in

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್
ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಫೇಸ್ ಪ್ಯಾಕ್, ಫೇಸ್ ಮಾಸ್ಕ್ ಗಳಂತೆ ಫೇಸ್ ಸ್ಕ್ರಬ್ ಕೂಡ ಒಂದು. ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸಿ ಫೇಸ್ ಸ್ಕ್ರಬ್ ತಯಾರು ಮಾಡಿಕೊಂಡು ಮುಖದ ಮೇಲಿನ ಸಾಕಷ್ಟು ಬೇಡವಾದ ಅಂಶಗಳನ್ನು ನಿವಾರಣೆ ಮಾಡಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಮುಖದ ಸೌಂದರ್ಯಕ್ಕೆ ಮನೆ ಮದ್ದುಗಳು ಏನಿದೆ ಎಂಬುದನ್ನು ಅನೇಕ ಬರವಣಿಗೆಯಲ್ಲಿ ತಿಳಿಸಲಾಗಿದೆ. ಇಲ್ಲಿ ಫೇಸ್ ಸ್ಕ್ರಬ್ಬರ್ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಅನೇಕ ಫೇಸ್ ಸ್ಕ್ರಬ್ಬರ್ ಗಳು ಸಿಗುತ್ತವೆ. ಫೇಸ್ ಸ್ಕ್ರಬ್ಬರ್ ಉಪಯೋಗಿಸುವುದರಿಂದ ಚರ್ಮದ ಒಳಗಿನ ಪದರದಲ್ಲಿ ಕುಳಿತಿರುವಂತಹ ಕಪ್ಪು ಕಲೆಗಳು ನಿವಾರಣೆಯಾಗುವ ಸಾಧ್ಯತೆಗಳು ಇವೆ. ಹಾಗಾಗಿ ನಮ್ಮ ಮನೆಯಲ್ಲಿಯೇ ಇರುವ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ, ಸುಲಭ ಫೇಸ್ ಸ್ಕ್ರಬ್ಬರ್ ಗಳನ್ನು ತಯಾರಿಸಿ ಉಪಯೋಗಿಸಬಹುದು.

ರಾಸಾಯನಿಕ ಕ್ರೀಮ್ ಗಳನ್ನು ಬಳಸಿ ಬೇಸತ್ತು ಹೋಗಿರುವವರು ಕೆಲವೊಂದು ಮನೆಮದ್ದುಗಳ ಉಪಯೋಗ ಪಡೆದು ಮನೆಯಲ್ಲಿ ನೀವೇ ಸ್ವತಃ ಫೇಸ್ ಸ್ಕ್ರಬ್ ತಯಾರಿಸಿಕೊಂಡು ಬಳಕೆ ಮಾಡಿ ನೋಡಿ.

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್

ನೈಸರ್ಗಿಕವಾಗಿ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಹಲವು ಮಾರ್ಗಗಳಿವೆ. ಕಾಫಿ ಪುಡಿ, ಸಕ್ಕರೆ, ಉಪ್ಪು, ದಾಲ್ಚಿನ್ನಿ, ಮತ್ತು ಓಟ್ಸ್ ಮನೆಯಲ್ಲಿ ತಯಾರಿಸಿದ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್‌ನಲ್ಲಿ ಬಳಸಲು ಇವುಗಳು ಕೆಲವು ಅತ್ಯುತ್ತಮ ಪದಾರ್ಥಗಳಲ್ಲಿ ಒಂದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಕ್ಕರೆಯ ಸ್ಕ್ರಬ್ ಹೆಚ್ಚು ಉಪಯೋಗಕಾರಿ ಎಂದು ಬಹಳಷ್ಟು ಜನರು ಹೇಳಿದ್ದಾರೆ. ಇದು ಚರ್ಮ ಸುಕ್ಕಾಗುವುದನ್ನ ತಡೆಯುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಹೊಸ, ಆರೋಗ್ಯಕರ ಚರ್ಮದ ಬೆಳವಣಿಗೆಗೆ ಸಹಕಾರಿ. ಫೇಶಿಯಲ್ ಸ್ಕ್ರಬ್ ಅನ್ನು ಆಯ್ಕೆ ಮಾಡುವಾಗ, ಮೈಬಣ್ಣದ ಪ್ರಕಾರಕ್ಕೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವ ಸ್ಕ್ರಬ್ ಆಯ್ಕೆ ಮಾಡಿ.

ಸ್ಕ್ರಬ್ ತಯಾರಿಕೆಯಲ್ಲಿ ಗ್ರೌಂಡ್ ಕಾಫಿ ತುಂಬಾ ಉಪಯೋಗಕ್ಕೆ ಬರುತ್ತದೆ. ಹಸಿ ತೆಂಗಿನಕಾಯಿ ಹಾಲಿನೊಂದಿಗೆ ಮಿಶ್ರಣ ಮಾಡಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಹಾಗೂ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳುವ ಬಗೆಯಿಂದ ನಿಮ್ಮ ಮುಖದ ಸೌಂದರ್ಯವನ್ನು ದ್ವಿಗುಣಗೊಳಿಸಿ ಕೊಳ್ಳಬಹುದು.

