in

ಸ್ವಚ್ಛತೆ ಏಷ್ಟು ಮುಖ್ಯವಾಗಿರುತ್ತದೆ?

ಸ್ವಚ್ಛತೆ
ಸ್ವಚ್ಛತೆ

ಮನುಷ್ಯನ ಜೀವನದಲ್ಲಿ ಸ್ವಚ್ಛತೆ ಒಂದು ಮುಖ್ಯವಾದ ಅಂಶ ನನ್ನ ಪ್ರಕಾರ. ಹಲವಾರು ಮಂದಿ ಹೇಗೆ ಬೇಕು ಹಾಗೆ ಬದುಕುತ್ತಾರೆ.

ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕ ಸಂಬಂಧ, ಇವೆಲ್ಲವೂ ನಮ್ಮ ದೇಹದ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತವೆ. ಸ್ವಚ್ಛತೆಯ ಕೊರತೆಯಿಂದಾಗಿ ಹಲವಾರು ಖಾಯಿಲೆಗಳು ಹರಡುತ್ತವೆ. ಪರೋಪಜೀವಿಗಳು, ಹುಳುಗಳು, ತುರಿಗಜ್ಜಿ, ಹುಣ್ಣುಗಳು, ದಂತಕ್ಷಯ, ಅತಿಸಾರ ಮತ್ತು ರಕ್ತಬೇದಿ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತವೆ. ಈ ಎಲ್ಲಾ ಖಾಯಿಲೆಗಳನ್ನು ಸ್ವಚ್ಛತೆಯ ಪಾಲನೆಯಿಂದ ತಡೆಗಟ್ಟಬಹುದು.

ಶುಚಿತ್ವವು ಸರಿಯಾದ ನೈರ್ಮಲ್ಯದೊಂದಿಗೆ ಸಂಬಂಧಿಸಿದೆ. ಶುದ್ಧನೆಂದು ಹೇಳಲಾದ ವ್ಯಕ್ತಿಯು ಸಾಮಾನ್ಯವಾಗಿ ಶುಚಿತ್ವವನ್ನು ಚಿತ್ರಿಸುತ್ತಾನೆ.

ತಲೆಯನ್ನು ಸ್ವಚ್ಛಗೊಳಿಸುವುದು ವಾರಕ್ಕೆ ಒಮ್ಮೆ ಅಥವ ಎರಡು ಬಾರಿ ಶ್ಯಾಂಪೊ ಅಥವ ಇತರೆ ಸ್ವಚ್ಛಕಾರಕಗಳಿಂದ ತಲೆ ಸ್ನಾನ ಮಾಡಬೇಕು. ಕಣ್ಣು, ಕಿವಿ ಹಾಗೂ ಮೂಗಿನ ಸ್ವಚ್ಛತೆ ಪ್ರತಿ ದಿನ ಸ್ವಚ್ಛ ನೀರಿನೀಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ.

ಕಿವಿಯಲ್ಲಿ ಕೊಳೆ ಅಥವಾ ಕುಕುಣಿ ಕೂರುವುದರಿಂದ ಗಾಳಿಯ ಸರಾಗ ಹರಿದಾಟಕ್ಕೆ ಅಡ್ಡಿಯಾಗುತ್ತದೆ. ಇದು ನೋವನ್ನುಂಟು ಮಾಡುತ್ತದೆ. ಹಾಗಾಗಿ ವಾರಕ್ಕೊಮ್ಮೆ ಹತ್ತಿ ಬಡ್ಸ್ನಿಂದ ಕಿವಿಗಳನ್ನು ಸ್ವಚ್ಛಗೊಳಿಸಿರಿ.

ಮೂಗು ಒಸರುವಿಕೆ ಒಣಗಿ ಕೊಟವಕಟ್ಟಿ ಮೂಗು ಕಟ್ಟುತ್ತದೆ.. ಹಾಗಾಗಿ ಬೇಕೆನಿಸಿದಾಗ ಮೂಗನ್ನು ಸ್ವಚ್ಛಗೊಳಿಸಿರಿ. ಮಕ್ಕಳಿಗೆ ಶೀತವಾಗಿ ಮೂಗು ಸೋರುತ್ತಿದ್ದರೆ ಮೆದು ಬಟ್ಟೆಯಿಂದ ಮೂಗನ್ನು ಸ್ವಚ್ಛಗೊಳಿಸಿರಿ.

