in

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ ನಾಸಿಕ್

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ
ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ

ನಾಸಿಕ್  ಮಹಾರಾಷ್ಟ್ರದ ಒಂದು ನಗರ. ಮುಂಬಯಿಯಿಂದ ೧೮೦ ಮತ್ತು ಪುಣೆಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. “ಭಾರತದ ದ್ರಾಕ್ಷಾರಸದ ರಾಜಧಾನಿ ” ಅಥವಾ “ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ ಗೋದಾವರಿ ನದಿಯ ತೀರದಲ್ಲಿ, ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹರಡಿಕೊಂಡಿದೆ. ರಮಣೀಯ ಪ್ರಕೃತಿ ಸಂಪತ್ತು ಮತ್ತು ಚೇತೋಹಾರಿ ಹವಾಮಾನಕ್ಕೂ ಇದು ಹೆಸರಾಗಿದೆ.

ಸಂಸ್ಕೃತದಲ್ಲಿ ನಾಸಿಕವೆಂದರೆ ಮೂಗು. ರಾವಣನ ತಂಗಿ ಶೂರ್ಪನಖಿಯು ರಾಮನನ್ನು ಬಯಸಿ ಬಂದ ಕಥೆ ಎಲ್ಲರಿಗೂ ತಿಳಿದದ್ದೇ. ರಾಮನು ತನಗೆ ಮದುವೆಯಾಗಿದೆಯೆಂದೂ ತನ್ನ ತಮ್ಮ ಲಕ್ಷ್ಮಣನನ್ನು ವಿಚಾರಿಸಬೇಕೆಂದೂ ಅವಳನ್ನು ಕಳಿಸಿದಾಗ ಲಕ್ಷ್ಮಣನು ಅವಳು ರಾಕ್ಷಸಿಯೆಂದರಿತು ಅವಳ ಮೂಗು ಕತ್ತರಿಸಿ ಕಳುಹಿಸಿದ್ದು ಇದೇ ಜಾಗದಲ್ಲಿ ಎಂದು ಪ್ರತೀತಿ. ಆದ್ದರಿಂದಲೇ ನಾಸಿಕ್ ಎಂಬ ಹೆಸರು. ಆ ಕಾಲಕ್ಕೆ ಇದು ದಂಡಕಾರಣ್ಯವೆಂಬ ಹೆಸರಿನ ದಟ್ಟವಾದ ಅಡವಿ. ರಾಮ, ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದಾಗ ಹೆಚ್ಚು ಕಾಲ ಕಳೆದ ಪಂಚವಟಿ ಇದೇ ಅರಣ್ಯದೊಳಗೆ ಐದು ಬೃಹತ್ ವಟವೃಕ್ಷಗಳು ಇದ್ದ ಸ್ಥಳ. ಈ ಪಂಚವಟಿ ಇಂದು ನಾಶಿಕ್ ನಗರದ ಒಂದು ಭಾಗ. ನಗರದ ನಡುವೆಯೇ ಠೀವಿಯಿಂದ ಹರಿಯುವ ಗೋದಾವರಿ ನದಿ ಪಂಚವಟಿ ಪ್ರದೇಶವನ್ನು ನಾಶಿಕ್‍ನ ಇತರ ಭಾಗಗಳಿಂದ ಬೇರ್ಪಡಿಸುತ್ತದೆ.

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ ನಾಸಿಕ್
ತ್ರಿರಶ್ಮಿ ಗುಹೆಗಳು

ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ.

ಮೊಘಲರ ಕಾಲದಲ್ಲಿ ನಾಸಿಕ್ ಗುಲ್ಶನಾಬಾದ್, ಅಂದರೆ ಗುಲಾಬಿಗಳ ನಗರ, ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸದ್ಯ ನಾಸಿಕ್ ಪ್ರಸಿದ್ಧವಾಗಿರುವುದು ದ್ರಾಕ್ಷಿ ಬೆಳೆಗೆ ಮತ್ತು, ಪುನಃ ಪ್ರಾರಂಭಿಸಲಾಗಿರುವ, ಒಂದು ಕಾಲದ ಹೆಸರಾಂತ, ಗುಲಾಬಿ ಹೂವಿನ ಕೃಷಿಗೆ. ರಫ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವಿಧಾನಗಳಿಂದ ವೈನ್ ಮತ್ತು ಗುಲಾಬಿ ಕೃಷಿಯನ್ನು ಅಭಿವೃದ್ಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ನಾಸಿಕ್‌ನ ಈ ಪಂಚವಟಿ ಅತ್ಯಂತ ಪವಿತ್ರವಾದ ತಾಣ ಎಂದು ಕರೆಯಲಾಗುತ್ತದೆ. ಇದು ರಾಮಾಯಣವನ್ನು ನಂಬುವವರಿಗೆ ಅತ್ಯಂತ ಪವಿತ್ರವಾಗಿದ್ದು, ಬಹಳಷ್ಟು ಹಿಂದೂ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಇಲ್ಲಿ ಕಲಾರಾಮ್‌ ದೇವಾಲಯ ಮತ್ತು ಸೀತಾ ಗುಹಾದಂತಹ ಅನೇಕ ಆಕರ್ಷಣೆಗಳನ್ನು ನೀವು ಕಾಣಬಹುದು. ಇನ್ನು ಕುಂಭಮೇಳವು ಗೋದಾವರಿ ನದಿಯ ದಡದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಯಾತ್ರಿಕರು ಕುಂಭಮೇಳಕ್ಕೆ ಸಾಕ್ಷಿಯಾಗಲು ಭೇಟಿ ನೀಡುತ್ತಾರೆ.

