in

ಥೈರಾಯ್ಡ್ ಎಂದರೇನು? ಇದಕ್ಕೆ ಮನೆಯಲ್ಲಿನ ಪರಿಹಾರ ಏನು?

ಥೈರಾಯ್ಡ್ ಎಂದರೇನು?
ಥೈರಾಯ್ಡ್ ಎಂದರೇನು?

ಥೈರಾಯ್ಡ್ ಗಂಟಲಿನಲ್ಲಿ ಕಂಡುಬರುವ ಒಂದು ರೀತಿಯ ಗ್ರಂಥಿಯಾಗಿದೆ. ಚಿಟ್ಟೆಯ ಆಕಾರದಲ್ಲಿರುವ ಇದು ಶ್ವಾಸನಾಳವನ್ನು ಅಪ್ಪಿ ಹಿಡಿದಂತೆ ಕಾಣಿಸುತ್ತದೆ. ಈ ಗ್ರಂಥಿಯು ದೇಹದ ಚಯಾಪಚಯವನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಸಮಸ್ಯೆಯಿರುವ ಜನರಲ್ಲಿ ಈ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ಕಾರಣದಿಂದಾಗಿ ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗುತ್ತದೆ ಅಥವಾ ಹೆಚ್ಚಾಗುತ್ತದೆ.

ಆಧುನಿಕ ಜೀವನ ಶೈಲಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಗಳಲ್ಲಿ ಇದು ಕೂಡ ಒಂದು ಆಗಿದ್ದು, ಆದರೆ ಇದರ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಮುಖ್ಯವಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವ ಚಿಕಿತ್ಸೆ ಬಗ್ಗೆ ತಿಳಿದಿಲ್ಲ. ಥೈರಾಯ್ಡ್ ಸಮಸ್ಯೆಯನ್ನು ಹೋಗಲಾಡಿಸಲು ಮನೆಮದ್ದನ್ನೇ ಅವಲಂಭಿಸಬಹುದು.

ಅಗಸೆ ಬೀಜವನ್ನು ತೆಗೆದುಕೊಂಡು ಮೊದಲು ಸ್ವಲ್ಪ ಫ್ರೈ ಮಾಡಿಕೊಳ್ಳಿ ನಂತರ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ ಒಂದು ಲೋಟ ಬೆಚ್ಚಗಿನ ನೀರಿಗೆ ಈ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ.

ಥೈರಾಯ್ಡ್ ಗ್ರಂಥಿಯ ಸಾಮಾನ್ಯ ತೊಂದರೆಗಳಿಗೆ ಕೆಲವು ಸುಲಭ ಮನೆಮದ್ದುಗಳೇ ಸಾಕಾಗುತ್ತವೆ. ಆದರೆ, ಇವೇ ಪೂರ್ಣ ಪ್ರಮಾಣದ ಔಷಧಿಗಳಲ್ಲ, ಚಿಕಿತ್ಸೆ ಏನಿದ್ದರೂ ವೈದ್ಯರ ಸಲಹೆಯಂತೆಯೇ ಆಗಬೇಕು. ಉಳಿದಂತೆ ಈ ಕೆಳಗಿನ ಆಹಾರಗಳು ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನು ಆದಷ್ಟೂ ಮಟ್ಟಿಗೆ ಉತ್ತಮಗೊಳಿಸುತ್ತವೆ.

ಥೈರಾಯ್ಡ್ ಎಂದರೇನು? ಇದಕ್ಕೆ ಮನೆಯಲ್ಲಿನ ಪರಿಹಾರ ಏನು?
ತುಳಸಿ

ತುಳಸಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಥೈರಾಯ್ಡ್ ಅನ್ನು ನಿಯಂತ್ರಿಸಲು ತುಳಸಿ ಕೂಡ ಒಂದು ಉತ್ತಮ ಮನೆಮದ್ದು. ಈ ಕಾಯಿಲೆಗೆ, ಎರಡು ಟೀ ಚಮಚ ತುಳಸಿಯನ್ನು ಅರ್ಧ ಟೀಸ್ಪೂನ್ ಅಲೋವೆರಾ ಜ್ಯೂಸ್ ನೊಂದಿಗೆ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ರೋಗವನ್ನು ನಿಯಂತ್ರಿಸಬಹುದು.

