in

ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದುಗಳಿಂದ ನಿವಾರಿಸಬಹುದು

ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದು
ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದು

ಆರೋಗ್ಯ ಉತ್ತಮವಾಗಿರಬೇಕೆಂದರೆ ಆಹಾರ ಸೇವನೆ ಸರಿಯಾಗಿರಬೇಕು. ಇಲ್ಲವಾದರೆ ಹೊಟ್ಟೆ ಕೆಡುತ್ತದೆ. ಇದರಿಂದ ಸಾಲು ಸಾಲು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆಸಿಡಿಟಿ, ಗ್ಯಾಸ್ಟ್ರಿಕ್‌, ಪಿತ್ತ ದೋಷ ಎಲ್ಲವೂ ಹೆಚ್ಚಾಗುತ್ತದೆ.

ಮುಖ್ಯವಾಗಿ ಪಿತ್ತ ಹೆಚ್ಚಾದಾಗ ವಿಪರೀತ ತಲೆನೋವು, ವಾಕರಿಕೆ ಅಥವಾ ವಾಂತಿ, ತಲೆಸುತ್ತುವಿಕೆ ಕಾಣಿಸಿಕೊಳ್ಳುತ್ತದೆ.

ಹೆಚ್ಚು ಹುಳಿ, ಉಪ್ಪು, ತುಂಬಾ ಮಸಾಲೆಯುಕ್ತ, ಕರಿದ ಆಹಾರ, ಸಂಸ್ಕರಿಸಿದ ಆಹಾರ, ಅತಿಯಾದ ಕೆಂಪು ಮಾಂಸ ಸೇವನೆಯಿಂದ ಪಿತ್ತ ಉಂಟಾಗುತ್ತದೆ.

ಮನೆಮದ್ದುಗಳು ದೇಹಗುಣದ ಅನುಸಾರ ಬಳಸಿ ಮತ್ತು ಇವು ದೇಹಗುಣದ ಆಧಾರದ ಮೇಲೆಯೇ ಫಲಿತಾಂಶ ನೀಡುತ್ತವೆ. ಪಿತ್ತ ದೋಷದಿಂದ ಬಳಲುತ್ತಿರುವವರು ವಾರಕ್ಕೆ ಮೂರರಿಂದ ನಾಲ್ಕು ಬಾರಿ ದೇಹಕ್ಕೆ ಅನುಕೂಲವಾಗುವ ಮನೆಮದ್ದುಗಳನ್ನು ಮಾಡುತ್ತಾ ಬನ್ನಿ. ಪೋಷಕಾಂಶಯುಕ್ತವಾದ ಆಹಾರಗಳನ್ನು ಸೇವಿಸಿ, ಹಣ್ಣು, ತರಕಾರಿ, ಸೊಪ್ಪು, ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿ, ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ದೆ ಮಾಡಿ. ಮಿತವಾಗಿ ವ್ಯಾಯಾಮ ಅಥವಾ ವಾಕಿಂಗ್ ಮಾಡಿ ಮತ್ತು ದಿನಕ್ಕೆ ಎರಡರಿಂದ ಎರಡೂವರೆ ಲೀಟರ್ ನೀರು ಕುಡಿಯಿರಿ.

ವಾಕರಿಕೆ ಬಂದಂತೆ ಆಗುವುದು, ಬಾಯಲ್ಲಿ ಕಹಿಯಾದ ಹಳದಿ ಬಣ್ಣದ ನೀರು ಬರುವುದು, ಕೆಲವೊಮ್ಮೆ ವಾಂತಿ ಆಗುವುದು ಇವೆಲ್ಲವು ಪಿತ್ತದ ಲಕ್ಷಣಗಳಾಗಿವೆ. ಈ ರೀತಿ ಪಿತ್ತವಾದರೆ ಹೆಚ್ಚು ಸುಸ್ತಾಗುವುದು , ತಲೆಸುತ್ತುವುದು ಆಗುತ್ತದೆ. ಇಂತಹ ಪಿತ್ತದ ಕಾಯಿಲೆಯನ್ನು ಈ ಸಲಹೆಗಳನ್ನು ಅನುಸರಿಸುವುದರ ಮೂಲಕ ನೈಸರ್ಗಿಕವಾಗಿ ಗುಣಪಡಿಸಿಕೊಳ್ಳಬಹುದಾಗಿದೆ.