ಬಾಯಿಯನ್ನು ಸ್ವಚ್ಛಗೊಳಿಸುವುದು
ಹಲ್ಲುಜ್ಜಲು ಮೆದು ಹಲ್ಲು ಪುಡಿ ಮತ್ತು ಪೇಸ್ಟ್ ಬಳಸುವುದು ಉತ್ತಮ. ಪ್ರತಿ ದಿನ ಎರಡು ಬಾರಿ ಹಲ್ಲನ್ನು ಉಜ್ಜಿರಿ – ಒಮ್ಮೆ ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೂಡಲೆ ಹಾಗೂ ಮಲಗುವ ಮುನ್ನ ಇನ್ನೊಮ್ಮೆ. ಇದ್ದಿಲು ಪುಡಿ, ಉಪ್ಪು, ಒರಟಾದ ಹಲ್ಲು ಪುಡಿ, ಇತ್ಯಾದಿ ಹಲ್ಲುಜ್ಜಲು ಬಳಸಿದಾಗ ಹಲ್ಲಿನ ಹೊರ ಪದರಿಗೆ ಹಾನಿಯಾಗುತ್ತದೆ.
ಯಾವುದೇ ಆಹಾರ ಪದಾರ್ಥ ತಿಂದ ನಂತರ ನಿಮ್ಮ ಬಾಯನ್ನು ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ದುರ್ವಾಸನೆ ಉಂಟುಮಾಡಿ ಒಸಡನ್ನು ಕೆಡೆಸುವುದಲ್ಲದೆ ಹಲ್ಲಿನ ಕೊಳೆಯುವಿಕೆಗೆ ಕಾರಣವಾಗುವ ಹಲ್ಲಿನ ಸಂದಿಯಲ್ಲಿ ಆಹಾರ ಪದಾರ್ಥಗಳೂ ಸಿಕ್ಕಿಕೊಳ್ಳುವುದನ್ನು ತಡೆಯ ಬಹುದಾಗಿದೆ.

ಸ್ವಚ್ಛತೆ ಏಷ್ಟು ಮುಖ್ಯವಾಗಿರುತ್ತದೆ?
ಬಾಯಿಯನ್ನು ಸ್ವಚ್ಛಗೊಳಿಸುವುದು

ಪೌಷ್ಟಿಕ ಆಹಾರವನ್ನು ಸೇವಿಸಿ. ಸಿಹಿ ತಂಡಿಗಳು, ಚಾಕಲೇಟ್, ಐಸ್ ಕ್ರೀಂ ಮತ್ತು ಕೇಕ್ ಗಳನ್ನು ಆದಷ್ಟು ಕಡಿಮೆ ಸೇವಿಸಿ. ನಿಯಮಿತವಾಗಿ ಮತ್ತು ಸೂಕ್ತ ರೀತಿಯಲ್ಲಿ ಹಲ್ಲುಜ್ಜುವ ವಿಧಾನಗಳು ಹಲ್ಲಿನ ಮೇಲೆ ಕಿಟ್ಟ ನೆಲೆಗಟ್ಟುವಿಕೆ ತಡೆಯುವಲ್ಲಿ ಸಹಾಯ ಮಾಡುತ್ತದೆ.

ಚರ್ಮವು ನಮ್ಮ ಸಂಪೂರ್ಣ ದೇಹವನ್ನು ಮುಚ್ಚಿ, ದೇಹದ ಅಂಗಗಳನ್ನು ಸಂರಕ್ಷಿಸುತ್ತದೆ ಹಾಗೂ ದೇಹದ ತಾಪವನ್ನು ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುತ್ತದೆ. ಚರ್ಮವೂ ದೇಹದಲ್ಲಿನ ಕೊಳೆಯನ್ನ ಬೆವರಿನ ಮುಖಾಂತರ ಹೊರಹಾಕುತ್ತದೆ. ದೊಷಯುಕ್ತ ಚರ್ಮದಲ್ಲಿ ಬೆವರಿನ ಗ್ರಂಥಿಗಳು ಮುಚ್ಚಿದಾಗ ಗಾಯಗಳು, ಕೀವುಗುಳ್ಳೆಗಳು, ಹಾಗೂ ಮೊಡವೆಗಳು ಉಂಟಾಗುತ್ತವೆ. ನಿಮ್ಮ ಚರ್ಮವನ್ನು ಶುಚಿಯಾಗಿಡಲು ಪ್ರತಿನಿತ್ಯ ಸಾಬೂನು ಮತ್ತು ಸ್ವಚ್ಛ ನೀರಿನಿಂದ ಸ್ನಾನ ಮಾಡಿರಿ.