ಒಂದು ಬಟ್ಟಲಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಸೇರಿಸಿ. ಇದಕ್ಕೆ ಅರ್ಧ ಚಮಚ ಹಸಿ ಜೇನುತುಪ್ಪವನ್ನು ಸೇರಿಸಿ. ನಯವಾದ ಪೇಸ್ಟ್ ಮಾಡಲು ಚೆನ್ನಾಗಿ ಬೆರೆಸಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ಎರಡರಿಂದ ನಾಲ್ಕು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖವನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ತಣ್ಣೀರಿನ ನಂತರ ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಿರಿ.( ಮೃದು ಚರ್ಮ ಹೊಂದಿದವರು ಅಡುಗೆ ಸೋಡಾ ಉಪಯೋಗಿಸಬೇಡಿ)

ಎಸ್ಫೋಲಿಯೆಂಟ್ ಗುಣ ಲಕ್ಷಣಗಳಲ್ಲಿ ನೈಸರ್ಗಿಕವಾದ ಆಹಾರ ಪದಾರ್ಥಗಳು ಎಂದರೆ ಅದು ನಿಂಬೆ ಹಣ್ಣು ಮತ್ತು ಜೇನು ತುಪ್ಪ. ನಿಮ್ಮ ಮುಖದ ಮೇಲಿನ ಬ್ಲಾಕ್ ಹೆಡ್ ಮತ್ತು ಸತ್ತ ಜೀವಕೋಶಗಳನ್ನು ತೆಗೆದು ಹಾಕುವಲ್ಲಿ ಇವುಗಳ ಪಾತ್ರ ಬಹಳ ದೊಡ್ಡದು.

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್
ನಿಂಬೆ ಹಣ್ಣು ಮತ್ತು ಜೇನು ತುಪ್ಪ

ಈ ಸ್ಕ್ರಬ್ ನ ಉಪಯೋಗ ನೀವು ಪಡೆದುಕೊಳ್ಳಬೇಕಾದರೆ ಮೊದಲಿಗೆ 1 ಕಪ್ ಸಕ್ಕರೆಯನ್ನು ಅರ್ಧ ಕಪ್ ಆಲಿವ್ ಆಯಿಲ್ ಮತ್ತು 1 ಟೇಬಲ್ ಚಮಚ ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ.

ಇದಕ್ಕೆ ನಿಂಬೆ ಹಣ್ಣಿನ ಹೋಳನ್ನು ಹಿಂಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷಗಳು ಕಳೆದ ನಂತರ ಇದು ಚೆನ್ನಾಗಿ ಸೆಟ್ ಆಗುತ್ತದೆ. ಆನಂತರ ನೀವು ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಮೊಡವೆಗಳ ವಿರುದ್ಧ ಹೋರಾಡಲು ಈ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಟ್ರೈ ಮಾಡಿ. ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಈ ಸ್ಕ್ರಬ್ ಮೇಲ್ಮೈ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

1 ಕಪ್ ಮೊಸರು,½ ಕಪ್ ಸ್ಟ್ರಾಬೆರಿ, ½ ಕಪ್ ಬಾದಾಮಿ ಪುಡಿ, ಆಪಲ್ ಸೈಡರ್ ವಿನೆಗರ್.

ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಮತ್ತು ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ನಿಧಾನವಾಗಿ ಉಜ್ಜಿಕೊಳ್ಳಿ. 15 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಓಟ್ ಮೀಲ್ ನಲ್ಲಿ ನಮ್ಮ ಚರ್ಮಕ್ಕೆ ಅಗತ್ಯವಾಗಿ ಬೇಕಾದ ಸಾಕಷ್ಟು ಪೌಷ್ಟಿಕ ಸತ್ವಗಳು ಲಭ್ಯವಿವೆ. ತುಂಬಾ ಹೆಚ್ಚು ನೋವು ಕೊಡುವ ಮೊಡವೆಗಳನ್ನು ಹೊಂದಿರುವವರು ಓಟ್ ಮೀಲ್ ಪುಡಿ ಬಳಸಬಹುದು.

ಇದು ಚರ್ಮದ ಒಳ ಪದರದಿಂದ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ಹೊರ ತೆಗೆದು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಒಂದು ಸಣ್ಣ ಬಟ್ಟಲಿನಲ್ಲಿ 2 ಟೇಬಲ್ಸ್ಪೂನ್ ದ್ರಾಕ್ಷಿ ಬೀಜದ ಎಣ್ಣೆ, 5 ಟೀಸ್ಪೂನ್ ಶೇಂಗಾ, 1 ಟೀ ಚಮಚ ಬೆಚ್ಚಗಿನ ಜೇನುತುಪ್ಪ, 2 ಹನಿ ಗುಲಾಬಿ ಎಣ್ಣೆ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ, ನಂತರ ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಇದನ್ನು ವಾರಕ್ಕೆ 2 ಬಾರಿ ಪ್ರಯತ್ನಿಸಿ.