*ಬೆಟ್ಟದ ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.

ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದುಗಳಿಂದ ನಿವಾರಿಸಬಹುದು
ನೆಲ್ಲಿಕಾಯಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು

*ಅಕ್ಕಿಯನ್ನು ತೊಳೆಯಲು ಬಳಸುವ ನೀರಿನಿಂದ ಬಿಳಿಯ ದಪ್ಪ ದ್ರವ ಸಿಗುತ್ತದೆ. ಇದನ್ನು ಆಯುರ್ವೇದದಲ್ಲಿ ತಂಡುಲೋದಕ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಜೊತೆಗೆ ಪಿತ್ತ ನಿವಾರಣೆಯಾಗುತ್ತದೆ.

*ರಾತ್ರಿ ಊಟದ ನಂತರ ಒಂದು ಚೂರು ಶುಂಠಿಯನ್ನು ಅಗಿದು ಚಪ್ಪರಿಸುವುದುರಿಂದ ಪಿತ್ತ ದೂರವಾಗುತ್ತದೆ.

*ಪಿತ್ತ ಶಮನಕ್ಕೆ ಆದಷ್ಟು ಮನೆಮದ್ದುಗಳನ್ನು ಮಾಡುವುದು ಒಳ್ಳೆಯದು. ಆಹಾರಗಳಲ್ಲಿ ಬದಲಾವಣೆ, ಹೊಟ್ಟೆಗೆ ತಂಪನ್ನು ನೀಡುವ ಜ್ಯೂಸ್‌ಗಳ ಸೇವನೆ ಮಾಡುವುದು ಉತ್ತಮ. ಅಲ್ಲದೆ ಆಯುರ್ವೇದ ಮೂಲಿಕೆಗಳನ್ನು ಬಳಕೆ ಮಾಡುವ ಮೂಲಕ ಪಿತ್ತವನ್ನು ಶಮನ ಮಾಡಬಹುದಾಗಿದೆ.

*ಕೊತ್ತಬರಿ ಬೀಜದ ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಅದನ್ನು ಒಂದು ಬಟ್ಟಲಿಗೆ ಶೋಧಿಸಿ ಅದಕ್ಕೆ ಕಲ್ಲು ಸಕ್ಕರೆ ಬೆರೆಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಪಿತ್ತ ಕಡಿಮೆಯಾಗುತ್ತದೆ

*ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಹುಣಸೆಹಣ್ಣು ಬೆರೆಸಿ ಕುಡಿಯುವುದುರಿಂದ ಪಿತ್ತ ನಿವಾರಣೆಯಾಗುತ್ತದೆ. ಈ ಕಷಾಯ ಸೇವಿಸಿದ ಮೇಲೆ ವಾಂತಿಯಾಗವ ಸಾಧ್ಯತೆಗಳಿರುತ್ತವೆ.

ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದುಗಳಿಂದ ನಿವಾರಿಸಬಹುದು
ಜೀರಿಗೆ ಕಷಾಯ ಪಿತ್ತಕ್ಕೆ ಒಳ್ಳೆಯದು

*ಅನಾನಸ್ ಹಣ್ಣನ್ನು ತಿನ್ನುವುದರಿಂದ ಪಿತ್ತದಿಂದ ತಲೆ ತಿರುಗುವಿಕೆ ಗುಣವಾಗುತ್ತದೆ. 15 ದೊಡ್ಡಪತ್ರೆಯ ಮಜ್ಜಿಗೆ ತಂಬುಳಿ ಮಾಡಿ ತಿನ್ನುವುದರಿಂದ ಪಿತ್ತದ ಸಮಸ್ಯೆ ದೂರವಾಗುತ್ತದೆ.