ತೂಕ ಕಡಿಮೆ ಮಾಡಲು ಬೆಳಗ್ಗೆ ಖಾಲಿ ಹೊಟ್ಟೆ ಬೆಳ್ಳುಳ್ಳಿ ಸೇವನೆ ಮಾಡಿ. ಬೇಕಾದರೆ ಇದನ್ನು ನೀವು ವೆಜಿಟೆಬಲ್ ಸೂಪ್ ನಲ್ಲಿ ಬೆರೆಸಿ ಕೂಡ ಸೇವಿಸಬಹುದು. ಈ ಸೂಪ್ ಅನ್ನು ಊಟಕ್ಕೂ ಮೊದಲು ಕೂಡ ಸೇವಿಸಬಹುದು.

ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಸೋರೆಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ ಬಳಿಕ ಅರ್ಧ ಗಂಟೆಯವರೆಗೆ ಏನನ್ನೂ ತಿನ್ನದಿರಿ.

ಹಾಲು, ಚೀಸ್, ಮೊಸರು ಮೊದಲಾದ ಡೈರಿ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದ ಅಯೋಡಿನ್ ಇದೆ. ಇದು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಅಗತ್ಯವಾಗಿ ಬೇಕಾಗಿರುವ ಲವಣವಾಗಿದೆ. ನಿತ್ಯವೂ ಕೊಂಚವಾಗಿ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಹದಲ್ಲಿ ವಿಟಮಿನ್ ಮಟ್ಟಗಳು ಅಧಿಕಗೊಳ್ಳುತ್ತವೆ, ಇವೂ ಥೈರಾಯ್ಡ್ ತೊಂದರೆಗಳನ್ನು ಸರಿಪಡಿಸಲು ನೆರವಾಗುತ್ತವೆ.

ಬಾದಾಮಿಗಳಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಥೈರಾಯ್ಡ್ ತೊಂದರೆಗೆ ಹೆಚ್ಚಿನ ನೆರವು ಒದಗಿಸುತ್ತವೆ. ಇದರಲಿರುವ ಪ್ರೋಟೀನ್, ನಾರಿನ ಅಂಶ ಮತ್ತು ಖನಿಜಗಳು ಮತ್ತು ವಿಶೇಷವಾಗಿ ಸೆಲೆನಿಯಂ ಎಂಬ ಧಾತು ಥೈರಾಯ್ಡ್ ಗ್ರಂಥಿಗೆ ಅತಿ ಉತ್ತಮವಾಗಿದೆ. ಅಲ್ಲದೇ ಬಾದಾಮಿಯಲ್ಲಿ ಮೆಗ್ನೀಶಿಯಂ ಸಹಾ ಹೆಚ್ಚೇ ಇದ್ದು ಹೈಪೋ ಥೈರಾಯ್ಡ್ ತೊಂದರೆ ಇರುವ ವ್ಯಕ್ತಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

ಜಾಕ್‌ಫ್ರೂಟ್‌ನಲ್ಲಿ ಕಂಡುಬರುವ ಕಾಪರ್ ಅಂಶವು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಥೈರಾಯ್ಡ್‌ಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ಹಾರ್ಮೋನುಗಳನ್ನು ಸೃಷ್ಟಿಸಲು ಮತ್ತು ಹೀರಿಕೊಳ್ಳಲು ಸಹ ಕೆಲಸ ಮಾಡುತ್ತದೆ. ಹೀಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಹಲಸಿನ ಹಣ್ಣು ಸೇವಿಸುವುದು ಉತ್ತಮ.

ನಾನ್ ವೆಜ್ ತಿನ್ನಲು ಇಷ್ಟಪಡುವ ಥೈರಾಯ್ಡ್ ರೋಗಿಗಳು ತಮ್ಮ ಆಹಾರದಲ್ಲಿ ಮೀನುಗಳನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಒಮೆಗಾ -3 ಕೊಬ್ಬಿನಾಮ್ಲಗಳು ಕಡಲ ಮೀನುಗಳಲ್ಲಿ ಮತ್ತು ಸೀಗಡಿಗಳಲ್ಲಿ ಕಂಡುಬರುತ್ತವೆ, ಇದು ಥೈರಾಯ್ಡ್‌ಗೆ ಪ್ರಯೋಜನಕಾರಿಯಾಗಬಹುದು.

