in ,

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?

ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ದುರ್ಬಲ ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಸಹ ಹೆಚ್ಚಾಗಿ ಆಸ್ಪತ್ರೆ ಸೇರುವಂತೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿ ಉತ್ತಮ ಪೋಷಕಾಂಶಗಳನ್ನು ಸೇರಿಸುವುದು ಮುಖ್ಯ.

ಪೌಷ್ಠಿಕ ಆಹಾರದೊಂದಿಗೆ ‌ಪ್ರೊಬಯೊಟಿಕ್‌ ಆಹಾರಗಳ ಸೇವನೆ ನಮ್ಮ ಆಂತರಿಕ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯಕವೆಂಬುದಾಗಿದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
‌ಪ್ರೊಬಯೊಟಿಕ್‌ ಆಹಾರಗಳ ಸೇವನೆ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

‌ಪ್ರೊಬಯೊಟಿಕ್ಸ್‌ ಎಂದರೆ ಜೀವಂತ ಬ್ಯಾಕ್ಟೀರಿಯಾ, ಈಸ್ಟ್‌ ಮುಂದಾದ ಸೂಕ್ಷ್ಮಜೀವಿಗಳು ಪಚನಕ್ರಿಯೆಗೆ ಸಹಾಯಕವಾಗಬಲ್ಲದ್ದು ಎನ್ನಬಹುದಾಗಿದೆ. ಶರೀರದಲ್ಲಿ ಅನೇಕ ಜೀವಿಗಳು ನೆಲೆಯಾಗಿರುತ್ತವೆ. ಈ ಒಳ್ಳೆಯ ಸೂಕ್ಷ್ಮಜೀವಿಗಳು ಕೆಟ್ಟ ಸೂಕ್ಷ್ಮಜೀವಿಗಳನ್ನು ಶರೀರದಿಂದ ಹೊರಹಾಕಲು ಸಹಾಯಕ. ಇಂತಹ ಒಳ್ಳೆಯ ಸೂಕ್ಷ್ಮಜೀವಿಗಳನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ‌ಪ್ರೊಬಯೊಟಿಕ್‌ ಆಹಾರ ಎಂದು ಕರೆಯಬಹುದಾಗಿದೆ.

ಸದಾ ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ಮತ್ತು ರಸ್ತೆ ಬದಿಯ ಜಂಕ್ ಫುಡ್ ಗಳನ್ನು ದೂರ ಇರುವುದರಿಂದ ತಕ್ಕ ಮಟ್ಟಿಗೆ ನೈಸರ್ಗಿಕವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಮಾಡಿಕೊಳ್ಳಬಹುದು.

ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಸಿಟ್ರಸ್ ಹಣ್ಣುಗಳಿಗೆ ಉದಾಹರಣೆಯೆಂದರೆ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣು ಇತ್ಯಾದಿಗಳು.

ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿ ಸೋಂಕುಗಳಿಗೆ ದೇಹದಲ್ಲಿ ಜಾಗ ಇಲ್ಲದಂತೆ ಮಾಡುತ್ತದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
ಸಿಟ್ರಸ್ ಹಣ್ಣುಗಳು

ಬೆಣ್ಣೆ ಇದ್ದರೆ ಅದರ ಜೊತೆ ಬ್ರೊಕೋಲಿ ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ನಾಲಿಗೆ ರುಚಿ ಕೂಡ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತದೆ.

ಮೊಸರು, ಬಾದಾಮಿ, ಸೂರ್ಯಕಾಂತಿ ಬೀಜ, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

ಮಕ್ಕಳಿಗೆ ಕೊಡುವ ಆಹಾರದಲ್ಲಿ ಮೊಸರು, ಚೀಸ್ ಮುಂತಾದವುಗಳನ್ನು ಬಳಸುವುದರಿಂದ ಸ್ವಾಭಾವಿಕವಾಗಿ ಶರೀರದಲ್ಲಿ ‌ಪ್ರೊಬಯೊಟಿಕ್‌ ಅಂಶ ಹೆಚ್ಚುತ್ತದೆ.

ಕಿತ್ತಳೆ ಹಣ್ಣು ಮತ್ತು ನಿಂಬೆಹಣ್ಣು ಗಳಿಗೆ ಹೋಲಿಸಿದರೆ ದಪ್ಪಮೆಣಸಿನಕಾಯಿಯಲ್ಲಿ ಸುಮಾರು ಮೂರು ಪಟ್ಟು ಅಧಿಕ ವಿಟಮಿನ್ ಸಿ ಅಂಶದ ಪ್ರಮಾಣ ಸಿಗುತ್ತದೆ.

ಗೋಡಂಬಿ, ಬಾದಾಮಿ ಅಥವಾ ವಾಲ್‌ನಟ್‌ಗಳಲ್ಲಿ ಯಾವುದನ್ನಾದರೂ ತಿನ್ನಬೇಕು. ಇವು ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿಯೊಂದು ನಟ್ಸ್ ಅದರ ಪ್ರಯೋಜನಗಳನ್ನು ನೀಡುತ್ತದೆ.

ಬ್ರೊಕೊಲಿ ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ. ಹಾಗಾಗಿ ಬ್ರೊಕೋಲಿಯನ್ನು ಆಹಾರದಲ್ಲಿ ಸೇರಿಸುವುದು ಉತ್ತಮ.

ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಎಂದು ಸಲಹೆ ನೀಡಲಾಗಿದೆ. ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ. 

ಬೀಟಾ-ಕ್ಯಾರೋಟಿನ್ ಅಂಶ ಕೂಡ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದ ಕಣ್ಣುಗಳು ಮತ್ತು ನಮ್ಮ ತ್ವಚೆ ಆರೋಗ್ಯಕರವಾಗಿ ರಕ್ಷಣೆಯಾಗುತ್ತದೆ.

ಆಹಾರದಲ್ಲಿ ಮಶ್ರೂಮ್ ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಇದು ತುಂಬಾ ಉಪಯುಕ್ತ ಎಂದು ಸಾಬೀತಾಗಿದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
ಅಣಬೆಗಳು

ಅಣಬೆಗಳು ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದು ಹೆಚ್ಚು ಕ್ಯಾಲೋರಿಗಳನ್ನು ಸಹ ಹೊಂದಿಲ್ಲ. ಇದು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಅದೇ ರೀತಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಅಣಬೆ ತುಂಬಾ ಒಳ್ಳೆಯದು.

ಕಲ್ಲಂಗಡಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಹೈಡ್ರೀಕರಿಸಲು ಮತ್ತು ರಿಫ್ರೆಶ್ ಆಗಿ ಇರಲು ಸಹಾಯ ಮಾಡುತ್ತದೆ. ಇದು ಈ ಚಳಿಗಾಲದಲ್ಲಿ ಬರುವ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ.

ಬೀಟ್ರೂಟ್ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಬೀಟ್ರೂಟ್ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ತೂಕ ಹೆಚ್ಚಿಸಲು ಇದು ತುಂಬಾ ಉಪಯುಕ್ತವಾಗಿದೆ. ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

50 Comments

ಲಾಲಾ ಲಜಪತ ರಾಯ್ ಜನ್ಮದಿನ

ಜನವರಿ 28, ಲಾಲಾ ಲಜಪತ ರಾಯ್ ಜನ್ಮದಿನ

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ ನಾಸಿಕ್