*ಪಿತ್ತಕ್ಕೆ ಅತ್ಯಂತ ಪ್ರಭಾವಶಾಲಿ ಮನೆಮದ್ದೆಂದರೆ ಪುನರ್ಪುಳಿ ಹಣ್ಣು, ಇದನ್ನು ಚೆನ್ನಾಗಿ ತೊಳೆದು ಒಣಗಿಸಿ ಸಿಪ್ಪೆ ತೆಗೆದು ಇಟ್ಟುಕೊಳ್ಳಬೇಕು. ಒಂದು ಲೋಟ ನೀರಿಗೆ ಅಂದರೆ ಚೆನ್ನಾಗಿ ಕುದಿಸಿ ಆರಿಸಿ ತೆಗೆದುಕೊಂಡು ನೀರಿಗೆ ೫ ಸಿಪ್ಪೆಗಳನ್ನು ಹಾಕಬೇಕು, ಇದನ್ನು ರಾತ್ರಿಯೇ ನೆನೆಸಿಡಬೇಕು. ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಆ ನೀರನ್ನು ಮುಂಜಾನೆಯೇ ಎದ್ದು ಕುಡಿದು ಮತ್ತೆ ಮಲಗಿ ನಿದ್ರಿಸಬೇಕು.

*ಕರಿಬೇವಿನ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಪಿತ್ತ ಕಡಿಮೆ ಮಾಡಿಕೊಳ್ಳಬಹುದು

*ಪಿತ್ತ, ಅಧಿಕ ರಕ್ತಸ್ರಾವ, ಕೂದಲು ಉದುರುವಿಕೆಯಿಂದ ಹಿಡಿದು ರಕ್ತಹೀನತೆಯನ್ನು ನಿವಾರಿಸುವಲ್ಲಿ ಕಪ್ಪು ಒಣದ್ರಾಕ್ಷಿ ಸಹಾಯಕವಾಗಿದೆ. ಏಕೆಂದರೆ ಇದು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆದ್ದರಿಂದ ಪಿತ್ತದಿಂದ ಬೇಗನೆ ಗುಣವಾಗಬೇಕೆಂದರೆ ಒಣದ್ರಾಕ್ಷಿ ನೀರನ್ನು ಸೇವಿಸಿ.

*ಎಳೆ ಹಲಸಿನ ಕಾಯಿಯಿಂದ ಸಾಂಬಾರು ತಯಾರಿಸಿ ಊಟ ಮಾಡುವುದುರಿಂದ ಪಿತ್ತ ಶಮನವಾಗುತ್ತದೆ.

*ಹಾಗಲಕಾಯಿ ಸೇವನೆಯಿಂದ ಪಿತ್ತ ನಿವಾರಣೆಯಾಗುತ್ತದೆ.

*ಸಾಮಾನ್ಯವಾಗಿ ದೇಹದಲ್ಲಿ ಅಧಿಕ ಉಷ್ಣತೆಯಿಂದ ಈ ರೀತಿಯ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ 3-4 ಗಂಟೆಗಳ ನಂತರ ಮಲಗುವ ಅಭ್ಯಾಸ ಒಳ್ಳೆಯದು. ಪಿತ್ತವನ್ನು ತಡೆಯಲು ಕಡಿಮೆ ಕೊಬ್ಬಿನ ಆಹಾರವನ್ನು ರಾತ್ರಿಗೆ ಸೇವಿಸುವುದು ಒಳ್ಳೆಯದು. ಅಧಿಕ ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ರಾತ್ರಿ ಊಟದಲ್ಲಿ ಸೇವಿಸಬಾರದು. ಇಂತಹ ಆಹಾರಗಳ ಸೇವನೆ ಪಿತ್ತವನ್ನು ಹೆಚ್ಚು ಮಾಡುತ್ತದೆ. ಪಿತ್ತ ಕಾಯಿಲೆ ಇರುವರು ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದಲ್ಲ, ನಿಂಬೆ ಜ್ಯೂಸ್ ನಲ್ಲಿರುವ ಸಿಟ್ರಿಕ್ ಅಂಶ ಪಿತ್ತವನ್ನು ಹೆಚ್ಚು ಮಾಡುತ್ತದೆ.

*ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುತ್ತಿದ್ದರೆ ಪಿತ್ತ ಕಡಿಮೆಯಾಗುತ್ತದೆ.

ಪಿತ್ತದಿಂದ ವಾಕರಿಕೆ, ವಾಂತಿ ಸಮಸ್ಯೆಗಳಿದ್ದರೆ ಕೆಲವೊಂದು ಮನೆಮದ್ದುಗಳಿಂದ ನಿವಾರಿಸಬಹುದು
ಮಜ್ಜಿಗೆ ಹುಳಿ ತೇಗು ಕಡಿಮೆ ಮಾಡುತ್ತದೆ

*ಸೋಂಪಿನ ಕಾಳಿನ ಸಾತ್ವಿಕ ಗುಣಗಳು ಮನಸ್ಸನ್ನು ರಿಫ್ರೆಶ್ ಮಾಡಲು ಮತ್ತು ಮಾನಸಿಕ ಜಾಗರೂಕತೆಯನ್ನು ಉತ್ತೇಜಿಸಲು ಸಹಾಯಕವಾಗಿದೆ. ಇದು ಕಣ್ಣುಗಳಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ.

*1 ಟೀಸ್ಪೂನ್ ಸೋಂಪಿನ ಕಾಳು ಅಥವಾ ಅದರ ಪುಡಿಯನ್ನು ತೆಗೆದುಕೊಂಡು ಅದನ್ನು 1 ಗ್ಲಾಸ್ ತಂಪಾದ ನೀರಿಗೆ 1 ಟೀಸ್ಪೂನ್ ಕಲ್ಲು ಸಕ್ಕರೆಯೊಂದಿಗೆ ಸೇರಿಸಿ ಸೇವನೆ ಮಾಡಿ. ಮಧ್ಯಾಹ್ನ ಊಟವಾದ ಮೇಲೆ 2 ಗಂಟೆಗಳ ನಂತರ ನೀವು ಅದನ್ನು ಸೇವಿಸಬಹುದು.

*ಒಂದು ಚಮಚ ಜೀರಿಗೆ ಪುಡಿ ಮತ್ತು ಒಂದು ಚಿಕ್ಕ ಉಂಡೆ ಹುಣಸೆಹಣ್ಣನ್ನು ಜೇನುತುಪ್ಪದ ಜೊತೆಗೆ ಕಲೆಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.

*ಸ್ವಲ್ಪ ಕಾಳು ಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಸಿ ಕರಿಬೇವು, ಸಾಸಿವೆ ಮತ್ತು ಜೀರಿಗೆಯನ್ನು ತುಪ್ಪದ ಒಗ್ಗರಣೆಯಲ್ಲಿ ಸಾಂಬಾರ್ ಮಾಡಿ ಸೇವಿಸುವುದರಿಂದ ಪಿತ್ತವನ್ನು ನಿಯಂತ್ರಣದಲ್ಲಿರಿಸಬಹುದು. ಈ ಪುನರ್ಪುಳಿಯಲ್ಲಿ ಕೆಂಪು ಮತ್ತು ಬಿಳಿಯ ಬಣ್ಣದ ಎರಡು ಪ್ರಭೇದಗಳಿವೆ, ಪಿತ್ತ ನಿವಾರಣೆಗೆ ಬಿಳಿಯದ್ದು ಅತ್ಯುತ್ತಮವಾಗಿದೆ.