ನೈತಿಕ ಶ್ರೇಷ್ಠತೆ ಅಥವಾ ಗೌರವಾನ್ವಿತತೆಯ ಪ್ರತಿಪಾದನೆಯಾಗಿ, ಸಾಮಾಜಿಕ ವರ್ಗ, ಮಾನವೀಯತೆ ಮತ್ತು ಸಾಂಸ್ಕೃತಿಕ ಸಾಮ್ರಾಜ್ಯಶಾಹಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಸ್ವಚ್ಛತೆ ಪಾತ್ರವನ್ನು ವಹಿಸಿದೆ .

ಆಹಾರ ತಿನ್ನುವುದು, ಮಲ ವಿಸರ್ಜನೆಯ ನಂತರ ಸ್ವಚ್ಚಗೊಳಿಸುವುದು, ಮೂಗು ಸ್ವಚ್ಛಗೊಳಿಸುವುದು, ಸಗಣಿ ತೆಗೆಯುವುದು, ಇತ್ಯಾದಿ, ಚಟುವಟಿಗೆಗಳನ್ನು ನಾವು ನಮ್ಮ ಕೈಗಳನ್ನು ಬಳಸಿಕೊಂಡು ಮಾಡುತ್ತೇವೆ. ಈ ಚಟುವಟಿಕೆಯ ಸಮಯದಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳು / ರೋಗಾಣುಗಳು ನಮ್ಮ ಉಗುರಿನಲ್ಲಿ ಉಳಿಯುತ್ತವೆ ಹಾಗೆಯೇ ಚರ್ಮದ ಮೇಲೆಯೂ ಇರುತ್ತವೆ. ಚಟುವಟಿಕೆ ಮುಗಿಸಿದ ನಂತರ ಮತ್ತು ಮುಖ್ಯವಾಗಿ ಅಡುಗೆ ಮಾಡುವ ಮುನ್ನ ಹಾಗೂ ಆಹಾರ ಸೇವನೆಯ ಮುನ್ನ ಸಾಬೂನು ಬಳಸಿ ಕೈಯನ್ನು ತೊಳೆಯುವುದರಿಂದ (ಕೈಯ ಹರಡುವ / ಮಣಿಕಟ್ಟಿನ ಮೇಲೆ, ಬೆರಳುಗಳ ಮಧ್ಯದಲ್ಲಿ ಮತ್ತು ಉಗುರುಗಳು) ಹಲವಾರು ಖಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ. ನಿಯಮಿತವಾಗಿ ನಿಮ್ಮ ಉಗುರನ್ನು ಕತ್ತರಿಸಿ. ಹಲ್ಲು ಕಚ್ಚುವುದನ್ನು ಮತ್ತು ಮೂಗುಜ್ಜುವುದನ್ನು ಮಾಡದಿರಿ.

ಸ್ವಚ್ಛತೆ ಏಷ್ಟು ಮುಖ್ಯವಾಗಿರುತ್ತದೆ?
ಕೈತೊಳೆಯುವುದನ್ನು ಮರೆಯದಿರಿ

ಮಕ್ಕಳು ಮಣ್ಣಿನಲ್ಲಿ ಆಟವಾಡುತ್ತಾರೆ. ಅವರಿಗೆ ಊಟ ಮಾಡುವ ಮುನ್ನ ಕೈತೊಳೆಯುವುದನ್ನು ಕಲಿಸಬೇಕು.

ರಕ್ತ, ಮಲ, ಮೂತ್ರ ಹಾಗೂ ವಾಂತಿಯ ಜೊತೆ ಸಂಪರ್ಕ ಮಾಡದಿರಿ / ತಡೆಯಿರಿ.

ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ಸಂದರ್ಭದಲ್ಲಿ ಶುಚಿತ್ವ

ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ನಂತರ, ಆ ಭಾಗವನ್ನು ಮುಂದಿನಿಂದ ಹಿಂದಕ್ಕೆ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಮತ್ತು ಆ ಭಾಗವನ್ನು ಸ್ವಚ್ಛವಾಗಿರಿಸಿ. ಸಾಬೂನಿನಿಂದ ನಿಮ್ಮ ಕೈಯನ್ನು ತೊಳೆಯುವುದನ್ನು ಮರೆಯದಿರಿ. ಶೌಚಾಲಯ, ಸ್ನಾನದ ಮನೆ ಮತ್ತು ಸುತ್ತಮುತ್ತ ಜಾಗ ಸ್ವಚ್ಛವಾಗಿಡಿ. ಬಯಲು ಮಲವಿಸರ್ಜನೆ ಮಾಡದಿರಿ.

ಪುನರೋತ್ಪತ್ತ ಅಂಗಗಳ ಶುಚಿತ್ವ
ಪುರುಷರು ಹಾಗೂ ಮಹಿಳೆಯರಿಬ್ಬರೂ ಸಹ ತಮ್ಮ ಪುನರೋತ್ಪತ್ತ ಅಂಗಗಳನ್ನು ಸದಾ ಸ್ವಚ್ಚವಾಗಿಡಬೇಕು.

ಮಹಿಳೆಯರು, ಮುಟ್ಟಿನ ಸಮಯದಲ್ಲಿ ಸ್ವಚ್ಛ, ಮೆದು ಬಟ್ಟೆ ಅಥವ ಸ್ಯಾನಿಟರಿ ಪ್ಯಾಡನ್ನು ಬಳಸಬೇಕು. ನ್ಯಾಪ್ಕಿನ್ / ಕರವಸ್ತ್ರವನ್ನು ದಿನಕ್ಕೆರಡು ಬಾರಿಯಾದರೂ ಬದಲಿಸಿರಿ.

ಮಲವಿಸರ್ಜನೆ ಹಾಗೂ ಮೂತ್ರವಿಸರ್ಜನೆ ನಂತರ, ಆ ಭಾಗವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿರಿ.
ಪುನರೋತ್ಪತ್ತಿ ಪ್ರದೇಶದಲ್ಲಿ ಸೋಂಕು ಕಂಡುಬಂದಲ್ಲಿ ಕೂಡಲೆ ವೈದ್ಯರನ್ನು ಸಂಪರ್ಕಿಸಿರಿ. ಸುರಕ್ಷಿತ ಲೈಂಗಿಕತೆಗಾಗಿ ಕಾಂಡೂಂ ಬಳಸಿರಿ. ಲೈಂಗಿಕ ಚಟುವಟಿಕೆಯ ಮುನ್ನ ಹಾಗೂ ನಂತರ ಪುನರೋತ್ಪತ್ತಿ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.


ಆಹಾರ ಮತ್ತು ಅಡುಗೆಯ ಶುಚಿತ್ವ
ಆಹಾರ ಕಲುಷಿತ, ಆಹಾರ ವಿಷಹಾರುವಿಕೆ ಮತ್ತು ಖಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟಲು ಅಡುಗೆ ಮಾಡುವ ಸಮಯದಲ್ಲಿ ಶುಚಿತ್ವವನ್ನು ರೂಢಿಸಿಕೊಳ್ಳಿರಿ.

ಸ್ವಚ್ಛತೆ ಏಷ್ಟು ಮುಖ್ಯವಾಗಿರುತ್ತದೆ?
ಆಹಾರ ಪದಾರ್ಥಗಳನ್ನು ತೊಳೆಯಿರಿ

ಅಡುಗೆಯ ಪ್ರದೇಶ ಹಾಗೂ ಪಾತ್ರೆ ಸ್ವಚ್ಛವಾಗಿಡಿ. ಸೊಂಕಿತ ಹಾಗೂ ಕೊಳೆತ ಆಹಾರ ಪದಾರ್ಥವನ್ನು ತಿನ್ನದಿರಿ. ಆಹಾರ ತಯಾರಿಸುವ ಮುನ್ನ ಹಾಗೂ ಊಟ ಬಡಸುವ ಮುನ್ನು ನಿಮ್ಮ ಕೈಗಳನ್ನು ತೊಳೆಯಿರಿ. ಉಪಯೋಗಿಸುವ ಮುನ್ನ ತರಕಾರಿಯಂತಹ ಆಹಾರ ಪದಾರ್ಥಗಳನ್ನು ತೊಳೆಯಿರಿ.


