in ,

ಮೀನು ತಿನ್ನುವವರಿಗೆ ಗೊತ್ತುಮೀನು ಏಷ್ಟು ಲಾಭ?

ಮೀನು
ಮೀನು

ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯವಾದದ್ದು. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ. ಮೀನು ತುಂಬಾ ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ.

ಮೀನು ತಿನ್ನುವುದರಿಂದ ದೇಹವನ್ನು ಸಮತೋಲನದ ತೂಕದಲ್ಲಿರಿಸುವುದು. ದೇಹವು ಕೇವಲ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ ಇತರ ಹಲವಾರು ರೀತಿಯ ಆರೋಗ್ಯ ಲಾಭಗಳು ಅದರಿಂದ ಸಿಗುವುದು. ಯಕೃತ್, ಮೆದುಳು ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಸರಿಯಾದ ನಿದ್ರೆಗೆ ಇದು ಸಹಕಾರಿ. ದಿನಾಲೂ ಮೀನು ತಿನ್ನುವುದರಿಂದ ಹಲವಾರು ರೀತಿಯ ರೋಗಗಳನ್ನು ತಡೆಯಬಹುದು. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.

ಮೀನು ತಿನ್ನುವವರಿಗೆ ಗೊತ್ತುಮೀನು ಏಷ್ಟು ಲಾಭ?
ಮೀನು


ಹೃದಯ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು. ಮೀನನ್ನು ದಿನಾಲೂ ಸೇವಿಸುವುದರಿಂದ ಮಾರಕ ಮತ್ತು ಪರಿಧಮನಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು. ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೃದಯವನ್ನು ರಕ್ಷಿಸುವುದು.

ಒಂದೊಂದು ರೀತಿಯ ಮೀನುಗಳು ಒಂದೊಂದು ಬಗೆಯಲ್ಲಿ ಬಾಯಿಗೆ ರುಚಿ ಕೊಡುತ್ತವೆ. ಅವು ದೊಡ್ಡ ಮೀನುಗಳಾದ ರಾಹು ಅಥವಾ ಭೆಟ್ಕಿ ಆಗಿರಲಿ ಅಥವಾ ಸಣ್ಣ ಮೀನುಗಳಾದ ಮ್ಯಾಕೆರೆಲ್ಸ್ ಮತ್ತು ಸಾರ್ಡಿನ್ಸ್ ಆಗಿರಲಿ, ತಮ್ಮಲ್ಲಿ ಅಮೋಘ ಮತ್ತು ಅದ್ಭುತವಾದ ಸ್ವಾದ ತುಂಬಿಕೊಂಡಿರುತ್ತವೆ. ಜೊತೆಗೆ ಮೀನಿನ ಮಾಂಸ ಇತರ ಆಹಾರ ಪದಾರ್ಥಗಳಿಗಿಂತ ಬಹು ಬೇಗನೆ ಬೇಯುತ್ತದೆ. ಯಾವುದೇ ತರಹದ ಮೀನನ್ನು ಸುಲಭವಾಗಿ ಬೇಟೆಯಾಡಿ ನೀವು ಅದನ್ನು ಎಣ್ಣೆಯಲ್ಲಿ ಕರಿಯಬಹುದು, ಹುರಿಯಬಹುದು, ನೀರಿನ ಹವೆಯಲ್ಲಿ ಬೇಯಿಸಬಹುದು, ನೀರಿನಲ್ಲಿ ಕುದಿಸಬಹುದು ಹಾಗೂ ಕೆಂಡದಲ್ಲಿ ಸುಡಬಹುದು. ಮೀನು ಹೇಗೆ ಬೆಂದರೂ, ತನ್ನ ಅದ್ಭುತವಾದ ರುಚಿಯೊಂದಿಗೆ ಅನ್ನದಿಂದ ಹಿಡಿದು ರೊಟ್ಟಿಯವರೆಗೂ ಚೆನ್ನಾಗಿ ಬೆರೆಯುತ್ತದೆ.

ಮೀನುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್‌ಗಳು ಇಲ್ಲದಿರುವ ಕಾರಣ ಇವುಗಳ ಸೇವನೆಯಿಂದ ಮನುಷ್ಯನ ಹೃದಯಕ್ಕೆ ಯಾವುದೇ ಬಗೆಯ ತೊಂದರೆಗಳು ಉಂಟಾಗುವುದಿಲ್ಲ. ಬದಲಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ. ಇದಕ್ಕೆ ಕಾರಣ ಮನುಷ್ಯನ ಹೃದಯದ ಆರೋಗ್ಯವನ್ನು ಹಾಳು ಮಾಡುವ ಕೊಲೆಸ್ಟ್ರಾಲ್ ಅಂಶವನ್ನು ಮೀನುಗಳ ದಿನ ನಿತ್ಯ ಸೇವನೆಯಿಂದ ದೂರ ಇಡಬಹುದು. ಆದರೆ ಈ ಒಳ್ಳೆಯ ಕೆಲಸ ನೀವು ಚಿಕನ್ ಅಥವಾ ಮಟನ್ ತಿನ್ನುವುದರಿಂದ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಸಂಬಂಧ ಪಟ್ಟ ಯಾವುದೇ ಕಾಯಿಲೆಗಳನ್ನು ದೂರ ಇಡಬೇಕಾದರೆ ಮೊದಲು ಮೀನಿನ ಸೇವನೆಯನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.