*ದೊಡ್ಡ ಪತ್ರೆಯ ಎಲೆಗಳನ್ನು ಉಪ್ಪಿನೊಂದಿಗೆ ಜಗಿದು ತಿಂದರೆ ಪಿತ್ತದಿಂದಾಗುವ ಅಲರ್ಜಿ ನಿವಾರಣೆಯಾಗುತ್ತದೆ.

*ಚಪ್ಪರದ ಅವರೆಕಾಯಿ ತಿನ್ನುವುದರಿಂದ ಪಿತ್ತವಿಕಾರಗಳು ಕಡಿಮೆಯಾಗುತ್ತವೆ.

​*ಮಲಗುವ ಮೊದಲು ಬಿಸಿ ನೀರು ಕುಡಿಯುವುದು ಈ ಕಾಯಿಲೆ ನಿವಾರಣೆಗೆ ಒಳ್ಳೆಯದು. ಕೃಷ್ಣ ತುಳಸಿಯನ್ನು ಸೇವಿಸುವುದರಿಂದ ಪಿತ್ತ ದೋಷ ನಿವಾರಣೆಯಾಗುತ್ತದೆ, ಒಂದು ಬಟ್ಟಲಿನಲ್ಲಿ ಜೀರಿಗೆ ಕಷಾಯ ಮಾಡಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ಪಿತ್ತ ದೋಷ ನಿವಾರಣೆಯಾಗುತ್ತದೆ, ದಾಳಿಂಬೆ ಹಣ್ಣನ್ನು ಉಪಯೋಗಿಸುವುದರಿಂದ ಪಿತ್ತ ಉಪಶಮನವಾಗುತ್ತದೆ.

*ಹುರಿದ ರಾಗಿ ಹಿಟ್ಟನ್ನು ಬೆಲ್ಲ ಮತ್ತು ಹುಣಸೆಗೊಜ್ಜಿನಲ್ಲಿ ಚೆನ್ನಾಗಿ ಬೆರೆಸಿ ಕುಡಿದರೆ ಪಿತ್ತ ದೂರವಾಗುತ್ತದೆ.

*ಪುದೀನಾ ರಸದೊಡನೆ ನಿಂಬೆರಸ ಬೆರೆಸಿ ಕುಡಿದರೆ ಪಿತ್ತ ನಿವಾರಣೆಯಾಗುತ್ತದೆ. ನಿಂಬೆಹಣ್ಣು ಮತ್ತು ದ್ರಾಕ್ಷಿ ಹಣ್ಣು ಪಿತ್ತವನ್ನು ಕಳೆಯುತ್ತವೆ. ನೇರಳೆಹಣ್ಣು ಸೇವಿಸುವುದರಿಂದ ಪಿತ್ತ ಶಮನವಾಗುತ್ತದೆ.

*ಬೂದುಗುಂಬಳಕಾಯಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ಪಿತ್ತ ಸಂಬಂಧವಾದ ಕಾಯಿಲೆಗಳು ಕಡಿಮೆಯಾಗುತ್ತವೆ. ಕೃಷ್ಣ ತುಳಸಿ ಎಲೆಗಳನ್ನು ಸೇವಿಸುವುದರಿಂದ ಪಿತ್ತ ದೋಷ ನಿವಾರಣೆಯಾಗುತ್ತದೆ. ಮಾದಲ ಹಣ್ಣಿನ ಸೇವನೆ ಪಿತ್ತವನ್ನು ನಿವಾರಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಶ್ವ ಬ್ರೈಲ್ ದಿನ

ಜನವರಿ 4, ವಿಶ್ವ ಬ್ರೈಲ್ ದಿನ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಅನ್ನು ಕೆಲವೊಂದು ಮನೆಮದ್ದು ಉಪಯೋಗಿಸಿ ಹೋಗಲಾಡಿಸಬಹುದು