ಆಹಾರ ಪದಾರ್ಥಗಳನ್ನು ಸರಿಯಾಗೆ ದಾಸ್ತಾನಿಸಿ / ಸಂಗ್ರಹಿಸಿರಿ

ಆಹಾರ ಪದಾರ್ಥಗಳನ್ನು ಖರೀದಿಸುವ ಸಮಯದಲ್ಲಿ “ಅತ್ಯೂತ್ತಮ ಮುಂಚಿತ ಅವಧಿ ” ತಿಳಿಯಲು ಲೇಬಲ್ಲು / ಹೆಸರು ಪಟ್ಟಿಯನ್ನು ಪರೀಕ್ಷಿಸಿರಿ. ಅಡುಗ ಮನೆಯ ತ್ಯಾಜ್ಯವನ್ನು ಸರಿಯಾಗಿ ಎಸೆಯಿರಿ.


ವೈದ್ಯಕೀಯ ಸ್ವಚ್ಛತೆ
ಔಷಧಿಗಳನ್ನು ಖರೀದಿಸುವಾಗ ಅಂತ್ಯಾವಧಿ ದಿನಾಂಕ / ಎಕ್ಸ್ಪೈರಿ ಡೇಟ್ನ್ನು ಸರಿಯಾಗಿ ಪರಿಶಿಲಿಸಬೇಕು.ಬೇಡದೆಯಿರುವ / ಕೆಲಸಕ್ಕೆ ಬಾರದ ಔಷಧಿಗಳ ಸುರಕ್ಷಿತ ನಿರ್ವಹಣೆ ಮಾಡಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಪಡೆಯಬೇಡಿ.
ಮೂಲ ಆರೋಗ್ಯಕರ ಗ್ರಾಮಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಸಮುದಾಯಗಳಿಗೆ ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಒಂದು ಮಾರ್ಗದರ್ಶಿ.

ಶುಚಿತ್ವವು ಶುದ್ಧ ಮತ್ತು ಸೂಕ್ಷ್ಮಜೀವಿಗಳು, ಕೊಳಕು, ಕಸ ಅಥವಾ ತ್ಯಾಜ್ಯದಿಂದ ಮುಕ್ತವಾಗಿರುವ ಅಮೂರ್ತ ಸ್ಥಿತಿಯಾಗಿದೆ ಮತ್ತು ಆ ಸ್ಥಿತಿಯನ್ನು ಸಾಧಿಸುವ ಮತ್ತು ನಿರ್ವಹಿಸುವ ಅಭ್ಯಾಸವಾಗಿದೆ. ಶುಚಿತ್ವವನ್ನು ಹೆಚ್ಚಾಗಿ ಸ್ವಚ್ಛಗೊಳಿಸುವ ಮೂಲಕ ಸಾಧಿಸಲಾಗುತ್ತದೆ. ಸಾಂಸ್ಕೃತಿಕವಾಗಿ, ಶುಚಿತ್ವವು ಸಾಮಾನ್ಯವಾಗಿ ಉತ್ತಮ ಗುಣವಾಗಿದೆ, ಇದನ್ನು ಪೌರುಷದಿಂದ ಸೂಚಿಸಲಾಗಿದೆ: “ಶುದ್ಧತೆಯು ದೈವಭಕ್ತಿಯ ಮುಂದಿನದು “, ಮತ್ತು ಆರೋಗ್ಯ ಮತ್ತು ಸೌಂದರ್ಯದಂತಹ ಇತರ ಆದರ್ಶಗಳಿಗೆ ಕೊಡುಗೆ ನೀಡುತ್ತದೆ ಎಂದು ಪರಿಗಣಿಸಬಹುದು.