ನಾಸಿಕ್‌ನಲ್ಲಿರುವ ಈ ಪಾಂಡು ಗುಹೆಗಳು ಅಥವಾ ನಾಸಿಕ್‌ ಗುಹೆಗಳು ಎಂದೂ ಕರೆಯಲ್ಪಡುವ ಪಾಂಡವ್ಲೆನಿ ಗುಹೆಗಳು ತ್ರಿವಶ್ಮಿ ಬೆಟ್ಟಗಳ ನಡುವೆ ನೆಲೆಗೊಂಡಿದೆ. ಇದೊಂದು ಪ್ರಾಚೀನವಾದ ರಾಕ್‌ ಕಟ್ ಗುಹೆಗಳಾಗಿದ್ದು, 3 ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ನೀರಿನ ತೊಟ್ಟಿಗಳು, ಕಂಬಗಳು, ಕೆತ್ತನೆಗಳು, ದೇವಾಲಯಗಳು ಒಳಗೊಂಡಂತೆ ಇನ್ನು ಅನೇಕ ಆಕರ್ಷಣೆಗಳನ್ನು ಕಾಣಬಹುದು.

ಲಕ್ಷ್ಮಣ ಶೂರ್ಪನಖಿಯ ಮೂಗನ್ನು ಕತ್ತರಿಸಿದ ಜಾಗ ನಾಸಿಕ್
ಪಂಚವಟಿ

ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅತ್ಯ೦ತ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಕ್ಕಾಗಿ ನಾಸಿಕ್ ಪ್ರಸಿದ್ಧವಾಗಿದೆ. ತನ್ನ ಧಾರ್ಮಿಕ ಪ್ರಾಮುಖ್ಯತೆಯನ್ನೂ ಹೊರತುಪಡಿಸಿ ನಾಸಿಕ್, ಅತ್ಯುತ್ತಮ ದರ್ಜೆಯ ತರಕಾರಿ ಮತ್ತು ಹಣ್ಣುಗಳ ಗರಿಷ್ಟ ಮಟ್ಟದ ಉತ್ಪಾದನೆಗಾಗಿಯೂ, ಅದರಲ್ಲೂ ವಿಶೇಷವಾಗಿ ದ್ರಾಕ್ಷಿತೋಟಗಳಿಗೆ ಬಹು ಪ್ರಸಿದ್ಧವಾಗಿದೆ.

ನಾಸಿಕ್ ನಗರದ ಕೇ೦ದ್ರ ಭಾಗದಿ೦ದ ಸುಮಾರು 28 ಕಿ.ಮೀ. ಗಳಷ್ಟು ದೂರದಲ್ಲಿರುವ ತ್ರ್ಯ೦ಬಕೇಶ್ವರ ದೇವಸ್ಥಾನವು ಭಗವಾನ್ ಶಿವನಿಗರ್ಪಿತವಾಗಿರುವ ರಾಜವೈಭವವುಳ್ಳ ಹಿ೦ದೂ ದೇವಸ್ಥಾನವಾಗಿದೆ. ಭಾರತದ ಹನ್ನೆರಡು ಜ್ಯೋತಿರ್ಲಿ೦ಗಗಳ ಪೈಕಿ ತ್ರ್ಯ೦ಬಕೇಶ್ವರವೂ ಒಂದು.

ನಗರವು ಪ್ರಮುಖ ಹಿಂದೂ ಯಾತ್ರಾ ಸ್ಥಳವಾಗಿದೆ, ಏಕೆಂದರೆ ಕುಂಭಮೇಳವು ಇಲ್ಲಿ ತನ್ನ ಕೇಂದ್ರಬಿಂದುವಾಗಿದೆ. ಹವಾಮಾನವು ತುಂಬಾ ಆಹ್ಲಾದಕರವಾಗಿರುವುದರಿಂದ ನೀವು ವರ್ಷದ ಯಾವುದೇ ಸಮಯದಲ್ಲಿ ನಗರಕ್ಕೆ ಭೇಟಿ ನೀಡಬಹುದು. ಮಳೆಗಾಲದಲ್ಲೂ ಜನರು ಸುರಕ್ಷಿತವಾಗಿ ಚಾರಣಕ್ಕೆ ಹೋಗಬಹುದಾದ ಕೆಲವೇ ಕೆಲವು ನಗರಗಳಲ್ಲಿ ಇದೂ ಒಂದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?

ಚಿತ್ರರಂಗದಲ್ಲಿ "ಅಮ್ಮ" ಎಂದೇ ಖ್ಯಾತಿ ಪಡೆದಿರುವ ಪಂಡರೀಬಾಯಿಯವರ ಜನ್ಮದಿನ

ಜನವರಿ 29, ಚಿತ್ರರಂಗದಲ್ಲಿ “ಅಮ್ಮ” ಎಂದೇ ಖ್ಯಾತಿ ಪಡೆದಿರುವ ಪಂಡರೀಬಾಯಿಯವರ ಜನ್ಮದಿನ