ಹಾಲು ಮತ್ತು ಆಲಿವ್ ಆಯಿಲ್ ಜೊತೆಗೆ 2 ಟೇಬಲ್ ಚಮಚದಷ್ಟು ಓಟ್ ಮೀಲ್ ಪುಡಿ ಮಿಶ್ರಣ ಮಾಡಿ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಂಡು ಇದನ್ನು ಮುಖದ ಮೇಲೆ ಮೊಡವೆಗಳಿರುವ ಭಾಗಕ್ಕೆ ಹಚ್ಚಿ ನಯವಾಗಿ ಎರಡರಿಂದ ಮೂರು ನಿಮಿಷಗಳ ಕಾಲ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳಿ.

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್
ಹಾಲು ಮತ್ತು ಆಲಿವ್ ಆಯಿಲ್ ಜೊತೆಗೆ 2 ಟೇಬಲ್ ಚಮಚದಷ್ಟು ಓಟ್ ಮೀಲ್ ಪುಡಿ ಮಿಶ್ರಣ

ಎರಡು ಟೇಬಲ್ ಸ್ಪೂನ್ ಕಡಲೆ ಬೇಳೆ, ಎರಡು ಟೇಬಲ್ ಸ್ಪೂನ್ ಮಸೂರಿ ಬೇಳೆ, ರೋಸ್ ಪುಡಿ, ಶ್ರೀಗಂಧದ ಪುಡಿ, ಹಳದಿ ಪುಡಿ, ತರಿ ತರಿಯಾದ ಸಕ್ಕರೆ ಪುಡಿ, ನಿಂಬೆ ಹಣ್ಣಿನ ರಸ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಮೊಸರು

ಮಸೂರ ಬೇಳೆ, ಮತ್ತು ಕಡಲೆ ಬೇಳೆಯನ್ನು ಬಾಣಲೆಗೆ ಹಾಕಿ ಹುರಿದುಕೊಂಡು, ಹುರಿದ ಬೇಳೆಗಳಿಂದ ಪೌಡರ್ ತಯಾರಿಸಿ. ಇದನ್ನ ಗಾಳಿಸಿ, ಕಸ ತೆಗೆದು, ಸ್ಮೂತ್ ಪೌಡರ್ ರೆಡಿ ಮಾಡಿಕೊಳ್ಳಿ. ಈ ಪೌಡರ್‌ಗೆ ಒಂದು ಸ್ಪೂನ್ ಹಳದಿ ಪುಡಿ, ಶ್ರೀಗಂಧದ ಪುಡಿ, ತರಿ ತರಿಯಾದ ಸಕ್ಕರೆ ಪುಡಿ ಸೇರಿಸಿ. ಈಗ ಇದಕ್ಕೆ ರೋಸ್ ಪೌಡರ್ ಸೇರಿಸಿ, ನಿಮ್ಮ ಬಳಿ ರೋಸ್ ಪೌಡರ್ ಇಲ್ಲದಿದ್ದಲ್ಲಿ, ಗುಲಾಬಿ ಹೂವನ್ನ ಒಣಗಿಸಿ, ಪುಡಿ ಮಾಡಿ ಸೇರಿಸಿ.

ಎಲ್ಲ ಪುಡಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಒಮ್ಮೆ ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿ. ಇದರಲ್ಲಿ ನಿಮಗೆ ಬೇಕಾದಷ್ಟು ಪುಡಿ ತೆಗೆದುಕೊಂಡು, ಅದಕ್ಕೆ ಕೊಂಚ ತೆಂಗಿನ ಎಣ್ಣೆ, ಕೊಂಚ ಬಾದಾಮಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ನಿಮಗೆ ಬೇಕಾದಲ್ಲಿ ನೀವು ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳಿ. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸ್ಕ್ರಬರ್ ರೆಡಿ. ನೀವು ಫೇಸ್‌ಪ್ಯಾಕ್ ಹಾಕೋಕ್ಕೂ ಮುಂಚೆ ಈ ಸ್ಕ್ರಬರ್‌ನಿಂದ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ. ತಿಂಗಳಲ್ಲಿ ಎರಡು ಬಾರಿ ಈ ಸ್ಕ್ರಬರ್ ಬಳಸಿದ್ರೂ ಸಾಕು.

ಮೇಲಿನ ವಸ್ತುಗಳನ್ನು ಪರೀಕ್ಷಿಸಿ ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದೆ ಎಂದು ನಂತರ ಉಪಯೋಗಿಸಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

40 Comments

ಫೆಬ್ರವರಿ 9 ರಂದು ಚಾಕೊಲೇಟ್ ದಿನ

ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ

ಆರೋಗ್ಯ ವಿಮೆ ಮಾಡಿಸುತ್ತಿರಾ?

ಆರೋಗ್ಯ ವಿಮೆ ಮಾಡಿಸುತ್ತಿರಾ? ಹಾಗಾದರೆ ಈ ಕೆಲವೊಂದು ಅಂಶಗಳನ್ನು ನೆನಪಿಟ್ಟುಕೊಳ್ಳಿ