ನಿರ್ವಹಣೆ ಮತ್ತು ತಡೆಗಟ್ಟುವಿಕೆಯ ಉದ್ದೇಶಕ್ಕಾಗಿ ನಡೆಯುತ್ತಿರುವ ಕಾರ್ಯವಿಧಾನ ಅಥವಾ ಅಭ್ಯಾಸಗಳ ಗುಂಪನ್ನು ಒತ್ತಿಹೇಳುವಲ್ಲಿ, ಶುಚಿತ್ವದ ಪರಿಕಲ್ಪನೆಯು ಶುದ್ಧತೆಯಿಂದ ಭಿನ್ನವಾಗಿದೆ, ಇದು ಮಾಲಿನ್ಯಕಾರಕಗಳಿಂದ ಸ್ವಾತಂತ್ರ್ಯದ ಭೌತಿಕ, ನೈತಿಕ ಅಥವಾ ಧಾರ್ಮಿಕ ಸ್ಥಿತಿಯಾಗಿದೆ. ಶುದ್ಧತೆಯು ಸಾಮಾನ್ಯವಾಗಿ ವ್ಯಕ್ತಿಯ ಅಥವಾ ವಸ್ತುವಿನ ಗುಣಮಟ್ಟವಾಗಿದ್ದರೆ, ಶುಚಿತ್ವವು ಸಾಮಾಜಿಕ ಆಯಾಮ ಮತ್ತು ನಿರ್ದೇಶನವನ್ನು ಹೊಂದಿದೆ ಅಥವಾ ಪರಸ್ಪರ ಕ್ರಿಯೆಯ ವ್ಯವಸ್ಥೆಯನ್ನು ಸೂಚಿಸುತ್ತದೆ. “ಸ್ವಚ್ಛತೆ,” ಜಾಕೋಬ್ ಬರ್ಕ್‌ಹಾರ್ಡ್ ಗಮನಿಸಿದರು, “ನಮ್ಮ ಆಧುನಿಕ ಸಾಮಾಜಿಕ ಪರಿಪೂರ್ಣತೆಯ ಕಲ್ಪನೆಗೆ ಇದು ಅನಿವಾರ್ಯವಾಗಿದೆ.” ಮನೆ ಅಥವಾ ಕೆಲಸದ ಸ್ಥಳವು ಶುಚಿತ್ವವನ್ನು ಪ್ರದರ್ಶಿಸುತ್ತದೆ ಎಂದು ಹೇಳಬಹುದು, ಆದರೆ ಸಾಮಾನ್ಯವಾಗಿ ಶುದ್ಧತೆ ಅಲ್ಲ; ಶುಚಿತ್ವವು ಶುಚಿತ್ವವನ್ನು ಕಾಪಾಡುವ ಅಥವಾ ಕೊಳಕು ತಡೆಯುವ ಜನರ ಲಕ್ಷಣವಾಗಿದೆ.

ಪ್ರಾಯೋಗಿಕ ಮಟ್ಟದಲ್ಲಿ, ಶುಚಿತ್ವವು ನೈರ್ಮಲ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಸಂಬಂಧಿಸಿದೆ. ಒಗೆಯುವುದು ದೈಹಿಕ ಶುಚಿತ್ವವನ್ನು ಸಾಧಿಸುವ ಒಂದು ಮಾರ್ಗವಾಗಿದೆ, ಸಾಮಾನ್ಯವಾಗಿ ನೀರು ಮತ್ತು ಸಾಮಾನ್ಯವಾಗಿ ಕೆಲವು ರೀತಿಯ ಸೋಪ್ ಅಥವಾ ಡಿಟರ್ಜೆಂಟ್. ತಯಾರಿಕೆಯ ಹಲವು ರೂಪಗಳಲ್ಲಿ ಶುಚಿಗೊಳಿಸುವ ಕಾರ್ಯವಿಧಾನಗಳು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಮಾಸ

ಮಾಸ : ಸಮಯದ ಒಂದು ಅಳತೆ

ರಾಷ್ಟ್ರಕೂಟ ವಂಶ

ರಾಷ್ಟ್ರಕೂಟ ಅರಸರಲ್ಲಿ ಗೋವಿಂದ ಎಂಬ ಹೆಸರಿನ ನಾಲ್ಕು ದೊರೆಗಳು ಇದ್ದರು