ಥೈರಾಯ್ಡ್ ಎಂದರೇನು? ಇದಕ್ಕೆ ಮನೆಯಲ್ಲಿನ ಪರಿಹಾರ ಏನು?
ಶುಂಠಿ

ಥೈರಾಯ್ಡ್ ಸಮಸ್ಯೆಗಳಲ್ಲಿ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಹೇರಳವಾಗಿ ಇರುತ್ತವೆ. ಇದು ಥೈರಾಯ್ಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಶುಂಠಿಯಲ್ಲಿ ಉರಿಯೂತದ ಅಂಶಗಳು ಇದ್ದು ಅದು ಥೈರಾಯ್ಡ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಸಮಸ್ಯೆಯನ್ನು ಬಿಗಡಾಯಿಸದಂತೆ ನಿಯಂತ್ರಣದಲ್ಲಿರಿಸುತ್ತವೆ.

ಆಹಾರದಲ್ಲಿ ಅಯೋಡಿನ್ ಅನ್ನು ಸೇರಿಸುವ ಮೂಲಕ ಥೈರಾಯ್ಡ್ ಕಾರ್ಯವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಸಮುದ್ರ ಆಹಾರಗಳು, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ತಿನ್ನಲು ಮರೆಯದಿರಿ.
ಸೋರೆಕಾಯಿ ರಸ: ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ.

ನಿತ್ಯವೂ ಸಾಕಷ್ಟು ವ್ಯಾಯಾಮ ಮಾಡಲೇಬೇಕು. ಈ ಮೂಲಕ ರಸದೂತಗಳ ಸಮತೋಲನ ಮತ್ತು ದೇಹದ ತೂಕದ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಥೈರಾಯ್ಡ್ ತೊಂದರೆಗೆ ಪಡೆಯುತ್ತಿರುವ ಚಿಕಿತ್ಸೆಯೂ ಹೆಚ್ಚು ಫಲಕಾರಿಯಾಗುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ಮಧ್ಯಮ ಸಂಕಲೆಯ ಕೊಬ್ಬಿನ ಆಮ್ಲಗಳಿವೆ, ಇವು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಗೆ ಅತಿ ಹೆಚ್ಚಿನ ನೆರವು ನೀಡುತ್ತವೆ. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡದೇ ಹಾಗೇ ಸೇವಿಸಿದಾಗ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದು, ದೇಹದ ತಾಪಮಾನ ನಿಯಂತ್ರಣದಲ್ಲಿರುವುದು ಹಾಗೂ ತೂಕ ಇಳಿಕೆಯ ಪ್ರಯತ್ನಕ್ಕೆ ಹೆಚ್ಚಿನ ಫಲ ದೊರಕುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು.

ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್ಸ್ ಗುಣಲಕ್ಷಣಗಳು ಕಂಡುಬರುತ್ತವೆ. ಹಣ್ಣುಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದರ ಮೂಲಕ ನೀವು ಅನೇಕ ರೋಗಗಳನ್ನು ಕಂಟ್ರೋಲ್ ಮಾಡಬಹುದು. ಥೈರಾಯ್ಡ್ ರೋಗಿಗಳು ತಮ್ಮ ಆಹಾರದಲ್ಲಿ ಹೆಚ್ಚಿನ ಹಣ್ಣುಗಳನ್ನು ಸೇವಿಸುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು.

ಒಂದು ಲೋಟ ನೀರನ್ನು ಒಲೆಯ ಮೇಲೆ ಹಿಟ್ಟು ಚೆನ್ನಾಗಿ ಕುದಿಸಬೇಕು ನಂತರ ಅದಕ್ಕೆ ಧನಿಯಾ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಒಂದು ಲೋಟಕ್ಕೆ ಶೋಧಿಸಿ ಕೊಳ್ಳಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಥೈರಾಯಿಡ್ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ.

ಧನ್ಯವಾದಗಳು.


What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪುದೀನಾ

ಆಹಾ ಪುದೀನಾ ಘಮ ಏಷ್ಟು ಚಂದ ಅಲ್ವಾ?

ಜೂನ್ 11 ಭಯಂಕರವಾದ ಶನಿವಾರ ಈ ಒಂಬತ್ತು ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಹಣದ ಹೊಳೆ ಹರಿಯುತ್ತದೆ.

ಜೂನ್ 11 ಭಯಂಕರವಾದ ಶನಿವಾರ ಈ ಒಂಬತ್ತು ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಹಣದ ಹೊಳೆ ಹರಿಯುತ್ತದೆ.