೧. ಖಿನ್ನತೆ ಕಾಡುತ್ತಿದೆ ಎಂದು ಅನಿಸಿದರೆ ಸರಿಯಾಗಿ ಮೀನು ತಿನ್ನಲು ಆರಂಭಿಸಿ. ಮೀನು ಮತ್ತು ಮೀನಿನ ಎಣ್ಣೆಯು ಖಿನ್ನತೆ ದೂರ ಮಾಡುವುದು. ಇದು ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡಿ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುವುದು.ಮೀನಿನಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾಕೆಂದರೆ ಮೆದುಳು ಮತ್ತು ಕಣ್ಣುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ .

೨. ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರವಾಗಿದೆ. ದಿನಾಲೂ ಮೀನು ಸೇವಿಸಿದರೆ ಅದರಿಂದ ಅಲ್ಝೆಮರ್ ಕಾಯಿಲೆಯ ಅಪಾಯ ತಗ್ಗಿಸಬಹುದು. ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಕುಗ್ಗುವಿಕೆ ಮತ್ತು ಕ್ಷೀಣಿಸುವಿಕೆ ಕಡಿಮೆ ಮಾಡಬಹುದು. ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು.ಪ್ರಸವದ ನಂತರದ ಖಿನ್ನತೆಯಿಂದ ಬಳಲುವ ಮಹಿಳೆಯರಿಗೆ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಮೀನು ತಿನ್ನುವವರಿಗೆ ಗೊತ್ತುಮೀನು ಏಷ್ಟು ಲಾಭ?
ಮೀನು

೩. ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತೀ ಅಗತ್ಯ. ವಿಟಮಿನ್ ಡಿ ಕೊರತೆ ಕಡಿಮೆ ಮಾಡಬೇಕೆಂದರೆ ನಿಯಮಿತವಾಗಿ ಮೀನು ತಿನ್ನಿ.

೪. ಒಮೆಗಾ 3 ಆಮ್ಲಗಳು ರೆಟಿನಾದ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ನಿಮ್ಮ ದೃಷ್ಟಿಶಕ್ತಿ ವೃದ್ಧಿಗೆ ಮೀನಿನ ಸೇವನೆ ಸಹಕಾರಿ. ಅಲ್ಲದೆ, ಬಾಣಂತಿಯರು ಮೀನು ತಿನ್ನುವುದರಿಂದ ಎದೆಹಾಲು ಕುಡಿಯುವ ಶಿಶುಗಳು ಉತ್ತಮ ದೃಷ್ಟಿ ಹೊಂಡಲು ಉಪಕಾರಿ.

೫. ಸಂಧಿವಾತದಿಂದ ಬಳಲುತ್ತಿದ್ದರೆ ದಿನನಿತ್ಯ ಮೀನಿನ ಸೇವನೆ ಮಾಡಿ. ಸಂಧಿವಾತವು ಗಂಟುಗಳ ತೀವ್ರವಾದ ಉರಿಯೂತವಾಗಿದ್ದು, ನಿಯಮಿತವಾಗಿ ಮೀನು ಸೇವಿಸಿದರೆ ಅದರಿಂದ ನೋವು ಮತ್ತು ಊತ ಕಡಿಮೆ ಮಾಡಬಹುದು.

೬. ಸ್ತನ, ಕೊಲೊನ್, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು.

೭. ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು. ಇದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ರೋಗಕ್ಕೆ ಇದು ಉತ್ತಮ ಪರಿಹಾರ.

೮. ಮೀನು ಸೇವನೆಯಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು ಹೊಳಪು ನೀಡುತ್ತದೆ.

೯.ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮೀನು ಎಣ್ಣೆ ಸಹಾಯ ಮಾಡುತ್ತದೆ. ಅಲ್ಲದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

೧೦. ಕೊಬ್ಬಿನ ಆಮ್ಲ ಮೀನು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಸಂಧಿವಾತ, ಸೋರಿಯಾಸಿಸ್ ಮತ್ತು ಸ್ವಯಂ ಇಮ್ಯೂನ್ ರೋಗಗಳಂತಹ ವಿವಿಧ ಉರಿಯೂತದ ಪರಿಸ್ಥಿತಿಗಳಿಗೆ ಸಹಾಯ ಮಾಡಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

3 Comments

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಉಳುವವನೇ ಭೂಮಿಯ ಒಡೆಯ

ಉಳುವವನೇ ಭೂಮಿಯ ಒಡೆಯ ಎಂದು ಕಾನೂನು ತಂದ ಇಂದಿರಾಗಾಂಧಿ