್ಲದೆ ವಾಸನೆ ಬರುವುದನ್ನು ಕಡಿಮೆ ಮಾಡಬಹುದು, ಹಲ್ಲಿಗೆ ಸಹ ಪ್ರಯೋಜನಕಾರಿ. ಪೆಪ್ಪರ್ ಮಿಂಟ್ ತೈಲದ ಮೂಲಕ ಬಾಯಿ ತೊಳೆದು ಬ್ಯಾಕ್ಟೀರಿಯಾವನ್ನು ಕೊಲ್ಲಬಹುದು.

ವಾಕರಿಕೆಯನ್ನು ದೂರಗೊಳಿಸಲು ಪುದಿನಾ ಎಲೆಗಳ ವಿಶಿಷ್ಟ ಪರಿಮಳವೇ ಸಾಕು. ನಿಮ್ಮ ಮನೆಯಲ್ಲಿ ಪುದಿನಾದ ಎಣ್ಣೆಯಿದ್ದಲ್ಲಿ, ವಾಕರಿಕೆಯನ್ನು ತಡೆಗಟ್ಟಲು ಅದನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಬಹುದು.

ಪುದೀನಾ ಎಲೆಗಳ ರಸಕ್ಕೆ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ, ನಿಂಬೆಹಣ್ಣಿನ ರಸ ಕಲಸಿ ಸೇವಿಸಿದರೆ ಆಯಾಸ, ನಿಶ್ಯಕ್ತಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಿ ಮನಸ್ಸಿಗೆ ಉಲ್ಲಾಸ ಉಂಟುಮಾಡುತ್ತೆ.

ಹುಳುಕು ಹಲ್ಲಿನ ದುರ್ವಾಸನೆ ತಡೆಯುತ್ತದೆ.
ಹಲ್ಲುಗಳ ಒಸಡನ್ನು ಬಲಪಡಿಸಿ ದಂತರಕ್ಷಣ ನೀಡುತ್ತದೆ.
ಹೊಟ್ಟೆಯ ಜಂತು ಹುಳುಗಳನ್ನು ತಡೆದು, ಮೂತ್ರವನ್ನು ಹೆಚ್ಚಿಸುತ್ತದೆ ಮತ್ತು ವಿಷದ್ರವ್ಯಗಳನ್ನು ಹೊರಹಾಕಲು ಸಹಾಕರಿಸುತ್ತದೆ.

ಆಹಾ ಪುದೀನಾ ಘಮ ಏಷ್ಟು ಚಂದ ಅಲ್ವಾ?
ಪುದೀನ

ಜೀರ್ಣಾಂಗ ವ್ಯವಸ್ಥೆಯನ್ನು ಉದ್ದೀಪನಗೊಳಿಸುವ ಸಾಮರ್ಥ್ಯವಿದೆಯಾದ್ದರಿಂದ, ಶರೀರಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಶರೀರವು ಕೊಬ್ಬಿನಾಂಶವನ್ನು ಪರಿಣಾಮಕಾರಿಯಾಗಿ ಚಯಾಪಚಯಕ್ರಿಯೆಗೊಳಪಡಿಸಲು ಸಮರ್ಥವಾದಾಗ,ಸುಲಭವಾಗಿ ದೇಹ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಪುದೀನ ನಿಯಮಿತ ಸೇವನೆಯು ಹೃದಯದ ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಮೆಥನಾಲ್ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕೆಲಸ ಮಾಡುತ್ತದೆ. ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯ ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಇದು ಉತ್ತಮವಾಗಿ ಉಸಿರಾಡಲು ಅನುವು ಮಾಡಿಕೊಡಲು ಮೂಗಿನಲ್ಲಿ ಪೊರೆಗಳನ್ನು ಕುಗ್ಗಿಸುತ್ತದೆ. ಹಾಗೆಂದು ಪುದೀನ ರಸವನ್ನು ಅತಿಯಾಗಿ ಮೂಗಿನಿಂದ ಸೇವಿಸಬಾರದು.

ಗರ್ಭಿಣಿಯರ ವಾಂತಿ ನಿವಾರಣೆ ಮಾಡುತ್ತದೆ.
ಊಟವಾದ ನಂತರ ಈ ಎಲೆಗಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಹುಳುಕು ಬಾರದಂತೆ ತಡೆಯುತ್ತದೆ.

ಪುದೀನದಲ್ಲಿರುವ ಮೆಂಥಾಲ್ ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಹಣೆಯ ಮೇಲೆ ಪುದೀನ ರಸವನ್ನು ಹಚ್ಚುವುದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತದೆ. ಪುದೀನ ಮುಲಾಮುಗಳು ಮತ್ತು ತೈಲಗಳು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವುದು: ಪರಿಮಳವನ್ನು ಅರೋಮಾಥೆರಪಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಪುದೀನವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಅದು ಮೊಡವೆ ಮತ್ತು ಗುಳ್ಳೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಮೊಡವೆಗಳನ್ನು ತಡೆಯುತ್ತದೆ. ಇದು ಪರಿಣಾಮಕಾರಿ ಚರ್ಮದ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ತಿನ್ನುವುದರಿಂದ ಹಲವು ಪ್ರಯೋಜನ ಇದೆ

ಥೈರಾಯ್ಡ್ ಎಂದರೇನು?

ಥೈರಾಯ್ಡ್ ಎಂದರೇನು? ಇದಕ್ಕೆ ಮನೆಯಲ್ಲಿನ ಪರಿಹಾರ ಏನು?